ಅಮೃತಧಾರೆಯ ಮಹಿಮಾ ಪಾತ್ರದ ಮೂಲಕ ಕಿರುತೆರೆಗೆ ಕಮ್ ಬ್ಯಾಕ್ ಮಾಡಿದ ಇಶಿತಾ ವರ್ಷ
ಅಗ್ನಿಸಾಕ್ಷಿ ಧಾರಾವಾಹಿ ಮುಗಿದು ವರುಷಗಳೇ ಕಳೆದರೂ ಆ ಧಾರಾವಾಹಿಯ ಹೆಸರಲ್ಲೇ ಸಾಕಷ್ಟು ನಟ-ನಟಿಯರನ್ನು ಇಂದಿಗೂ ಜನ ಗುರುತಿಸಲು ಬಯಸುತ್ತಾರೆ.ಎಷ್ಟೇ ಧಾರಾವಾಹಿಗಳಲ್ಲಿ ನಟಿಸಿದರೂ ಅಗ್ನಿಸಾಕ್ಷಿಯಲ್ಲಿನ ಪಾತ್ರ ಇನ್ನೂ ಈ ನಟಿಯ ಬೆನ್ನಿಗೆ ಅಂಟಿದೆ. ಅವರೇ ನಟಿ ಇಶಿತಾ ವರ್ಷ. ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಮಾಯಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಮಾಯಾ ಪಾತ್ರದ ಮೂಲಕ ಫೇಮಸ್ ಆಗಿದ್ದ ಇಶಿತಾ ವರ್ಷ ಅವರು ಬಳಿಕ ಹಲವು ಧಾರಾವಾಹಿಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡರೂ ಇಂದಿಗೂ ವೀಕ್ಷಕರಿಗೆ ಮಾಯಾ ಆಗಿಯೇ ಇದ್ದಾರೆ.
ನಟಿ ಇಶಿತಾ ವರ್ಷ ಅವರು ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ನೆಗೆಟಿವ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದರು. ಇದಕ್ಕೂ ಮೊದಲು ಸರಸು ಎಂಬ ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿಕೊಟ್ಟರು. ಅಗ್ನಿಸಾಕ್ಷಿ ಒಳ್ಳೆಯ ಬ್ರೇಕ್ ತಂದು ಕೊಡ್ತು ಬಳಿಕ ಡ್ಯಾನ್ಸ್ ಶೋ ಒಂದರಲ್ಲಿ ಕಾಣಿಸಿಕೊಂಡರು. ಈ ಡ್ಯಾನ್ಸ್ ಶೋನಲ್ಲಿ ಇಶಿತಾ ಅವರಿಗೆ ಮುರುಘನ್ ಎಂಬುವರು ಕೊರಿಯೋಗ್ರಫಿ ಮಾಡುತ್ತಿದ್ದರು. ಡ್ಯಾನ್ಸ್ ಕಲಿಸಿಕೊಟ್ಟ ಹುಡುಗನಿಗೆ ಇಶಿತಾ ಅವರು ತಮ್ಮ ಹೃದಯವನ್ನೇ ಗುರು ಕಾಣಿಕೆಯಾಗಿ ನೀಡಿದರು. ಇಬ್ಬರೂ ಪ್ರೇಮ ಲೋಕದಲ್ಲಿ ಸತತವಾಗಿ ಆರು ವರ್ಷಗಳ ಕಾಲ ಕಳೆದರು. 2019ರಲ್ಲಿ ಇಬ್ಬರೂ ಮದುವೆಯಾದರು. ಮದುವೆಯಾದ ಬಳಿಕ ಕಿರುತೆರೆಯಿಂದ ಕೊಂಚ ದೂರ ಉಳಿದರೂ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡರು.

ಮದುವೆಗೂ ಮುನ್ನ ಕೃಷ್ಣ ರುಕ್ಮಿಣಿ, ತಂಗಾಳಿ, ಮನಸು ಮಮತಾ ಸೇರಿದಂತೆ ಹಲವು ಕನ್ನಡ ಧಾರಾವಾಹಿಗಳಲ್ಲಿ ನಟಿಸಿದರು. ಅಲ್ಲದೇ, ಪರಭಾಷೆಯಲ್ಲೂ ಕಾಣಿಸಿಕೊಂಡರು. ಕಲ್ಯಾಣವೀಡು, ಕುಲದೈವಂ ಎಂಬ ಧಾರಾವಾಹಿಗಳಿಗೂ ಬಣ್ಣ ಹಚ್ಚಿದರು. ಮದುವೆಯಾದ ಬಳಿ ರಾಜಾ-ರಾಣಿ ಸೀಸನ್ 1 ರಲ್ಲಿ ಪತಿ ಮುರುಘನ್ ಜೊತೆಗೆ ಇಶಿತಾ ಅವರು ಭಾಗವಹಿಸಿದರು. ಇದರಲ್ಲಿ ರನ್ನರಪ್ ಆಗಿ ಹೊರ ಹೊಮ್ಮಿದರು. ಬಳಿಕ ಕಿರಿಕ್ ವಿಥ್ ಕುಕ್ಕು, ಡ್ಯಾನ್ಸಿಂಗ್ ಚಾಂಪಿಯನ್ ರಿಯಾಲಿಟಿ ಶೋಗಳಲ್ಲೂ ಕಾಣಿಸಿಕೊಂಡರು. ಮದುವೆಯಾದ ಬಳಿಕ ಧಾರಾವಾಹಿಗಳಿಂದ ದೂರ ಉಳಿದರು ರಿಯಾಲಿಟಿ ಶೋಗಳ ಮೂಲಕ ಆಗಾಗ ಕಾಣಿಸಿಕೊಳ್ಳುತ್ತಿದ್ದರು.
ಇನ್ನು ನಟಿ ಇಶಿತಾ ವರ್ಷ ಅವರು ಸ್ವಾರ್ಥರತ್ನ ಎಂಬ ಸಿನಿಮಾದಲ್ಲೂ ನಟಿಸಿದ್ದಾರೆ. ತೆಲುಗಿನ ಅನ್ಯುಡು ಎಂಬ ಸಿನಿಮಾಗೂ ಬಣ್ಣ ಹಚ್ಚಿದ್ದಾರೆ. ಇನ್ನು ಸ್ನೇಹಿತರಾದ ಅನುಪಮಾ ಗೌಡ, ನೇಹಾ ಗೌಡ ಸೇರಿದಂತೆ ನಟನಾ ಗೆಳೆಯರ ಜೊತೆಗೆ ಗೋವಾ ಟ್ರಿಪ್ ಹಾಗೂ ಇತರೆ ಪ್ರದೇಶಗಳಿಗೆ ಹೆಚ್ಚು ಹೆಚ್ಚಾಗಿ ಟ್ರಾವೆಲ್ ಮಾಡುತ್ತಿದ್ದರು. ಕಳೆದ ಎರಡು ಮೂರು ವರ್ಷಗಳಿಂದ ಇಶಿತಾ ಅವರು ಹೆಚ್ಚಾಗಿ ಫೋಟೋಗ್ರಫಿ ಹಾಗೂ ಫೋಟೋಶೂಟ್ ಗಲಲ್ಲಿ ಮುಳುಗಿ ಹೋಗಿದ್ದಾರೆ. ಮದುವೆಯ ಬಳಿಕ ಬಹಳ ಬೋಲ್ಡ್ ಆಗಿ ಫೋಟೋಶೂಟ್ ಮಾಡಿಸುತ್ತಿದ್ದ ನಟಿ ಇಶಿತಾ ಅವರು ಮಾಡೆಲ್ ಆಗಿ ಕನ್ವರ್ಟ್ ಆಗಿದ್ದಾರೆ ಎಂಬಷ್ಟೇ ಸುಂದರವಾಗಿ ಕಾಣುತ್ತಾರೆ.
ಇನ್ನು ಪತಿಯೊಂದಿಗೆ ವಿದೇಶಿ ಪ್ರವಾಸಗಳಲ್ಲಿ ಬ್ಯುಸಿಯಾಗಿದ್ದ ನಟಿ ಇಶಿತಾ ಅವರು ಜಂಗಲ್ ಸಫಾರಿ, ವೈಲ್ಡ್ ಲೈಫ್ ಫೋಟೋಗ್ರಫಿ ಎಂದು ಸಿಕ್ಕಾಪಟ್ಟೆ ಎಂಜಾಯ್ ಮಾಡುತ್ತಿದ್ದರು. ಇದೀಗ ನಟಿ ಇಶಿತಾ ಅವರು ಮತ್ತೆ ಕಿರುತೆರೆಗೆ ಕಮ್ ಬ್ಯಾಕ್ ಮಾಡಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆ ಧಾರಾವಾಹಿಗೆ ನಟಿ ಇಶಿತಾ ಅವರು ಮಹಿಮಾ ಪಾತ್ರಕ್ಕೆ ಜೀವ ತುಂಬಲು ಮುಂದಾಗಿದ್ದಾರೆ. ನೆಗೆಟಿವ್ ರೋಲ್ ಗಳನ್ನೇ ಮಾಡಿದ್ದ ನಟಿ ಇಶಿತಾ ಅವರು ಪಾಸಿಟಿವ್ ಪಾತ್ರಕ್ಕಾಗಿ ಕಾಯುತ್ತಿದ್ದೆ ಎಂದು ಹೇಳಿದ್ದಾರೆ. ಇದೀಗ ಅವರಿಗೆ ಅಮೃತಧಾರೆ ಧಾರಾವಾಹಿಯಲ್ಲಿ ಅಂತಹ ಅವಕಾಶ ಸಿಕ್ಕಿದೆ. ಈ ಧಾರಾವಾಹಿಯಲ್ಲಿ ಇಷ್ಟು ದಿನಗಳ ಕಾಲ ಮಹಿಮಾ ಪಾತ್ರವನ್ನು ನಟಿ ಸಾರಾ ಅಣ್ಣಯ್ಯ ಅವರು ನಟಿಸುತ್ತಿದ್ದರು. ಈಗ ಪಾತ್ರಧಾರಿ ಬದಲಾಗಿದ್ದು, ಆಗಕ್ಕೆ ನಟಿ ಇಶಿತಾ ಅವರು ಆಗಮಿಸಿದ್ದಾರೆ.


Click it and Unblock the Notifications











