Bhavya Gowda ; ಮದುವೆ ಮನೆಯಲ್ಲಿ ಮಿರಮಿರ ಮಿಂಚಿದ ನಟಿ ಭವ್ಯ ಗೌಡ..!
ತನ್ನ ಆಸೆಯನ್ನು ಬದಿಗಿಟ್ಟು ಅಪ್ಪ ಅಮ್ಮನ ಆಸೆಗೆ ಮಣಿದು ಕಿರುತೆರೆಗೆ ಪಾದಾರ್ಪಣೆ ಮಾಡಿದ ನಟಿ ಭವ್ಯ ಗೌಡ ಇಂದು ಗೀತಾ ಆಗಿ ಎಲ್ಲರ ಮನೆ ಮಾತಾಗಿದ್ದಾರೆ. ಭವ್ಯ ಅವರು ಸ್ಯಾಂಡಲ್ ವುಡ್ ನ ಗೋಲ್ಡನ್ ಕ್ವೀನ್ ಅಮೂಲ್ಯ ಅವರ ಸಂಬಂಧಿಕರು. ಆದರೆ ಈ ಸತ್ಯವನ್ನು ಎಂದಿಗೂ ಅಮೂಲ್ಯ ಅವರ ಕಸಿನ್ ಎಂದು ಎಲ್ಲೂ ಹೇಳಿಕೊಂಡಿಲ್ಲ. ಕಿರುತೆರೆಯಿಂದ ಬ್ರೇಕ್ ಪಡೆದಿರುವ ನಟಿ ಭವ್ಯ ಅವರು ಮನೆಯ ಮದುವೆ ಸಮಾರಂಭದಲ್ಲಿ ಮಿರಮಿರನೆ ಮಿಂಚಿದ್ದಾರೆ
ಪೋಷಕರಿಗಾಗಿ ಗೀತಾ ಆದ ಭವ್ಯ ಗೌಡ
ಗಗನ ಸಖಿ ಆಗಬೇಕೆಂಬ ಹಂಬಲ ಇದ್ದರೂ ಮನೆಯವರ ಒತ್ತಾಯಕ್ಕೆ ಮಣಿದು ನಟನಾ ಲೋಕಕ್ಕೆ ಕಾಲಿಟ್ಟವರೇ ಗೀತಾ ಧಾರಾವಾಹಿಯ ನಟಿ ಭವ್ಯ ಗೌಡ. ಭವ್ಯ ಅವರ ತಂದೆ ತಾಯಿಗೆ ಮಗಳು ನಟನಾ ಲೋಕದಲ್ಲಿ ಮಿಂಚಬೇಕು ಎಂಬ ಆಸೆ ಹೊಂದಿದ್ದರು. ತಂದೆ ತಾಯಿ ಆಸೆಯಂತೆ ಸಂಪೂರ್ಣವಾಗಿ ನಟನೆಯತ್ತ ವಾಲಿದ ನಟಿ ಕಳೆದ ನಾಲ್ಕು ವರ್ಷದಿಂದ ಕಿರುತೆರೆಯಲ್ಲಿದ್ದಾರೆ. ಗೀತಾ ಧಾರಾವಾಹಿ ಮೂಲಕ ಮನೆ ಮಾತಾಗಿರುವ ಭವ್ಯ ಗೌಡ ಅವರು ಸ್ಯಾಂಡಲ್ ವುಡ್ ನಲ್ಲೂ ಬಣ್ಣ ಹಚ್ಚಿದ್ದಾರೆ. ಆದರೆ, ಹೆಸರು ತಂದುಕೊಟ್ಟ ಮೊದಲ ಧಾರಾವಾಹಿಯ ಜೊತೆಗಿನ ಪಯಣ ಇತ್ತೀಚೆಗಷ್ಟೇ ಅಂತ್ಯ ಕಂಡಿದೆ.

ಟಿಕ್ ಟಾಕ್ ಬೆಡಗಿ ಈಗ ಅಭಿಮಾನಿಗಳ ಸುಂದರಾಂಗಿ
ಭವ್ಯಾ ಗೌಡ ಕನ್ನಡ ಕಿರುತೆರೆಯಲ್ಲಿ ಸಕ್ರಿಯವಾಗಿರುವ ಕಿರುತೆರೆ ನಟಿ. 1996 ನವೆಂಬರ್ 17 ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ಬಿಕಾಂ ಮುಗಿಸಿರುವ ಇವರು ಟಿಕ್ಟಾಕ್ನಲ್ಲಿ ಲಿಪ್ ಸಿಂಕ್ ಮಾಡುವ ಮೂಲಕ ಖ್ಯಾತಿ ಗಳಿಸಿದ್ದರು. 2020ರಲ್ಲಿ ಗೀತಾ ಸೀರಿಯಲ್‌ನಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಕಿರುತೆರೆ ಎಂಟ್ರಿಕೊಟ್ಟ ಈ ನಟಿ, ಸದ್ಯ ಕನ್ನಡ ಕಿರುತೆರೆಯ ಟಾಪ್ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಹೀರೋಯಿನ್ಗಳಿಗೆ ಕಿರುತೆರೆಯಲ್ಲಿ ನಟಿಸುತ್ತಿರುವಾಗ ಬೆಳ್ಳಿ ಪರದೆಯಲ್ಲಿ ನಟಿಸೋಕೆ ಆಫರ್ ಬರೋದು ಕಾಮನ್. ಕಿರುತೆರೆಯಿಂದ ಹಿರಿತೆರೆಗೆ ಬಂದು ಮಿಂಚಿದ ಅನೇಕ ಕಲಾವಿದರಿದ್ದಾರೆ. ಈ ಸಾಲಿಗೆ ಗೀತಾ ಧಾರಾವಾಹಿ ಮೂಲಕ ಮನೆ ಮಾತಾಗಿರುವ ಭವ್ಯ ಗೌಡ ಕೂಡ ಸೇರ್ಪಡೆ ಆಗಿದ್ದಾರೆ.

ಸಿನಿಮಾ ಹಾಗೂ ಕಿರುತೆರೆ
ಕಿರುತೆರೆಯಲ್ಲಿ ತಮ್ಮದೇ ಛಾಫು ಮೂಡಿಸಿರುವ ಭವ್ಯಾ ಗೌಡ, ಸ್ಯಾಂಡಲ್ವುಡ್ಗೂ ಎಂಟ್ರಿಕೊಟ್ಟಿದ್ದಾರೆ. ಇವರು ವಿಸ್ಮಯಾ ಗೌಡ ನಿರ್ದೇಶನದ 'ಡಿಯರ್ ಕಣ್ಮಣಿ' ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಇನ್ನು ಒಳ್ಳೋಳ್ಳೆಯ ಆಫರ್ ಗಳಿಗಾಗಿ ಕಾಯುತ್ತಿದ್ದು, ಸದ್ಯ ಕಿರುತೆರೆಯಿಂದಲೂ ದೂರವೇ ಉಳಿದಿದ್ದಾರೆ. ನಟಿ ಭವ್ಯ ಅವರು ಗೀತಾ ಧಾರಾವಾಹಿಯಲ್ಲಿ ಒಂದು ದಿನ ಧರಿಸಿದ ಬಟ್ಟೆ ಮತ್ತೊಂದು ದಿನ ಹಾಕಿರಲಿಲ್ಲವಂತೆ. ಈಗಾಗಲೇ ಮೂರು ಸಾವಿರಕ್ಕೂ ಹೆಚ್ಚು ಬಟ್ಟೆಗಳನ್ನು ಹೊಂದಿದ್ದರು. ಮನೆ ತುಂಬಾ ಬರೀ ಬಟ್ಟೆಗಳೇ ಕಾಣಿಸುತ್ತವೆ ಎಂದು ಭವ್ಯ ಹೇಳಿಕೊಂಡಿದ್ದರು. ಗೀತಾ ಧಾರಾವಾಹಿಯಿಂದ ಅವರಿಗೆ ಉತ್ತಮ ಹೆಸರು ಕೂಡ ಸಿಕ್ಕಿದೆ. ಅವರ ಮುದ್ದಾದ ನಟನೆಗೆ ವೀಕ್ಷಕರು ಫಿದಾ ಆಗಿದ್ದಾರೆ. ಇತ್ತೀಚೆಗಷ್ಟೇ ಗೀತಾ ಧಾರಾವಾಹಿ ಮುಕ್ತಾಯಗೊಂಡಿದೆ.

ಮದುವೆ ಮನೆಯಲ್ಲಿ ಮಿಂಚುತ್ತಿರುವ ಭವ್ಯ
ಸದ್ಯ ಭವ್ಯ ಅವರು ಕೂಡ ಬಣ್ಣದ ಲೋಕದಿಂದ ಪುಟಾಣಿ ಬ್ರೇಕ್ ಪಡೆದಿದ್ದಾರೆ. ಭವ್ಯ ಗೌಡ ಅವರು ಆಗಾಗ ಫೋಟೋ ಶೂಟ್ ಮಾಡಿಸುತ್ತಿರುತ್ತಾರೆ. ಇತ್ತೀಚೆಗೆ ಫೋಟೋಶೂಟ್ ಮಾಡಿಸಿದ್ದು, ಬಹಳ ಡಿಫರೆಂಟ್ ಆಗಿದೆ. ಟ್ರೆಡಿಷನಲ್ ಲುಕ್ ನಲ್ಲಿ ಸೂಪರ್ ಆಗಿ ಮಿಂಚಿದ್ದಾರೆ. ಸಂಬಂಧಿಕರ ಮದುವೆ ಸಮಾರಂಭದಲ್ಲಿ ಎಂಜಾಯ್ ಮಾಡುತ್ತಿರುವ ಭವ್ಯ ಅವರು, ಸೌತ್ ಇಂಡಿಯನ್ ಉಡುಗೆಗಳಲ್ಲಿ ಅಭಿಮಾನಿಗಳ ಕಣ್ಣು ಕುಕ್ಕುವಂತೆ ಕಂಡಿದ್ದಾರೆ.


Click it and Unblock the Notifications











