New Year 2025 ; ಹೊಸ ವರ್ಷವನ್ನು ಒಂಟಿಯಾಗಿ ವೆಲ್ಕಂ ಮಾಡಿದ ನಟಿ ಅನುಪಮಾ ಗೌಡ..!
ಅನುಪಮಾ ಗೌಡ ಅವರು ನಟಿಯಾಗಿ ಕಿರುತೆರೆಗೆ ಎಂಟ್ರಿ ಕೊಟ್ಟು, ನಿರೂಪಕಿ ಕೆಲಸದಲ್ಲಿ ಸದ್ಯ ಬ್ಯುಸಿಯಾಗಿದ್ದಾರೆ. ನಟಿಯಿಂದ ನಿರೂಪಕಿಯಾಗಲು ನಟಿ ಅನುಪಮಾ ಅವರು ಬಹಳ ಕಷ್ಟಪಟ್ಟಿದ್ದಾರೆ. ದಶಕಗಳಿಂದ ಕಿರುತೆರೆಯಲ್ಲಿರುವ ನಟಿ ಅನುಪಮಾ ಅವರಿಗೆ ಅವರ ನಟನೆಯ ಜೊತೆಗೆ ಅವರ ನಿರೂಪಣೆಯನ್ನೂ ಇಷ್ಟಪಟ್ಟಿರುವ ಅಭಿಮಾನಿಗಳಿದ್ದಾರೆ. ಹಳ್ಳಿ ದುನಿಯಾ ಮೂಲಕ ಬಣ್ಣದ ಲೋಕಕ್ಕೆ ಬಂದು ಅಕ್ಕ ಧಾರಾವಾಹಿ ಮೂಲಕ ಕಿರುತೆರೆಯಲ್ಲಿ ನಟಿಸಿ, ರಾಜಾ ರಾಣಿ, ನಮ್ಮಮ್ಮ ಸೂಪರ್ ಸ್ಟಾರ್, ಮಜಾಭಾರತ ಸೇರಿದಂತೆ ರಿಯಾಲಿಟಿ ಶೋಗಳನ್ನು ನಿರೂಪಕಿಯಾಗಿ ಗುರುತಿಸಿಕೊಂಡಿದ್ದಾರೆ.
ಸೊಲೋ ಟ್ರಿಪ್ ನಲ್ಲಿ ಅನುಪಮಾ
ಅನುಪಮಾ ಗೌಡ ಅವರು ಹೆಚ್ಚೆಚ್ಚು ಸೋಲೋ ಟ್ರಿಪ್ ಗೆ ಹೋಗಲು ಇಷ್ಟಪಡುತ್ತಾರೆ. ಈಗಾಗಲೇ ನಟಿ ಅನುಪಮಾ ಗೌಡ ಅವರು ಗೋವಾ, ಥೈಲ್ಯಾಂಡ್, ತಡೋಬಾ, ಜೈಪುರ, ಮಹಾರಾಷ್ಟ್ರ, ದುಬೈ, ಬಾಲಿ, ವಿಯಟ್ನಂ, ಮುನಾರ್, ತಾನ್ಜೇನಿಯಾ ಸೇರಿದಂತೆ ಹಲವು ಕಡೆಗಳಿಗೆ ಪ್ರವಾಸ ಕೈಗೊಂಡಿದ್ದಾರೆ. ಅನುಪಮಾ ಅವರು ಸ್ನೇಹಿತರ ಜೊತೆಗೆ ಪ್ರವಾಸ ಮಾಡಿದ್ದು, ಮತ್ತೆ ಮತ್ತೆ ಒಂಟಿಯಾಗಿ ಪ್ರವಾಸ ಕೈಗೊಳ್ಳಲು ಕೂಡ ಇಷ್ಟಪಡುತ್ತಾರೆ. ಹೀಗಾಗಿ ನಟಿ ಅನುಪಮಾ ಗೌಡ ಅವರು ಮತ್ತೆ ಬಾಲಿಗೆ ಸೋಲೋ ಟ್ರಿಪ್ ತೆರಳಿದ್ದಾರೆ. 2024ಕ್ಕೆ ಗುಡ್ ಬೈ ಹೇಳಿ, 2025ನ ವೆಲ್ಕಂ ಮಾಡಲು ಅನುಪಮಾ ಅವರು ಸೋಲೋ ಟ್ರಿಪ್ ಅದೂ ಕೂಡ ಬಾಲಿಯನ್ನು ಆರಿಸಿಕೊಂಡಿದ್ದಾರೆ.

ಹೊಸ ಅನುಭವ ಹಂಚಿಕೊಂಡ ನಟಿ
ಬಾಲಿಗೆ ಒಬ್ಬಳೇ ತೆರಳಿರುವ ಅನುಪಮಾ ಅವರಿಗೆ ವರ್ಷದ ಕೊನೆಯ ದಿನ ವಿಶೇಷ ಅನುಭವವಾಗಿದೆ. ನಿನ್ನೆ ಬೀಚ್ ಗೆ ಹೊರಡಬೇಕು ಎಂದುಕೊಂಡಾಗ ಇದ್ದಕ್ಕಿದ್ದ ಹಾಗೆಯೇ ಮಳೆ ಬಂದಿದೆ. ತಾಳ್ಮೆಯಿಂದ ಕಾದು ಬೀಚ್ ಗೆ ತೆರಳಿ ಎಂಜಾಯ್ ಮಾಡಿದ ನಟಿ ಅನುಪಮಾ ಅವರು ವಾಪಸ್ ತಮ್ಮ ಸ್ಟೇ ಕಡೆಗೆ ಹೊರಟಿದ್ದಾರೆ. ಆದರೆ, ಅವರ ಹೋಮ್ ಸ್ಟೇ ಓನರ್ ಬಳಿಯಿಂದ ಕೇಳಿ ತಂದಿದ್ದ ಗಾಡಿಯ ಕೀ ಜಾಮ್ ಆಗಿ ಸಮಸ್ಯೆ ಆಗಿದ್ದೆ. ಅಲ್ಲೇ ಇದ್ದ ಹುಡುಗರನ್ನು ಡ್ರಾಪ್ ಕೇಳಿದ್ದ ಸಾವಿರಾರು ರೂಪಾಯಿ ಹಣ ಕೇಳಿದ್ದು, ಅನುಪಮಾ ಅವರು ಅಷ್ಟು ದೊಡ್ಡ ಮೊತ್ತ ಕೊಡಬೇಕಾ ಎಂದು ಯೋಚಿಸಿದ್ದಾರೆ.
ಅನುಪಮಾ ಅವರ ರೆಸಲ್ಯೂಶನ್
ಆಗ ಅನುಪಮಾ ಅವರು ಓನರ್ ಅವರಿಂದಲೇ ಸಹಾಯ ಪಡೆದಿದ್ದಾರೆ. ಸ್ವಲ್ಪ ಗಂಟೆಗಳ ಕಾಲ ಆತಂಕದಲ್ಲಿದ್ದ ಅನುಪಮಾ ಅವರಿಗೆ ಅಲ್ಲಿದ್ದವರೆಲ್ಲಾ ಕಾಳಜಿ ತೋರಿದ್ದು, ಈಗ ಅನುಪಮಾ ಅವರು ಹೊಸ ವರ್ಷಕ್ಕೆ ತಾವೂ ಕೂಡ ಇನ್ನಷ್ಟು ಕಾಳಜಿಯಿಂದ ಇತರರಿಗೆ ದಯಾಳುವಾಗಿರಬೇಕು ಎಂದು ತೀರ್ಮಾನಿಸಿದ್ದಾರೆ. ಇವೆಲ್ಲಾ ತಮ್ಮ ಅನುಭವವನ್ನು ಇನ್ ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ತಮ್ಮ ಅನುಭವವನ್ನು ಹಂಚಿಕೊಂಡು ಸೋಲೋ ಟ್ರಿಪ್ ಹೋಗುವುದು ಕೂಡ ಸೇಫ್ ಬಟ್ ಆದರೆ, ನಾವು ಒಂಟಿಯಾಗಿ ತಿಳಿಯದ ಜಾಗಕ್ಕೆ ಹೋದಾಗ ಹೇಗಿರಬೇಕು ಎಂಬುದನ್ನು ಕೂಡ ತಿಳಿಸಿದ್ದಾರೆ. ಜಾಗರೂಕತೆ ಬಹಳ ಮುಖ್ಯ ಎಂದು ಹೇಳಿದ್ದಾರೆ. ಹೊಸ ವರ್ಷವನ್ನು ವಿಶೇಷವಾಗಿ ನಟಿ ಅನುಪಮಾ ಗೌಡ ಅವರು ಆಚರಿಸಿದ್ದಾರೆ.
ರಿಯಾಲಿಟಿ ಶೋಗಳಲ್ಲಿ ನಟಿ
ಇನ್ನು ನಟಿ ಅನುಪಮಾ ಗೌಡ ಅವರು ಬಿಗ್ ಬಾಸ್ ಸೀಸನ್ 5 ರಲ್ಲಿ ರಿಯಾಲಿಟಿ ಶೋ ನಲ್ಲಿ ಅನುಪಮಾ ಗೌಡ ಅವರು ಭಾಗವಹಿಸಿದರು. ಫಿನಾಲೆವರೆಗೂ ಆಟವಾಡಿ ಹೊರಬಂದ ಬಳಿಕ ಕೊಂಚ ಬ್ರೇಕ್ ಪಡೆದು ಮತ್ತೆ ನಿರೂಪಕಿಯಾಗಿ ಎಂಟ್ರಿ ಕೊಟ್ಟರು. ಕೆಲ ಕಾಮಿಡಿ ಶೋ ಸೇರಿದಂತೆ ಹಲವು ರಿಯಾಲಿಟಿ ಶೋಗಳನ್ನು ಅನುಪಮಾ ಗೌಡ ಅವರು ನಿರೂಪಣೆ ಮಾಡಿದರು. ಪುನಃ ಬಿಗ್ ಬಾಸ್ ಸೀಸನ್ 9 ರಲ್ಲಿ ಪ್ರವೀಣರಾಗಿ ಭಾಗವಹಿಸಿದರು. ಮೊದಲ ಬಾರಿಗಿಂತಲೂ ಎರಡನೇಯ ಸಲ ಅದ್ಭುತವಾಗಿ ಆಟವಾಡಿದರು. ಈ ಮೂಲಕ ತಮ್ಮ ಅಭಿಮಾನಿಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡರು.


Click it and Unblock the Notifications











