ಧಾರಾವಾಹಿಯಲ್ಲಿ ಎಣ್ಣೆ ಸೀಗೆಕಾಯಿಯಂತಿರುವ ಇವರು ಶೂಟಿಂಗ್ ಗ್ಯಾಪ್ ನಲ್ಲಿ ಡ್ಯಾನ್ಸಿಂಗ್ ಜೋಡಿ..!
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಪೂರ್ಣಿಮಾ ಹಾಗೂ ದೀಪಿಕಾ ವಾರಗಿತ್ತಿಯರು. ಆದರೆ, ಅವರಿಬ್ಬರೂ ಒಂದೇ ತಾಯಿಯ ಮಕ್ಕಳಾಗಿರುತ್ತಾರೆ. ದೀಪಿಕಾಳ ಅಕ್ಕ ಪೂರ್ಣಿಮಾ. ಈ ಸತ್ಯ ಇನ್ನು ದೀಪಿಕಾಳಿಗೆ ಗೊತ್ತಾಗಿಲ್ಲ. ವನಜಾ, ತುಳಸಿ ಮತ್ತು ಮಾಧವ್ ಈ ಸತ್ಯವನ್ನು ಗುಟ್ಟಾಗಿ ಕಾಪಾಡುತ್ತಿದ್ದಾರೆ. ದೀಪಿಕಾಳಿಗೆ ಪೂರ್ಣಿಮಾ ಎಂದರೆ ಆಗುವುದಿಲ್ಲ. ಅನಾಥೆಯಾಗಿರುವ ಪೂರ್ಣಿಮಾ ಇಷ್ಟು ದೊಡ್ಡ ಮನೆಗೆ ಸೊಸೆಯಾಗಿ ಬಂದಿರುವುದಕ್ಕೆ ಉರಿದು ಬೀಳುತ್ತಾಳೆ. ಪ್ರತಿ ವಿಚಾರಕ್ಕೂ ಚುಚ್ಚಿ ಮಾತನಾಡಿಸುತ್ತಾ ನೋಯಿಸುತ್ತಿರುತ್ತಾಳೆ.
ಧಾರಾವಾಹಿಯಲ್ಲಿ ದ್ವೇಷ ಕಾರುವ ಜೋಡಿಗಳು
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ದೀಪಿಕಾ ಮತ್ತು ಪೂರ್ಣಿಮಾ ಖುಷಿಯಾಗಿ ಇದ್ದ ದಿನವೇ ಇಲ್ಲ. ಪೂರ್ಣಿಮಾ ಎಷ್ಟೇ ಅನುಸರಿಸಿಕೊಂಡು ಹೋಗಲು ಯತ್ನಿಸಿದರೂ ಕೂಡ ದೀಪಿಕಾ ಒಳಗೊಳಗೆ ಧ್ವೇಷ ಕಾರುತ್ತಿರುತ್ತಾಳೆ. ಯಾವಾಗಲೂ ಏನಾದರೂ ಒಂದು ಸಮಸ್ಯೆ ತಂದಿಟ್ಟು ಅದನ್ನು ಪೂರ್ಣಿಮಾ ಮೇಲೆ ಗೂಬೆ ಕೂರಿಸುತ್ತಾಳೆ ದೀಪಿಕಾ. ದೀಪಿಕಾಳ ಬುದ್ಧಿ ಗೊತ್ತಿದ್ದರೂ ಕೂಡ ಪೂರ್ಣಿಮಾ ಏನೂ ಮಾಡಲಾಗದೇ ಸುಮ್ಮನಿದ್ದಾಳೆ. ಮನೆ ಒಡೆಯಬಾರದು ಎಂಬ ಕಾರಣಕ್ಕೆ ದೀಪಿಕಾಳ ಚುಚ್ಚು ಮಾತುಗಳನ್ನು ಸಹಿಸಿಕೊಳ್ಳುತ್ತಿರುತ್ತಾಳೆ. ತನಗೆ ಮಕ್ಕಳಾಗುವುದಿಲ್ಲ ಎಂಬ ಕಾರಣಕ್ಕೆ ದೀಪಿಕಾ ಈಗಾಗಲೇ ಹಲವು ಬಾರಿ ಅವಮಾನಿಸಿದ್ದಾಳೆ. ಇದೆಲ್ಲವನ್ನೂ ಪೂರ್ಣಿಮಾ ಮನೆಯ ಮರಿಯಾದೆಗೋಸ್ಕರ ಸಹಿಸಿಕೊಂಡಿದ್ದಾಳೆ. ಧಾರಾವಾಹಿಯಲ್ಲಿ ಇವರಿಬ್ಬರೂ ಕೂಡ ಹಾವು ಮುಂಗುಸಿ ಇದ್ದಂತೆ. ಒಳಗೊಳಗೆ ಕಿತ್ತಾಡುತ್ತಿರುತ್ತಾರೆ.

ಒಟ್ಟಿಗೆ ಹೆಜ್ಜೆ ಹಾಕುವ ಗೆಳತಿಯರು
ಪೂರ್ಣಿಮಾ ದೀಪಿಕಾಳಿಗೆ ಆದಷ್ಟು ಒಳ್ಳೆಯ ಬುದ್ಧಿಯನ್ನು ಹೇಳುತ್ತಿರುತ್ತಾಳೆ. ಆದರೆ, ದೀಪಿಕಾ ಕೇಳುವುದಿಲ್ಲ. ಧಾರಾವಾಹಿಯಲ್ಲಿ ಕಿತ್ತಾಡುವ ಈ ಜೋಡಿ ಕ್ಯಾಮರಾದಿಂದ ಹೊರ ಬಂದ ಕೂಡಲೇ ಒಳ್ಳೆಯ ಗೆಳತಿಯರು ಎಂದು ಹೇಳಿದರೂ ತಪ್ಪಾಗುವುದಿಲ್ಲ. ಯಾಕೆಂದರೆ, ಶೂಟಿಂಗ್ ಬಿಡುವಿನ ಸಮಯದಲ್ಲಿ ಇಬ್ಬರೂ ಒಟ್ಟಿಗೆ ರೀಲ್ಸ್ ಮಾಡುತ್ತಿರುತ್ತಾರೆ. ಇದನ್ನೆಲ್ಲಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಎಂಜಾಯ್ ಮಾಡುತ್ತಿರುತ್ತಾರೆ. ಆಗಾಗ ಒಟ್ಟಿಗೆ ಸ್ಟೆಪ್ಸ್ ಹಾಕಿ ವೀಡಿಯೋಗಳನ್ನು ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಅಪ್ ಲೋಡ್ ಮಾಡುತ್ತಿರುತ್ತಾರೆ.
ಶೂಟಿಂಗ್ ಗ್ಯಾಪ್ ನಲ್ಲೇ ರೀಲ್ಸ್ ಸುರಿಮಳೆ
ಶೂಟಿಂಗ್ ನಲ್ಲಿ ಬ್ರೇಕ್ ಸಿಕ್ಕಾಗಲೆಲ್ಲಾ ಟ್ರೆಂಡಿಂಗ್ ಹಾಡುಗಳಿಗೆ ಈ ಜೋಡಿಗಳು ಹೆಜ್ಜೆ ಹಾಕುತ್ತಿರುತ್ತಾರೆ. ಒಳ್ಳೊಳ್ಳೆ ಬೀಟ್ಸ್ ಸಾಂಗ್ ಗಳಿಗೆ ಇಬ್ಬರೂ ಕೂಡ ಸಿಂಕ್ ಆಗುವಂತೆ ಕುಣಿದು ಈನ್ ಸ್ಟಾಗ್ರಾಂ ಪೇಜ್ ನಲ್ಲಿ ಅಪ್ ಲೋಡ್ ಮಾಡುತ್ತಿರುತ್ತಾರೆ. ಈಗಾಗಲೇ ಸಾಕಷ್ಟು ಹಾಡುಗಳಿಗೆ ಹೆಜ್ಜೆ ಹಾಕಿರುವ ಈ ಜೋಡಿ ಇದೀಗ ಸುಧಾರಾಣಿ ಅವರಿಗಾಗಿ ಹಾಡೊಂದಕ್ಕೆ ಹೆಜ್ಜೆ ಹಾಕಿ ಡೆಡಿಕೇಟ್ ಮಾಡಿದ್ದಾರೆ. ಇವ ಯಾವ ಸೀಮೆ ಗಂಡು ಕಾಣಮ್ಮೊ ಎಂದು ದೀಪಿಕಾ ಮತ್ತು ಪೂರ್ಣಿಮಾ ಇಬ್ಬರೂ ಕುಣಿದು ಕುಪ್ಪಳಿಸಿದ್ದಾರೆ.
ರಿಯಲ್ ಲೈಫ್ ನಲ್ಲಿ ಇಬ್ಬರೂ ಡ್ಯಾನ್ಸರ್ ಗಳು
ಅಷ್ಟಕ್ಕೂ ಇಬ್ಬರೂ ಕೂಡ ರಿಯಲ್ ಲೈಫ್ ನಲ್ಲಿ ಒಳ್ಳೆಯ ಡ್ಯಾನ್ಸರ್ ಗಳು. ದೀಪಿಕಾ ನಿಜವಾದ ಹೆಸರು ದರ್ಶಿನಿ. ದರ್ಶಿನಿ ಹಲವು ಸಿನಿಮಾಗಳಿಗೆ ಕೊರಿಯೋಗ್ರಫಿ ಮಾಡಿದ್ದು, ಮೂಲತಃ ಡ್ಯಾನ್ಸರ್ ಆಗಿದ್ದಾರೆ. ಇನ್ನು ಪೂರ್ಣಿಮಾ ಅಲಿಯಾಸ್ ಲಾವಣ್ಯ ಅವರು ಕೂಡ ಭರತನಾಟ್ಯ ಕಲಾವಿದೆಯಾಗಿದ್ದಾರೆ. ಈಗಾಗಲೇ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋನಲ್ಲೂ ಕೂಡ ಕುಣಿದಿದ್ದಾರೆ. ಶೂಟಿಂಗ್ ನಡೆಯುವ ಸಂದರ್ಭದಲ್ಲಿ ಕ್ಯಾಮರಾ ಮುಂದೆ ಎನ್ಣೆ ಸೀಗೆಕಾಯಿಯಂತೆ ಆಡುವ ಇವರಿಬ್ಬರು. ಕ್ಯಾಮರಾ ದಿಂದ ಸರಿದ ಕೂಡಲೇ ಒಟ್ಟಿಗೆ ಹರಟುತ್ತಾ ಯಾವುದಾದರೂ ಒಂದು ಟ್ರೆಂಡಿಂಗ್ ಹಾಡುಗಳಿಗೆ ಹೆಜ್ಜೆ ಹಾಕುತ್ತಾರೆ. ಇಬ್ಬರೂ ಕೂಡ ಒಳ್ಳೆಯ ಡ್ಯಾನ್ಸರ್ ಆಗಿದ್ದು, ಇವರ ಸ್ಟೆಪ್ಸ್ ಗಳಿಗೆ ಅಭಿಮಾನಿಗಳಂತೂ ಫಿದಾ ಆಗಿದ್ದಾರೆ.


Click it and Unblock the Notifications











