ಚಾಲೆಂಜಿಂಗ್ ಪಾತ್ರದಲ್ಲಿ ನಟಿಸಿ ಅಭಿಮಾನಿಗಳಿಗೆ ಹೆದರುವಂತಾಗಿದೆ ಎಂದು ಈ ನಟಿ ಹೇಳಲು ಕಾರಣವೇನು..?
ಹಾಸ್ಯ ಪಾತ್ರಗಳಲ್ಲಿ ನಟಿಸಿ ಬಳಿಕ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡ ನಟಿ ಜ್ಯೋತಿ ಕಿರಣ್ ಅವರು ಸದ್ಯ ಅವರು ಸೀತಾ-ರಾಮ ಧಾರಾವಾಹಿಯಲ್ಲಿ ಬ್ಯುಸಿಯಾಗಿದ್ದಾರೆ. ಮೊದಲ ಬಾರಿಗೆ ನೆಗೆಟಿವ್ ರೋಲ್ ನಲ್ಲಿ ಜ್ಯೋತಿ ಕಿರಣ್ ಅವರು ಕಾಣಿಸಿಕೊಂಡಿದ್ದಾರೆ. ಇದರಲ್ಲಿ ನೆಗೆಟಿವ್ ರೋಲ್ ಅನ್ನು ಕೂಡ ಅದ್ಭುತವಾಗಿ ನಿರ್ವಹಿಸಿದ್ದು, ಅವರ ಪಾತ್ರ ನಟನೆ ಎಂದು ಎಲ್ಲೂ ಕಾಣಿಸುವುದಿಲ್ಲ. ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿದವರಂತೆ ಜ್ಯೋತಿ ಅವರು ನಟಿಸಿದ್ದಾರೆ. ಅವರು ಆಡುವ ಮಾತುಗಳು, ಬಾಡಿ ಲ್ಯಾಂಗ್ವೇಜ್ ಎಲ್ಲವೂ ಕೂಡ ಅಚ್ಚುಕಟ್ಟಾಗಿ ನಿಭಾಯಿಸುತ್ತಾರೆ.
ಚಾಲೆಂಜಿಂಗ್ ಪಾತ್ರದಲ್ಲೀ ನಟಿಸಿ ಹೆದರುವ ನಟಿ
ಖಾಸಗಿಯಾಗಿ ನೀಡಿರುವ ಸಂದರ್ಶನದಲ್ಲಿ ಜ್ಯೋತಿ ಕಿರಣ್ ಅವರು ಮೊದಲ ಬಾರಿಗೆ ತಮ್ಮ ಪಾತ್ರದ ಬಗ್ಗೆ ಮಾತನಾಡಿದ್ದಾರೆ. ಮೊದಲೆಲ್ಲಾ ಹಾಸ್ಯಾಸ್ಪದ ಪಾತ್ರಗಳಲ್ಲಿ ನಟಿಸುತ್ತಿದ್ದ ಜ್ಯೋತಿ ಅವರಿಗೆ ಈ ನೆಗೆಟಿವ್ ರೋಲ್ ಬಹಳ ಚಾಲೇಂಜಿಂಗ್ ಆಗಿತ್ತು. ಆದರೆ, ಈ ಪಾತ್ರದಲ್ಲಿ ನಟಿಸಲು ಆರಂಭಿಸಿದಾಗಿನಿಂದಲೂ ಅವರು ಮಾಸ್ಕ್ ಹಾಕಿಕೊಂಡು ಓಡಾಡುವಂತಾಗಿದೆಯಂತೆ. ತಿಳಿದಿರುವವರೆಲ್ಲಾ ಇವರ ಪಾತ್ರಕ್ಕೆ ಮೆಚ್ಚುಗೆಯನ್ನು ಪಡೆದಿದ್ದು, ಅಭಿಮಾನಿಗಳು ಜ್ಯೋತಿ ಅವರನ್ನು ಕಂಡ ಕೂಡಲೇ ಆ ಪುಟಾಣಿ ಸಿಹಿಗೂ ಯಾಕಷ್ಟು ಕಾಟ ಕೊಡುತ್ತೀರಾ. ಆ ಮಗುವಿನ ಬಳಿಯಾದರೂ ಮುದ್ದಾಗಿ ಮಾತನಾಡಬಾರದಾ ಎಂದು ಪ್ರಶ್ನೆ ಮಾಡುತ್ತಾರಂತೆ. ಅಲ್ಲಿಗೆ ಜ್ಯೋತಿ ಅವರ ಪಾತ್ರವೂ ಪ್ರತಿಯೊಬ್ಬ ವೀಕ್ಷಕನ ಮನಸ್ಸು ಮುಟ್ಟಿದ್ದು, ತಮಗೆ ಅದರ ಬಗ್ಗೆ ಖುಷಿಯಿದೆ. ಆದರೆ, ಬೈಯಿಸಿಕೊಳ್ಳುವುದಕ್ಕೆ ಕಷ್ಟವಾಗುತ್ತದೆ ಎಂದು ಕಾಮಿಡಿಯಾಗಿಯೇ ಹೇಳಿದ್ದಾರೆ.

ಹಾಸ್ಯದಲ್ಲೂ ಫೇಮಸ್, ಈಗಲೂ ಫೇಮಸ್
ಇನ್ನು ನಟಿ ಜ್ಯೋತಿ ಕಿರಣ್ ಅವರು ಮೈಸೂರು ಮೂಲದವರಾಗಿದ್ದಾರೆ. ಈಟಿವಿ ವಾಹಿನಿಯಲ್ಲಿ ಪಂಚರಂಗಿ ಕಾರ್ಯಕ್ರಮಕ್ಕಾಗಿ ಟ್ಯಾಲೆಂಟ್ ಹಂಟ್ ಮಾಡುವಾಗ ಆಡಿಷನ್ ನಲ್ಲಿ ಸೆಲೆಕ್ಟ್ ಆದ ಅವರು, ಸಿಲ್ಲಿ ಲಲ್ಲಿ ಧಾರಾವಾಹಿಯಲ್ಲಿ ಸೂಜಿ ಪಾತ್ರದಲ್ಲಿ ಕಾಮಿಡಿ ಮಾಡಿ ಎಲ್ಲರ ಮನ ಗೆದ್ದಿದ್ದರು. ಹಲವು ವರ್ಷಗಳ ಕಾಲ ಸಿಲ್ಲಿ ಲಲ್ಲಿಯಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ಪಾಪ ಪಾಂಡು ಸೀರಿಯಲ್ ಮೂಲಕವೂ ಎಲ್ಲರನ್ನೂ ನಗಿಸಿದ್ದರು. ಈಗಲೂ ಈ ಎರಡೂ ಧಾರಾವಾಹಿಗಳು ಎಷ್ಟು ಫೇಮಸ್ಸೋ ಅಷ್ಟೇ ಫೇಮಸ್ಸು ಇದರಲ್ಲಿ ನಟಿಸಿದ ಕಲಾವಿದರು.
ಪೋಷಕ ಪಾತ್ರದಲ್ಲೂ ಮುದ್ದಾಗಿ ನಟಿಸುವ ಜ್ಯೋತಿ
ತದನಂತರ ನಟಿ ಜ್ಯೋತಿ ಅವರು ಮದುವೆ, ಮಗು, ಸಂಸಾರ ಎಂದು ಬ್ಯುಸಿಯಾದರು. ಬಳಿಕ ಕಿರುತೆರೆಗೆ ಕಮ್ ಬ್ಯಾಕ್ ಮಾಡಿ ನಮ್ಮನೆ ಯುವರಾಣಿ ಧಾರಾವಾಹಿಯಲ್ಲಿ ಜ್ಯೋತಿ ಅವರು ತಾಯಿ ಪಾತ್ರದ ಮೂಲಕ ಸೆಕೆಂಡ್ ಇನ್ನಿಂಗ್ಸ್ ಪ್ರಾರಂಭಿಸಿದರು. ಕಳೆದ ವರ್ಷ ನಟಿ ಜ್ಯೋತಿ ಕಿರಣ್ ಅವರು ಅಂತರಪಟ ಧಾರಾವಾಹಿಯಲ್ಲೂ ನಾಯಕಿಯ ತಾಯಿ ಪಾತ್ರವನ್ನು ನಿರ್ವಹಿಸಿದ್ದರು. ಇನ್ನು ಜೆಮಿನಿ ವಾಹಿನಿಯಲ್ಲಿ ಮೂಡಿ ಬಂದ ಉಪ್ಪೆನ ಎಂಬ ಧಾರಾವಾಹಿಯಲ್ಲಿ ನಟಿ ಜ್ಯೋತಿ ಕಿರಣ್ ಅವರು, ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ವಯಸ್ಸಿಗೂ ಮೀರಿದ ತಾಯಿ ಪಾತ್ರದಲ್ಲಿ ನಟಿಸಿ ಎಲ್ಲರ ಮನ ಗೆದ್ದರು.
ನಟಿ ಜ್ಯೋತಿ ಅವರ ಫಿಟ್ನೆಸ್ ಗುಟ್ಟು
ಇನ್ನು ನಟಿ ಜ್ಯೋತಿ ಅವರು ಸೋಶಿಯಲ್ ಮೀಡಿಯಾದಲ್ಲಿ ಸದಾ ಕಾಮಿಡಿ ಆದಂತಹ ರೀಲ್ಸ್ ಗಳನ್ನು ಮಾಡುತ್ತಿರುತ್ತಾರೆ. ಮದುವೆ, ಮಗು ಎಂದು ಬ್ಯುಸೊಯಾಗಿದ್ದ ನಟಿ ಜ್ಯೋತಿ ಅವರು ಸಂತೂರ್ ಮಮ್ಮಿಯಂತೆ ಕಂಡರು. ಆಗ ಎಲ್ಲರೂ ಆಶ್ಚರ್ಯ ಪಟ್ಟಿದ್ದು, ಸಣ್ಣಗಾಗಲು ತಾವು ಬಹಳ ಕಷ್ಟ ಪಟ್ಟಿರುವುದಾಗಿ ನಟಿ ಜ್ಯೋತಿ ಅವರೇ ಸ್ವತಃ ಹೇಳಿದ್ದಾರೆ. ಕೆಲವೊಮ್ಮೆ ವರ್ಷ ಬಾರ್ಬಿ ಗರ್ಲ್ ನಂತೆ ಫೋಟೋಶೂಟ್ ಮಾಡಿಸಿ ಅಭಿಮಾನಿಗಳನ್ನು ನಿಬ್ಬೆರಗಾಗಿಸಿದ್ದೂ ಉಂಟು.


Click it and Unblock the Notifications











