Deepa Katte ; ದೀಪಾವಳಿ ಹಬ್ಬದಂದು ದೀಪಾ ಕಟ್ಟೆ ಮನೆಗೆ ಬಂದ ಹೊಸ ಅತಿಥಿ..!
ದೀಪಾ ಕಟ್ಟೆ ಸದ್ಯ ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಸಂಧ್ಯಾ ಪಾತ್ರಕ್ಕೆ ಜೀವ ತುಂಬಿದ್ದು, ವೀಕ್ಷಕರ ನೆಚ್ಚಿನ ನಟಿಯಾಗಿದ್ದಾರೆ. ಇಷ್ಟು ದಿನ ಒಂದು ರೀತಿ ಇದ್ದ ಪಾತ್ರ ಈಗ ಬದಲಾಗಿದೆ. ಹಣಕ್ಕಾಗಿ ಸದಾ ಬಾಯಿ ಬಿಡುತ್ತಿದ್ದ ಸಂಧ್ಯಾ ಈಗ ಸಂಬಂಧಗಳ ಬೆಲೆಯನ್ನು ಅರಿತಿದ್ದಾಳೆ. ಸ್ವಾರ್ಥಿಯಾಗಿ ಬದುಕು ನಡೆಸುತ್ತಿದ್ದ ಸಂಧ್ಯಾ ಈಗ ತನ್ನ ಮನೆಯವರಿಗಾಗಿ, ಕುಟುಂಬದ ಒಳಿತಿಗಾಗಿ ಆಲೋಚಿಸುವ ಮನೆಯ ಮುದ್ದು ಮಗಳಾಗಿದ್ದಾಳೆ.
ಪಾತ್ರದಲ್ಲಿ ಬದಲಾವಣೆಯನ್ನು ಮೆಚ್ಚಿದ ವೀಕ್ಷಕರು
ದುಡ್ಡಿಗೋಸ್ಕರ ಹೀಗೂ ಮಾಡುತ್ತಾರಾ, ನಾಚಿಕೆ ಮಾನ ಮರ್ಯಾದೆ ಬಿಟ್ಟು ಬದುಕುವ ಜನರೂ ಇದ್ದಾರಾ ಎಂದು ಆಶ್ಚರ್ಯ ಪಡುವಂತೆ ನಟಿ ದೀಪಾ ಕಟ್ಟೆ ನಟಿಸಿ ತೋರಿಸಿದ್ದರು. ಇದೀಗ ತನ್ನ ತಪ್ಪುಗಳನ್ನು ಅರಿತುಕೊಂಡಿದ್ದಾಳೆ. ತನ್ನ ಸಂಬಂಧಗಳಿಗೆ ಬೆಲೆ ಕೊಡುತ್ತಿದ್ದು, ಕೆಲಸಕ್ಕೆ ಸೇರಿಕೊಂಡು ಮನೆಗೆ ಸಹಾಯ ಮಾಡುತ್ತಿದ್ದಾಳೆ. ಪ್ರತಿಯೊಂದು ವಿಚಾರವನ್ನು ಪಾಸಿಟಿವ್ ಆಗಿ ತೆಗೆದುಕೊಳ್ಳುತ್ತಿದ್ದಾಳೆ. ಸಂಧ್ಯಾಳ ಈ ಬದಲಾವಣೆಯನ್ನು ಕಂಡು ವೀಕ್ಷಕರು ಬಹಳ ಖುಷಿ ಪಟ್ಟಿದ್ದಾರೆ. ನಟಿ ದೀಪಾ ಕಟ್ಟೆ ಅವರು ಕೂಡ ಅಷ್ಟೇ ಮುದ್ದಾಗಿ ನಟಿಸಿದ್ದಾರೆ. ಮಿಥುನ ರಾಶಿ, ಹಿಟ್ಲರ್ ಕಲ್ಯಾಣ, ಧ್ರುವ ನಕ್ಷತ್ರಾ, ಜೀವ ಹೂವಾಗಿದೆ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇನ್ನು ದಿಯಾ ಚಿತ್ರದಲ್ಲಿ ನಾಯಕಿ ದಿಯಾ ಸ್ವರೂಪ್ ಚಿಕ್ಕಪ್ಪನ ಮಗಳು ಪಾತ್ರದಲ್ಲೂ ದೀಪಾ ಕಟ್ಟೆ ನಟಿಸಿದ್ದಾರೆ.

ಎರಡು ದೋಣಿಯಲ್ಲಿ ಪಯಣಿಸಿದ ನಟಿ
ನಟಿ ದೀಪಾ ಅವರು ಉಜಿರೆಯಲ್ಲಿ ಓದಿ ಇಂಜಿನಿಯರಿಂಗ್ ಮಾಡಿಕೊಂಡು ಬೆಂಗಳೂರಿನ ಎಂಎನ್ ಸಿ ಕಂಪನಿಯೊಂದರಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ, ದೀಪಾ ಕಟ್ಟೆ ಅವರಿಗೆ ನಟನೆ ಮೇಲಿನ ವ್ಯಾಮೋಹ, ಕೆಲಸದಲ್ಲಿನ ಆಸಕ್ತಿಯನ್ನು ಕ್ಷಣ ಕ್ಷಣಕ್ಕೂ ಕುಗ್ಗಿಸುತ್ತಾ ಬಂದಿತ್ತು. ಇನ್ನು ಕಂಪ್ಯೂಟರ್ ಮುಂದೆ ಕುಳಿತರೆ ಆಗದು ಎಂದು ಸ್ಟೇಜ್ ಹತ್ತಲೇಬೇಕು ಎಂದು ತೀರ್ಮಾನಿಸಿ ಎರಡು ದೋಣಿಯ ಮೇಲೆ ಕಾಲಿಟ್ಟರು. ಅಭಿನಯ ರಂಗದಲ್ಲಿ ಒಂದು ವರ್ಷಗಳ ಕಾಲ ಡಿಪ್ಲೊಮಾ ಕೋರ್ಸ್ ಅನ್ನು ಮಾಡಿದರು. ರಂಗ ಭೂಮಿಯಲ್ಲಿ ಇದ್ದುಕೊಂಡು, ಕಂಪನಿಯಲ್ಲೂ ಕೆಲಸ ಮಾಡುತ್ತಿದ್ದರು.
ಬಹುಕಾಲದ ಗೆಳೆಯನೊಂದಿಗೆ ದಾಂಪತ್ಯ
ನಿರೂಪಕಿಯಾಗಿ ಕಿರುತೆರೆಗೆ ಎಂಟ್ರಿಕೊಟ್ಟು, ಬಳಿಕ ಶಾಂತಂ ಪಾಪಾಂನಲ್ಲಿ ನಟಿಸಿದರು. ನಂತರ ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳಲು ಮುಂದಾದರು. ಧಾರಾವಾಹಿಯಲ್ಲಿ ನಟಿಸುವಾಗಲೂ, ಶೂಟಿಂಗ್ ಮುಗಿಸಿ ದೀಪಾ ಅವರು ಸೀದಾ ಕಂಪನಿಗೆ ಹೋಗಿ ಅಲ್ಲೂ ಕೆಲಸ ಮಾಡುತ್ತಿದ್ದರು. ಬಹಳ ಡೆಡಿಕೇಟೆಡ್ ಆಗಿ ಆಸೆಯನ್ನು ಪೂರೈಸಿಕೊಳ್ಳುವುದರ ಜೊತೆಗೆ ವೃತ್ತಿಯನ್ನು ಬಿಡಲಿಲ್ಲ. ಕಳೆದ ವರ್ಷ ಮದುವೆಯಾದ ನಟಿ ದೀಪಾ ಕಟ್ಟೆ ಅವರು, ಬಹಕಾಲದ ಗೆಳೆಯ ರಕ್ಷಿತ್ ಅವರನ್ನೇ ವಿವಾಹವಾಗಿದ್ದಾರೆ. ಗೆಳೆಯನ ಜೊತೆಗೆ ದೀಪಾ ಅವರು ಸುಖ ಸಂಸಾರವನ್ನು ನಡೆಸುತ್ತಿದ್ದಾರೆ.
ಮನೆಗೆ ಹೊಸ ಅತಿಥಿಯ ಆಗಮನ
ಇಬ್ಬರೂ ಸುಖ ಜೀವನ ನಡೆಸುತ್ತಿದ್ದಾರೆ. ಶೂಟಿಂಗ್ ನಿಂದ ಬ್ರೇಕ್ ಸಿಕ್ಕಾಗಲೆಲ್ಲಾ ದೀಪಾ ಮತ್ತು ಅವರ ಪತಿ ಅಲ್ಲಿ ಇಲ್ಲಿ ಎಂದು ಪ್ರವಾಸಕ್ಕೆ ತೆರಳುತ್ತಿರುತ್ತಾರೆ. ಇನ್ನು ಊರಿಗೂ ಆಗಾಗ ಭೇಟಿ ಕೊಡುತ್ತಿರುತ್ತಾರೆ. ಸದ್ಯ ದೀಪಾವಳಿ ಹಬ್ಬದ ಸಂಭ್ರಮ ಎಲ್ಲರ ಮನೆಯಲ್ಲೂ ಇದೆ. ಆದರೆ, ಈ ಸಂಭ್ರಮವೂ ದೀಪಾ ಅವರ ಮನೆಯಲ್ಲಿ ಡಬಲ್ ಆಗಿದೆ. ಏಕೆಂದರೆ ಹಬ್ಬದ ಪ್ರಯುಕ್ತ ದೀಪಾ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಕೀಯಾ ಸೊನೆಟ್ ಕಾರನ್ನು ಖರೀದಿ ಮಾಡಿದ್ದಾರೆ. ಈ ಸಂಭ್ರಮವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಖುಷಿ ಪಟ್ಟಿದ್ದಾರೆ


Click it and Unblock the Notifications











