Mahakumbh Mela 2025 ; ಮಹಾ ಕುಂಭದಲ್ಲಿ ಮಿಂದೆದ್ದ ಡ್ರಾಮಾ ಜೂನಿಯರ್ಸ್ ಮಹತಿ..!
ಕಳೆದ ಒಂದು ತಿಂಗಳಿನಿಂದ ಇಡೀ ಭಾರತ ಮಹಾ ಕುಂಭಮೇಳ ಧಾರ್ಮಿಕ ಉತ್ಸವದಲ್ಲಿ ಬ್ಯುಸಿಯಾಗಿದೆ ಎಂದರೆ ತಪ್ಪಾಗಲಾರದು. ಪ್ರತೀ ಮೂರು ವರ್ಷಕ್ಕೆ ಒಮ್ಮೆ ಕುಂಭಮೇಳ ನಡೆಯುತ್ತಲೇ ಇರುತ್ತದೆ. ಆದರೆ, ಮಹಾ ಕುಂಭಮೇಳ ನಡೆಯುವುದು 144 ವರ್ಷಗಳಿಗೆ ಒಮ್ಮೆ ಮಾತ್ರವೇ ನಡೆಯುತ್ತದೆ. ಇಂತಹ ಮಹಾಕುಂಭಮೇಳ 2025 ರಲ್ಲಿ ನಡೆಯುತ್ತಿದ್ದು, ಭಾರತ ಮಾತ್ರವಲ್ಲದೇ ದೇಶ-ವಿದೇಶಗಳಿಂದಲೂ ಭಕ್ತರು ಆಗಮಿಸುತ್ತಿದ್ದಾರೆ. ನಾಗಾಸಾಧುಗಳು ಹಾಗೂ ಅಘೋರಿಗಳು ಒಂದೆಡೆ ಸೇರಿ ಪುಣ್ಯಸ್ನಾನಗೈಯ್ಯುತ್ತಿದ್ದಾರೆ.
ಮಹಾ ಕುಂಭಮೇಳದಲ್ಲಿ ಕಡಿಮೆಯಾದ ಭಕ್ತರು
ಇಂತಹ ಮಹಾ ಸಮಾಗಮದಲ್ಲಿ ಪ್ರತಿಯೊಬ್ಬರೂ ಪುಣ್ಯಸ್ನಾವನ್ನು ಮಾಡಿ ಪಾಪಗಳನ್ನು ಕಳೆದುಕೊಳ್ಳುತ್ತಿದ್ದಾರೆ. ನಿತ್ಯ ಕೋಟಿಗೂ ಅಧಿಕ ಮಂದಿ ಪುಣ್ಯಸ್ನಾನ ಮಾಡುತ್ತಿದ್ದು, ಕಳೆದ ಒಂದು ತಿಂಗಳಿನಿಂದ ಭಕ್ತರ ಸಂಖ್ಯೆಯಲ್ಲಿ ಕಡಿಮೆಯೇ ಆಗಿಲ್ಲ. ರಾಜಕಾರಣಿಗಳು, ಸೆಲಬ್ರಿಟಿಗಳು, ಸ್ಟಾರ್ ನಟರು ಎಲ್ಲರೂ ಈ ಧಾರ್ಮಿಕ ಉತ್ಸವದಲ್ಲಿ ಭಾಗಿಯಗಿದ್ದಾರೆ. ಧಾರಾವಾಹಿಯ ನಟ-ನಟಿಯರು ಕೂಡ ಕುಂಭಮೇಳಕ್ಕೆ ತೆರಳಿ ಪುಣ್ಯಸ್ನಾನವನ್ನು ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಸೀತಾರಾಮ ಧಾರಾವಾಹಿಯ ತಂಡವೇ ಕುಂಭಮೇಳಕ್ಕೆ ತೆರಳಿ ಅಲ್ಲಿ ಶೂಟಿಂಗ್ ಸಹ ಮಾಡಿ ಬಂದಿದೆ. ಇನ್ನು ಕಿರುತೆರೆ ನಟಿಯರಾದ ಪವಿತ್ರಾ ಜಯರಾಮ್, ಸಾನ್ಯಾ ಐಯ್ಯರ್, ಕಾರುಣ್ಯ ಸೇರಿದಂತೆ ಹಲವರು ಭೇಟಿ ಕೊಟ್ಟಿದ್ದಾರೆ. ಇದೀಗ ನಟಿ ಮಹಿತಾ ವೈಷ್ಣವಿ ಭಟ್ ಕೂಡ ಮಹಾಶಿವರಾತ್ರಿಯ ದಿನವೇ ಪುಣ್ಯಸ್ನಾನ ಮಾಡಿ ಸಂತಸಪಟ್ಟಿದ್ದಾರೆ.

ಪುಣ್ಯ ಸ್ನಾನ ಮಾಡಿದ ನಟಿ ಮಹತಿ
ಹೌದು, ನಟಿ ಮಹಿತಾ ಅವರು ಪ್ರಯಾಗ್ ರಾಜ್ ಗೆ ಭೇಟಿ ಕೊಟ್ಟಿದ್ದು, ಪುಣ್ಯಸ್ನಾನವನ್ನು ಮಾಡಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ನಟಿ ಮಹತಿ ಅವರು ಮಹಾ ಕುಂಭದಲ್ಲಿ ದಿವ್ಯ ಸ್ನಾನ ಮಾಡಿದ ಅದ್ಭುತ ಕ್ಷಣ.. ಸಾರ್ಥಕತೆಯ ಅನುಭವ ಎಂದು ಕ್ಯಾಪ್ಶನ್ ನೀಡಿದ್ದಾರೆ. ಇನ್ನು ಸದ್ಯ ನಟಿ ಮಹತಿ ಅವರು ಸ್ಟಾರ್ ಸುವರ್ಣಾದಲ್ಲಿ ಪ್ರಸಾರವಾಗುತ್ತಿರುವ ಉಧೋ ಉಧೋ ರೇಣುಕಾ ಯಲ್ಲಮ್ಮ ಧಾರಾವಾಹಿಯಲ್ಲಿ ನಾಯಕಿ ರೇಣುಕೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ನಾಯಕಿ ಪಾತ್ರಕ್ಕಾಗಿ ಮಹತಿ ಅವರು ಬಿಲ್ ವಿದ್ಯೆ, ಕುದುರೆ ಸವಾರಿ ಸೇರಿದಂತೆ ಪಾತ್ರಕ್ಕೆ ಬೇಕಾದ ತಯಾರಿಗಳನ್ನು ಮಾಡಿಕೊಂಡಿದ್ದಾರೆ.
ರಿಯಾಲಿಟಿ ಶೋ ಹಾಗೂ ಧಾರಾವಾಹಿಗಳಲ್ಲಿ ನಟನೆ
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಮಕ್ಕಳ ರಿಯಾಲಿಟಿ ಶೋ ಡ್ರಾಮಾ ಜ್ಯೂನಿಯರ್ಸ್ ಸೀಸನ್ 1 ರಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ಮಹತಿ ಅವರು ಬಳಿ ಬಾಲ ನಟಿಯಾಗಿ ಕಿರುತೆರೆಯಲ್ಲಿ ಸಕ್ರಿಯರಾಗಿದ್ದರು. ಸಿಂಧೂರ, ಗಟ್ಟಿಮೇಳ ಧಾರಾವಾಹಿಯಲ್ಲಿ ಅಭಿನಯಿಸಿ ಜನರ ಮೆಚ್ಚುಗೆಯನ್ನು ಕೂಡ ಪಡೆದರು. ತಮ್ಮ ಅಮೋಘ ನಟನೆಯ ಮೂಲಕ ಮೋಡಿ ಮಾಡಿದ ಮಹತಿ ಬಹು ಕಡಿಮೆ ಅವಧಿಯಲ್ಲಿಯೇ ಸೀರಿಯಲ್ ಪ್ರಿಯರ ಮನೆ ಮನ ಸೆಳೆದರು.
ಸಕಲ ಕಲಾವಲ್ಲಭೆ ಈ ಮಹತಿ
ಮೂಲತಃ ಮಲೆನಾಡಿನವರಾದ ಮಹತಿ ವೈಷ್ಣವಿ ಭಟ್ ಅವರು ಧಾರಾವಾಹಿಗಳು ಮಾತ್ರವಲ್ಲದೇ, ಸಿನಿಮಾಗಳಲ್ಲೂ ನಟಿಸಿದ್ದಾರೆ. ನಾವು ಎಳೆಯರು ನಾವು ಗೆಳೆಯರು, ತತ್ಸಮ ತದ್ಭವ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇನ್ನು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಛೋಟಾ ರಿಪೋರ್ಟರ್ ಎನ್ನುವ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದರು. ನಟಿ ಮಹತಿ ಓದಿನ ಜೊತೆಗೆ ನಟನೆಯನ್ನೂ ಬ್ಯಾಲೆನ್ಸ್ ಮಾಡುತ್ತಿದ್ದಾರೆ. ನಟನೆ ಮಾಡಿಕೊಂಡೇ ಓದಿನಲ್ಲೂ ಟಾಪರ್ ಆಗಿರುವ ಮಹತಿ ಅವರು ಎಸ್ಎಸ್ಎಲ್ಸಿ ನಲ್ಲಿ 95% ಗಳಿಸಿದ್ದರು. ಕಳೆದ ವರ್ಷ ನಡೆದ ಪಿಯುಸಿ ಪರೀಕ್ಷೆಯಲ್ಲೂ 98% ಗಳಿಸಿದ್ದರು. ನಟನೆಯ ಹೊರತಾಗಿ ಮಹತಿ ಅವರು ಸಂಗೀತಗಾರ್ತಿಯೂ ಆಗಿದ್ದಾರೆ. ಸಣ್ಣ ವಯಸ್ಸಿನಲ್ಲಿಯೇ ನವರಸ ಕಲಾವಿದೆ, ಅಭಿನಯ ಕಿಶೋರಿ, ಅಭಿನಯ ರಾಣಿ ಪ್ರಶಸ್ತಿಯನ್ನು ಪಡೆದಿದ್ದಾರೆ.


Click it and Unblock the Notifications











