kavitha Gowda ; ಕವಿತಾ ಗೌಡ ಬೇಬಿ ಬಂಪ್ ಫೋಟೋಶೂಟ್ ವೈರಲ್...!
ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಅದ್ಯಾವಾಗ ಚಿನ್ನು ಎಂಬ ಪಾತ್ರಧಾರಿಯಾಗಿ ಎಂಟ್ರಿಯಾದರೋ ಅಂದಿನಿಂದ ಇಲ್ಲಿಯವರೆಗೂ ಕವಿತಾ ಗೌಡ ಎನ್ನುವುದಕ್ಕಿಂತ ಇವರನ್ನು ಎಲ್ಲರು ಚಿನ್ನು ಎಂದೇ ಕರೆಯುತ್ತಾರೆ.ಧಾರಾವಾಹಿಯಿಂದ ಅರ್ಧದಿಂದಲೇ ಹೊರ ಬಂದರೂ ಚಿನ್ನು ಪಾತ್ರವನ್ನು ಮಾತ್ರ ಅಭಿಮಾನಿಗಳು ಮರೆಯಲೇ ಇಲ್ಲ. ಸೋಶಿಯಲ್ ಮೀಡಿಯಾದಲ್ಲೂ ಕವಿತಾ ಅವರು ಆಕ್ಟೀವ್ ಆಗಿರುತ್ತಾರೆ. ಮದುವೆಯಾದ ಬಳಿಕ ಕೊಂಚ ಸೀರಿಯಲ್ ಗಳಿಂದ ದೂರವಿದ್ದರೂ ಕೂಡ. ಇಂಥಾ ಕವಿತಾ ಗೌಡ ಅವರು ಕೆಲ ಸೀರಿಯಲ್ ಗಳಳಲ್ಲಿ ಗೆಸ್ಟ್ ರೋಲ್ ಮಾಡುತ್ತಿದ್ದರು.
ಪ್ರೀತಿಗೆ ಮದುವೆಯ ಮುದ್ರೆ
ಲಕ್ಷ್ಮೀ ಬಾರಮ್ಮ ಧಾರಾವಾಹಿ ಖ್ಯಾತಿಯ ನಟ ಚಂದನ್ ಕುಮಾರ್ ಮತ್ತು ನಟಿ ಕವಿತಾ ಇಬ್ಬರು ಕಿರುತೆರೆಯಿಂದಲೇ ಬಣ್ಣದ ಲೋಕದ ಪಯಣ ಆರಂಭಿಸಿದರು. ಇದೇ ಪರಿಚಯ ಪ್ರೀತಿಯಾಗಿ ಅರಳಿ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ, 2021 ರಲ್ಲಿ ತಮ್ಮ ಪ್ರೀತಿಗೆ ಮದುವೆಯ ಮುದ್ರೆಯನ್ನು ಒತ್ತಿದರು. ಧಾರಾವಾಹಿಯಲ್ಲಿ ಪತಿ-ಪತ್ನಿಯಾಗಿ ನಟಿಸಿದ್ದ ಈ ಜೋಡಿ ನಿಜ ಜೀವನದಲ್ಲೂ ಸತಿ-ಪತಿಯಾಗಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರಾವಾಹಿ ಆರು ವರ್ಷಗಳಿಗೂ ಅಧಿಕ ಕಾಲ ಪ್ರಸಾರವಾಗಿತ್ತು. ಈ ಧಾರಾವಾಹಿಗೆ ದೊಡ್ಡ ಮಟ್ಟದ ಅಭಿಮಾನಿ ಬಳಗವಿತ್ತು. ಈ ಸೀರಿಯಲ್‌ನ ಕಲಾವಿದರು ಪ್ರಸ್ತುತ ಬೇರೆ ಬೇರೆ ಪ್ರಾಜೆಕ್ಟ್ಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಧಾರಾವಾಹಿ ನಂತರದಲ್ಲಿ ಕಲಾವಿದರಿಗೆ ದೊಡ್ಡ ಮಟ್ಟದ ಖ್ಯಾತಿ ಸಿಕ್ಕಿದ್ದಲ್ಲದೇ, ಕನ್ನಡ ಕಿರುತೆರೆ ಮತ್ತು ಸಿನಿಮಾ ರಂಗದಲ್ಲಿ ಗುರುತಿಸಿಕೊಳ್ಳುವಂತಾಗಿದೆ.

ಚಿನ್ನು ನಟನೆಯ ಧಾರಾವಾಹಿಗಳು
ರಾಧಾ ಕಲ್ಯಾಣ ಧಾರಾವಾಹಿಯನ್ನು ಅರ್ಧಕ್ಕೆ ಬಿಟ್ಟಿದ್ದ ಚಂದನ್ ಕುಮಾರ್ ಈ ಸೀರಿಯಲ್ನಲ್ಲಿ ಚಂದು ಪಾತ್ರ ಮಾಡಿದ್ದರು. ಕೆಲವು ತಿಂಗಳುಗಳ ಕಾಲ ಅವರು ಚಂದು ಪಾತ್ರಕ್ಕೆ ಜೀವ ತುಂಬಿದ್ದರು. ಆಮೇಲೆ ಈ ಸೀರಿಯಲ್ನ್ನು ಅವರು ಕೈಬಿಟ್ಟರು. ಎಷ್ಟೇ ಧಾರಾವಾಹಿ ಮಾಡಿದರೂ ಕೂಡ ಚಂದನ್ ಅವರನ್ನು ಲಕ್ಷ್ಮೀ ಬಾರಮ್ಮ ಚಂದನ್ ಎಂದು ಕರೆಯೋದು ವಿಶೇಷ. ಇನ್ನು ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲಕ್ಷ್ಮೀ ಪಾತ್ರದಲ್ಲಿ ಚಿನ್ನು ಎಂದು ಗುರುತಿಸಿಕೊಂಡಿದ್ದ ಕವಿತಾ ಗೌಡ, ಲಕ್ಷ್ಮೀ ಪಾತ್ರಕ್ಕೆ ಇನ್ನಷ್ಟು ಮೆರಗು ತುಂಬಿದರು. ಕವಿತಾ ಗೌಡ ವೈಯಕ್ತಿಕ ಕಾರಣಗಳಿಂದ ಈ ಸೀರಿಯಲ್ ತೊರೆದಿದ್ದರು. ಆಮೇಲೆ ವಿದ್ಯಾ ವಿನಾಯಕ ಧಾರಾವಾಹಿಯಲ್ಲಿ ಅವರು ಕಾಣಿಸಿಕೊಂಡ ನಂತರವೂ ಕೂಡ ಜನರು ಅವರನ್ನು ಇಂದಿಗೂ ಚಿನ್ನು ಅಂತಲೇ ಕರೆಯುತ್ತಾರೆ.
ಸ್ವಂತ ಬಿಸಿನೆಸ್ ಹೊಂದಿರುವ ಜೋಡಿ
ಮದುವೆಯಾದ ಮೇಲೆ ಚಂದನ್ ಕುಕ್ಕು ವಿತ್ ಕಿರಿಕ್ಕು ಅಡುಗೆ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರು. ಆನಂತರ ಚಂದನ್ ಅವರು ಮರಳಿ ಮನಸ್ಸಾಗಿ ಧಾರಾವಾಹಿಯಲ್ಲಿ ಚಂದನ್ ಎಸ್ಪಿ ವಿಕ್ರಾಂತ್ ಪಾತ್ರದಲ್ಲಿ ಕಾಣಿಸಿಕೊಂಡರು. ಇನ್ನು ನಟಿ ಚಿನ್ನು ದ್ವಿಮುಖ ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ. ಈಗಾಗಲೇ ಹಲವು ಸಿನಿಮಾಗಳಲ್ಲಿ ಮಿಂಚಿದ್ದಾರೆ. ಇನ್ನು ಚಂದನ್ ಮತ್ತು ಕವಿತಾ ಗೌಡ ಅವರು ಸ್ವಂತ ಹೋಟೆಲ್ ಬಿಸಿನೆಸ್ ಅನ್ನು ಕೂಡ ಪ್ರಾರಂಭಿಸಿದ್ದು, ಕ್ಲಿಕ್ ಆಗಿದ್ದಾರೆ. ಬಣ್ಣದ ಲೋಕದ ಪಯಣದ ಜೊತೆಗೆ ಬೇರೆ ಬೇರೆ ಕೆಲಸಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಲೈಫ್ ನಲ್ಲಿ ಕೊಂಚ ಸೆಲ್ ಆದ ಈ ಜೋಡಿ ಇದೀಗ ತಮ್ಮ ಕುಟುಂಬವನ್ನು ವಿಸ್ತರಿಸಿಕೊಳ್ಳುತ್ತಿದ್ದಾರೆ.
ಚಿನ್ನು ಬೇಬಿ ಬಂಪ್ ನೋಡಿದ್ದೀರಾ
ಪುಟಾಣಿ ಕಂದಮ್ಮನನ್ನು ಮನೆಗೆ ಬರ ಮಾಡಿಕೊಳ್ಳಲು ಚಂದನ್ ಮತ್ತು ಕವಿತಾ ಇಬ್ಬರೂ ತಯಾರಾಗಿದ್ದಾರೆ. ಕಳೆದ ಎರಡು ತಿಂಗಳ ಹಿಂದೆ ಕವಿತಾ ಅವರು ತಾವು ಗರ್ಭಿಣಿ ಆಗಿರುವ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದೀಗ ಪತಿ ಪತ್ನಿ ಇಬ್ಬರೂ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದಾರೆ. ಹಳದಿ ಬಣ್ಣದ ಲಾಂಗ್ ಡ್ರೆಸ್ ಧರಿಸಿ ಕವಿತಾ ಅವರೂ ಫೋಟೋಗಳನ್ನು ತೆಗೆಸಿಕೊಂಡಿದ್ದಾರೆ. ಕವಿತಾ ಅವರಿಗೆ ಅಭೀಮಾನಿಗಳು ವಿಶ್ ಮಾಡುತ್ತಿದ್ದಾರೆ.


Click it and Unblock the Notifications











