ತಮ್ಮ ಮಗಳಿಗೆ ಅರ್ಥಪೂರ್ಣ ಹೆಸರಿಟ್ಟ 'ರಾಧಾ ರಮಣ' ಕಾವ್ಯಾ ಗೌಡ, ರಾಮಾಯಣವನ್ನು ನೆನಪಿಸುತ್ತೆ ಹೆಸರು..!

By ಪ್ರಿಯಾ ದೊರೆ

ಮೀರಾ ಮಾಧವ ಧಾರಾವಾಹಿ ಮೂಲಕ ನಟಿ ಕಾವ್ಯಾ ಗೌಡ ಅವರು ಕಿರುತೆರೆ ಪ್ರವೇಶಿಸಿದರು. ಕೆಲವೇ ಕೆಲವು ಧಾರಾವಾಹಿಗಳಲ್ಲಿ ನಟಿಸಿದ ಅವರು ಬಣ್ಣದ ಲೋಕದ ಪಯಣ ಮುಗಿಸಿ ಬಹಳ ಕಾಲವಾಗಿದೆ. ಹಾಗಿದ್ದರೂ ಕೂಡ ಕಾವ್ಯಾ ಗೌಡ ಅವರ ನಟನೆಯನ್ನು ಮರೆಯದ ಅಭಿಮಾನಿಗಳು ಇಂದಿಗೂ ಅವರನ್ನು ಸೆಲಬ್ರಿಟಿ ಎಂದೇ ಗುರುತಿಸುತ್ತಾರೆ. ನಟಿ ಕಾವ್ಯಾ ಗೌಡ ಅವರಮನ್ನು ಅಭಿಮಾನಿಗಳು ಇನ್ನೂ ಫಾಲೋ ಮಾಡುತ್ತಿದ್ದಾರೆ. ಕನ್ನಡ ಮಾತ್ರವಲ್ಲದೇ ತೆಲುಗು ಕಿರುತೆರೆಯಲ್ಲೂ ಛಾಪು ಮೂಡಿಸಿದ್ದ ನಟಿ ಕಾವ್ಯಾ ಅವರು ಸದ್ಯ ತಮ್ಮ ಮುದ್ದು ಮಗಳೊಂದಿಗೆ ಸಮಯ ಕಳೆಯುತ್ತಿದ್ದಾರೆ.

ಕಾವ್ಯಾ ಗೌಡ ನಟನೆ

ಮೀರಾ ಮಾಧವ ಧಾರಾವಾಹಿಯ ಬಳಿಕ ಗಾಂಧಾರಿ, ಶುಭ ವಿವಾಹ ಹಾಗೂ ರಾಧಾ ರಮಣ ಧಾರಾವಾಹಿಯಲ್ಲಿ ನಟಿಸಿದ್ದರು. ಕೊನೆಯದಾಗಿ ರಾಧಾ ರಮಣ ಧಾರಾವಾಹಿಯಲ್ಲಿ ನಾಯಕಿ ಆರಾಧನಾ ಪಾತ್ರದಲ್ಲಿ ನಟಿಸಿದ್ದರು. ಕಾವ್ಯಾ ಅವರ ಈ ಪಾತ್ರವನ್ನು ಇಂದಿಗೂ ಜನ ನೆನಪಿನಲ್ಲಿಟ್ಟುಕೊಂಡಿದ್ದಾರೆ. ಇದರೊಂದಿಗೆ ಕಾವ್ಯಾ ಅವರ ಫ್ಯಾಷನ್ ಸೆನ್ಸ್ ಅನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಕಿರುತೆರೆಯಿಂದ ಹೊರ ಬಂದರೂ ನಟಿ ಕಾವ್ಯಾ ಗೌಡ ಅವರು ಸೋಶೀಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದಾರೆ. ಅಲ್ಲದೇ, ತಮ್ಮ ಅಭಿಮಾನಿಗಳೋಂದಿಗೆ ಸಂಪರ್ಕವನ್ನು ಕಡಿತಗೊಳಿಸದೇ, ಸದಾ ತಮ್ಮ ವಯಕ್ತಿಕ ಜೀವನದ ಬಗ್ಗೆ ಅಪ್ ಡೇಟ್ ಗಳನ್ನು ಮಾಡುತ್ತಿರುತ್ತಾರೆ.

written update on Actress kavya gowda daughter naming ceremony

ಮಾಡೆಲಿಂಗ್ ಮೂಲಕ ಕಿರುತೆರೆ ಪಯಣ

ಬಕಾಸುರ ಚಿತ್ರಕ್ಕೂ ಬಣ್ಣ ಹಚ್ಚಿರುವ ಕಾವ್ಯಾ ಗೌಡ ಅವರು ಅಥ್ಲೀಟ್. ಆದರೆ ಕಾಲಿಗೆ ಪೆಟ್ಟು ಬಿದ್ದ ಕಾರಣ ಕಾವ್ಯಾ ಅವರು ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟರು. ಕಾವ್ಯಾ ಗೌಡ ಅವರು ಬರೋಬ್ಬರಿ 182ಕ್ಕೂ ಹೆಚ್ಚು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಟಾಲಿವುಡ್ ಸ್ಟಾರ್ ಅಕ್ಕಿನೇನಿ ನಾಗಾರ್ಜುನ ಜೊತೆಗೂ ಜಾಹೀರಾತು ಒಂದರಲ್ಲಿ ತೆರೆ ಹಂಚಿಕೊಂಡಿದ್ದಾರೆ. ಇನ್ನು ಪ್ಯಾಟೆ ಮಂದಿ ಕಾಡಿಗ್ ಬಂದ್ರು ರಿಯಾಲಿಟಿ ಶೋನಲ್ಲಿ ಕಾವ್ಯ ಗೌಡ ಕಾಣಿಸಿಕೊಂಡಿದ್ದರು. ಈ ಶೋನಲ್ಲಿ ಜಂಗಲ್ ಕ್ವೀನ್ ಅಂತಲೇ ಕಾವ್ಯ ಹೆಸರು ಗಳಿಸಿದ್ದರು. ನಂತರವೇ ಧಾರಾವಾಹಿಗಳಲ್ಲಿ ನಟಿಸಲು ಪ್ರಾರಂಭಿಸಿದರು.

ಮದುವೆಯಾಗಿ ಬ್ಯುಸಿಯಾದ ನಟಿ

ಬಳಿಕ ನಟಿ ಕಾವ್ಯಾ ಗೌಡ ಅವರು ಸೋಮಶೇಖರ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ತಮ್ಮಿಷ್ಟದಂತೆ ನಟಿ ಕಾವ್ಯಾ ಅವರು ಮದುವೆಯನ್ನು ಅದ್ಧೂರಿಯಾಗಿ ಮಾಡಿಕೊಂಡರು. ಮನೆಯಲ್ಲಿ ಕೊನೆಯ ಮದುವೆ ಎಂಬ ಕಾರಣಕ್ಕೆ 2021ರಲ್ಲಿ ಅದ್ದೂರಿಯಾಗಿ ವಿವಾಹವಾದರು. ಇದಾದ ಬಳಿಕ ಫ್ಯಾಮಿಲಿಗೆ ಹೆಚ್ಚು ಸಮಯ ಕೊಟ್ಟ ಕಾವ್ಯಾ ಅವರು, ಪ್ರವಾಸಗಳನ್ನು ಕೂಡ ಮಾಡುತ್ತಿದ್ದರು. ಏನೇ ಆದರೂ ಇನ್ ಸ್ಟಾಗ್ರಂ ಪೇಜ್ ನಲ್ಲಿ ಆಕ್ಟೀವ್ ಆಗಿರುವುದನ್ನು ಮಾತ್ರ ತಪ್ಪಿಸಲಿಲ್ಲ. ಸೀಮಂತಕ್ಕೆ ಸಕತ್ ಗ್ರಾಂಡ್ ಆಗಿಯೇ ರೆಡಿಯಾಗಿ ಬೇಬಿ ಶವರ್ನಲ್ಲಿ ಎಲ್ಲರ ಆಕರ್ಷಣೆ ಅವರೇ ಆಗಿದ್ದರು. ಇದೇ ಜನವರಿ 22 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದರು.

ಮಗಳಿಗೆ ನಾಮಕರಣ ಮಾಡಿದ ನಟಿ

ಅಯೋಧ್ಯೆಯಲ್ಲಿ ರಾಮಮಂದಿರದ ಪ್ರತಿಷ್ಠಾಪನೆಯ ದಿನವೇ ತಮ್ಮ ಮನೆಗೆ ಮಗಳು ಆಗಮಿಸಿದ್ದಳು. ಹೀಗಾಗಿ ಕಾವ್ಯಾ ಅವರು ತಮ್ಮ ಮುದ್ದು ಮಗಳನ್ನು ಸಿಯಾ ಎಂದೇ ಕರೆಯುತ್ತಿದ್ದರು. ಸಿಯಾ ಎಂದರೆ ಸೀತೆ ಎಂಬ ಅರ್ಥವಿದ್ದು, ಸುಂದರವಾದ ಹೂವು ಎಂಬ ಅರ್ಥವೂ ಇದಕ್ಕಿದೆ. ಸಿಯಾ ಎಂಬುದು ನಿಕ್ ನೇಮ್ ಇರಬೇಕು ಎಂದು ಎಲ್ಲರೂ ಭಾವಿಸಿದ್ದರು. ವರಮಹಾಲಕ್ಷ್ಮೀ ಹಬ್ಬದ ದಿನ ತಮ್ಮ ಮುದ್ದು ಮಗಳ ಮುಖವನ್ನು ರಿವೀಲ್ ಮಾಡಿದ ಕಾವ್ಯಾ ಅವರು ಇಂದು ಅದ್ಧೂರಿಯಾಗಿ ನಾಮಕರಣವನ್ನು ಮಾಡಿದ್ದಾರೆ. ಸ್ಯಾಂಡ್ ಆರ್ಟ್ ಮೂಲಕ ಮಗಳ ಹೆಸರನ್ನು ರಿವೀಲ್ ಮಾಡಿರುವ ಈ ಜೋಡಿ ಸಿಯಾ ಎಂದೇ ನಾಮಕರಣ ಮಾಡಿದ್ದಾರೆ. ಸಮಾರಂಭದಲ್ಲಿ ಭಾಗಿಯಾಗಿದ್ದ ಎಲ್ಲರೂ ಮಗು ಸಿಯಾಳನ್ನು ಮನಸಾರೆ ಹರಸಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X