Mayuri Kyatari ; ಗುಲಾಬಿ ಬಣ್ಣದಲ್ಲಿ ಮಿಂಚಿದ ಕಿರುತೆರೆಯ ಅಶ್ವಿನಿ ನಕ್ಷತ್ರ..!

By ಪ್ರಿಯಾ ದೊರೆ

ಇಂದಿಗೂ ಜನ ಅಶ್ವಿನಿ ನಕ್ಷತ್ರ ಧಾರಾವಾಹಿಯನ್ನು ನೆನಪಿಸಿಕೊಳ್ಳುತ್ತಾರೆ. ನಟ ಜೆಕೆ ಹಾಗೂ ನಟಿ ಮಯೂರಿ ಅಭಿನಯದ ಈ ಧಾರಾವಾಹಿ ಅದ್ಭುತವಾಗಿ ಮೂಡಿ ಬಂದಿತ್ತು. ಅಶ್ವಿನಿ ನಕ್ಷತ್ರ ಧಾರಾವಾಹಿ ಮೂಲಕ ಮಯೂರಿ ಅವರಿಗೆ ಸಿನಿಮಾಗಳಲ್ಲಿ ನಟಿಸುವ ಅವಕಾಶ ಕೂಡ ಒದಗಿ ಬಂತು. ನಟಿ ಮಯೂರಿ ಕ್ಯಾತರಿ ಅವರು ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಲಾಕ್ ಡೌನ್ ಸಂದರ್ಭದಲ್ಲಿ ತಮ್ಮ ಬಹಳ ಕಾಲದ ಸ್ನೇಹಿತನನ್ನು ಮದುವೆಯಾದರು. ಬಳಿಕ ಮುದ್ದಾದ ಮಗುವಿಗೆ ಜನ್ಮ ಕೊಟ್ಟಿದ್ದು, ಕಿರುತೆರೆಯಿಂದ ದೂರವೇ ಉಳಿದಿದ್ದಾರೆ.

ಲವ್ ಮ್ಯಾರೇಜ್ ಆಗಿರುವ ನಟಿ

ನಟಿ ಮಯೂರಿ ಕ್ಯಾತರಿ ಅವರು ಸುಮಾರು 10 ವರ್ಷಗಳಿಂದ ಅರುಣ್ ಎಂಬುವರನ್ನು ಪ್ರೀತಿಸುತ್ತಿದ್ದರು. ಅರುಣ್ ಅವರು ಮಯೂರಿ ಅವರ ನಟನೆಗೆ ಏಣಿಯಾದವರಂತೆ. ಮಯೂರಿ ಅವರು ನಟಿಯಾಗುವ ಕನಸು ಕಾಣುತ್ತಿದ್ದರಂತೆ. ಇದಕ್ಕೆ ಅರುಣ್ ಅವರದ್ದು ಫುಲ್ ಸಪೋರ್ಟ್ ಇತ್ತಂತೆ. ಸಿನಿಮಾ ರಂಗಕ್ಕೆ ಮಯೂರಿ ಎಂಟ್ರಿ ಕೊಟ್ಟಾಗ ಅರುಣ್ ಸಪೋರ್ಟ್ ಮಾಡುತ್ತಿದ್ದರಂತೆ. ಇವರಿಬ್ಬರು ಲಾಕ್ ಡೌನ್ ಸಂದರ್ಭದಲ್ಲಿ ಹಸೆಮಣೆ ಏರಿದರು. 2022 ರಲ್ಲಿ ಮಯೂರಿ ಅವರು ತಮ್ಮ ಚೊಚ್ಚಲ ಮಗುವಿಗೆ ಜನ್ಮ ನೀಡಿದರು. ಗಂಡು ಮಗುವಿನ ತಾಯಿಯಾಗಿರುವ ಮಯೂರಿ ಅವರು ಈಗ ಫುಲ್ ಬ್ಯುಸಿಯಾಗಿದ್ದಾರೆ. ಮಗನಿಗೆ ಆರವ್ ಎಂದು ಹೆಸರಿಟ್ಟಿದ್ದು, ಸದಾ ಮಗನ ಜೊತೆಗೆ ಇನ್ ಸ್ಟಾಗ್ರಾಂನಲ್ಲಿ ರೀಲ್ಸ್ ಮಾಡುತ್ತಿರುತ್ತಾರೆ.

written update on Actress Mayuri Kyatari

ಪಂಚ ಭಾಷೆ ಕಲಿತಿರುವ ಹುಡುಗಿ

ನಟಿ ಮಯೂರಿ ಕ್ಯಾತರಿ ಅವರಿಗೆ ಐದು ಭಾಷೆಗಳು ಬರುತ್ತದೆಯಂತೆ. ಹೆಚ್ಚು ಕನ್ನಡ ಮಾತನಾಡುವ ಮಯೂರಿ ಅವರಿಗೆ ಹಿಂದೆ ಹಾಗೂ ಮರಾಠಿ ಭಾಷೆಯೂ ಗೊತ್ತಂತೆ. ಸುಲಲಿತವಾಗಿ ಹಿಂದಿ ಹಾಗೂ ಮರಾಠಿಯನ್ನು ಮಾತನಾಡುತ್ತಾರೆ. ಇನ್ನು ಇಂಗ್ಲೀಷ್ ನಲ್ಲೂ ಮಯೂರಿ ಮಾತನಾಡುತ್ತಾರೆ. ಇನ್ನು ಜರ್ಮನಿ ಭಾಷೆಯನ್ನೂ ಕಲಿತಿರುವ ಮಯೂರಿ ಅವರು ಜರ್ಮನಿಯಲ್ಲಿ ಮೂರು ತಿಂಗಳಿಗೂ ಹೆಚ್ಚು ಕಾಲ ವಾಸವಿದ್ದರಂತೆ. ಅದೂ ಕೂಡ ಅವರ ಅಕ್ಕನ ಬಾಣಂತನಕ್ಕಾಗಿ ಜರ್ಮನಿಗೆ ಹೋಗಿದ್ದರಂತೆ. ಇನ್ನು ಮಯೂರಿ ಅವರಿಗೆ ತೆಲುಗು ಸ್ವಲ್ಪ ಬರುತ್ತದೆಯಂತೆ. ಮ್ಯಾನೇಜ್ ಮಾಡುವಷ್ಟು ತೆಲುಗು ಮಾತನಾಡುತ್ತಾರಂತೆ.

ಅಶ್ವಿನಿ ನಕ್ಷತ್ರ ಬೆಡಗಿಯ ಸಿನಿಮಾಗಳು

ಮಯೂರಿ ಕ್ಯಾತರಿ ಅವರು ಅಶ್ವಿನಿ ನಕ್ಷತ್ರ ಧಾರಾವಾಹಿಯ ಬಳಿಕ ಕೃಷ್ಣ ಲೀಲಾ ಸಿನಿಮಾದಲ್ಲಿ ನಟಿಸುವ ಮೂಲಕ ಮೊದಲು ಹಿರಿತೆರೆಗೆ ಪಾದಾರ್ಪಣೆ ಮಾಡಿದರು. ಈ ಚಿತ್ರದ ಬಳಿಕ ಇಷ್ಟಕಾಮ್ಯ, ಮೌನಂ, ಅನಾದ್ಯಂತ, ರುಸ್ತುಂ, ನನ್ನ ಪ್ರಕಾರ, ನಟರಾಜ ಸರ್ವೀಸ್, ಪೊಗರು ಸಿನಿಮಾಗಳಲ್ಲಿ ನಟಿಸಿದ್ದಾರೆ. 2022 ರಲ್ಲಿ ಅಂಧೆಯಾಗಿ ವೀಲ್ ಚೇರ್ ರೋಮಿಯೋ ಎಂಬ ಸಿನಿಮಾದಲ್ಲಿ ನಟಿಸಿದರು. ಈ ಚಿತ್ರದ ಬಳಿಕ ಮಯೂರಿ ಅವರು ಹಿರಿತೆರೆ ಹಾಗೂ ಕಿರುತೆರೆ ಎರಡರಿಂದಲೂ ಕಣ್ಮರೆಯಾದರು. ಆದರೆ, ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಆಕ್ಟೀವ್ ಆಗಿದ್ದರು.

ಗುಲಾಬಿ ಉಡುಗೆಯಲ್ಲಿ ಮಾಟಗಾತಿ ಮಯೂರಿ

ಕಳೆದ ವರ್ಷ ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ ಧಾರಾವಾಹಿಯಲ್ಲಿ ಮಾಟಗಾತಿ ಪಾತ್ರದಲ್ಲಿ ಕಾಣಿಸಿಕೊಂಡರು. ಇದೀಗ ಮಯೂರಿ ಅವರು ಗುಲಾಬಿ ಬಣ್ಣದ ಉಡುಗೆಯಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ. ಕ್ಯೂಟ್ ಕ್ಯೂಟ್ ಆಗಿ ಕಾಣುವ ಮಯೂರಿ ಅವರು ಒಂದು ಮಗುವಿನ ತಾಯಿ ಎನ್ನುವುದಕ್ಕಿಂತಲೂ ಈಗಷ್ಟೇ ಶಾಲೆ ಮುಗಿಸಿ ಕಾಲೇಜಿಗೆ ಹೋಗುತ್ತಿರುವ ಸ್ವೀಟ್ ಸಿಕ್ಸ್ಟೀನ್ ಆಗಿ ಕಾಣುತ್ತಾರೆ. ಮಯೂರಿ ಅವರ ಬ್ಯೂಟಿಗೆ ಅಭಿಮಾನಿಗಳು ಶಾಕ್ ಆಗಿದ್ದು, ನಿಮ್ಮ ತರ ಸಣ್ಣ ಕಾಣಲು ಏನು ಮಾಡಬೇಕು ಎಂದು ಟಿಪ್ಸ್ ಕೇಳುತ್ತಿದ್ದಾರೆ.

More from Filmibeat

English summary
Actress Mayuri Kyatari serials and movies. New photoshoot
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X