Jayashri Raj ; ಶಾಲೆಗೆ ಹೋಗುವಾಗಲೇ ನಟನೆ ಆರಂಭಿಸಿದ ನಟಿ ಜಯಶ್ರೀ ಅವರ ಕಿರುತೆರೆ ಜರ್ನಿ ..!

By ಪ್ರಿಯಾ ದೊರೆ

24 ವರ್ಷದ ಕಿರುತೆರೆ ಜರ್ನಿಯಲ್ಲಿ 50ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿರುವ ನಟಿ ಜಯಶ್ರೀ ರಾಜ್ ಅವರು ಇದೀಗ ಖಳನಾಯಕಿಯಾಗಿ ಕಾಣಿಸಿಕೊಂಡಿದ್ದು, ವೀಕ್ಷಕರ ಮನ ಗೆದ್ದಿದ್ದಾರೆ. ಚುಕ್ಕಿ ತಾರೆ ಧಾರಾವಾಹಿಯಲ್ಲಿ ಯಶೋದಾ ಕರ್ವೆ ಎಂಬ ಪಾತ್ರದಲ್ಲಿ ಮಿಂಚುತ್ತಿದ್ದು, ತೆಲುಗು ಕಿರುತೆರೆಯಲ್ಲೂ ಎರಡು ಧಾರಾವಾಹಿಗಳಲ್ಲಿ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ತೆಲುಗು ಹಾಗೂ ಕನ್ನಡ ಎರಡು ಭಾಷೆಯಲ್ಲಿ ನಟಿಸುತ್ತಿರುವ ಜಯಶ್ರೀ ಸದಾ ಕಾಲ ಆಕ್ಟೀವ್ ಆಗಿರಲು ಬಯಸುತ್ತಾರಂತೆ. ಬ್ಯುಸಿಯಾಗಿರುವುದಕ್ಕೆ ಖುಷಿ ಇದೆ ಎಂದು ಹೇಳಿದ್ದಾರೆ.

ಸಿನಿಮಾ, ಕಿರುತೆರೆ ನಂಟು

ಕಿರುತೆರೆ ಹೊರತು ಪಡಿಸಿ ಸಿನಿಮಾಗಳಲ್ಲೂ ನಟಿಸಿರುವ ಜಯಶ್ರೀ ಅವರು ಸದ್ಯ ಸಂಜು ವೆಡ್ಸ್ ಗೀತಾ 2 ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇನ್ನು ನಟಿ ಜಯಶ್ರೀ ಅವರು 35ಕ್ಕೂ ಅಧಿಕ ಸಿನಿಮಾಗಳಿಗೆ ಬಣ್ಣ ಹಚ್ಚಿದ್ದಾರೆ. ಮೊದಲ ಬಾರಿಗೆ ಮದುವೆ ಮನೆಯಲ್ಲಿ ಜಯಶ್ರೀ ಅವರನ್ನು ನೋಡಿದ ಟಿ ಎನ್ ಸೀತಾರಾಮ್ ಅವರು ನಟನೆಗೆ ಆಹ್ವಾನವಿತ್ತರಂತೆ. ಅವಕಾಶವನ್ನು ಬಳಸಿಕೊಂಡ ಜಯಶ್ರೀ ಅವರು ಬಹಳ ಚಿಕ್ಕ ವಯಸ್ಸಿಗೆ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದರು. ಇವರ ಮೊದಲ ಧಾರಾವಾಹಿ ಕಥೆಗಾರ. ಬಳಿಕ ಮಾಯಾಮೃಗ, ಜನನಿ, ಸಮಾಗಮ, ಸಹನಾ, ಭಾರ್ಗವಿ, ಪುಣ್ಯಕೋಟಿ, ರಥಸಪ್ತಮಿ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

written update on actress jayashri raj

ತೆಲುಗು ಧಾರಾವಾಹಿಗಳಲ್ಲೂ ನಟನೆ

ಕನ್ನಡದ ಪ್ರತಿಭಾವಂತ ಕಿರುತೆರೆ ನಟಿಯರಲ್ಲಿ ಜಯಶ್ರೀ ರಾಜ್ ಕೂಡ ಪ್ರಮುಖ ಸ್ಥಾನದಲ್ಲಿ ನಿಲ್ಲುತ್ತಾರೆ. ಈಗಾಗಲೇ ಸಾಕಷ್ಟು ಧಾರಾವಾಹಿಗಳಲ್ಲಿ ತರಹೇವಾರಿ ಪಾತ್ರಗಳಲ್ಲಿ ನಟಿಸಿರುವ ಜಯಶ್ರೀ, ಕೇವಲ 8ನೇ ಕ್ಲಾಸ್ ಓದುವಾಗಲೇ ನಟನೆ ಮಾಡಲು ಶುರು ಮಾಡಿದರು. ಮೊದಲು ನಿರ್ದೇಶಕ ಸೀತಾರಾಮ್ ಅವರ ಗರಡಿಯಲ್ಲಿ ಪಳಗಿದರು. ಮಾಯಾಮೃಗ ಧಾರಾವಾಹಿಯ ಮೂಲಕ ಛಾಪು ಮೂಡಿಸಿದರು. ಆ ಕಾಲಕ್ಕೆ ಈ ಧಾರಾವಾಹಿ ದೊಡ್ಡ ಮಟ್ಟದ ಜನ ಮನ್ನಣೆಗಳಿಸಿತ್ತು. ಸದ್ಯ ತೆಲುಗಿನ ಪಡಮಟ್ಟಿ ಸಂಧ್ಯಾರಾಗಂ ಮತ್ತು ಮಲ್ಲಿ ಎಂಬ ಎರಡು ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಬಹಳ ವರ್ಷಗಳ ಬಳಿಕ ಮತ್ತೆ ಕನ್ನಡಕ್ಕೆ ಮರಳಿರುವುದಕ್ಕೆ ವೀಕ್ಷಕರು ಹ್ಯಾಪಿ ಆಗಿದ್ದಾರೆ.

ಉತ್ತಮ ಪಾತ್ರಗಳಲ್ಲಿ ನಟನೆ

ಕಳೆದ 24 ವರ್ಷಗಳಿಂದ ಜಯಶ್ರೀ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡ ದೊಡ್ಡ ಪಾತ್ರಗಳನ್ನು ಮಾಡಿದ್ದಾರೆ. ಸೀರಿಯಲ್ ಗಳ ಜೊತೆಗೆ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಅಂದಿನಿಂದ ಇಂದಿನವರೆಗೆ ಅವರು ನಟನೆಯಲ್ಲಿ ತೊಡಗಿದ್ದಾರೆ. ಜಯಶ್ರೀ ಅವರೇ ಹೇಳಿಕೊಂಡಿರುವ ಹಾಗೆ ಅವರು ಚಿಕ್ಕ ವಯಸ್ಸಿನಲ್ಲಿಯೇ ಮದುವೆ ಆದರಂತೆ. ನಟನೆ ಬಿಟ್ಟು ಅಮೇರಿಕಾಕ್ಕೆ ಹೋದರಂತೆ. ಆದರೆ, ಮತ್ತೆ ಭಾರತಕ್ಕೆ ಬಂದು, ಮತ್ತೆ ಹೊಸ ಜೀವನ ಶುರು ಮಾಡಿದ್ದಾರೆ. ಛಲದಿಂದ ಇಂದು ಅವರು ಉತ್ತಮ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.

written update on actress jayashri raj

ಬಿಗ್ ಬಾಸ್ ನಲ್ಲೀ ಭಾಗವಹಿಸಿದ್ದ ನಟಿ

2018 ರಲ್ಲಿ ಪ್ರಸಾರವಾದ ಬಿಗ್ ಬಾಸ್ ಸೀಸನ್ 6ರಲ್ಲಿ ಜಯಶ್ರೀ ಅವರು ಭಾಗವಹಿಸಿದ್ದರು. ಜಯಶ್ರೀ ಅವರಿಗೆ ಕಾಲೇಜಿಗೆ ಹೋಗುವ ಹೆಣ್ಣು ಮಗುವಿದೆ. ನಟನೆ ಅಷ್ಟೇ ಅಲ್ಲದೇ, ಜಯಶ್ರೀ ಅವರು ನಿರ್ದೇಶನವನ್ನೂ ಮಾಡಿದ್ದಾರೆ. ಅರಮನೆ ಮತ್ತು ಕಸ್ತೂರಿ ನಿವಾಸ ಧಾರಾವಾಹಿಯನ್ನು ಡೈರೆಕ್ಟ್ ಮಾಡಿರುವ ಬಗ್ಗೆ ಅವರೇ ಹೇಳಿಕೊಂಡಿದ್ದಾರೆ. ಇನ್ನು ನಟಿ ಜಯಶ್ರೀ ಅವರಿಗೆ ಧಾರಾವಾಹಿಯಲ್ಲಿ ನಟಿಸುವಾಗ ಮನಸ್ಸು ಮಾಡಿದ್ದರೆ ಸಿನಿಮಾಗಳಲ್ಲಿಯೂ ನಾಯಕಿಯಾಗಿ ನಟಿಸುವ ಅವಕಾಶವಿತ್ತಂತೆ ಆದರೆ, ಜಯಶ್ರೀ ಅವರು ಕಿರುತೆರೆಗೆ ತೃಪ್ತಿ ಪಟ್ಟುಕೊಂಡ ಕಾರಣ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿಲ್ಲ.

More from Filmibeat

English summary
actress jayashri raj serials, films and her journey
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X