ಮದುವೆ ಮುನ್ನ ಪಾರ್ಟಿಯಲ್ಲಿ ನಿಮ್ಮ ನೆಚ್ಚಿನ ನಟಿ ಸೀಮಾ : ಯಾವಾಗ ಕಾವೇರಿ ಮದುವೆ..?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಗಿಣಿರಾಮ ಧಾರಾವಾಹಿ ಅದ್ಭುತವಾಗಿ ಮೂಡಿ ಬಂದಿತ್ತು. ಈ ಧಾರಾವಾಹಿಯೂ ಉತ್ತರ ಕನ್ನಡ ಸೊಬಗಿನಲ್ಲಿ ಡೈಲಾಗ್ ಗಳಿದ್ದವು. ಕರ್ನಾಟಕದಾದ್ಯಂತ ತನ್ನ ಭಾಷಾ ರೀತಿಯಿಂದಲೇ ಗಿಣಿರಾಮ ಧಾರಾವಾಹಿ ಫೇಮಸ್ ಆಗಿತ್ತು.
ಈ ಧಾರಾವಾಹಿಯ ನಾಯಕ ಶಿವರಾಮನ ತಂಗಿ ಸೀಮಾ ಪಾತ್ರದಲ್ಲಿ ಕಾವೇರಿ ಬಾಗಲಕೋಟೆ ನಟಿಸಿ ವೀಕ್ಷಕರ ಮನ ಸೆಳೆದಿದ್ದರು. ಆದರೆ ಅದ್ಯಾಕೋ ಧಾರಾವಾಹಿಯಿಂದ ಕಾವೇರಿ ಬಾಗಲಕೋಟೆ ಅವರು ಅರ್ಧದಲ್ಲಿಯೇ ಬಿಟ್ಟು ಹೊರ ನಡೆದಿದ್ದರು. ಇದಾದ ಬಳಿಕ ಕಾವೇರಿ ಅವರು ಕಿರುತೆರೆಗೆ ಮತ್ತೆ ಮರಳಲೇ ಇಲ್ಲ.

ಸೀಮಾ ಪಾತ್ರದಲ್ಲಿ ಜನ ಮನ ಗೆದ್ದ ನಟಿ
ಧಾರಾವಾಹಿಯಿಂದ ಹೊರ ನಡೆದ ನಂತರ ಕಾವೇರಿ ಬಾಗಲಕೋಟೆ ಅವರು ತಮ್ಮದೇ ಸ್ವಂತ ಬಿಸಿನೆಸ್ ನಡೆಸಿಕೊಂಡು ಹೋಗುತ್ತಿದ್ದಾರೆ.ಮೇಕಪ್ ಆರ್ಟಿಸ್ಟ್ ಆಗಿರುವ ಕಾವೇರಿ ಬಾಗಲಕೋಟೆ ಅವರು ಕೋರ್ಸ್ ಕೂಡ ಮಾಡಿದ್ದಾರೆ. ಮೇಕಪ್ ಆರ್ಟಿಸ್ಟ್ ಆಗಲು ಬಯಸುವವರಿಗೆ ತರಬೇತಿ ಕೊಡುತ್ತಾರೆ. ಇದರ ಬಗ್ಗೆ ಕಾವೇರಿ ಅವರು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡುತ್ತಿರುತ್ತಾರೆ.
ಕ್ಲಾಸ್ ಆರಂಭ ಆಗುವ ಬಗ್ಗೆ, ಟ್ರೈನಿಂಗ್ ಕೊಡುತ್ತಿರುವ ವೀಡಿಯೋಗಳು, ಹಾಗೂ ಮೇಕಪ್ ಕುರಿತಾದ ಕೆಲ ಟಿಪ್ಸ್ ಗಳನ್ನು ಕಾವೇರಿ ಬಾಗಲಕೋಟೆ ಅವರು ಹಂಚಿಕೊಳ್ಳುತ್ತಿರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಆಕ್ಟೀವ್ ಆಗಿರುವ ಕಾವೇರಿ ಬಾಗಲಕೋಟೆ ಅವರು ತಮ್ಮ ವ್ಯೆಯಕ್ತಿಕ ವಿಚಾರಗಳನ್ನು ಗೌಪ್ಯವಾಗೇ ಇಟ್ಟಿರುತ್ತಾರೆ.

ಎಂಟು ವರ್ಷದ ಪ್ರೀತಿಗೆ ಮದುವೆಯ ಮುದ್ರೆ
ಕಾವೇರಿ ಬಾಗಲಕೋಟೆ ಅವರು ಕಳೆದ ವರ್ಷ ತಮ್ಮ ಎಂಟು ವರ್ಷದ ಪ್ರೀತಿಗೆ ಮದುವೆಯ ಮುದ್ರೆ ಒತ್ತಲು ಮೊದಲ ಮೆಟ್ಟಿಲನ್ನು ಏರಿದ್ದರು. ಈ ಸಂತಸದ ವಿಚಾರವನ್ನು ಬಚ್ಚಿಡದೇ ಖುಷಿಯಿಂದ ಹೇಳಿಕೊಂಡಿದ್ದರು. ಕಾವೇರಿ ಬಾಗಲಕೋಟೆ ಅವರು ಇನ್ನು ಕೆಲವೇ ದಿನಗಳಲ್ಲಿ ಸೈನಿಕನ ಕೈ ಹಿಡಿಯಲಿದ್ದಾರೆ.
ಈ ವಿಚಾರವನ್ನು ಸ್ವತಃ ಕಾವೇರಿ ಬಾಗಲಕೋಟೆ ಅವರೇ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಕಾವೇರಿ ಬಾಗಲಕೋಟೆ ಸೈನಿಕರಾಗಿ ಕಾರ್ಯ ನಿರ್ವಹಿಸುತ್ತಿರುವ ವಿಠ್ಠಲ್ ಹಿರಣ್ಣನವರ್ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
ಬ್ಯಾಚುಲರೇಟ್ ಪಾರ್ಟಿಯಲ್ಲಿ ಕಾವೇರಿ
ಈಗಾಗಲೇ ಕಳೆದ ವರ್ಷವೇ ಹೆಣ್ಣು ನೋಡುವ ಶಾಸ್ತ್ರವನ್ನು ಮಾಡಲಾಗಿತ್ತು. ಇದೀಗ ಇವರಿಬ್ಬರು ಗುರು ಹಿರಿಯರ ಸಮ್ಮುಖದಲ್ಲಿ ಮದುವೆ ಆಗಲಿದ್ದಾರೆ. ಆದರೆ, ಕಾವೇರಿ ಅವರು ಇನ್ನು ತಮ್ಮ ಮದುವೆಯ ದಿನಾಂಕದ ಬಗ್ಗೆ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ.

ಆದರೆ, ಕಾವೇರಿ ಅವರ ಸ್ನೇಹಿತರು ಸೇರಿಕೊಂಡು ಬ್ರೈಡ್ ಟು ಬಿ ಬ್ಯಾಚುಲರೇಟ್ ಪಾರ್ಟಿಯನ್ನು ಮಾಡಿದ್ದಾರೆ. ಈ ಪಾರ್ಟಿಗೆ ಕಾವೇರಿ ಹಾಗೂ ವಿಠಲ್ ಇಬ್ಬರೂ ಕೂಡ ಆಗಮಿಸಿ ಎಂಜಾಯ್ ಮಾಡಿದ್ದಾರೆ. ಈ ವೀಡಿಯೋವನ್ನು ಕಾವೇರಿ ಅವರು ತಮ್ಮ ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಇನ್ನು ಗೊತ್ತಿಲ್ಲ ಮದುವೆ ದಿನಾಂಕ
ಆದರೆ, ಮದುವೆಯ ದಿನಾಂಕ ತಿಳಿಯದೇ ಅಭಿಮಾನಿಗಳು ಒದ್ದಾಡುತ್ತಿದ್ದಾರೆ. ಆದರೆ, ಕಾವೇರಿ ಬಾಗಲಕೋಟೆ ಅವರು ತಮ್ಮ ಮದುವೆಯ ಹಿಂಟ್ ನೀಡಿದ್ದಾರೆ. ಅದೇನೆಂದರೆ, ಅವರ ಮೇಕಪ್ ಆಂಡ್ ಹೇರ್ ಅಕಾಡೆಮಿಯ ಮುಂದಿನ ಬ್ಯಾಚ್ ಮಾರ್ಚ್ 14 ರಂದು ಪ್ರಾರಂಭವಾಗಲಿದೆ ಎಂದಿದ್ದಾರೆ.
ಇದನ್ನು ಗಮನಿಸಿದ ಅಭಿಮಾನಿಗಳು ಕಾವೇರಿ ಅವರ ಮದುವೆ ಬಹುಶಃ ಮಾರ್ಚ್ ಹದಿನಾಲ್ಕಕ್ಕೂ ಮುನ್ನವೇ ನಡೆಯಬಹುದು ಎಂದು ಗೆಸ್ ಮಾಡಿದ್ದಾರೆ. ಇನ್ನು ಕಾವೇರಿ ಬಾಗಲಕೋಟೆ ಅವರುವ 8 ವರ್ಷದಿಂದ ವಿಠ್ಠಲ್ ವ ರನ್ನು ಪ್ರೀತಿಸುತ್ತಿದ್ದರು. ಮನೆಯವರನ್ನು ಒಪ್ಪಿಸಿ ಈ ಮದುವೆಯಾಗುತ್ತಿದ್ದಾರೆ. ಅವರ ಪ್ರೀತಿಯ ಕನಸು ನನಸಾಗುತ್ತಿದ್ದು, ಸೈನಿಕನ ಹೆಂಡತಿ ಆಗವಳು ಎಂದು ಹೇಳಿಕೊಳ್ಳಲು ಹೆಮ್ಮೆ ಆಗುತ್ತದೆ. ಎಂದು ಈ ಹಿಂದೆ ಹೇಳಿಕೊಂಡಿದ್ದಾರೆ. ಕಾವೇರಿ ಅವರ ದಾಂಪತ್ಯ ಬದುಕಿಗೆ ನಾವು ಶುಭ ಕೋರೋಣ


Click it and Unblock the Notifications











