'ಅಮೃತಧಾರೆ'ಯ 'ಭೂಮಿಕಾ' ಅಲಿಯಾಸ್ 'ಛಾಯಾ ಸಿಂಗ್' ಅವರ ನಿಜವಾದ ವಯಸ್ಸೆಷ್ಟು ? ಗೆಸ್ ಮಾಡಿದ್ದೀರಾ..?

By ಪ್ರಿಯಾ ದೊರೆ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಮೃಧಾರೆಯಲ್ಲಿ ಭೂಮಿಕಾ ಪಾತ್ರದ ಮೂಲಕ ಎಲ್ಲರ ಮನ ಗೆದ್ದಿರುವ ನಟಿ ಛಾಯಾ ಸಿಂಗ್ ಪ್ರತಿಯೊಬ್ಬ ಕನ್ನಡ ಅಭಿಮಾನಿಗೂ ಗೊತ್ತಿರುವ ನಟಿ. ಛಾಯಾ ಅವರು ಬಣ್ಣದ ಲೋಕಕ್ಕೆ ನಿನ್ನೆ ಮೊನ್ನೆ ಬಂದವರಲ್ಲ. ಕಳೆದ 24 ವರ್ಷದಿಂದ ಬಣ್ಣದ ಲೋಕದ ನಂಟು ಹೊಂದಿರುವ ನಟಿ ಛಾಯಾ ಅವರು ಕನ್ನಡದ ಸ್ಕ್ರೀನ್ ನಿಂದ ಕೆಲ ಕಾಲ ನಾಪತ್ತೆಯಾಗಿದ್ದರಷ್ಟೇ. ನಟನೆಯನ್ನು ಆರಂಭಿಸಿದ ದಿನದಿಂದಲೂ ಇಂದಿನವರೆಗೆ ತಮ್ಮ ಜೀವನ ಹೆಚ್ಚು ಪಾಲು ಸಮಯವನ್ನು ಕ್ಯಾಮರಾಗೆ ಮೀಸಲಿಟ್ಟಿ ನಟಿಯ ವಯಸ್ಸನ್ನು ಯಾರಾದರೂ ಗೆಸ್ ಮಾಡಿದ್ದೀರಾ..?

ಛಾಯಾ ಅವರ ವಯಸ್ಸನ್ನು ಗೆಸ್ ಮಾಡಿ..

ಹಾಗೇನಾದರೂ ಗೆಸ್ ಮಾಡಿದ್ದರೆ, ನಿಮ್ಮ ಲೆಕ್ಕಾಚಾರ ತಪ್ಪಾಗಿರುವುದಂತೂ ಗ್ಯಾರೆಂಟಿ. ಭೂಮಿಕಾ ಪಾತ್ರದಲ್ಲಿ ಮೋಡಿ ಮಾಡಿರುವ ಛಾಯಾ ಅವರನ್ನು ಯಾರೇ ನೋಡಿದರೂ 35 ಆಸು ಪಾಸಿರಬಹುದು ಎಂದು ಗೆಸ್ ಮಾಡಿರುತ್ತಾರೆ. ಈಗಾಗಲೇ ಕೆಲ ಸಂದರ್ಶನಗಳಲ್ಲಿ ಅದಾಗಲೇ ನಟ ರಾಜೇಶ್ ಛಾಯಾ ಅವರ ಡಯಟ್ ಬಗ್ಗೆ ಹೇಳಿದ್ದಾರೆ. ಎಲ್ಲರೂ ಜಂಕ್ ಫುಡ್, ರುಚಿಕರವಾದ ತಿನಿಸುಗಳನ್ನು ಸವಿಯುತ್ತಿದ್ದರೆ, ಛಾಯಾ ಅವರು ತಮ್ಮ ಪಾಡಿಗೆ ತಾವು ತರಕಾರಿ-ಹಣ್ಣುಗಳನ್ನು ಸೇವಿಸುತ್ತಾರೆ. ಅಲ್ಲಿಗೆ ಛಾಯಾ ಅವರು ಫಿಟ್ನೆಸ್ ಮತ್ತು ಆರೋಗ್ಯದ ಬಗ್ಗೆ ಎಷ್ಟು ಕಾಳಜಿ ಹೊಂದಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು. ಹೀಗಿರುವಾಗ ಇವರ ವಯಸ್ಸು ಕೂಡ 10 ವರ್ಷ ಚಿಕ್ಕದು ಎಂದರೆ ಯಾರೂ ನಂಬಲಾರರು.

written update on actress chaya singh age


ನಿಮ್ಮ ಗೆಸ್ ತಪ್ಪಾಗಿದೆಯಾ..?

ನೀವು ಗೆಸ್ ಮಾಡಿರುವ ವಯಸ್ಸನ್ನು ಹೆಚ್ಚಿಸಲೇ ಬೇಕು. ಯಾಕೆಂದರೆ ಈಗ ಛಾಯಾ ಅವರ ವಯಸ್ಸು 43. ವಯಸ್ಸು 43 ಆದರೂ ಕೂಡ ಛಾಯಾ ಅವರನ್ನು ನೋಡಿದವರೆಲ್ಲಾ 33-35 ಇರಬಹುದು ಎಂದು ಗೆಸ್ ಮಾಡುವುದು ಸಹಜ. ಯಾಕೆಂದರೆ ಛಾಯಾ ಅವರನ್ನು ನೋಡಿದರೆ ಯಾರಿಗೂ ಅವರ ವಯಸ್ಸು 40 ದಾಟಿದೆ ಎಂದು ಹೇಳಲು ಸಾಧ್ಯವೇ ಇಲ್ಲ. ಇನ್ನು ನಟಿ ಛಾಯಾ ಅವರು ನಟನಾ ಲೋಕಕ್ಕೆ ಆಗಮಿಸಿ 24 ವರ್ಷಗಳಾಗಿದ್ದು, ಮದುವೆಯಾಗಿ 12 ವರ್ಷಗಳಾಗಿವೆ. ಕನ್ನಡದ ಮೂಲಕ ಬಣ್ಣ ಹಚ್ಚಿದ ಛಾಯಾ ಅವರು ಮೊದಲು ನಟಿಸಿದ್ದು ಮುನ್ನುಡಿ ಚಿತ್ರದಲ್ಲಿ. ಬಳಿಕ ಒಂದೊಂದಾಗಿ ಸಾಲು ಸಾಲು ಸಿನಿಮಾಗಳಿಗೆ ಬಣ್ಣ ಹಚ್ಚಿದರು.

ಹಲವು ಭಾಷೆಗಳಲ್ಲಿ ನಟಿಸಿದ ನಟಿ

ಕನ್ನಡ, ಮಳಯಾಳಂ, ತಮಿಳು, ಬಂಗಾಳಿ, ಬೋಜಪುರಿ, ತೆಲುಗು ಮತ್ತು ಓರಿಯಾ ಭಾಷೆಗಳಲ್ಲಿ ನಟಿಸಿದ್ದಾರೆ. ಮುನ್ನುಡಿಯ ಬಳಿಕ ಹಸೀನಾ, ಚಿಟ್ಟೆ, ತುಂಟಾಟ, ಬಲಗಾಲಿಟ್ಟು ಒಳಗೆ ಬಾ, ಗುಟ್ಟು, ಪ್ರೀತಿಸಲೇಬೇಕು, ಆಕಾಶ ಗಂಗೆ, ಮಫ್ತಿ, ಖಾಕಿ, ಭೈರತಿ ರಣಗಲ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಎಲ್ಲಾ ಭಾಷೆಯಲ್ಲೂ ಒಟ್ಟು 38 ಸಿನಿಮಾಗಳಲ್ಲಿ ಛಾಯಾ ಅವರು ನಟಿಸಿದ್ದಾರಂತೆ. ಇನ್ನು ಕಾಲಿವುಡ್ ನಲ್ಲಿ ಧನುಷ್ ಜೊತೆಗೆ ನಟಿಸಿದ ತಿರುಡಾ ತಿರುಡಿ ಚಿತ್ರ ಹಿಟ್ ಆಗಿತ್ತು. ಇದರೊಂದಿಗೆ ಬಂಗಾಳಿಯಲ್ಲಿ ಕಿ ಕೋರ್ ಬೋಝಭೋ ತೊಮಾಕೆ ಎಂಬ ಸಿನಿಮಾವನ್ನು ನಿರ್ದೇಶಿಸಿದ್ದಾರೆ.


ಮದುವೆಯಾದರೂ ಒಟ್ಟಿಗಿರದ ದಂಪತಿ

ಛಾಯಾ ಸಿಂಗ್ ಅವರು ಕೇವಲ ನಟನೆಗಷ್ಟೇ ಮೀಸಲಿರದೇ, ಅದ್ಭುತ ಡ್ಯಾನ್ಸರ್ ಕೂಡ ಹೌದು. ಕುಣಿಯೋಣು ಬಾರ ರಿಯಾಲಿಟಿ ಶೋಗೆ ಜಡ್ಜ್ ಆಗಿದ್ದರು. ಅಲ್ಲದೇ, ಕೆಲ ಕಾರ್ಯಕ್ರಮಗಳನ್ನು ನಟಿ ಛಾಯಾ ಅವರು ನಿರೂಪಣೆಯನ್ನೂ ಮಾಡಿದ್ದಾರೆ. ಇನ್ನು ನಟಿ ಛಾಯಾ ಸಿಂಗ್ ಅವರು 2012ರಲ್ಲಿ ನಟ ಕೃಷ್ಣ ಎಂಬುವವರನ್ನು ಮದುವೆಯಾದರು. ಆದರೆ, ಇಂದಿಗೂ ಇವರಿಬ್ಬರು ವರ್ಷದಲ್ಲಿ ಕೇವಲ 10ದಿನ ಮಾತ್ರ ಒಟ್ಟಿಗೆ ಇರುತ್ತಾರಂತೆ. ಇಬ್ಬರೂ ಬಣ್ಣದ ಲೋಕದಲ್ಲಿ ಬ್ಯುಸಿ ಇದ್ದು, ಛಾಯಾ ಅವರು ಬೆಂಗಳೂರಿನಲ್ಲಿದ್ದರೆ, ಕೃಷ್ಣ ಅವರು ಚೆನ್ನೈನಲ್ಲಿ ವಾಸವಿದ್ದಾರಂತೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X