ಮಗಳ ಜೊತೆ ಡಿಸ್ನಿಲ್ಯಾಂಡ್‌ನಲ್ಲಿ ಕಾವ್ಯಾ ಗೌಡ ಮೋಜು ಮಸ್ತಿ, ಹೇಗಿತ್ತು ವಿದೇಶ ಪ್ರಯಾಣ..!
ನಟಿ ಕಾವ್ಯಾ ಗೌಡ ಅವರ ಮಗಳು ಸಿಯಾಳ ಜೊತೆಗೆ ಮೊದಲ ವಿದೇಶಿ ಪ್ರಯಾಣವನ್ನು ಮಾಡಿದ್ದಾರೆ. ಮಗಳೊಂದಿಗೆ ಡಿಸ್ನಿಲ್ಯಾಂಡ್ ಪ್ಯಾರಿಸ್ ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ.
ನಟನೆಯಿಂದ ದೂರ ಉಳಿದಿರುವ ಕಾವ್ಯಾ ಅವರು ಕಂಪ್ಲೀಟ್ ಆಗಿ ಫ್ಯಾಮಿಲಿಗೆ ಸಮಯ ಕೊಟ್ಟಿದ್ದಾರೆ. ಮಗಳ ಬೆಳವಣಿಗೆಯನ್ನು ನೋಡುತ್ತಾ ಕಾಲ ಕಳೆಯುತ್ತಿದ್ದಾರೆ. ಬಣ್ಣದ ಲೋಕದಲ್ಲಿ ಇಲ್ಲದೇ ಹೋದರೂ ನಟಿ ಕಾವ್ಯಾ ಗೌಡ ಅವರ ಅಭಿಮಾನಿಗಳ ಸಂಖ್ಯೆ ಕಡಿಮೆಯಂತೂ ಆಗಿಲ್ಲ. ಅವರ ದಿನ ನಿತ್ಯದ ದಿನಚರಿ ಬಗ್ಗೆ ಅಭಿಮಾನಿಗಳು ಬಹಳ ಕುತೂಹಲಗೊಂಡಿದ್ದಾರೆ.

ಮಗಳೊಂದಿಗೆ ಮೊದಲ ವಿದೇಶಿ ಪ್ರಯಾಣ
ಹೀಗಾಗಿ ಅಭಿಮಾನಿಗಳು ಸದಾ ಕಾವ್ಯಾ ಗೌಡ ಅವರ ಪೇಜ್ ಅನ್ನು ಮಿಸ್ ಮಾಡದೇ ನೋಡುತ್ತಾರೆ. ಕಾವ್ಯಾ ಅವರು ಏನೇ ಸ್ಟೇಟಸ್ ಹಾಕಿದರೂ ಚೆಕ್ ಮಾಡುತ್ತಾರೆ. ತಮ್ಮ ಕುಟುಂಬದ ಫೋಟೋಗಳನ್ನು ಕಾವ್ಯಾ ಅವರು ಅಪ್ ಡೇಟ್ ಮಾಡುತ್ತಿರುತ್ತಾರೆ. ಅವರ ಪೋಸ್ಟ್ ಗಳಿಗೆ ಅಭಿಮಾನಿಗಳು ಕಮೆಂಟ್, ಲೈಕ್ ಮಾಡುತ್ತಾರೆ. ಇನ್ನು ನಟಿ ಕಾವ್ಯಾ ಗೌಡ ಅವರ ಮಗಳು ಸಿಯಾಗೆ ಈಗ ಒಂದು ವರ್ಷದ ಸಂಭ್ರಮ. ಮಗಳು ಸಿಯಾಳಿಗೆ ಮೊದಲನೇ ವರ್ಷದ ಹುಟ್ಟುಹಬ್ಬ ಕಳೆದ ವಾರವಷ್ಟೇ ನೆರವೇರಿದ್ದು, ಹೋಟೆಲ್ ನಲ್ಲಿ ಅದ್ಧೂರಿಯಾಗಿ ಸೆಲಬ್ರೇಟ್ ಮಾಡಿದ್ದರು. ಇದೀಗ ಮಗಳನ್ನು ಮೊದಲ ಬಾರಿಗೆ ವಿದೇಶಕ್ಕೆ ಕರೆದುಕೊಂಡು ಹೋಗಿದ್ದಾರೆ.
ಮಗಳೊಂದಿಗೆ ಡಿಸ್ನಿಲ್ಯಾಂಡ್ ನಲ್ಲಿ ಕಾವ್ಯಾ
ಮಗಳ ಜೊತೆಗೆ ಮೊದಲ ಬಾರಿಗೆ ಫ್ಲೈಟ್ ಹತ್ತಿದ ಕಾವ್ಯಾ ಅವರು ನನ್ನ ಮಗಳಿಗೆ ಇದು ಮೊದಲ ವಿಮಾನ ಜರ್ನಿ ಎಂದು ಪೋಸ್ಟ್ ಮಾಡಿದ್ದಾರೆ. ಪತಿ ಸೋಮಶೇಖರ್ ಮತ್ತು ಮಗಳ ಜೊತೆಗೆ ಡಿಸ್ನಿಲ್ಯಾಂಡ್ ಎಂದೇ ಖ್ಯಾತಿ ಪಡೆದಿರುವ ಪ್ಯಾರಿಸ್ ಗೆ ಹಾರಿದ್ದಾರೆ. ಪ್ಯಾರಿಸ್ ನಲ್ಲಿ ಮಗಳೊಂದಿಗೆ ಸುತ್ತಾಡಿದ್ದು, ಅಲ್ಲಿಯೂ ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದಾರೆ. ಪ್ಯಾರಿಸ್ ನಲ್ಲಿ ತೆರಳಿದ ಜಾಗಗಳಲೆಲ್ಲಾ ಫೋಟೋಗಳನ್ನು ತೆಗೆಸಿಕೊಂಡಿದ್ದು, ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ. ಕುಟುಂಬದ ಜೊತೆಗೆ ಎಂಜಾಯ್ ಮಾಡುತ್ತಿರುವ ಫೋಟೋಗಳನ್ನು ಕಂಡು ಅಭಿಮಾನಿಗಳು ಖುಷಿಪಟ್ಟಿದ್ದಾರೆ.
ಫ್ಯಾಮಿಲಿನೇ ಎಲ್ಲಾ ಎನ್ನುತ್ತಿರುವ ನಟಿ
ನಟನೆಯಿಂದ ದೂರ ಉಳಿದಿರುವ ನಟಿ ಕಾವ್ಯಾ ಗೌಡ ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ಬಹಳ ಸಂತೃಪ್ತಿಯಿಂದ ಇದ್ದಾರೆ. ಸದ್ಯಕ್ಕೆ ಕಾವ್ಯಾ ಅವರು ತಮ್ಮ ವೃತ್ತಿ ಜೀವನದ ಕಡೆಗೆ ಅಷ್ಟೇನು ಗಮನಕೊಟ್ಟಂತೆ ಕಾಣುತ್ತಿಲ್ಲ. ತಮ್ಮ ಪತಿ ಹಾಗೂ ಮಗುವಿನೊಂದಿಗಿನ ಕಾಲ ಕಳೆಯುತ್ತಿರುವ ನಟಿ ಕಾವ್ಯಾ ಅವರು ಫ್ಯಾಮಿಲಿನೇ ಎಲ್ಲಾ ಎಂದು ಹೇಳುತ್ತಿದ್ದಾರೆ. ಇತ್ತೀಚೆಗಂತೂ ಅವರ ಸೋಶಿಯಲ್ ಮೀಡಿಯಾ ಅಕೌಂಟ್ ಪತಿ ಹಾಗೂ ಗುವಿನ ಫೋಟೋಗಳೊಂದಿಗೆ ತುಂಬಿ ಹೋಗಿದೆ.
ಕಾವ್ಯಾ ಗೌಡ ಅವರ ಜೀವನ
ಇನ್ನು ನಟಿ ಕಾವ್ಯಾ ಗೌಡ ಅವರು ಮೀರಾ ಮಾಧವ, ಗಾಂಧಾರಿ, ಶುಭ ವಿವಾಹ ಹಾಗೂ ರಾಧಾ ರಮಣ ಧಾರಾವಾಹಿಯಲ್ಲಿ ನಟಿಸಿದ್ದರು. ಅಲ್ಲದೇ, ಬಕಾಸುರ ಚಿತ್ರಕ್ಕೂ ಬಣ್ಣ ಹಚ್ಚಿರುವ ಕಾವ್ಯಾ ಗೌಡ ಅವರು ಬರೋಬ್ಬರಿ 182ಕ್ಕೂ ಹೆಚ್ಚು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪ್ಯಾಟೆ ಮಂದಿ ಕಾಡಿಗ್ ಬಂದ್ರು ರಿಯಾಲಿಟಿ ಶೋನಲ್ಲಿ ಕಾವ್ಯ ಗೌಡ ಕಾಣಿಸಿಕೊಂಡಿದ್ದರು. 2021ರಲ್ಲಿ ಬ್ಯುಸಿನೆಸ್ ಮ್ಯಾನ್ ಸೋಮಶೇಖರ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಮದುವೆಯಾದ ಬಳಿಕ ಫ್ಯಾಮಿಲಿಗೆ ಹೆಚ್ಚು ಸಮಯ ಕೊಟ್ಟ ಕಾವ್ಯಾ ಅವರು, ಪ್ರವಾಸಗಳನ್ನು ಕೂಡ ಮಾಡುತ್ತಿದ್ದರು. ಏನೇ ಆದರೂ ಇನ್ ಸ್ಟಾಗ್ರಂ ಪೇಜ್ ನಲ್ಲಿ ಆಕ್ಟೀವ್ ಆಗಿರುವುದನ್ನು ಮಾತ್ರ ತಪ್ಪಿಸಲಿಲ್ಲ. 2024ರ ಜನವರಿ 22 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದರು. ಅಯೋಧ್ಯೆಯಲ್ಲಿ ರಾಮಮಂದಿರದ ಪ್ರತಿಷ್ಠಾಪನೆಯ ದಿನವೇ ತಮ್ಮ ಮನೆಗೆ ಮಗಳು ಆಗಮಿಸಿದ ಕಾರಣ ಮಗಳಿಗೆ ಸೀತೆಯ ಅರ್ಥ ಕೊಡುವ ಸಿಯಾ ಎಂಬ ಹೆಸರಿಟ್ಟರು.


Click it and Unblock the Notifications











