ಭವ್ಯಾ ಗೌಡ ಭರ್ಜರಿ ಫೋಟೊಶೂಟ್, ರಾಣಿಯರಂತೆ ಕಂಗೊಳಿಸಿದ ಅಕ್ಕ-ತಂಗಿಯರು..!
ಗೀತಾ ಸೀರಿಯಲ್ ನಾಯಕಿ ಭವ್ಯ ಗೌಡ ಸದ್ಯ ಶೂಟಿಂಗ್ ಗಳಿಂದ ದೂರವೇ ಉಳಿದು ಜಾಲಿಯಾಗಿದ್ದಾರೆ. ಬಿಗ್ ಬಾಸ್ ಸೀಸನ್ 11 ರಲ್ಲಿ ಟಾಂಪ್ 6 ವರೆಗೂ ಬಂದು ಮನೆಗೆ ಮರಳಿದ ಭವ್ಯ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಮೊದಲ ದಿನದಿಂದಲೂ ಆಟದಲ್ಲಿ ಎಲ್ಲರಿಗೂ ಟಫ್ ಫೈಟ್ ಕೊಟ್ಟ ಭವ್ಯ, ಯಾವ ಗಂಡಸರಿಗೂ ಕಡಿಮೆ ಇಲ್ಲ ಎಂಬಂತೆ ಆಟವಾಡಿದರು. 120 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಕಮಾಲ್ ಮಾಡಿದ ಭವ್ಯ ಅವರು ಆಗಾಗ ಮನೆಯವರನ್ನು ಕಾಮಿಡಿ ಮಾಡುವ ಮೂಲಕ ನಗಿಸುತ್ತಿದ್ದರು.
ನಟನೆಯಿಂದ ದೂರ ಇರುವ ನಟಿ
ಮನೆಯವರಿಗಾಗಿ ಕಿರುತೆರೆಗೆ ಎಂಟ್ರಿಕೊಟ್ಟ ನಟಿ ಭವ್ಯ ಗೌಡ ಅವರು ಗೀತಾ ಸೀರಿಯಲ್ ಮೂಲಕ ಫುಲ್ ಫೇಮಸ್ ಆಗಿದ್ದರು. ಟ್ರೋಲ್ ಆಗುವುದರ ಜೊತೆಗೆ ದಿನ ದಿನಕ್ಕೂ ಅಭಿಮಾನಿಗಳ ಸಂಖ್ಯೆಯನ್ನೂ ಹೆಚ್ಚಿಸಿಕೊಂಡರು. ಕಿರುತೆರೆಯಲ್ಲಿ ತಮ್ಮದೇ ಛಾಫು ಮೂಡಿಸಿರುವ ಭವ್ಯಾ ಗೌಡ, ಸ್ಯಾಂಡಲ್ ವುಡ್ ಗೂ ಎಂಟ್ರಿಕೊಟ್ಟು, ಡಿಯರ್ ಕಣ್ಮಣಿ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಇನ್ನು ಒಳ್ಳೋಳ್ಳೆಯ ಆಫರ್ ಗಳಿಗಾಗಿ ಕಾಯುತ್ತಿದ್ದು, ಸದ್ಯ ಕಿರುತೆರೆಯಿಂದಲೂ ದೂರವೇ ಉಳಿದಿದ್ದಾರೆ. ಗೀತಾ ಧಾರಾವಾಹಿಯಿಂದ ಅವರಿಗೆ ಉತ್ತಮ ಹೆಸರು ಕೂಡ ಸಿಕ್ಕಿದೆ. ಅವರ ಮುದ್ದಾದ ನಟನೆಗೆ ವೀಕ್ಷಕರು ಫಿದಾ ಆಗಿದ್ದಾರೆ. ಗೀತಾ ಧಾರಾವಾಹಿ ಮುಕ್ತಾಯಗೊಂಡ ಬಳಿಕ ನಟಿ ಭವ್ಯ ಗೌಡ ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟರು.

ಬಿಗ್ ಬಾಸ್ ಮನೆಯಲ್ಲಿ ಭವ್ಯ
ಬಿಗ್ ಬಾಸ್ ಮನೆಯಲ್ಲಿ ಇರುವಾಗ ತಮ್ಮ ವ್ಯಕ್ತಿತ್ವದ ಮೂಲಕ ಎಲ್ಲರ ಮನಗೆದ್ದರು. ಬಿಗ್ ಬಾಸ್ ಮನೆಯಲ್ಲಿ ತಮಗೆ ಕಂಫರ್ಟ್ ಎನಿಸುವವರ ಜೊತೆಗೆ ಹೆಚ್ಚು ಕಾಲ ಕಳೆಯುತ್ತಿದ್ದರು. ತ್ರಿವಿಕ್ರಮ್ ಜೊತೆಗೆ ಪ್ರತಿಯೊಂದು ವಿಚಾರದ ಬಗ್ಗೆಯೂ ಚರ್ಚೆ ಮಾಡುತ್ತಿದ್ದರು. ಜಗಳವಾಡುವ ಸಮಯದಲ್ಲಿ ಧ್ವನಿ ಎತ್ತಿ ಮಾತನಾಡುತ್ತಿದ್ದರು. ತಪ್ಪು ಮಾಡಿದಾಗ ಕಣ್ಣೀರಿಟ್ಟು ಪಶ್ಚಾತಾಪ ಕೂಡ ಪಡುತ್ತಿದ್ದರು. ಭವ್ಯ ಗೌಡ ಅವರು ಬಿಗ್ ಬಾಸ್ ಮನೆಯಲ್ಲಿ ವ್ಯಕ್ತಿತ್ವದ ಆಟದಲ್ಲಿ ಗೆದ್ದು ಕಪ್ ಪಡೆಯದೇ ಹೋದರೂ ಅಭಿಮಾನಿಗಳ ಮನಸ್ಸನ್ನಂತೂ ಗೆದ್ದಿದ್ದಾರೆ. ಇನ್ನು ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕ ಬಾಯ್ಸ್ ವರ್ಸಸ್ ಗರ್ಲ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ ಎಂದೇ ಎಲ್ಲರೂ ನಂಬಿದ್ದರು. ಆದರೆ, ಭವ್ಯ ಅವರು ಮತ್ತೆ ಕಿರುತೆರೆಗೆ ಮರಳಿ ಬರಲಿಲ್ಲ.
ಸಹೋದರಿಯರ ಜೊತೆಗೆ ನಟಿ ಭವ್ಯ ಗೌಡ
ಇನ್ನು ಬಿಗ್ ಬಾಸ್ ಮನೆಯಲ್ಲಿ ಭವ್ಯ ಗೌಡ ಅವರು ಇದ್ದಾಗ ಅವರ ಸಹೋದರಿ ದಿವ್ಯಾ ಗೌಡ ಮನೆಗೆ ಆಗಮಿಸಿದ್ದರು. ಅಂದಿನಿಂದ ಭವ್ಯ ಅವರಿಗಿಂತಲೂ ಅವರ ಸಹೋದರಿ ದಿವ್ಯಾ ಗೌಡ ಅವರು ಫೇಮಸ್ ಆಗಿದ್ದಾರೆ. ದಿವ್ಯಾ ಗೌಡ ಅವರು ಮೇಕಪ್ ಆರ್ಟಿಸ್ಟ್ ಆಗಿದ್ದು, ಕನ್ನಡದ ಸ್ಟಾರ್ ನಟಿಯರಿಗೂ ಮೇಕಪ್ ಮಾಡಿದ್ದಾರೆ. ಕುಟುಂಬದ ಬಗ್ಗೆ ಹೆಚ್ಚು ಒಲವು ಹೊಂದಿರುವ ನಡಿ ಭವ್ಯ ಗೌಡ ಅವರು ತನ್ನ ಸಹೋದರಿಯರನ್ನು ಹೆಚ್ಚು ಪ್ರೀತಿಸುತ್ತಾರೆ.
ಹೊಸ ಫೋಟೋಶೂಟ್
ಸದ್ಯ ಶೂಟಿಂಗ್ ನಿಂದ ದೂರ ಉಳಿದಿರುವ ನಟಿ ಭವ್ಯ ಗೌಡ ಅವರು ಕಳೆದ ವಾರ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಇನ್ನು ಇದೀಗ ಸಹೋದರಿಯರಾದ ದಿವ್ಯಾ ಗೌಡ ಹಾಗೂ ವರ್ಷಿಣಿ ಗೌಡ ಅವರ ಜೊತೆಗೆ ಫೋಟೋಶೂಟ್ ಮಾಡಿಸಿದ್ದಾರೆ. ಮೂವರು ಸೀರೆ ಧರಿಸಿದ್ದರು, ರಾಣಿಯರಂತೆ ಕಂಗೊಳಿಸಿದ್ದಾರೆ. ಫೋಟೋಶೂಟ್ ನಡುವೆ ವೀಡಿಯೋಗಳನ್ನು ಕೂಡ ಮಾಡಿದ್ದು, ಈ ವೇಳೆಯ ವಿಡಿಯೋವನ್ನು ಮೂವರು ಸಹೋದರಿಯರು ಕೂಡ ತಮ್ಮ ತಮ್ಮ ಸೋಶೀಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.


Click it and Unblock the Notifications