Chaya Singh ; ಸಂದರ್ಭಕ್ಕೆ ತಕ್ಕಂತೆ ಹೇರ್ ಸ್ಟೈಲ್ ಬದಲಿಸುವ ಭೂಮಿಕಾ ನಟನೆ ಸೂಪರ್ !
ಭೂಮಿಕಾ ಪಾತ್ರದ ಮೂಲಕ ನಟಿ ಛಾಯಾಸಿಂಗ್ ಎಲ್ಲರ ಮನ ಗೆದ್ದಿದ್ದಾರೆ. ಭೂಮಿಕಾ ಮತ್ತು ಗೌತಮ್ ಜೋಡಿ ನಿಜ ಜೀವನದ ಪತಿ-ಪತ್ನಿಯರಿಗೆ ರೋಲ್ ಮಾಡೆಲ್ ಎಂದರೂ ತಪ್ಪಾಗುವುದಿಲ್ಲ.
ಇಬ್ಬರೂ ಕೂಡ ಮಾತನಾಡುವುದು, ಬಾಡಿ ಲ್ಯಾಂಗ್ವೇಜ್, ಇಬ್ಬರಲ್ಲಿನ ಸಾಮರಸ್ಯ ಎಲ್ಲವೂ ನಿಜವಾಗಲೂ ಇವರಿಬ್ಬರು ಗಂಡ-ಹೆಂಡತಿನಾ ಎಂಬ ಅನುಮಾನಕ್ಕೆ ಕಾರಣವಾಗುತ್ತೆ. ನಿಜ ಜೀವನದಲ್ಲೂ ಗಂಡ-ಹೆಂಡತಿ ಎಂದರೆ ಹೀಗಿರಬೇಕು ಎನ್ನುವಂತೆ ನಟಿಸುತ್ತಿದ್ದಾರೆ.

ಈ ವರ್ಷದ ಬೆಸ್ಟ್ ಕಪಲ್ಸ್ ಅವಾರ್ಡ್ ನಟ ರಾಜೇಶ್ ನಟರಂಗ ಹಾಗೂ ನಟಿ ಛಾಯಾಸಿಂಗ್ ಅವರಿಗೆ ಬರುವುದರಲ್ಲಿ ಅನುಮಾನವೇ ಇಲ್ಲ. ಇವರಿಬ್ಬರೂ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ ಎಂಬುದು ಎಲ್ಲಿಯೂ ಅನಿಸುವುದೇ ಇಲ್ಲ.
ಬೆಸ್ಟ್ ಕಪಲ್ಸ್ ಆಫ್ ದಿ ಇಯರ್
ಭೂಮಿಕಾ ತನಗೆ ಮಗು ಆಗುವುದಿಲ್ಲ ಎಂದು ತಿಳಿದಾಗ ನಡೆದುಕೊಂಡ ರೀತಿ, ಭೂಮಿಕಾಳಿಗೆ ನೋವಾಗಬಾರದು ಎಂದು ಸಂದರ್ಭವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ ಗೌತಮ್. ಈಗ ಪೋಷಕರಾಗುವ ಖುಷಿಯಲ್ಲಿ ತೇಲಾಡುತ್ತಿರುವ ಈ ಜೋಡಿಗಳು ನಿಜಕ್ಕೂ ಸೂಪರ್. ಇವರಿಬ್ಬರ ನಟನೆಯ ಬಗ್ಗೆ ಮಾತನಾಡುವಂತಿಲ್ಲ. ಇನ್ನು ಒಂದು ವಿಚಾರವೆಂದರೆ, ಭೂಮಿಕಾ ಪಾತ್ರದಲ್ಲಿ ನಟಿಸುತ್ತಿರುವ ನಟಿ ಛಾಯಾಸಿಂಗ್ ಅವರ ಉಡುಗೆ-ತೊಡುಗೆ.
ಹೌದು ಮಿಡಲ್ ಕ್ಲಾಸ್ ಕುಟುಂಬದಿಂದ ಬಂದ ಭೂಮಿಕಾ, ಅದೃಷ್ಟದಿಂದ ಕೋಟ್ಯಾಧಿಪತಿ ಗೌತಮ್ ದಿವಾನ್ ಕುಟುಂಬದ ಒಡತಿಯಾಗಿದ್ದಾಳೆ. ಹಾಗಿದ್ದರೂ, ಸಿಂಪಲ್ ಸೀರೆಗಳನ್ನು ಉಡುತ್ತಾ, ಅದಕ್ಕೆ ಮ್ಯಾಚ್ ಆಗುವಂತಹ ಬಳೆಗಳನ್ನು ಹಾಕಿಕೊಳ್ಳುತ್ತಾರೆ. ಅದು ಬಿಟ್ಟರೆ, ಕೋಟಿ ಕೋಟಿ ಹಣ ಕೊಳೆಯುತ್ತಿರುವ ಮನೆಯಲ್ಲೂ ಭೂಮಿಕಾ ಎಂದೂ ಅತಿಯಾಗಿ ನಡೆದುಕೊಂಡಿಲ್ಲ. ಇನ್ನು ಸಂದರ್ಭಕ್ಕೆ ಸರಿಯಾಗಿ ನಟಿ ಭೂಮಿಕಾ ಅವರು ತಮ್ಮ ಹೇರ್ ಸ್ಟೈಲ್ ಅನ್ನು ಬದಲಿಸುತ್ತಿರುತ್ತಾರೆ.
ಸಂದರ್ಭಕ್ಕೆ ತಕ್ಕಂತೆ ಮೇಕಪ್ ಬದಲಾವಣೆ
ಹೌದು.. ಭೂಮಿಕಾ ಸೀರಿಯಲ್ ಶುರುವಾದಾಗ, ಮದುವೆಯಾಗದೇ ಉಳಿದ 35ರ ಹುಡುಗಿ. ಆಗ ಭೂಮಿಕಾ ಅವರು ಪೋನಿ ಟೈಪ್ ತಲೆ ಕೂದಲನ್ನು ಕಟ್ಟುತ್ತಿದ್ದರು. ಈ ಲುಕ್ ನಲ್ಲಿ ನಿಜವಾಗಿಯೂ ಮದುವೆಯ ವಯಸ್ಸು ಮೀರಿದ ಹುಡುಗಿಯಂತೆಯೇ ಕಾಣುತ್ತಿದ್ದರು. ಬಳಿಕ ಗೌತಮ್ ಎಂಟ್ರಿಯಾದಾಗ ತಲೆ ಕೂದಲನ್ನು ಗುಂಗುರು ಮಾಡಿಕೊಂಡು, ಫ್ರೀ ಹೇರ್ ಬಿಡುತ್ತಿದ್ದರು. ಮದುವೆಗೂ ಮೊದಲೂ ಹೀಗೆ ಒಂದೆರಡು ಬಾರಿ ಗೌತಮ್ ಅವರನ್ನು ಭೇಟಿ ಮಾಡಿದ್ದರು. ನಂತರ ಮದುವೆಯಾದ ಮೇಲೂ ಫ್ರೀ ಹೇರ್ ನಲ್ಲಿ ಕೆಲ ಸಮಯ ಕಾಣಿಸಿಕೊಂಡರು. ತದನಂತರ ಕ್ರಾಫ್ ತೆಗೆದು ನಾಲ್ಕು ಎಣೆಯನ್ನು ಎಣೆದುಕೊಳ್ಳುತ್ತಾ ಮುದ್ದಾಗಿ ಕಾಣಿಸಿಕೊಂಡರು. ಇದೆಲ್ಲಾ ಲುಕ್ ಭೂಮಿಕಾಳ ಪಾತ್ರಕ್ಕೆ ಸೂಟ್ ಆಗುವಂತಿತ್ತು.
ಹೇರ್ ಸ್ಟೈಲ್ ಮೂಲಕವೇ ಗಮನ ಸೆಳೆದ ನಟಿ
ಅಪೇಕ್ಷಾ ಮನೆಗೆ ಬಂದ ಬಳಿಕ ಭೂಮಿಕಾ ಮುಂದೆ ಬಫ್ ತೆಗೆದು ಜಡೆ ಎಣೆದುಕೊಳ್ಳಲು ಶುರು ಮಾಡಿದರು. ಈ ಹೇರ್ ಸ್ಟೈಲ್ ಕೂಡ ಭೂಮಿಕಾಳಿಗೆ ಚೆನ್ನಾಗಿಯೇ ಕಾಣುತ್ತಿತ್ತು. ಆದರೆ ಇತ್ತೀಚೆಗೆ ಭೂಮಿಕಾಳಿಗೆ ಮಗು ಆಗುವುದಿಲ್ಲ ಎಂಬ ಸತ್ಯವನ್ನು ಶಕುಂತಲಾ ಹೇಳಿದಾಗ ದುಃಖದಲ್ಲಿದ್ದ ಭೂಮಿಕಾ ತನ್ನ ಹೇರ್ ಸ್ಟೈಲ್ ಅನ್ನು ಬದಲಿಸುವ ಮೂಲಕ ಸಂದರ್ಭಕ್ಕೆ ತಕ್ಕಂತೆ ಕಾಣಿಸಿಕೊಂಡರು. ಬೈತಲೆ ತೆಗದು ತಲೆ ಕೂದಲನ್ನು ಕಟ್ಟದೇ ತಮ್ಮ ದುಃಖವನ್ನು ಹೇರ್ ಸ್ಟೈಲ್ ಮೂಲಕವೂ ತೋರಿಸಿಕೊಂಡರು. ಗಂಡನನ್ನು ಬಿಟ್ಟಿರಲು ಸಾಧ್ಯವಿಲ್ಲವಾದರೂ, ಅವರಿಗೆ ಇನ್ನೊಂದು ಮದುವೆಯನ್ನು ಮಾಡಿಸಬೇಕು ಎಂಬ ನೋವನ್ನು ಈ ಮೂಲಕ ಎಲ್ಲರಿಗೂ ತೋರಿಸಿಕೊಟ್ಟರು.
ಪಾತ್ರಕ್ಕೆ ಮೆರುಗು ಕೊಡುವ ಸಣ್ಣ-ಪುಟ್ಟ ಬದಲಾವಣೆಗಳು
ಅದೇ ತಾನು ಗರ್ಭಿಣಿ ಎಂದು ತಿಳಿದ ಕ್ಷಣದಿಂದ ಮತ್ತೆ ಹಳೆಯ ಹೇರ್ ಸ್ಟೈಲ್ ಮಾಡಿಕೊಳ್ಳುತ್ತಿರುವ ಭೂಮಿಕಾರ ಮೇಕಪ್ ಅನ್ನು ವೀಕ್ಷಕರು ಮೆಚ್ಚಿಕೊಂಡಿದ್ದಾರೆ. ನಟಿ ಛಾಯಾಸಿಂಗ್ ಅವರು ಕೇವಲ ನಟನೆ, ಡೈಲಾಗ್ ಡೆಲಿವರಿ ಹಾಗೂ ಹಾವ-ಭಾವ ಮಾತ್ರವಲ್ಲದೇ, ತಾವು ಉಡುವ ಸೀರೆ, ಹೇರ್ ಸ್ಟೈಲ್, ಮೇಕಪ್ ಗಳ ಮೂಲಕವೂ ತಮ್ಮ ಪಾತ್ರಕ್ಕೆ ಇನ್ನಷ್ಟು ಮೆರುಗು ತುಂಬುತ್ತಿದ್ದಾರೆ. ಇದೆಲ್ಲವನ್ನೂ ಗಮನಿಸುತ್ತಿರುವ ವೀಕ್ಷಕರು ಇದ್ದರೆ ಭೂಮಿಕಾ ರೀತಿ ಇರಬೇಕು ಎಂದು ಬಯಸುತ್ತಿದ್ದಾರೆ.


Click it and Unblock the Notifications











