Bhavya Gowda :ಬಿಗ್ ಬಾಸ್‌ದಿಂದ ಬದಲಾಯ್ತು ಭವ್ಯಾ ಗೌಡ ಅದೃಷ್ಟ, ನೆಚ್ಚಿನ ನಟಿಗಾಗಿ ಅಭಿಮಾನಿಗಳು ಮಾಡಿದ್ದೇನು ?
ಕಳೆದ ಐದಾರು ವರ್ಷಗಳಿಂದ ನಟಿ ಭವ್ಯಾ ಗೌಡ ಅವರು ಕನ್ನಡ ಕಿರುತೆರೆಯಲ್ಲಿದ್ದಾರೆ. ಗೀತಾ ಧಾರಾವಾಹಿ ಮೂಲಕ ಕಿರುತೆರೆಗೆ ಬಂದ ನಟಿ ಭವ್ಯಾ ಅವರು, ಸೀರಿಯಲ್ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದರು. ಪ್ರತಿ ದಿನವೂ ಗೀತಾ ಆಗಿ ಅಭಿಮಾನಿಗಳ ಮುಂದೆ ಬರುತ್ತಿದ್ದ ಭವ್ಯಾ ಗೌಡ ಅವರು ಬಿಗ್ ಬಾಸ್ ಸೀಸನ್ 11 ರಲ್ಲಿ ಭಾಗವಹಿಸಿದ್ದರು. ಬಿಗ್ ಬಾಸ್ ಮನೆಯಲ್ಲಿ ಭವ್ಯಾ ಆಗಿ ಮತ್ತಷ್ಟು ಅಭಿಮಾನಿಗಳ ಮನಸ್ಸನ್ನು ಸೆಳೆದುಕೊಂಡರು. ಸುರಸುಂದರಾಂಗಿ ಆಗಿರುವ ಭವ್ಯಾ ಗೌಡ ಅವರು ಬಿಗ್ ಬಾಸ್ ಮನೆಯಲ್ಲಿ ಕೊನೆಯವರೆಗೂ ಇದ್ದರು. ಬಲಿಷ್ಠ ಸ್ಫರ್ಧಿಗಳ ಎದುರು ನಿಂತು ಆಡಿ ಗೆದ್ದಿದ್ದರು.
ಫಿನಾಲೆವರೆಗೂ ಬಂದಿದ್ದ ನಟಿ
ಬಿಗ್ ಬಾಸ್ ಫಿನಾಲೆವರೆಗೂ ಬಂದು ಎಲಿಮಿನೇಟ್ ಆಗಿದ್ದರು, ಬಿಗ್‌ಬಾಸ್ ಮನೆಯ ಟಾಸ್ಕ್ ಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಅಲ್ಲದೇ, ಸತತವಾಗಿ 3 ಬಾರಿ ಕ್ಯಾಪ್ಟನ್ ಆಗಿದ್ದರು. ಎಲ್ಲಾ ಸ್ಪರ್ಧಿಗಳನ್ನು ಎದುರಿಸಿ ಟಾಪ್ 6 ಸ್ಪರ್ಧಿಯಾಗಿ ಮನೆಯಿಂದ ಹೊರ ನಡೆದರು. ಬಿಗ್ ಬಾಸ್ ಮನೆಯಲ್ಲಿ 117 ದಿನಗಳ ಕಾಲ ಇದ್ದ ಹೆಗ್ಗಳಿಕೆ ಭವ್ಯಾ ಗೌಡ ಅವರದ್ದು. ಇನ್ನು ನಟಿ ಭವ್ಯಾ ಗೌಡ ಅವರು ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕ ಅವರ ಲಕ್ ಡಬಲ್ ಆಗಿದೆ. ಬಿಗ್‌ಬಾಸ್ ಬಳಿಕ ಕಲರ್ಸ್ ಕನ್ನಡದಲ್ಲಿ ಶನಿವಾರ ಮತ್ತು ಭಾನುವಾರ ಗರ್ಲ್ಸ್ ವರ್ಸಸ್ ಬಾಯ್ಸ್ ಎಂಬ ಹೊಸ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕಾರ್ಯಕ್ರಮಕ್ಕೆ ಭವ್ಯಾ ಗೌಡ ಸೆಲೆಕ್ಟ್ ಆಗಿದ್ದಾರೆ. ಇವರೊಂದಿಗೆ ರಜತ್, ಹನುಮಂತ, ಧನರಾಜ್ ಆಚಾರ್, ಐಶ್ವರ್ಯಾ ಸಿಂಧೋಗಿ ಕೂಡ ಇದ್ದಾರೆ.

ತಂಗಿಯಿಂದ ಅಕ್ಕನೂ ಫೇಮಸ್
ಇನ್ನು ನಟಿ ಭವ್ಯಾ ಗೌಡ ಅವರು 1996 ನವೆಂಬರ್ 17 ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ಬಿಕಾಂ ಮುಗಿಸಿರುವ ಇವರು ಟಿಕ್ ಟಾಕ್‌ನಲ್ಲಿ ಲಿಪ್ ಸಿಂಕ್ ಮಾಡುವ ಮೂಲಕ ಖ್ಯಾತಿ ಗಳಿಸಿದ್ದರು. 2020ರಲ್ಲಿ ಗೀತಾ ಸೀರಿಯಲ್‌ನಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಕಿರುತೆರೆ ಎಂಟ್ರಿಕೊಟ್ಟ ಈ ನಟಿ, ಸದ್ಯ ಕನ್ನಡ ಕಿರುತೆರೆಯ ಟಾಪ್ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಡಿಯರ್ ಕಣ್ಮಣಿ ಹಾಗೂ ಸಾತ್ವಿಕ್ ಎಂಬ ಎರಡು ಸಿನಿಮಾಗಳಲ್ಲೂ ನಟಿಸಿದ್ದಾರೆ. ಇನ್ನು ಬಿಗ್ ಬಾಸ್ ಮನೆಗೆ ಭವ್ಯಾರನ್ನು ನೋಡಲು ಅವರ ಸಹೋದರಿ ದಿವ್ಯಾ ಅವರು ಆಗಮಿಸಿದ್ದರು. ಅಂದಿನಿಂದ ಭವ್ಯಾ ಅವರಿಗಿಂತಲೂ ಅವರ ಸಹೋದರಿ ದಿವ್ಯಾ ಅವರು ಫೇಮಸ್ ಆಗಿದ್ದಾರೆ.
ಭವ್ಯಾ ಅವರ ಗೆಲುವನ್ನು ಬಯಸಿದ್ದ ಅಭಿಮಾನಿಗಳು
ಇನ್ನು ಭವ್ಯಾ ಗೌಡ ಅವರ ಅಭಿಮಾನಿಗಳು ಬಿಗ್ ಬಾಸ್ ನಂತರ ಉಡುಗೊರೆಯೊಂದನ್ನು ನೀಡಿದ್ದಾರೆ. ಬಿಗ್ ಬಾಸ್ ಮುಗಿಯುವ ಸಂದರ್ಭದಲ್ಲಿ ಭವ್ಯಾ ಗೌಡ ಅವರು ಗೆಲ್ಲಬೇಕು ಎಂದು ಸಾಕಷ್ಟು ಪೋಸ್ಟ್ ಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದವು. ಆದರೆ, ಬಿಗ್ ಬಾಸ್ ಮನೆಯಿಂದ ಹೊರ ನಡೆದಾಗ ಅಭಿಮಾನಿಗಳು ಬಹಳ ಬೇಸರ ಮಾಡಿಕೊಂಡಿದ್ದರು. ಈಗ ಅಭಿಮಾನಿಗಳು ಭವ್ಯಾ ಗೌಡ ಅವರಿಗಾಗಿ ದೊಡ್ಡ ಫೋಟೋ ಫ್ರೇಮ್ ಗಿಫ್ಟ್ ಆಗಿ ನೀಡಿದ್ದಾರೆ.
ನೆಚ್ಚಿನ ನಟಿಗೆ ಪ್ರೀತಿಯ ಉಡುಗೊರೆ
ಇದರಲ್ಲಿ ಬಿಗ್ ಬಾಸ್ ಸೀಸನ್ 11 The Rebel Queen, True Champion ಎಂದು ಬರೆಯಲಾಗಿದೆ. ಅಭಿಮಾನಿಗಳು ಮನೆಯ ತನಕ ಬಂದು ಉಡುಗೊರೆ ನೀಡಿದ್ದಕ್ಕೆ ಭವ್ಯಾ ಅವರು ಖುಷಿ ಪಟ್ಟಿದ್ದಾರೆ. ಫೋಟೋ ಫ್ರೇಮ್ ಅನ್ನು ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಅಪ್ ಲೋಡ್ ಮಾಡಿದ್ದು, ಅಭಿಮಾನಿಗಳಿಗೆ ಧನ್ಯವಾದವನ್ನು ತಿಳಿಸಿದ್ದಾರೆ. ಅಭಿಮಾನಿಗಳು ಕೂಡ ವರೈಟಿ ವರೈಟಿ ಗಿಫ್ಟ್ ಕೊಡುವ ಮೂಲಕ ತಮ್ಮ ಅಭಿಮಾನದ ಪ್ರದರ್ಶನ ಮಾಡುತ್ತಿದ್ದಾರೆ. ಇನ್ನೂ ಕೆಲವರು ಇದು ಅಭಿಮಾನ ಅಂದರೆ ಎಂದು ಕಾಮೆಂಟ್‌ಗಳನ್ನು ಕೂಡ ಮಾಡುತ್ತಿದ್ದಾರೆ.


Click it and Unblock the Notifications











