ನನ್ನರಸಿ ರಾಧೆ ಕೌಸ್ತುಭ ಮಣಿ ನಿಶ್ಚಿತಾರ್ಥ ; ಭಾವಿ ಪತಿ ಯಾರು ಗೊತ್ತಾ..?

By ಪ್ರಿಯಾ ದೊರೆ

ಟೆಕ್ಕಿಯಾಗಿದ್ದ ಕೌಸ್ತುಭ ಮಣಿ ಫ್ಯಾಶನ್ ಶೋ ಒಂದರಲ್ಲಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆ ಲೋಕಕ್ಕೂ ಪಯಣ ಬೆಳೆಸಿದರು. ಫ್ಯಾಷನ್ ಶೋ ಕಾರ್ಯಕ್ರಮದಲ್ಲಿ ಕೌಸ್ತುಭ ಅವರನ್ನು ಭೇಟಿ ಮಾಡಿದ ಮಾನ್ವಿತಾ ಕಾಮತ್ ಅವರು ಧಾರಾವಾಹಿಯಲ್ಲಿ ನಟಿಸಲು ಅವಕಾಶ ಕಲ್ಪಿಸಿಕೊಟ್ಟರು. ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಕೌಸ್ತುಭ ಮಣಿ, ಕಲರ್ಸ್ ಕನ್ನಡ ವಾಹಿನಿಯಲ್ಲಿ ಇಂಚರ ಆಗಿ ಎರಡು ವರ್ಷಗಳ ಕಾಲ ವೀಕ್ಷಕರನ್ನು ರಂಜಿಸಿದ್ದರು.

ಗೌರಿಶಂಕರ ಧಾರಾವಾಹಿಯಿಂದ ಈ ಕಾರಣಕ್ಕೆ ಹೊರ ಬಂದ್ರಾ..?

ಗೌರಿಶಂಕರ ಧಾರಾವಾಹಿಯಲ್ಲಿ ನಾಯಕಿ ನಟಿ ಪಾತ್ರದಲ್ಲಿ ನಟಿ ಕೌಸ್ತುಭಮಣಿ ಅವರು ಬಣ್ಣ ಹಚ್ಚಿದ್ದರು. ಆದರೆ, ಕೆಲವೇ ದಿನಗಳಲ್ಲಿ ಧಾರಾವಾಹಿ ತಂಡದಿಂದ ಹೊರಗೆ ಬಂದಿದ್ದರು. ಆದರೆ, ಕಾರಣ ವ್ಯೆಯಕ್ತಿಕ ಎಂದು ಹೇಳಿದ್ದ ಕೌಸ್ತುಭ ಅವರು ಈಗ ಉಂಗುರ ತೊಟ್ಟುಕೊಂಡು ಪ್ರತ್ಯಕ್ಷವಾಗಿದ್ದಾರೆ.

Written Update on actress kausthuba mani

ಹೀಗಾಗಿ ಮದುವೆಯ ಕಾರಣಕ್ಕಾಗಿಯೇ ಕೌಸ್ತುಭ ಅವರು ಧಾರಾವಾಹಿಯಿಂದ ಹೊರ ಬಂದಿರಬಹುದು ಎಂದು ಅಭಿಮಾನಿಗಳು ಊಹೆ ಮಾಡುತ್ತಿದ್ದಾರೆ. ಸೈಲೆಂಟ್ ಆಗಿ ಎಂಗೇಜ್ ಆಗಿರುವ ಕೌಸ್ತುಭಮಣಿ ಅವರು ತಮ್ಮ ಭಾವಿ ಪತಿಯ ಜೊತೆಗೆ ಫೋಟೋವನ್ನು ಹಂಚಿಕೊಂಡಿದ್ದಾರೆ.

ಸಿದ್ಧಾಂತ್ ಸತೀಶ್ ಎಂಬುವರ ಜೊತೆಗೆ ನಿಶ್ಚಿತಾರ್ಥವನ್ನು ಮಾಡಿಕೊಂಡಿರುವ ಕೌಸ್ತುಭ ಮಣಿ ಅವರು ತಮ್ಮ ಜೀವನದ ಸಂತಸದ ಕ್ಷಣಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇಬ್ಬರ ಜೋಡಿಯೂ ಮುದ್ದಾಗಿದ್ದು, ಅಭಿಮಾನಿಗಳು ವಿಶ್ ಮಾಡುತ್ತಿದ್ದಾರೆ.

Written Update on actress kausthuba mani

ಜನರ ಮನ ಗೆದ್ದ ನಟಿ

ನನ್ನರಸಿ ರಾಧೆ ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿಕೊಟ್ಟ ನಟಿ ಕೌಸ್ತುಭ ಮಣಿ ಹೆಚ್ಚು ಕಾಣಿಸಿಕೊಂಡಿದ್ದು, ಟ್ರೆಡಿಷನಲ್ ಉಡುಗೆಯಲ್ಲೇ. ಖಾಸಗಿ ಕಂಪನಿಯೊಂದರಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದ ಕೌಸ್ತುಭ ಮಣಿ ಆಕಸ್ಮಿಕವಾಗಿ ಕಿರುತೆರೆಗೆ ಎಂಟ್ರಿ ಕೊಟ್ಟರು.

ಕಲರ್ಸ್ ಕನ್ನಡದ ನನ್ನರಸಿ ರಾಧೆ ಧಾರಾವಾಹಿಯಲ್ಲಿ ಇಂಚರಾ ಪಾತ್ರದ ಮೂಲಕ ಕನ್ನಡಿಗರ ಮನೆ ಮನ ಗೆದ್ದಿರುವವರು ನಟಿ ಕೌಸ್ತುಭ ಮಣಿ. ಎರಡು ವರ್ಷ ಪ್ರಸಾರವಾದ ಈ ಧಾರಾವಾಹಿಯಲ್ಲಿ ಕೌಸ್ತುಭ ಮಣಿ ಅವರ ಮುದ್ದು ಮುಖವನ್ನು ನೋಡುವುದಕ್ಕೆ ಜನ ಇಷ್ಟಪಡುತ್ತಿದ್ದರು.

Written Update on actress kausthuba mani

ಸಿನಿ ಅಂಗಳದಲ್ಲೂ ಶೈನ್ ಆಗ್ತಿರುವ ಬೆಡಗಿ

ಇದಾದ ಬಳಿಕ ತೆಲುಗು ಕಿರುತೆರೆಗೆ ಕೌಸ್ತುಭ ಮಣಿ ಪಾದಾರ್ಪಣೆ ಮಾಡಿದರು. ತೆಲುಗಿನ ಕೋಡಲು ಮೀಕು ಜೋಹರ್ಲು ಎಂಬ ಧಾರಾವಾಹಿಯಲ್ಲಿ ನಟಿಸಿದರು. ಕೌಸ್ತುಭ ಮಣಿ ಸ್ಯಾಂಡಲ್ ವುಡ್ ಗೂ ಎಂಟ್ರಿ ಕೊಟ್ಟಿದ್ದು, ರಾಮಾಚಾರಿ 2.0 ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

ಜೊತೆಗೆ ಅರ್ಜುನ್ ಜನ್ಯ ನಿರ್ದೇಶನದ 45 ಸಿನಿಮಾದಲ್ಲೂ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಕೌಸ್ತುಭ ಮಣಿ ನಟನೆಗೆ ಫಿದಾ ಆಗದ ವೀಕ್ಷಕರಿಲ್ಲ. ತೆಲುಗಿಗೆ ಕೌಸ್ತುಭ ಹಾರಿದ ಮೇಲೆ, ಮತ್ತೆ ಕನ್ನಡ ಕಿರುತೆರೆಗೆ ಮರಳಿ ಬರುವ ಮೂಲಕ ವೀಕ್ಷಕರ ಆಸೆಯನ್ನು ಈಡೇರಿಸಿದ್ದರು. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾದ ಗೌರಿಶಂಕರ ಧಾರಾವಾಹಿಯಲ್ಲಿ ಕೆಲ ದಿನಗಳ ಕಾಲ ನಾಯಕಿಯಾಗಿ ಮಿಂಚಿದರು. ಸದ್ಯ ಕಿರುತೆರೆಯಿಂದ ದೂರ ಉಳಿದಿದ್ದಾರೆ.

ಮಧುಮಗಳಾಗಿ ಮಿಂಚಿದ ಕೌಸ್ತುಭ ಮಣಿ

ಸೋಶಿಯಲ್ ಮೀಡಿಯಾದಲ್ಲಿ ವೆಸ್ಟರ್ನ್ ಧಿರಿಸಿನಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ನಟಿ ಕೌಸ್ತುಭ ಮಣಿ. ತೆರೆ ಮೇಲೆ ಮಾತ್ರ ಫುಲ್ ಟ್ರೆಡಿಷನಲ್ ಆಗಿ ಕಾಣಿಸಿಕೊಳ್ಳುತ್ತಿದ್ದರು. ಇನ್ನು ಇದೀಗ ತಮ್ಮ ಎಂಗೇಜ್ ಮೆಂಟ್ ನಲ್ಲೂ ಟ್ರೆಡಿಷನಲ್ ಆಗಿ ಕಂಡಿದ್ದು, ಹೇರ್ ಸ್ಟೈಲ್, ಮೇಕಪ್ ಎಲ್ಲವೂ ಸೂಪರ್ ಆಗಿದೆ. ಒಟ್ನಲ್ಲಿ ಜಂಟಿ ಆಗಲು ಹೊರಟಿರುವ ಕೌಸ್ತುಭ ಮಣಿ ಅವರ ಮದುವೆ ಕೆಲವೇ ದಿನಗಳಲ್ಲಿ ನೆರವೇರಲಿದ್ದು, ಅವರ ದಾಂಪತ್ಯ ಜೀವನಕ್ಕೆ ನಿಮ್ಮದೊಂದು ಶುಭ ಹಾರೈಕೆ ಇರಲಿ

More from Filmibeat

English summary
actress kausthuba mani engagement and her photos
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X