Lakashmi Hedge ; ಎಲ್ಲರ ಮನಗೆದ್ದಿರುವ ನಟಿ ಲಕ್ಷ್ಮೀ ಹೆಗಡೆ ಕಿರುತೆರೆಗೆ ಬಂದಿದ್ದು ಹೇಗೆ ಗೊತ್ತಾ..?
ಲಕ್ಷ್ಮೀ ನಿವಾಸ ಧಾರಾವಾಹಿಯನ್ನು ವೀಕ್ಷಕರು ಮೆಚ್ಚಿಕೊಂಡಿದ್ದಾರೆ. ತಮ್ಮ ಮನೆಗಳಲ್ಲಿರುವ ಸದಸ್ಯರಿಗೂ ಲಕ್ಷ್ಮೀ ನಿವಾಸದಲ್ಲಿ ಬರುವ ಪಾತ್ರಗಳು ಹೊಂದಿಕೊಳ್ಳುವಂತಿವೆ ಎಂಬುದು ಹಲವರ ನಂಬಿಕೆ. ಅಪ್ಪ-ಅಮ್ಮ ಮನೆಗೆ ಎಂದು ಕಷ್ಟಪಡುತ್ತಿದ್ದರೆ, ಮಕ್ಕಳಾದವರು ತಮ್ಮ ಸ್ವಾರ್ಥಕ್ಕೆ ಮನೆಯವರಿಗೆ ಮೋಸ ಮಾಡುತ್ತಿರುವುದು. ಮಂಗಳ ರೀತಿಯ ಹೆಣ್ಣು ಮಕ್ಕಳು ನಿಜ ಜೀವನದಲ್ಲೂ ಇದ್ದಾರೆ ಎಂಬುದಂತೂ ಕಟು ಸತ್ಯ.ಇನ್ನು ವೀಣಾ ರೀತಿಯ ಸೊಸೆಯಂದಿರು ಕೂಡ ಗಂಡನ ಮನೆಯಲ್ಲಿ ಅತ್ತೆ-ಮಾವನ ಜೊತೆಗೆ ಹೊಂದಿಕೊಂಡು ಬಾಳುವವರನ್ನು ನಾವೆಲ್ಲಾ ಕಂಡಿದ್ದೇವೆ.
ವೀಣಾ ಪಾತ್ರವನ್ನು ಮೆಚ್ಚಿರುವ ವೀಕ್ಷಕರು
ಸದ್ಯ ವೀಣಾ ಪಾತ್ರವನ್ನು ವೀಕ್ಷಕರು ಮೆಚ್ಚಿಕೊಂಡಿದ್ದು, ಪ್ರತಿ ಮನೆಯಲ್ಲೂ ಇಂತಹ ಸೊಸೆ ಇರಬೇಕು ಎಂದು ಬಯಸಿದ್ದಾರೆ. ಸುಳ್ಳು ಹೇಳಲು ಹೆದರುವ, ಮೋಸ ಮಾಡಲು ಬಾರದ ವೀಣಾಳ ಆಸೆ ಒಂದೇ ಒಂದು, ದಿನ ನಿತ್ಯ ತನಗೆ ಇಷ್ಟ ಬಂದ ಅಡುಗೆ ಮಾಡಿ ಬಡಿಸಬೇಕು ಎಂಬುದು., ಆದರೆ, ಕೂಡು ಕುಟುಂಬದಲ್ಲಿರುವುದರಿಂದ ಅತ್ತೆ ಹೇಳಿದ ತಿಂಡಿ, ಅಡುಗೆ ಮಾಡುವುದು ವೀಣಾಳಲ್ಲಿರುವ ಬೇಸರ. ಆದರೂ ಕೂಡ ಮನೆಗೆ ಹೊಂದಿಕೊಂಡು ಸಂಸಾರವನ್ನು ತೂಗಿಸಲು ಅತ್ತೆಗೆ ಸಹಾಯ ಮಾಡುತ್ತಿದ್ದಾಳೆ. ಈಗ ವೀಣಾ ಪಾತ್ರ ಎಲ್ಲರಿಗೂ ಇಷ್ಟವಾಗಿದ್ದು, ಈ ಪಾತ್ರವನ್ನು ನಿಭಾಯಿಸುತ್ತಿರುವ ನಟಿ ಲಕ್ಷ್ಮೀ ಹೆಗಡೆ ಕಿರುತೆರೆಗೆ ಹೊಸಬರೇನೂ ಅಲ್ಲ.

ಹಾಡಲು ಬಂದ ನಟಿ ಲಕ್ಷ್ಮೀ ಹೆಗಡೆ
ನಟಿ ಲಕ್ಷ್ಮೀ ಹೆಗಡೆ ಅವರು ಹಲವು ವರ್ಷಗಳಿಂದ ಬಣ್ಣದ ಲೋಕದಲ್ಲಿ ಸಕ್ರಿಯರಾಗಿದ್ದಾರೆ. ಸದ್ಯ ಅವರಿಗೆ ಲಕ್ಷ್ಮೀ ನಿವಾಸ ಧಾರಾವಾಹಿ ಬ್ರೇಕ್ ನೀಡಿದ್ದು, ವೀಣಾ ಪಾತ್ರ ಎಲ್ಲರ ಮನಸ್ಸಿನಾಳಕ್ಕೆ ಇಳಿದಿದೆ. ಡಿಗ್ರಿ ಓದಿರುವ ಲಕ್ಷ್ಮೀ ಅವರು ಶಿರಸಿಯಿಂದ ಬೆಂಗಳೂರಿಗೆ ಬಂದ ಕಾರಣವೇ ಗಾಯಕಿಯಾಗಬೇಕು ಎಂಬ ಕನಸನ್ನು ಹೊತ್ತುಕೊಂಡು. ಆದರೆ, ನಟಿಯಾಗಿ ಉಳಿದಿರುವ ಲಕ್ಷ್ಮೀ ಅವರು ಈಗಾಗಳೇ ಸಾಕಷ್ಟು ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ನಡೆಸಿಕೊಡುತ್ತಿದ್ದ ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ಮೂಲಕ ವೀಣಾ ಅವರು ಮೊದಲ ಬಾರಿಗೆ ಕ್ಯಾಮಾರವನ್ನು ಎದುರಿಸಿದ್ದರು.
ಗಾಯಕಿಯಾಗಲು ಬಂದು ನಟಿಯಾದ ಕಥೆ
ಗಾಯಕಿ ಆಗದಿದ್ದರೂ ಕೂಡ ಅದೇ ವೇದಿಕೆಯಲ್ಲೇ ಹೊಸ ಧಾರಾವಾಹಿ ಒಂದಕ್ಕೆ ಆಯ್ಕೆಯಾಗಿದ್ದರು. ಕಾರಣಾಂತರಗಳಿಂದ ಆ ಧಾರಾವಾಹಿ ಪ್ರಸಾರ ಕಾಣಲಿಲ್ಲ. ಬಳಿಕ ಯಜ್ಞಕುಂಡ ಧಾರಾವಾಹಿ ಮೂಲಕ ಕಿರುತೆರೆಯಲ್ಲಿ ಕಾಣಿಸಿಕೊಂಡರು. ಇದಾದ ಬಳಿಕ ಬ್ಯಾಕ್ ಟು ಬ್ಯಾಕ್ ಸೀರಿಯಲ್ ಗಳಲ್ಲಿ ನಟಿ ಲಕ್ಷ್ಮೀ ಅವರು ನಟಿಸಿದ್ದಾರೆ. ನಟಿಯಾಗಿದ್ದೇ ತಡ ಹಾಡುವುದನ್ನು ಲಕ್ಷ್ಮೀ ಅವರು ಮರೆತೇ ಬಿಟ್ಟರಂತೆ. ನಿತ್ಯ ಶೂಟಿಂಗ್ ನಲ್ಲಿ ಬ್ಯುಸಿಯಾದ ಲಕ್ಷ್ಮೀ ಅವರು ಹಾಡುವ ಆಸೆಯನ್ನು ಕೈ ಬಿಟ್ಟರಂತೆ. ಇನ್ನು ಪೋಷಕ ಪಾತ್ರಗಳಲ್ಲಿ ಹೆಚ್ಚು ಹೆಚ್ಚಾಗಿ ಕಾಣಿಸಿಕೊಂಡ ಲಕ್ಷ್ಮೀ ಅವರನ್ನು ಅಭಿಮಾನಿಗಳು ಎಲ್ಲೇ ನೋಡಿದರೂ ಪಾತ್ರದ ಮೂಲಕವೇ ಗುರುತಿಸುತ್ತಾರೆ. ಅದು ನನಗೆ ಖುಷಿ ಕೊಡುತ್ತದೆ ಎಂದು ಹೇಳುತ್ತಾರೆ.

ಲಕ್ಷ್ಮೀ ಅವರ ಧಾರಾವಾಹಿ ಹಾಗೂ ಸಿನಿಮಾಗಳು
ಇನ್ನು ನಟಿ ಲಕ್ಷ್ಮೀ ಅವರು ವಕೀಲರನ್ನು ವಿವಾಹವಾಗಿದ್ದು, ಇವರ ಅತ್ತೆ-ಮಾವ, ತಂದೆ-ತಾಯಿ ಎಲ್ಲರೂ ನಟನೆಗೆ ಪ್ರೋತ್ಸಾಹ ನೀಡುತ್ತಾರಂತೆ. ದುರ್ಗಾ, ಗಿರಿಜಾ ಕಲ್ಯಾಣ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಗಿರಿಜಾ ಕಲ್ಯಾಣ ಧಾರಾವಾಹಿಯಲ್ಲಿ ಲಕ್ಷ್ಮೀ ಅವರು ನೆಗೆಟಿವ್ ರೋಲ್ ಗೆ ಬಣ್ಣ ಹಚ್ಚಿದ್ದರು. ಸರಸಮ್ಮನ ಸಮಾಧಿ, ಕುರುನಾಡು, ಜೊತೆಗಾತಿ, ರಾಮ್, ಯಾರೇಕೂಗಾಡಲಿ, ಮಿ ಗರಗಸ, A+, ಕೃಷ್ಣನ್ ಲವ್ ಸ್ಟೋರಿ, ಟ್ಯಾಬ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.


Click it and Unblock the Notifications











