Chandana Raghavendra ; ಸೈಲೆಂಟ್ ಆಗಿ ಜಂಟಿಯಾದ ಚಂದನಾ ರಾಘವೇಂದ್ರ ಅವರ ಪತಿ ದೇವರಂತೆ..!

By ಪ್ರಿಯಾ ದೊರೆ

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಮೊದಲಿನಿಂದಲೂ ಸೈಲೆಂಟ್ ಆಗಿಯೇ ಎಲ್ಲರ ಮನದಲ್ಲಿ ನೆಲೆಸಿದ ನಟಿಯೇ ಸಿರಿ ಅಲಿಯಾಸ್ ಚಂದನಾ ರಾಘವೇಂದ್ರ. ಚಂದನಾ ರಾಘವೇಂದ್ರ ಅವರು ಜೀ ಕನ್ನಡ ವಾಹಿನಿಗೆ ಬರವ ಮುನ್ನ ಸಾಕಷ್ಟು ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಸಿರಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ವೈಫ್ ಆಫ್ ಕೃಷ್ಣಮೂರ್ತಿ ಧಾರಾವಾಹಿಯಲ್ಲಿ ನಟಿಸಿದ್ದರು. ಇದ್ದರಲ್ಲಿ ಬಹಳ ಮುಗ್ದತೆಯಿಂದ ತುಂಬಿರುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ, ಚಂದನಾ ರಾಘವೇಂದ್ರ ಅವರಿಗೆ ಹೆಸರು ತಂದುಕೊಟ್ಟ ಧಾರಾವಾಹಿ ಎಂದರೆ ಅದು ಶ್ರೀರಸ್ತು ಶುಭಮಸ್ತು.

ನಟಿ ಚಂದನಾ ಸಿರಿ ಪಾತ್ರದಲ್ಲಿ

ದತ್ತ ತಾತನ ಮನೆಗೆ ಸೊಸೆಯಾಗಿ ಬಂದು ಅತ್ತೆಯನ್ನು ನಿಧಾನವಾಗಿ ಬದಲಾಯಿಸಿದವಳು ಸಿರಿ. ಎಲ್ಲರಂತೆಯೇ ನಿಮಗೂ ಒಂದು ಮನಸ್ಸಿದೆ. ಅದರಲ್ಲಿ ಒಂದಷ್ಟು ಆಸೆ, ಕನಸುಗಳಿವೆ ಎಂದು ತೋರಿಸಿಕೊಟ್ಟಳು. ನಿಧಾನವಾಗಿ ಅತ್ತೆಯ ಕೆಲಸಗಳನ್ನು ಕಲಿತು ಈಗ ದತ್ತ ತಾತನ ಮನೆಯಲ್ಲಿ ತುಳಸಿ ಸ್ಥಾನವನ್ನು ತುಂಬುತ್ತಿರುವ ಮಹಾಲಕ್ಷ್ಮೀ ಸಿರಿ. ಆದರೂ ದತ್ತ ತಾತ ಮಾತ್ರ ಸಿರಿಯನ್ನು ಸೋಗಲಾಡಿ ಎಂದು ಮುದ್ದಾಗಿ ಕರೆಯುತ್ತಾರೆ. ಸಿರಿ ಪಾತ್ರ ಸೈಲೆಂಟ್ ಆಗಿದ್ದರೂ ಕೂಡ ಮಿಡಲ್ ಕ್ಲಾಸ್ ಕುಟುಂಬದಲ್ಲಿ ಸೊಸೆಯಾದವಳ ಜವಾಬ್ದಾರಿಗಳನ್ನು ತಮ್ಮ ಪಾತ್ರದ ಮೂಲಕ ಜನರಿಗೆ ತೋರಿಸಿಕೊಡಲಾಗಿದೆ. ಮಿಡಲ್ ಕ್ಲಾಸ್ ಕುಟುಂಬದಲ್ಲಿ ಬರುವ ಕಷ್ಟಗಳನ್ನು ಸಿರಿ ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾಳೆ.

Written update on actress chandana raghavendra marriage

ಸೈಲೆಂಟ್ ಆಗಿ ಜಂಟಿಯಾದ ನಟಿ

ಧಾರಾವಾಹಿಯಲ್ಲಿ ಸೈಲೆಂಟ್ ಆಗಿ ತಮ್ಮ ಪಾತ್ರಕ್ಕೆ ತೂಕ ತುಂಬಿದ ನಟಿ ಚಂದನಾ ಅವರು ನಿಜ ಜೀವನದಲ್ಲೂ ಸೈಲೆಂಟ್ ಆಗಿ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಚಂದನಾ ರಾಘವೇಂದ್ರ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇವರ ಮದುವೆ ಫೋಟೋಗಳನ್ನೂ ನೋಡಿ ಅಭಿಮಾನಿಗಳು ಶಾಕ್ ಆಗಿದ್ದರು. ಇದೀಗ ಚಂದನಾ ರಾಘವೇಂದ್ರ ಅವರೇ ತಮ್ಮ ಮದುವೆಯ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ವೀಡಿಯೋ ನೋಡಿದ ಅಭಿಮಾನಿಗಳು ಬಹಳ ಖುಷಿಪಟ್ಟಿದ್ದಾರೆ. ವೀಡಿಯೋದಲ್ಲಿ ಚಂದನಾ, ಅವರ ಅತ್ತೆ-ಮಾವ ಹಾಗೂ ತಾಯಿ ಎಲ್ಲರೂ ಮಾತನಾಡಿದ್ದಾರೆ.

ಮದುವೆ ಶಾಸ್ತ್ರಗಳು ಬಲು ಜೋರು

ಚಂದನಾ ರಾಘವೇಂದ್ರ ಹಾಗೂ ಸಂಕೇತ್ ಗುರು ಹಿರಿಯರು, ಸ್ನೇಹಿತರು, ಬಂಧು ಬಳಗದವರ ಸಮ್ಮುಖದಲ್ಲಿ ಮದುವೆ ಆಗಿದ್ದಾರೆ. ಅರಿಶಿನ ಶಾಸ್ತ್ರ, ಮದುವೆ ಎಲ್ಲಾ ಶಾಸ್ತ್ರಗಳು ಕ್ಯಾಪ್ಚರ್ ಆಗಿದ್ದು, ಶಾಸ್ತ್ರ ಮಾಡುವಾಗ ಬಹಳಷ್ಟು ಕಾಮಿಡಿ ಕೂಡ ನಡೆದಿದೆ. ಮದುವೆಯ ಬಳಿಕ ನಡೆಯುವ ಉಪ್ಪಿನ ಆನೆ ಶಾಸ್ತ್ರದಲ್ಲಿ ಚಂದನಾ ಅವರು ತಮ್ಮ ಪತಿ ಸಂಕೇತ್ ಅವರನ್ನು ಮನದರಸ ಎಂದು ಕರೆದಿದ್ದಾರೆ. ಮದುವೆಯ ಪ್ರತಿ ಕ್ಷಣವನ್ನು ಚಂದನಾ ಅವರು ಸಕತ್ ಎಂಜಾಯ್ ಮಾಡಿದ್ದಾರೆ. ಮದುವೆಯಲ್ಲೆಲ್ಲಾ ಕುಣಿದು ಕುಪ್ಪಳಿಸಿದ್ದು, ಜೀವನ ಪೂರ್ತಿ ಈ ಮದುವೆಯ ಕ್ಷಣಗಳನ್ನು ನಾನು ಮರೆಯುವುದಿಲ್ಲ ಎಂದು ಚಂದನಾ ಹೇಳಿದ್ದಾರೆ. ನಗು, ಹಾಡು, ಹರಟೆ, ಡ್ಯಾನ್ಸ್ ಎಲ್ಲವೂ ಚಂದನಾ ಅವರ ಮದುವೆಯಲ್ಲಿ ಜೋರಾಗಿಯೇ ಇತ್ತು.

ಅಳಿಯನನ್ನು ದೇವರು ಎಂದ ಅತ್ತೆ

ಇನ್ನು ಚಂದನಾ ಅವರ ಮದುವೆಯ ವೀಡಿಯೋದಲ್ಲಿ ಮಧ್ಯ ಮಧ್ಯದಲ್ಲಿ ಕುಟುಂಬದವರು ಮಾತನಾಡಿದ್ದು, ಎಲ್ಲರೂ ಶುಭ ಹಾರೈಸಿದ್ದಾರೆ. ಚಂದನಾ ಅವರ ತಾಯಿ ಅಳಿಯನ ಬಗ್ಗೆ ಮಾತನಾಡಿದ್ದಾರೆ. ಅಳಿಯನ ರೂಪದಲ್ಲಿ ದೇವರು ಬಂದಿದ್ದಾರೆ ಎಂದು ಹೇಳುತ್ತಾರೆ. ಆದರೆ, ನಮ್ಮ ಮನೆಗೆ ದೇವರೇ ಆಗಮಿಸಿದ್ದಾರೆ. ಅಷ್ಟು ಒಳ್ಳೆಯ ಹುಡುಗ. ಬಹಳ ಮೃದು ಸ್ವಾಭಾವದ ವ್ಯಕ್ತಿ. ಒಳ್ಳೆಯ ಅಳಿಯ ಸಿಕ್ಕಿದ್ದಾನೆ. ಅವರ ಕುಟುಂಬದವರು ಸಾಫ್ಟ್ ಎಂದು ಸಂತಸವನ್ನು ಹಂಚಿಕೊಂಡಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X