ಶ್ರೇಷ್ಠ ಅಲಿಯಾಸ್ 'ಭಾಗ್ಯಲಕ್ಷ್ಮೀ' ಕಾವ್ಯ ಗೌಡಗೆ ಹುಟ್ಟುಹಬ್ಬದ ಸಂಭ್ರಮ ಸಡಗರ..!

By ಪ್ರಿಯಾ ದೊರೆ

ನಟಿ ಕಾವ್ಯ ಗೌಡ ಅವರು, ಕನ್ನಡ ಕಿರುತೆರೆಯಿಂದ ಕಳೆದ ಆರೇಳು ವರ್ಷದಿಂದ ದೂರವಿದ್ದವರು. ಕಳೆದ ವರ್ಷ ಭಾಗ್ಯಲಕ್ಷ್ಮೀ ಧಾರಾವಾಹಿಗೆ ಎಂಟ್ರಿಕೊಟ್ಟಿದ್ದರು.ಮೂಲತಃ ಬೆಂಗಳೂರಿನವರಾದ ಕಾವ್ಯ ಗೌಡ ಅವರು ಬಿಕಾಂ ಓದಿದ್ದಾರೆ. ಜೀ ಕನ್ನಡ ವಾಹಿನಿಯ ಮಿಸ್ಟರ್ ಅಂಡ್ ಮಿಸ್ಸ್ ರಂಗೇಗೌಡ ಧಾರಾವಾಹಿಗೆ ಕಾವ್ಯ ಗೌಡ ಅವರು ಮೊದಲು ಬಣ್ಣ ಹಚ್ಚಿದ್ದರು. ಇದರಲ್ಲಿ ಲೀಡ್ ರೋಲ್ ನಲ್ಲಿ 100 ಎಪಿಸೋಡ್ ನಲ್ಲಿ ಕಾವ್ಯ ಅವರು ನಟಿಸಿದ್ದರು. ಅರ್ಧಕ್ಕೆ ಧಾರಾವಾಹಿಯನ್ನು ಬಿಟ್ಟ ನಟಿ ಪರಭಾಷೆಯಲ್ಲಿ ಸಕ್ರಿಯರಾದರು.

ಪರಭಾಷೆಯಲ್ಲೂ ನಟಿಸಿದ್ದ ನಟಿ

ಐದು ವರ್ಷಗಳ ಕಾಲ ಕಾವ್ಯ ಗೌಡ ತೆಲುಗು ಧಾರಾವಾಹಿಯಲ್ಲಿ ಲೀಡ್ ಪಾತ್ರದಲ್ಲಿ ನಟಿಸಿದ್ದರು. ತೆಲುಗಿನ ಭಾವಮರ್ಡಾಲು ಧಾರಾವಾಹಿಯಲ್ಲಿ ನಟಿಸಿದ್ದರು. ಭಾಗ್ಯಲಕ್ಷ್ಮೀ ಧಾರಾವಾಹಿ ಮೂಲಕ ಕನ್ನಡ ಇಂಡಸ್ಟ್ರಿಗೆ ಬಂದಿರುವುದಕ್ಕೆ ಬಹಳ ಖುಷಿಪಟ್ಟಿದ್ದರು. ಇನ್ನು 3 ವರ್ಷಗಳ ಹಿಂದೆ ಉದಯ ಟಿವಿಯಲ್ಲಿ ಮೂಡಿ ಬಂದ ದೇವಯಾನಿ ಧಾರಾವಾಹಿಯಲ್ಲಿ ನಟಿಸಿದ್ದರು. ವಿಜಯ್ ರಾಘವೇಂದ್ರ ನಟನೆಯ ರಿಂಗ ರಿಂಗ ರೋಸ್ ಎಂಬ ಸಿನಿಮಾಗೂ ಬಣ್ಣ ಹಚ್ಚಿದ್ದರು. ಇದರೊಂದಿಗೆ ಹೊಸಬರೇ ಇರುವ ಶೋಧ ಎಂಬ ಚಿತ್ರದಲ್ಲೂ ನಟಿಸಿದ್ದು, ಇನ್ನಷ್ಟು ಸಿನಿಮಾಗಳಲ್ಲಿ ನಟಿಸುವ ಆಸೆಯನ್ನೂ ವ್ಯಕ್ತಪಡಿಸಿದ್ದಾರೆ. ಇಷ್ಟು ದಿನ ಎಲೆ ಮರೆ ಕಾಯಿಯಂತೆ ಇದ್ದ ಕಾವ್ಯ ಅವರಿಗೆ ಈಗ ನಟಿಸುತ್ತಿರುವ ಧಾರಾವಾಹಿ ದೊಡ್ಡ ಬ್ರೇಕ್ ನೀಡಿದೆ.

Written Update on actress kavya gowda

ಶ್ರೇಷ್ಠ ಪಾತ್ರದ ಮೂಲಕ ಚಿರಪರಿಚಿತೆ

ಸದ್ಯ ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ನಟಿ ಕಾವ್ಯ ಗೌಡ ಅವರು ನಟಿಸುತ್ತಿದ್ದಾರೆ. ಇದರಲ್ಲಿ ಶ್ರೇಷ್ಠ ಪಾತ್ರದಲ್ಲಿ ನಟಿಸುತ್ತಿದ್ದು, ಪ್ರೇಕ್ಷಕರು ನಿತ್ಯ ಕಾವ್ಯ ಅವರ ನಟನೆಯನ್ನು ನೋಡಿ ಬಯ್ಯುವುದೇ ಆಗಿದೆ. ಭಾಗ್ಯಳ ಪತಿ ತಾಂಡವ್ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡು ಹೇಗಾದರೂ ಮಾಡಿ ತಾಂಡವ್ ನನ್ನು ತನ್ನ ಪಾಲಾಗಿಸಿಕೊಳ್ಳಬೇಕು ಎನ್ನುತ್ತಿರುವ ಶ್ರೇಷ್ಠಳಿಗೆ ಈಗ ಸಮಸ್ಯೆಗಳು ಎದುರಾಗುತ್ತಿವೆ. ಪ್ರೇಕ್ಷಕರೆಲ್ಲಾ ಶ್ರೇಷ್ಠ ಭಾಗ್ಯಳಿಗೆ ತೊಂದರೆ ಕೊಡುತ್ತಿರುವದಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ. ಇನ್ನು ಶ್ರೇಷ್ಠ ಅಲಿಯಾಸ್ ಕಾವ್ಯ ಅವರಿಗೆ ಟ್ರಾವೆಲ್ ಮಾಡುವುದು ಎಂದರೆ ಬಹಳ ಇಷ್ಟವಂತೆ.

ಟ್ರಾವೆಲ್ ಮಾಡಲು ಬಯಸುವ ನಟಿ

ಮುಂದಿನ ದಿನಗಳಲ್ಲಿ ಸಿನಿಮಾಗಳಲ್ಲಿ ನಟಿಸಬೇಕು ಎಂದುಕೊಂಡಿರುವ ಕಾವ್ಯ ಗೌಡ ಅವರಿಗೆ ಟ್ರಾವೆಲ್ ಮಾಡುವುದು ಕೂಡ ಇಷ್ಟವಂತೆ. ಹಾಗಾಗಿ ಕಾವ್ಯ ಗೌಡ ಅವರು ಆಗಾಗ ಪ್ರವಾಸ ಮಾಡುತ್ತಿರುತ್ತಾರೆ. ದೂದ್ ಸಾಗರ್, ಗೋವಾ, ಕೂರ್ಗ್, ಊಟಿ, ಥೈಲ್ಯಾಮಡ್, ಮಂಗಳೂರು, ಗೋಕರ್ಣ, ಚಿಕ್ಕ ಮಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ಟ್ರಾವೆಲ್ ಮಾಡಿದ್ದಾರೆ. ಇತ್ತೀಚೆಗಷ್ಟೇ ಕಿರುತೆರೆ ಗೆಳತಿಯರೊಂದಿಗೆ ಗೋವಾ ಟ್ರಿಪ್ ಹೋಗಿದ್ದರು. ಕಾವ್ಯ ಅವರಿಗೆ ಪರಿಸರ ಎಂದರೆ ಬಹಳ ಇಷ್ಟ. ಸಾರಾ ಅಣ್ಣಯ್ಯ ಅವರೊಂದಿಗೆ ರೀಲ್ಸ್ ಕೂಡ ಮಾಡಿ ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಶೇರ್ ಮಾಡಿಕೊಂಡಿದ್ದರು.

Written Update on actress kavya gowda

ಹುಟ್ಟುಹಬ್ಬದ ಹುಡುಗಿ ಕಾವ್ಯ

ಇಂದು ಕಾವ್ಯ ಗೌಡ ಅವರ ಹುಟ್ಟುಹಬ್ಬ. ಕಾವ್ಯ ಅವರ ಗೆಳಯರು, ಸಹ ಕಲಾವಿದರೆಲ್ಲರೂ ಹುಟ್ಟು ಹಬ್ಬಕ್ಕೆ ವಿಶ್ ಮಾಡಿದ್ದಾರೆ. ಇನ್ನು ಕಾವ್ಯ ಅವರು ಧಾರಾವಾಹಿಯಲ್ಲಿ ಮಾತ್ರವಲ್ಲದೇ ನಿಜ ಜೀವನದಲ್ಲೂ ಮಾಡ್ರನ್ ಡ್ರೆಸ್ ಅನ್ನು ಹಾಕಿಕೊಳ್ಳುತ್ತಾರೆ. ಕಾವ್ಯ ಅವರ ಶ್ರೇಷ್ಠ ಪಾತ್ರಕ್ಕೆ ಅಭಿಮಾನಿಗಳು ಬೈದರೂ ಕೂಡ ಇಂದು ಹುಟ್ಟು ಹಬ್ಬವೆಂದು ಶುಭ ಹಾರೈಸಿದ್ದಾರೆ. ಕಾವ್ಯ ಅವರು ಎಲ್ಲೇ ಹೋದರೂ ಶ್ರೇಷ್ಠ ಎಂದೇ ಗುರುತಿಸುತ್ತಾರಂತೆ. ಕಾವ್ಯ ಅವರಿಗೆ ಬಣ್ಣದ ಲೋಕದಲ್ಲಿ ಇನ್ನಷ್ಟು ಒಳ್ಳೊಳ್ಳೆಯ ಪಾತ್ರಗಳನ್ನು ಮಾಡುವ ಆಸೆ ಇದ್ದು, ಸಿನಿಮಾಗಳಲ್ಲೂ ನಟಿಸಬೇಕು ಎಂದಿದ್ದಾರೆ.

More from Filmibeat

English summary
actress kavya gowda kannada films and serials. Today her birthday
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X