ಮದುವೆಯಾದ ಬಳಿಕ ಆಕ್ಟಿಂಗ್‌ಗೆ ಗುಡ್ ಬೈ ಹೇಳಿದ ಚೆಲುವೆಯರು ಇವರು..!
ಕನ್ನಡ ಕಿರುತೆರೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ನಟ-ನಟಿಯರು ಇದ್ದಾರೆ. ಹಲವು ವರ್ಷಗಳಿಂದ ನಟ-ನಟಿಯರು ಬಣ್ಣದ ಲೋಕದಲ್ಲಿ ಸಕ್ರಿಯರಾಗಿದ್ದಾರೆ. ಕೆಲವರು ಆಗಾಗ ಬ್ರೇಕ್ ಪಡೆದು ಮತ್ತೆ ಮತ್ತೆ ಕಮ್ ಬ್ಯಾಕ್ ಮಾಡುತ್ತಾ ಇರುತ್ತಾರೆ. ಆದರೆ, ಎಲ್ಲೋ ಕೆಲವರು ನಟಿಯರು ಮಾತ್ರವೇ ಮದುವೆಯಾದ ಬಳಿಕ ಕಂಪ್ಲೀಟ್ ಆಗಿ ನಟನೆಯನ್ನು ಬಿಟ್ಟು ಬಿಡುತ್ತಾರೆ. ಕನ್ನಡ ಕಿರುತೆರೆಯಲ್ಲಿ ಹಲವು ನಟಿಯರು ಮದುವೆಗೂ ಮೊದಲು ನಟಿಸಿ ಮದುವೆಯಾದ ಬಳಿಕ ಈಗಾಗಲೇ ಬಣ್ಣದ ಲೋಕಕ್ಕೆ ಗುಡ್ ಬೈ ಹೇಳಿದ್ದಾರೆ.
ನಟನೆಗೆ ಗುಡ್ ಬೈ ಹೇಳಿದ ನಟಿ ಕಾವ್ಯಾ ಗೌಡ
2021ರ ಡಿಸೆಂಬರ್ 1 ರಂದು ನಟಿ ಕಾವ್ಯಾ ಗೌಡ ಅವರು ಸೋಮಶೇಖರ್ ಎಂಬುವರ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಯ ಬಳಿಕ ಕಾವ್ಯಾ ಅವರು ನಟನೆಯಿಂದ ದೂರ ಉಳಿದಿದ್ದಾರೆ. ಕಾವ್ಯಾ ಅವರು ಕಂಪ್ಲೀಟ್ ಆಗಿ ಫ್ಯಾಮಿಲಿಗೆ ಸಮಯ ಕೊಟ್ಟಿದ್ದಾರೆ. ಮಗಳು ಸಿಯಾಳ ಬೆಳವಣಿಗೆಯನ್ನು ನೋಡುತ್ತಾ ಕಾಲ ಕಳೆಯುತ್ತಿರುವ ಕಾವ್ಯಾ ಅವರು ಸದ್ಯ ಪ್ಯಾರಿಸ್ ನಲ್ಲಿ ಫ್ಯಾಮಿಲಿ ಜೊತೆಗೆ ಎಂಜಾಯ್ ಮಾಡುತ್ತಿದ್ದಾರೆ. ಬಣ್ಣದ ಲೋಕದಲ್ಲಿ ಇಲ್ಲದೇ ಹೋದರೂ ನಟಿ ಕಾವ್ಯಾ ಗೌಡ ಅವರ ಅಭಿಮಾನಿಗಳ ಸಂಖ್ಯೆ ಕಡಿಮೆಯಂತೂ ಆಗಿಲ್ಲ. ಅವರ ದಿನ ನಿತ್ಯದ ದಿನಚರಿ ಬಗ್ಗೆ ಅಭಿಮಾನಿಗಳು ಬಹಳ ಕುತೂಹಲಗೊಂಡಿರುತ್ತಾರೆ.

ಮದುವೆಯಾಗಿ ನಟನೆ ಬಿಟ್ಟ ನಟಿ ಶಿಲ್ಪಾ ಅಯ್ಯರ್
ಜೊತೆ ಜೊತೆಯಲಿ ಧಾರಾವಾಹಿಯ ಮಾನ್ಸಿ ಪಾತ್ರದ ಮೂಲಕ ಫೇಮಸ್ ಆದ ನಟಿ ಶಿಲ್ಪಾ ಅಯ್ಯರ್ ಅವರು ಮಾರ್ಚ್ 10 2023 ರಂದು ಸಪ್ತಪದಿ ತುಳಿದಿದ್ದಾರೆ. ಸಚಿನ್ ವಿಶ್ವನಾಥ್ ಎಂಬುವರ ಜೊತೆ ನಟಿ ಶಿಲ್ಪಾ ಅಯ್ಯರ್ ಅವರು ದಾಂಪತ್ಯ ಜೀವನವನ್ನು ಪ್ರಾರಂಭಿಸಿದ್ದಾರೆ. ಮದುವೆಯಾದ ಬಳಿಕ ಧಾರಾವಾಹಿಯೀಮದ ದೂರ ಉಳಿದಿದ್ದಾರೆ. ಆದರೆ, ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದು, ಅಲ್ಲಲ್ಲಿ ಕೆಲ ಕಾರ್ಯಕ್ರಮಗಳನ್ನು ಹೋಸ್ಟ್ ಮಾಡುತ್ತಿರುತ್ತಾರೆ. ಮಹಾದೇವಿ, ಬ್ರಹ್ಮಗಂಟು, ನಾಗಮಂಡಲ, ಕಸ್ತೂರಿ ನಿವಾಸ, ಜೊತೆ ಜೊತೆಯಲಿ, ಒಲವಿನ ನಿಲ್ದಾಣ ಮತ್ತು ಜನನಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.
ಮದುವೆಯಾಗಿ ಫಾರಿನ್ ನಲ್ಲಿ ಸೆಟಲ್ ಆದ ನಟಿ
ನಟಿ ಕೌಸ್ತುಭಾ ಮಣಿ ಅವರು ಕಳೆದ ವರ್ಷ 2024ರ ಏಪ್ರಿಲ್ 26ರಂದು ವಿವಾಹವಾದರು. ನನ್ನರಸಿ ರಾಧೆ ಮೂಲಕ ಫೇಮಸ್ ಆಗಿರುವ ನಟಿ ಕೌಸ್ತುಭಾ ಮಣಿ ಅವರು ಗೌರಿಶಂಕರ್ ಎಂಬ ಧಾರಾವಾಹಿಯಲ್ಲೂ ಕಾಣಿಸಿಕೊಂಡಿದ್ದರು. ಅಷ್ಟೇ ಅಲ್ಲದೇ ಕೆಲ ಸಿನಿಮಾಗಳಲ್ಲೂ ನಟಿಸಿದ್ದಾರೆ. ರಾಮಾಚಾರಿ 2.0 ಹಾಗೂ 45 ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ಪತಿಯ ಜೊತೆಗೆ ಫಾರಿನ್ ನಲ್ಲಿ ಸೆಟಲ್ ಆಗಿದ್ದಾರೆ. ಇನ್ನು ನಟಿ ಕಾವೇರಿ ಬಾಗಲಕೋಟೆ ಅವರು ಕೂಡ ಕಳೆದ ವರ್ಷ ಫೆಬ್ರವರಿ 25 ರಂದು ಮದುವೆಯಾದರು. ಸೈನಿಕನ ಜೊತೆಗೆ ಸಪ್ತಪದಿ ತುಳದಿ ಕಾವೇರಿ ಬಾಗಲಕೋಟೆ ಅವರು ಗಿಣಿರಾಮ ಧಾರಾವಾಹಿ ಮೂಲಕ ಫೇಮಸ್ ಆಗಿದ್ದರು. ಸದ್ಯ ಕಾವೇರಿ ಬಾಗಲಕೋಟೆ ಅವರು ತಮ್ಮದೇ ಆದ ಸ್ವಂತ ಬಿಸಿನೆಸ್ ಅನ್ನು ನಡೆಸಿಕೊಂಡು ಹೋಗುತ್ತಿದ್ದು, ಮೇಕಪ್ ಆರ್ಟಿಸ್ಟ್ ಕೋರ್ಸ್ ಗಳನ್ನು ಮಾಡುತ್ತಿದ್ದಾರೆ.

ಸಿಂಪಲ್ ಮದುವೆಯಾಗಿ ನಟನೆ ಬಿಟ್ಟ ನಟಿಯರು
ನಟಿ ಸಿರಿ ಅವರು ಬಹಳ ವರ್ಷಗಳಿಂದ ಕನ್ನಡ ಕಿರುತೆರೆಯಲ್ಲಿದ್ದಾರೆ. ಬಿಗ್ ಬಾಸ್ ಸೀಸನ್ 10ರಲ್ಲಿ ಭಾಗವಹಿಸಿದ ಸಿರಿ ಅವರು ಕಳೆದ ವರ್ಷ ಜೂನ್ ತಿಂಗಳಿನಲ್ಲಿ ಮದುವೆಯಾದರು. ಮದುವೆಯ ಬಳಿಕ ಪತಿಯ ಜೊತೆಗೆ ಸುತ್ತಾಡುತ್ತಿದ್ದು ನಟನೆಗೆ ಬ್ರೇಕ್ ಕೊಟ್ಟಿದ್ದಾರೆ. ಇನ್ನು ಗಿಣಿರಾಮ, ಪಾಪ ಪಾಂಡು ಖ್ಯಾತಿಯ ನಟಿ ನಯನಾ ನಾಗರಾಜ್ ಅವರು ಕೂಡ 2024ರ ಜೂನ್ ನಲ್ಲಿ ಮದುವೆಯಾಗಿದ್ದು, ನಟನೆಯಿಂದ ದೂರವೇ ಉಳಿದಿದ್ದಾರೆ.


Click it and Unblock the Notifications











