ಪ್ರಿಯಕರನನ್ನು ಬಿಸಿಲು ಎಂದು ಕರೆದ ನಟಿ ಮಲೈಕಾ ವಾಸುಪಾಲ್: ಯಾರದು ಗೊತ್ತಾ..??
ಕರುನಾಡಿನ ಅದೆಷ್ಟೋ ಕುಡಿಗಳು, ಬಾಲಿವುಡ್, ಹಾಲಿವುಡ್, ಟಾಲಿವುಡ್ ಹಾಗೂ ಖಾಲಿವುಡ್ ಗಳಲ್ಲಿ ಹೆಸರು ಮಾಡಿದ್ದಾರೆ. ಆ ಲಿಸ್ಟ್ ಕಳೆದ ವರ್ಷ ಹೊಸಬರೂಒಬ್ಬರು ಸೇರಿಕೊಂಡಿದ್ದಾರೆ.
ಅದು ಬೇರೆ ಯಾರೂ ಅಲ್ಲ ಚಟ ಪಟ ಅಂತ ಮಾತನಾಡುತ್ತಾ, ಎಡವಟ್ಟುಗಳಿಂದಲೇ ಕನ್ನಡ ವೀಕ್ಷಕರನ್ನು ರಂಜಿಸಿದ ಉದಯೋನ್ಮುಖ ನಟಿ ಮಲೈಕಾ ಟಿ ವಾಸುಪಾಲ್. ಮಲೈಕಾ ಅವರು ಝೈದ್ ಖಾನ್ ನಟನೆಯ ಕಲ್ಟ್ ಚಿತ್ರದ ಹೀರೋಯಿನ್ ಆಗಿದ್ದಾರೆ. ಈ ವಿಚಾರ ಎಲ್ಲರಿಗೂ ಗೊತ್ತಿದೆ. ಕನ್ನಡ ಕಿರುತೆರೆಯಿಂದ ಸಿನಿಮಾ ನಟಿಯಾದ ಕೆಲವೇ ದಿನಗಳಲ್ಲಿ ಬಾಲಿವುಡ್ ಗೆ ಹಾರಿದ ಮಲೈಕಾ ಅವರು ಹೊಸ ಸುದ್ದಿಯೊಂದನ್ನು ಹೇಳಲು ಮುಂದಾಗಿದ್ದಾರೆ.

ಪ್ರಿಯಕರನಿಗಾಗಿ ಸಾಲು ಬರೆದ ಹುಡುಗಿ
ಅದೇನೆಂದರೆ ನಟಿ ಮಲೈಕಾ ಟಿ ವಾಸುಪಾಲ್ ಅವರು ತಮ್ಮ ಮನದ ಪ್ರಿಯಕರನಿಗೆ ಬಿಸಿಲು ಎಂದು ಹೆಸರಿಟ್ಟಿದ್ದಾರೆ. ಹೌದು ನಟಿ ಮಲೈಕಾ ಅವರು ತಮ್ಮ ಪ್ರೇಮಿಗೆ ಸಾಲೊಂದನ್ನು ಬರೆದಿದ್ದಾರೆ. ತಮ್ಮ ಸಂಗಾತಿಯ ದಾರಿಯನ್ನೇ ಎದುರು ನೋಡುತ್ತಿದ್ದಾರೆ. ನಟಿ ಮಲೈಕಾ ಟಿ ವಾಸುಪಾಲ್ ಅವರು ತಮ್ಮ ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಫೋಟೋಗಳನ್ನು ಅಪ್ ಲೋಡ್ ಮಾಡಿದ್ದಾರೆ. ಇದಕ್ಕೆ ಮನದಾ ಮರೆಯ ಕಿಟಕಿಯಿಂದ ನುಸುಳಿ ಬಂದ ಬಿಸಿಲು ನೀನೇ ಎಂದು ಪೋಸ್ಟ್ ಮಾಡಿರುವ ಮಲೈಕಾ ಅವರು ತಮ್ಮ ಪ್ರಿಯಕರನಿಗೆ ಹೇಳಿದ ಹಾಗೆಯೇ ಇದೆ. ಆದರೆ, ಫೋಟೋಶೂಟ್ ಮಾಡಿಸಿರುವ ನಟಿ ತಮ್ಮ ಫೋಟೋಗಳನ್ನು ಫೇವರಿಟ್ ನಟ ರಾಕಿ ಭಾಯ್ ಯಶ್ ಅವರ ಹಾಡನ್ನು ಬ್ಯಾಕ್ ಗ್ರೌಂಡ್‌ನಲ್ಲಿ ಲಿಂಕ್ ಮಾಡಿದ್ದಾರೆ. ತಮ್ಮಿಷ್ಟದ ಸಾಲುಗಳನ್ನು ಬರೆದುಕೊಂಡಿದ್ದಾರೆ.
ಮುದ್ದಾಗಿ ಕಾಣುತ್ತಿರುವ ನಟಿ ಮಲೈಕಾ
ನಟಿ ಮಾಡಿಸಿರುವ ಫೋಟೋಶೂಟ್ ಕೂಡ ಯಾರದೋ ದಾರಿಗಾಗಿ ಕಾಯುತ್ತಿರುವಂತೆ ಇದ್ದು, ಸಾಲುಗಳು ಅದಕ್ಕೆ ಹೊಂದಿಕೊಂಡಂತಿದೆ. ಪಿಂಕ್ ಮತ್ತು ಗ್ರೀನ್ ಕಾಂಬಿನೇಷನ್ ಸೀರೆಯಲ್ಲಿ ಮಲೈಕಾ ಅವರು ಬಹಳ ಮುದ್ದಾಗಿ ಕಾಣುತ್ತಿದ್ದಾರೆ. ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಮಲೈಕಾ ಸೋಶಿಯಲ್ ಮೀಡಿಯಾದಲ್ಲಿ ಪ್ರತಿಯೊಂದು ವಿಚಾರವನ್ನೂ ಅಪ್ ಲೋಡ್ ಮಾಡುತ್ತಿರುತ್ತಾರೆ. ಇನ್ನು ನಟಿ ಮಲೈಕಾ ವಾಸುಪಾಲ್ ಅವರು ಸೈಲೆಂಟ್ ಆಗಿಯೇ ಬಣ್ಣದ ಲೋಕದಲ್ಲಿ ಸಕ್ಸಸ್ ಫುಲ್ ನಟಿಯಾಗುವ ದಾರಿಯಲ್ಲಿ ಸಾಗಿದ್ದಾರೆ.
ಕನಸು ನನಸು ಮಾಡಿಕೊಂಡ ಬೆಡಗಿ
ಮಲೈಕಾ ಅವರು ಬಣ್ಣದ ಲೋಕಕ್ಕೆ ಬಂದ ಹಾದಿಯೇ ಡಿಫರೆಂಟ್ ಆಗಿದೆ. ದಾವಣಗೆರೆಯಲ್ಲಿ ಹುಟ್ಟಿದ ಮಲೈಕಾ ಅವರಿಗೆ ನಟಿಯಾಗುವ ಕನಸು ಕಾಣುತ್ತಿದ್ದರು. ಆದರೆ, ಅವರ ಪೋಷಕರು ಮಗಳು ಓದಿದರೆ ಸಾಕು ಎನ್ನುತ್ತಿದ್ದರು. ಕನಸು ನನಸು ಮಾಡಿಕೊಳ್ಳುವ ಮುನ್ನ ನಟಿ ಮಲೈಕಾ ಅವರು ಹೆತ್ತವರಿಗಾಗಿ ಸಿವಿಲ್ ಎಂಜಿನಿಯರಿಂಗ್ ಓದಿ ಮುಗಿಸಿದರು. ಓದು ಮುಗಿಯುತ್ತಿದ್ದಂತೆಯೇ ಚಂದದ ಪ್ರೊಫೈಲ್ ರೆಡಿ ಮಾಡಿ ಸಾಕಷ್ಟು ಸೀರಿಯಲ್ ತಂಡಗಳನ್ನು ಸಂಪರ್ಕಿಸಿ, ಆಡಿಷನ್ ಗಳನ್ನು ಕೊಟ್ಟಿದ್ದೇ ಕೊಟ್ಟಿದ್ದು. ಪ್ರತೀ ವಾರ ಸಮಯ ಸಿಕ್ಕಾಗಲೆಲ್ಲಾ ದಾವಣಗೆರೆಯಿಂದ ಬೆಂಗಳೂರಿಗೆ ಹಾರಿ ಬರುತ್ತಿದ್ದರು. ಹಿಟ್ಲರ್ ಕಲ್ಯಾಣ ಧಾರಾವಾಹಿಗೆ ಸೆಲೆಕ್ಟ್ ಆಗೇ ಬಿಟ್ಟರು.
ಗೆಲುವಿನ ಹಾದಿಯಲ್ಲಿ ನಟಿ ಮಲೈಕಾ
ಸೀರಿಯಲ್ ನಲ್ಲಿ ನಟಿಸುವಾಗಲೇ ಉಪಾಧ್ಯಕ್ಷ ಸಿನಿಮಾ ಹೀರೋಯಿನ್ ಆಗಿ ಎಲ್ಲರ ಮನ ಗೆದ್ದರು. ಬಳಿಕ ವಿದ್ಯಾಪತಿ ಸಿನಿಮಾಗೆ ಬಣ್ಣ ಹಚ್ಚಿದರು. ಅದಾಗಲೇ ಈಗ ನಟಿ ಝೈದ್ ಖಾನ್ ನಟನೆಯ ಕಲ್ಟ್ ಚಿತ್ರದ ಹೀರೋಯಿನ್ ಆಗಿದ್ದಾರೆ. ಸ್ಯಾಂಡಲ್ ವುಡ್ ನಿಂದ ಬಾಲಿವುಡ್ ಗೆ ಹಾರಿದ್ದಾರೆ. ಮುಂದೆ ಹಾಲಿವುಡ್ ಗೆ ಹಾರಿದರೂ ಆಶ್ಚರ್ಯವೇನಿಲ್ಲ. ನಮ್ಮ ಕನ್ನಡದ ನಟಿಯ ಈ ದಾರಿ ಕಲರ್ ಫುಲ್ ಆಗಿಯೇ ಮುಂದುವರೆಯಲಿ ಎಂದು ಶುಭ ಹಾರೈಸೋಣ.


Click it and Unblock the Notifications











