Anupama Gowda; ನಟಿ ಅನುಪಮಾ ಗೌಡ ಅವರ ಬೆನ್ನ ಹಿಂದೆ ಇರುವ ಆ ವ್ಯಕ್ತಿ ಯಾರು..?
ಕಿರುತೆರೆಯಲ್ಲಿ ನಟಿಯಾಗಿ ಎಂಟ್ರಿಕೊಟ್ಟು ಈಗ ಕಂಪ್ಲೀಟ್ ಆಗಿ ನಿರೂಪಣೆಯನ್ನು ಮಾಡಿಕೊಂಡು ಸಕ್ರಿಯವಾಗಿರುವ ಅನುಪಮಾ ಗೌಡ ಅವರು ಲೈಫ್ ನಲ್ಲಿ ಹ್ಯಾಪಿ ಆಗಿದ್ದಾರೆ. ರಿಯಾಲಿಟಿ ಶೋಗಳಲ್ಲೂ ಸ್ಫರ್ಧಿಸಿ, ಚಿರಪರಿಚಿತರಾಗಿರುವ ಅನುಪಮಾ ಗೌಡ ಅವರು ಕಿರುತೆರೆ ಅಷ್ಟೇ ಅಲ್ಲದೇ ಸೋಶಿಯಲ್ ಮೀಡಿಯಾದಲ್ಲೂ ಅಷ್ಟೇ ಆಕ್ಟೀವ್ ಆಗಿ ಇರುತ್ತಾರೆ. ಸದ್ಯ ನಟಿ ಅನುಪಮಾ ಗೌಡ ಅವರು ಹೊಸ ವೀಡಿಯೋವೊಂದನ್ನು ಅಪ್ ಲೋಡ್ ಮಾಡಿದ್ದಾರೆ. ತಮ್ಮ ನೆಚ್ಚಿನ ವ್ಯಕ್ತಿಯೊಂದಿಗಿನ ಚಿತ್ರವನ್ನು ಟ್ಯಾಟೂ ಹಾಕಿಸಿಕೊಂಡಿದ್ದು, ಸಂತಸ ಹಂಚಿಕೊಂಡಿದ್ದಾರೆ.
ಅನುಪಮಾ ಅವರ ಬೆನ್ನಿನಲ್ಲಿ ಹೊಸ ಟ್ಯಾಟೂ
ಅನುಪಮಾ ಗೌಡ ಅವರು ಬಹಳ ಎಮೋಷನಲ್ ವ್ಯಕ್ತಿಯಾಗಿದ್ದು, ಸಂಬಂಧಗಳಿಗೆ ಬಹಳ ಬೆಲೆ ಕೊಡುತ್ತಾರೆ. ಕಿರುತೆರೆಯಲ್ಲಿ ಹಲವು ಕಲಾವಿದರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿರುವ ಅನುಪಮಾ ಅವರು, ಗೆಳೆಯರೊಂದಿಗೆ ಪ್ರವಾಸ ತೆರಳುತ್ತಿರುತ್ತಾರೆ. ಇನ್ನು ಇಂದು ನಟಿ ಅನುಪಮಾ ಗೌಡ ಅವರು ತಮ್ಮ ನೆಚ್ಚಿನ ವ್ಯಕ್ತಿ ಅಂದರೆ, ಅವರ ತಂದೆಯೊಂದಿಗೆ ಚಿಕ್ಕವರಿದ್ದಾಗ ತೆಗೆಸಿಕೊಂಡಿದ್ದ ಫೋಟೋವನ್ನು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಅಪ್ಪ ಈಗ ಇಲ್ಲಿ ಇಲ್ಲವಾದರೂ ಕೂಡ ಸದಾ ನನ್ನ ಬೆನ್ನ ಹಿಂದೆ ಇರುತ್ತಾರೆ ಎಂದು ಬರೆದುಕೊಂಡಿದ್ದಾರೆ. ಕುತ್ತಿಗೆಯ ಹಿದೆ. ಬೆನ್ನ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದು, ಇದರ ವೀಡಿಯೋವನ್ನು ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಬಿಗ್ ಬಾಸ್ ನಲ್ಲಿ ನಟಿ ಸ್ಪರ್ಧೆ
ಕನ್ನಡದ ಬಿಗ್ ಬಾಸ್ ಸೀಸನ್ 5 ರ ರಿಯಾಲಿಟಿ ಶೋ ನಲ್ಲಿ ಅನುಪಮಾ ಗೌಡ ಅವರು ಭಾಗವಹಿಸಿದರು. ಫಿನಾಲೆವರೆಗೂ ಆಟವಾಡಿ ಹೊರಬಂದ ಬಳಿಕ ಕೊಂಚ ಬ್ರೇಕ್ ಪಡೆದು ಮತ್ತೆ ನಿರೂಪಕಿಯಾಗಿ ಎಂಟ್ರಿ ಕೊಟ್ಟರು. ಕೆಲ ಕಾಮಿಡಿ ಶೋ ಸೇರಿದಂತೆ ಹಲವು ರಿಯಾಲಿಟಿ ಶೋಗಳನ್ನು ಅನುಪಮಾ ಗೌಡ ಅವರು ನಿರೂಪಣೆ ಮಾಡಿದರು. ಪುನಃ ಬಿಗ್ ಬಾಸ್ ಸೀಸನ್ 9 ರಲ್ಲಿ ಪ್ರವೀಣರಾಗಿ ಭಾಗವಹಿಸಿದರು. ಮೊದಲ ಬಾರಿಗಿಂತಲೂ ಎರಡನೇಯ ಸಲ ಅದ್ಭುತವಾಗಿ ಆಟವಾಡಿದರು. ಈ ಮೂಲಕ ತಮ್ಮ ಅಭಿಮಾನಿಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡರು. ಮಜಾಭಾರತ, ನನ್ನಮ್ಮ ಸೂಪರ್ ಸ್ಟಾರ್, ರಾಜಾ ರಾಣಿ ಎಂಬ ಶೋಗಳನ್ನು ನಡೆಸಿಕೊಟ್ಟರು. ಇತ್ತೀಚೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಅನುಬಂಧ ಅವರಾಡ್ ಕಾರ್ಯಕ್ರಮ ನಡೆಯಿತು. ಇದನ್ನು ಕೂಡ ಅನುಪಮಾ ಅವರು ನಡೆಸಿಕೊಟ್ಟರು.
ಬಹಳಷ್ಟು ಟ್ರಿಪ್ ಹೋಗಿರುವ ನಟಿ
ಸ್ಟಾರ್ ಸುವರ್ಣ ವಾಹಿನಿಯ ಸುವರ್ಣ ಪ್ರೇಮೋತ್ಸವ, ಜಾಕ್ ಪಾಟ್ ಸೇರಿದಂತೆ ಕೆಲ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದರು. ಅನುಪಮಾ ಗೌಡ ಅವರು ಸದಾ ಸೋಶಿಯಲ್ ಮೀಡಿಯಾಗಳಲ್ಲಿ ಆಕ್ಟೀವ್ ಆಗಿರುತ್ತಾರೆ. ಅವರ ದಿನಚರಿಗಳ ಬಗ್ಗೆ ಅಭಿಮಾನಿಗಳಿಗೆ ಮಾಹಿತಿಯನ್ನೂ ನೀಡುತ್ತಿರುತ್ತಾರೆ. ಅನುಪಮಾ ಗೌಡ ಅವರದ್ದೇ ಯೂಟ್ಯೂಬ್ ಚಾನೆಲ್ ಇದ್ದು, ಇದರಲ್ಲಿ ತಮ್ಮ ದಿನಚರಿ, ಅಡುಗೆ ರೆಸಿಪಿಗಳು, ಪ್ರವಾಸ, ಶೂಟಿಂಗ್ ಎಲ್ಲದರ ಬಗ್ಗೆ ಅಪ್ಲೋಡ್ ಮಾಡುತ್ತಿರುತ್ತಾರೆ. ಗೋವಾ, ಥೈಲ್ಯಾಂಡ್, ದುಬೈ,ಜೈಪುರ, ಹಾಂಗ್ ಕಾಂಗ್, ಮುನಾರ್, ಬಾಲಿ ಅಂತೆಲ್ಲಾ ಪ್ರವಾಸ ಮಾಡಿ ಎಂಜಾಯ್ ಮಾಡಿದ್ದಾರೆ.
ಸಿನಿಮಾ, ಕಿರುತರೆಯಲ್ಲಿ ಆಕ್ಟೀವ್
ಅನುಪಮಾ ಗೌಡ ಅವರು ಕೆಲ ಸಿನಿಮಾಗಳಲ್ಲೂ ನಟಿಸಿದ್ದು, ಲಂಕೇಶ್, ಆ ಕರಾಳ ರಾತ್ರಿ ಚಿತ್ರಗಳೀಗೆ ಬಣ್ಣ ಹಚ್ಚಿದ್ದಾರೆ. ಸಿನಿಮಾ, ಕಿರುತೆರೆ, ನಟನೆ, ನಿರೂಪಣೆ ಎಲ್ಲದರಲ್ಲೂ ಕಾಣಿಸಿಕೊಂಡಿರುವ ಅನುಪಮಾ ಅವರು ಇತ್ತೀಚೆಗೆ ನಟನೆಯಿಂದ ದೂರ ಉಳಿದಿದ್ದಾರೆ. ಅನುಪಮಾ ಅವರು ನಟಿಸಿದ್ದು, ಅಕ್ಕ ಪಾತ್ರಕ್ಕಿಂತಲೂ ಉತ್ತಮ ವಾದ ಪಾತ್ರ ಸಿಕ್ಕಿದರೆ, ಧಾರಾವಾಹಿಯಲ್ಲಿ ನಟಿಸಲು ಬಯಸುತ್ತೇನೆ ಎಂದಿದ್ದಾರೆ.


Click it and Unblock the Notifications











