Chithkala Biradar ; ಭಾಗ್ಯ ಪಾತ್ರದಲ್ಲಿ ಎಂಟ್ರಿ ಕೊಟ್ಟ ಅಮ್ಮಮ್ಮ : ಚಿತ್ಕಲಾ ಬಿರಾದರ್ ನಟನಾ ಪಯಣ..!

By ಪ್ರಿಯಾ ದೊರೆ

ಕನ್ನಡ ಕಿರುತೆರೆಯಲ್ಲಿ ಪೋಷಕರ ಪಾತ್ರದಲ್ಲಿ ನಟಿಸಿ ವೀಕ್ಷಕರ ಮನ ಗೆದ್ದವರು ಬಹಳಷ್ಟು ಕಲಾವಿದರಿದ್ದಾರೆ. ಅವರಲ್ಲಿ ಅಮ್ಮಮ್ಮಾ ಫೇಮಸ್ ಎಂದರೆ ತಪ್ಪಾಗುವುದಿಲ್ಲ.ನಟಿ ಚಿತ್ಕಲಾ ಬಿರಾದರ್ ಅವರು ತಾಯಿ ಪಾತ್ರದಲ್ಲಿ ಈಗಾಗಲೇ ಎಲ್ಲರ ಮನ ಗೆದ್ದಿದ್ದಾರೆ. ಚಿತ್ಕಲಾ ಬಿರಾದರ್ ಅವರು ಟೀಚರ್ ಆಗಿದ್ದವರು ನಟನೆಯನ್ನು ಅರಸಿ ಬಂದವರು. ಹೊರ ದೇಶದಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿದ್ದರೂ ನಟನೆಗಾಗಿ ಭಾರತಕ್ಕೆ ಬಂದು ಸಾಕಷ್ಟು ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲದೇ, ಅಮ್ಮಮ್ಮನ ಮಾತುಗಳು ಕೂಡ ಅಷ್ಟೇ ಪ್ರೀತಿ ವಾತ್ಸಲ್ಯದಿಂದ ಕೂಡಿರುತ್ತದೆ.

ಪೋಷಕ ಪಾತ್ರದಲ್ಲಿ ಮಿಂಚಿದ ಚಿತ್ಕಲಾ ಬಿರಾದರ್

ಬಂದೇ ಬರತಾವ ಕಾಲ ಧಾರಾವಾಹಿಯ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದವರು ಚಿತ್ಕಲಾ. ತದ ನಂತರ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ನಾಯಕಿ ಸನ್ನಿಧಿ ಅಮ್ಮ ಸುಮತಿ ಪಾತ್ರಕ್ಕೆ ಬಣ್ಣ ಹಚ್ಚಿದರು. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅವನು ಮತ್ತು ಶ್ರಾವಣಿ ಧಾರಾವಾಹಿಯಲ್ಲಿ ನಾಯಕಿ ಶ್ರಾವಣಿ ತಾಯಿ ಅಯ್ಯಂಗಾರ್ ಮಹಿಳೆ ಪುಷ್ಪವಲ್ಲಿಯಾಗಿ ಕಾಣಿಸಿಕೊಂಡರು. ಬಳಿಕ ಆರತಿಗೊಬ್ಬ ಕೀರ್ತಿಗೊಬ್ಬ, ಮನಸಾರೆ, ಕನ್ನಡತಿ, ರತ್ನಮಾಲಾ, ಬೃಂದಾವನ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಕನ್ನಡತಿ ಧಾರಾವಾಹಿಯಲ್ಲಿ ಅಮ್ಮಮ್ಮಾ ಆಗಿ ಎಲ್ಲರನ್ನೂ ರಂಜಿಸಿದರು. ಈ ಪಾತ್ರವನ್ನು ವೀಕ್ಷಕರು ಇಂದಿಗೂ ಮರೆತಿಲ್ಲ.

written update on Actress Chithkala biradar

ಹೊರದೇಶದಲ್ಲಿರುವ ನಟಿಯ ಮಕ್ಕಳು

ಚಿತ್ಕಲಾ ಬಿರಾದಾರ್ ಅವರು ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಜರ್ಮನಿ ದೇಶದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕಿಯಾಗಿ ಕೆಲಸ ಮಾಡಿರುವ ಇವರು, ಸದ್ಯ ಕಲಾವಿದೆಯಾಗಿದ್ದಾರೆ. ಇನ್ನು ಚಿತ್ಕಲಾ ಬಿರಾದರ್ ಅವರ ಮಕ್ಕಳು ಕೂಡ ಹೊರದೇಶದಲ್ಲಿ ಸೆಟಲ್ ಆಗಿದ್ದಾರೆ. ವರ್ಷಕ್ಕೊಮ್ಮೆ ಚಿತ್ಕಲಾ ಬಿರಾದರ್ ಅವರೇ ಮಕ್ಕಳನ್ನು ನೋಡಲು ಹೊರ ದೇಶಕ್ಕೆ ತೆರಳುತ್ತಾರೆ. ವರ್ಷದ ಹಿಂದಷ್ಟೇ ಇವರ ಮಗನ ಮದುವೆಯಾಗಿದ್ದು, ಸೊಸೆ ಜಾರ್ಖಾಂಡ್ ನವರಂತೆ. ನನ್ನ ಸೊಸೆ ಬಹಳ ಒಳ್ಳೆಯವಳು ಎಂದು ಸಂದರ್ಶವೊಂದರಲ್ಲಿ ಹಾಡಿ ಹೊಗಳಿದ್ದಾರೆ. ಇನ್ನು ಜುಲೈ ತಿಂಗಳಿನಲ್ಲಷ್ಟೇ ಇವರ ಮಗ ಹೊರ ದೇಶದಲ್ಲಿ ಹೊಸ ಮನೆಯನ್ನು ಖರೀದಿ ಮಾಡಿದ್ದಾರೆ.

ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ನಟಿ

ಇನ್ನು ನಟಿ ಚಿತ್ಕಲಾ ಬಿರಾದರ್ ಅವರು ಧರ್ಮ ದೇವತೆ ಸಿನಿಮಾ ಮೂಲಕ ಬಣ್ಣದ ಲೋಕದ ಪಯಣ ಆರಂಭಿಸಿದರು. ಬಳಿಕ ಕಾರಣಾಂತರಗಳಿಂದ 9 ವರ್ಷ ಹಿರಿತೆರೆಯಿಂದ ದೂರವಿದ್ದರು. ಈಗ ಮದುವೆ ಮನೆ, ಏನೆಂದು ಹೆಸರಿಡಲಿ, ಹಗಲು ಕನಸು, ಬಜಾರ್, ಯುವರತ್ನ, ಸ್ಟೀಲ್ ಪಾತ್ರೆ ಸಾಮಾನು, ನಿನ್ನ ಸನಿಹಕೆ, ಪ್ರೇಮಂ ಪೂಜ್ಯಂ, ವಿಕ್ರಾಂತ್ ರೋಣ, ಫ್ಯಾಂಟಮ್, ರಾಘವೇಂದ್ರ ಸ್ಟೋರ್ಸ್ ಸೃಿದಂಎ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಹೊಸ ಪಾತ್ರದಲ್ಲಿ ನಟಿ ಚಿತ್ಕಲಾ ಬಿರಾದರ್

ಇದೀಗ ನಟಿ ಚಿತ್ಕಲಾ ಬಿರಾದರ್ ಅವರು ಜೀ ಕನ್ನಡ ವಾಹಿನಿಗೆ ಎಂಟ್ರಿಕೊಟ್ಟಿದ್ದಾರೆ. ಅಮೃತಧಾರೆ ಧಾರಾವಾಹಿಯಲ್ಲಿ ಮನೆ ಕೆಲಸದಾಕೆ ಸುಧಾಳ ತಾಯಿ ಪಾತ್ರದಲ್ಲಿ ಚಿತ್ಕಲಾ ಅವರು ನಟಿಸಿದ್ದಾರೆ. ಇದರಲ್ಲಿ ಚಿತ್ಕಲಾ ಅವರಿಗೆ ಖಾಯಿಲೆ ಇದ್ದು, ಕಷ್ಟದಲ್ಲೂ ಮಗಳು ಅಮ್ಮನನ್ನು ನೋಡಿಕೊಳ್ಳುತ್ತಿದ್ದಾಳೆ. ಇನ್ನು ಗೌತಮ್ ದಿವಾನ್ ತಾಯಿ ಭಾಗ್ಯ ಈಕೆಯೇ ಎಂದು ವೀಕ್ಷಕರು ಸದ್ಯ ನಂಬಿದ್ದಾರೆ. ಸುಧಾ ಕೂಡ ಗೌತಮ್ ನ ಸಹೋದರಿ ಎಂದು ಹೇಳಲಾಗುತ್ತಿದೆ. ಆದರೆ, ನಿಜಕ್ಕೂ ಈಕೆ ಯಾರು ಎಂಬ ಸತ್ಯ ಮುಂದಿನ ದಿನಗಳಲ್ಲಿ ಪಾತ್ರವೇ ತಿಳಿದು ಬರಬೇಕಿದೆ. ಅಮೃತಧಾರೆ ಧಾರಾವಾಹಿಯಲ್ಲಿ ಸದ್ಯ ಹಲವು ಟ್ವಿಸ್ಟ್ ಗಳು ಮೂಡಿದ್ದು, ಕುತೂಹಲ ಮೂಡಿಸಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X