Kavyashree Gowda ; ಕೆಂಗುಲಾಬಿ ಸೀರೆಯಲ್ಲಿ ಮಧುಮಗಳಂತೆ ಕಂಡ ನಟಿ ಕಾವ್ಯಶ್ರೀ ಗೌಡ..!

By ಪ್ರಿಯಾ ದೊರೆ

ಕಿರುತೆರೆಯಿಂದ ದೂರವೇ ಉಳಿದಿರುವ ನಟಿ ಕಾವ್ಯಶ್ರೀ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದಾರೆ. ಕಾವ್ಯಶ್ರೀ ಅವರು ಹೊಸ ಧಾರಾವಾಹಿಯಲ್ಲಿ ನಟಿಸಬಹುದು ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ, ಕಾವ್ಯ ಅವರು ಮಾತ್ರ ಹೊಸ ಪ್ರಾಜೆಕ್ಟ್ ನ ಯಾವುದೇ ಮಾಹಿತಿಯನ್ನು ನೀಡಿಲ್ಲ. ಬದಲಿಗೆ ಟಾಕೀಸ್ ಆಪ್ ನಲ್ಲಿ ಕೆಲ ವೆಬ್ ಸಿರೀಸ್ ನಲ್ಲಿ ನಟಿಸಿದ್ದಾರೆ. ಜೊತೆಗೆ ಫಿಟ್ ನೆಸ್ ಬಗ್ಗೆ ಹೆಚ್ಚು ಕಾಳಜಿ ವಹಿಸಿದ್ದು, ನಿತ್ಯ ಜಿಮ್ ಗೆ ಹೋಗುತ್ತಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್

ಜಿಮ್ ನಲ್ಲಿ ರೀಲ್ಸ್ ಮಾಡುತ್ತಾ, ಆಗಾಗ ಹೊಸ ಹೊಸ ಲುಕ್ ನಲ್ಲಿ ಫೋಟೋ ಶೂಟ್ ಮಾಡಿಸಿಕೊಂಡು ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಅಪ್ ಲೋಡ್ ಮಾಡುತ್ತಿರುತ್ತಾರೆ. ಅದು ಬಿಟ್ಟರೆ, ಮುಂಬೈ, ಮೈಸೂರು ಪ್ರವಾಸಗಳನ್ನು ಕೈಗೊಂಡಿದ್ದಾರೆ. ಬಿಗ್ ಬಾಸ್ ಮುಗಿದ ಬಳಿಕ ಕಾವ್ಯಶ್ರೀ ಗೌಡ ಅವರು, ಕಿರುತೆರೆಯಿಂದ ದೂರವೇ ಉಳಿದಿದ್ದಾರೆ. ಇದೀಗ ನಟಿ ಕಾವ್ಯಶ್ರೀ ಗೌಡ ಅವರು ಹೊಸ ಫೋಟೋಶೂಟ್ ಮಾಡಿಸಿದ್ದು, ಸೋಶಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿದ್ದಾರೆ. ಇವರ ಹೊಸ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದು, ಯಾವಾಗ ಮತ್ತೆ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತೀರಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

Written Update on actress kavyashree gowda

ಇಷ್ಟಪಟ್ಟು ಬಣ್ಣದ ಲೋಕಕ್ಕೆ ಬಂದ ನಟಿ

ನಟಿ ಕಾವ್ಯಶ್ರೀ ಗೌಡ ಮಂಗಳಗೌರಿ ಧಾರಾವಾಹಿ ಮೂಲಕ ಖ್ಯಾತಿ ಪಡೆದಿದ್ದಾರೆ. ಕಾವಶ್ರೀ ಹುಟ್ಟಿದ್ದು ಚನ್ನಪಟ್ಟಣದಲ್ಲಿ. ಧಾರಾವಾಹಿಗೆ ಬರುವ ಮುನ್ನ ಖಾಸಗಿ ವಾಹಿನಿಯಲ್ಲಿ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದರು. ಕಾವ್ಯಶ್ರೀ ಅವರು ಪತ್ರಿಕೋದ್ಯಮದಲ್ಲಿ ಪದವಿ ಪಡೆದು ಮಾಧ್ಯಮದಲ್ಲಿ ಕೆಲಸವನ್ನೂ ಮಾಡುತ್ತಿದ್ದರು. ನಿರೂಪಕಿಯಾಗಿ ತೆರೆ ಮೇಲೆ ಬಂದ ಕಾವ್ಯಶ್ರೀ ಆ ನಂತರ ಧಾರಾವಾಹಿಗಳಿಗೆ ಆಡಿಷನ್ಸ್ ನೀಡುತ್ತಿದ್ದರು. ಮೊದಲ ಬಾರಿ ಮನೆಯೇ ಮಂತ್ರಾಲಯ ಧಾರಾವಾಹಿಯಲ್ಲಿ ಪುಟ್ಟ ಪಾತ್ರ ಮಾಡಿದ್ದ ಕಾವ್ಯಶ್ರೀ ಬಳಿಕ ಮಂಗಳಗೌರಿ ಮದುವೆ ಧಾರಾವಾಹಿಯಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಮಂಗಳಗೌರಿ ಮದುವೆ ಧಾರಾವಾಹಿಯ ಮೂಲಕ ಸಾಕಷ್ಟು ಖ್ಯಾತಿ ಗಳಿಸಿದರು.

Written Update on actress kavyashree gowda

ಅತಿ ಹೆಚ್ಚು ಟ್ರೋಲ್ ಆದ ಪಾತ್ರ

ಮಂಗಳ ಗೌರಿ ಪಾತ್ರವು ಸಾಕಷ್ಟು ಟ್ರೋಲ್ ಕೂಡ ಆಗುತ್ತಿತ್ತು.ನಂತರ ಬಿಗ್ ಬಾಸ್ ಸೀಸನ್ 9ರಲ್ಲಿ ಹದಿನೇಳನೇ ಸ್ಪರ್ಧಿಯಾಗಿ ಪ್ರವೇಶ ಮಾಡಿದ್ದರು. ಹತ್ತು ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲಿದ್ದ ಕಾವ್ಯಶ್ರೀ, ಜನರನ್ನು ರಂಜಿಸಿದ್ದರು. ಕಪ್ಪೆ, ಕ್ಯಾಮರಾ ಜೊತೆಗೆ ಮಾತನಾಡುತ್ತಲೇ 70 ದಿನಗಳ ಕಾಲ ಮನೆಯಲ್ಲಿ ಇದ್ದರು. ಚನ್ನಪಟ್ಟಣ ಕನ್ನಡವನ್ನು ಮಾತನಾಡುತ್ತಾ ಜನರ ಗಮನವನ್ನು ಸೆಳೆದಿದ್ದರು. ಮಂಗಳ ಗೌರಿ ಧಾರಾವಾಹಿಯಲ್ಲಿ ಸದಾ ಅಳುತ್ತಾ ಕಷ್ಟಗಳ ಮೇಲೆ ಕಷ್ಟವನ್ನು ಅನುಭವಿಸುತ್ತಾ ಅಳುಮುಂಜಿ ಪಾತ್ರದಲ್ಲಿ ನಟಿಸಿದ್ದರು.

Written Update on actress kavyashree gowda

ಪಿಂಕ್ ಸೀರೆಯಲ್ಲಿ ಮಧು ಮಗಳಂತೆ ಕಂಡ ನಟಿ

ಮಂಗಳ ಗೌರಿ ಧಾರಾವಾಹಿಯಲ್ಲಿ ಅಳುಮುಂಜಿ ಪಾತ್ರವನ್ನು ನಿರ್ವಹಿಸಿದ್ದ ಕಾವ್ಯ ಅವರಿಗೆ ರಗಡ್ ಪಾತ್ರಗಳೇ ಇಷ್ಟವಂತೆ. ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ಕಾವ್ಯಶ್ರೀ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಸದಾ ರೀಲ್ಸ್ ಗಳನ್ನು ಮಾಡುತ್ತಾ ಇಲ್ಲವೇ ಫೋಟೋಶೂಟ್ ಗಳನ್ನು ಮಾಡಿಸುತ್ತಿರುತ್ತಾರೆ. ಇನ್ನು ತಮ್ಮದೇ ಯೂಟ್ಯೂಬ್ ಚಾನೆಲ್ ನಲ್ಲಿ ಕೊಂಚ ಆಕ್ಟೀವ್ ಆಗಿದ್ದು, ಆಗಾಗ ವೀಡಿಯೋಗಳನ್ನು ಅಪ್ ಲೋಡ್ ಮಾಡುತ್ತಿರುತ್ತಾರೆ. ಸದ್ಯ ಪಿಂಕ್ ಸ್ಯಾರಿಯಲ್ಲಿ ಮದುಮಗಳಂತೆ ರೆಡಿಯಾಗಿರುವ ಫೋಟೋ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಆದರೆ, ತಮ್ಮ ಸಂಬಂಧಿಕರ ಮದುವೆಗೆ ರೆಡಿಯಾದ ಕಾವ್ಯಾ ಅವರು ಈ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.

More from Filmibeat

English summary
mangala gowri maduve actress kavyashree gowda new photoshoot.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X