Nanna Devru ; ಕಿರುತೆರೆಗೆ ಮರಳಿದ ಕನ್ನಡಿಗರ ನೆಚ್ಚಿನ ಅಶ್ವಿನಿ, ನನ್ನ ದೇವ್ರು ಎಂದ ಮಯೂರಿ ಕ್ಯಾತರಿ..!
ನಟಿ ಮಯೂರಿ ಕ್ಯಾತರಿ ಎಂದು ಹೆಸರು ಹೇಳಿದ ಕೂಡಲೇ ಇಂದಿಗೂ ವೀಕ್ಷಕರು ನೆನಪು ಮಾಡಿಕೊಳ್ಳುವುದು ಅಶ್ವಿನಿ ನಕ್ಷತ್ರ ಧಾರಾವಾಹಿ. ಈಗ ಮತ್ತೆ ನಟಿ ಮಯೂರಿ ಅವರು ಕಿರುತೆರೆಗೆ ರಿ-ಎಂಟ್ರಿ ಕೊಟ್ಟಿದ್ದು, ಹೊಸ ಕಥೆ, ಹೊಸ ಪಾತ್ರದೊಂದಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಅದೂ ಕೂಡ ಕಲರ್ಸ್ ಕನ್ನಡ ವಾಹಿನಿಯಲ್ಲಿ. ಇಂದಿಗೂ ಜನ ಅಶ್ವಿನಿ ನಕ್ಷತ್ರ ಧಾರಾವಾಹಿಯನ್ನು ನೆನಪಿಸಿಕೊಳ್ಳುತ್ತಾರೆ. ನಟ ಜೆಕೆ ಹಾಗೂ ನಟಿ ಮಯೂರಿ ಅಭಿನಯದ ಈ ಧಾರಾವಾಹಿ ಅದ್ಭುತವಾಗಿ ಮೂಡಿ ಬಂದಿತ್ತು.
ನಟಿ ಮಯೂರಿ ಬಣ್ಣದ ಲೋಕದ ಪಯಣ
ಅಶ್ವಿನಿ ನಕ್ಷತ್ರ ಧಾರಾವಾಹಿ ಮೂಲಕ ಮಯೂರಿ ಅವರಿಗೆ ಸಿನಿಮಾಗಳಲ್ಲಿ ನಟಿಸುವ ಅವಕಾಶ ಕೂಡ ಒದಗಿ ಬಂತು. ನಟಿ ಮಯೂರಿ ಕ್ಯಾತರಿ ಅವರು ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಅಶ್ವಿನಿ ನಕ್ಷತ್ರ ಧಾರಾವಾಹಿಯ ಬಳಿಕ ಕೃಷ್ಣ ಲೀಲಾ ಸಿನಿಮಾದಲ್ಲಿ ನಟಿಸುವ ಮೂಲಕ ಮೊದಲು ಹಿರಿತೆರೆಗೆ ಪಾದಾರ್ಪಣೆ ಮಾಡಿದರು. ಈ ಚಿತ್ರದ ಬಳಿಕ ಇಷ್ಟಕಾಮ್ಯ, ಮೌನಂ, ಅನಾದ್ಯಂತ, ರುಸ್ತುಂ, ನನ್ನ ಪ್ರಕಾರ, ನಟರಾಜ ಸರ್ವೀಸ್, ಪೊಗರು ಸಿನಿಮಾಗಳಲ್ಲಿ ನಟಿಸಿದ್ದಾರೆ. 2022 ರಲ್ಲಿ ಅಂಧೆಯಾಗಿ ವೀಲ್ ಚೇರ್ ರೋಮಿಯೋ ಎಂಬ ಸಿನಿಮಾದಲ್ಲಿ ನಟಿಸಿದರು. ಈ ಚಿತ್ರದ ಬಳಿಕ ಮಯೂರಿ ಅವರು ಹಿರಿತೆರೆ ಹಾಗೂ ಕಿರುತೆರೆ ಎರಡರಿಂದಲೂ ಕಣ್ಮರೆಯಾದರು. ಆದರೆ, ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಆಕ್ಟೀವ್ ಆಗಿದ್ದರು. ಇತ್ತೀಚೆಗೆ ಪುನಃ ಕಿರುತೆರೆಗೆ ಬರುವ ಮನಸ್ಸು ಮಾಡಿದರು.

ನನ್ನ ದೇವ್ರು ಎನ್ನುತ್ತಿರುವ ಹಳೆ ಅಶ್ವಿನಿ
ಕಳೆದ ವರ್ಷ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾದ ಊಧೋ ಊಧೋ ಶ್ರೀ ರೇಣುಕಾ ಯಲ್ಲಮ್ಮ ಧಾರಾವಾಹಿಯಲ್ಲಿ ಮಾಟಗಾತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ಡರು. ಇದೀಗ ಮಯೂರಿ ಅವರು ಮತ್ತೊಂದು ಹೊಸ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ. ಕಲರ್ಸ್ ಕನ್ನಡವಾಹಿನಿಯಲ್ಲಿ ಇದರ ಪ್ರೊಮೋ ಪ್ರಸಾರವಾಗಿದೆ. ನನ್ನ ದೇವ್ರು ಎಂಬ ಧಾರಾವಾಹಿಯಲ್ಲಿ ನಟಿ ಮಯೂರಿ ಅವರು ಕಾಣಿಸಿಕೊಂಡಿದ್ದು, ನಾಯಕಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಈ ಧಾರಾವಾಹಿಯಲ್ಲಿ ಕನ್ನಡದ ಖ್ಯಾತ ಹಾಸ್ಯ ನಟರಾದ ನರಸಿಂಹ ರಾಜು ಅವರ ಮೊಮ್ಮಗನೇ ಇದರಲ್ಲಿ ನಾಯಕರಾಗಿದ್ದಾರೆ. ಅವಿನಾಶ್ ನಾಯಕರಾಗಿ ನಟಿಸುತ್ತಿದ್ದು, ಇವರು ಕೂಡ ಬಣ್ಣದ ಲೋಕದಲ್ಲಿ ಲಾಸ್ಟ್ ಬಸ್, ಮದುವೆ ಮನೆ ಎಂಬ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ
ಹಳ್ಳಿ ಹುಡುಗಿ ಅವತಾರದಲ್ಲಿ ನಟಿ ಮಯೂರಿ
ಇನ್ನು ನಟಿ ಮಯೂರಿ ಅವರು ಮದುವೆಯಾಗಿ ಮೂರು ವರ್ಷದ ಕಂದಮ್ಮನ ತಾಯಿಯಾಗಿದ್ದಾರೆ. ಹಾಗಿದ್ದರೂ ಕೂಡ ಇನ್ನೂ 20 ರ ಹರೆಯದ ಹುಡುಗಿಯಂತೆ ಕಂಗೊಳಿಸುವ ಮಯೂರಿ ಅವರು ನಾಯಕಿಯಾಗಿ ನನ್ನ ದೇವ್ರು ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ಅವಿನಾಶ್ ಅವರು ಸಚ್ಚಿದಾನಂದ ಪಾತ್ರವನ್ನು ನಿರ್ವಹಿಸುತ್ತಿದ್ದು, ಊರಿನ ಜನರ ಸೇವೆ ಮಾಡುವ ಜನನಾಯಕರಾಗಿದ್ದಾರೆ. ಇನ್ನು ಮಯೂರಿ ಅವರು ಹಳ್ಳಿ ಹುಡುಗಿಯಾಗಿದ್ದು, ಸಚ್ಚಿದಾನಂದನೇ ತನ್ನ ದೇವರು ಎಂದು ಆರಾಧಿಸುವ ಮುಗ್ಧ ಹುಡುಗಿ ಆಗಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಬಗ್ಗೆ ಹೆಚ್ಚಿನ ಮಾಹಿತಿ ನೀಡದ ವಾಹಿನಿ, ಪ್ರೋಮೋ ಮಾತ್ರ ಹರಿಬಿಟ್ಟಿದ್ದಾರೆ. ಈ ಧಾರಾವಾಹಿ ಬಗ್ಗೆ ವೀಕ್ಷಕರು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.

ನಟಿಯಾಗುವ ಆಸೆ ಹೊಂದಿದ್ದ ಮಯೂರಿ
ಇನ್ನು ನಟಿ ಮಯೂರಿ ಅವರು ನಟಿಯಾಗುವ ಆಸೆಯನ್ನು ಚಿಕ್ಕವಯಸ್ಸಿನಿಂದ ಕಂಡವರು. ಬಹಳ ಕಾಲದ ಸ್ನೇಹಿತನನ್ನು ಪ್ರೀತಿಸಿದ ಮಯೂರಿ ಅವರು ಬಣ್ಣದ ಲೋಕಕ್ಕೆ ಬರಲು ಅವರೇ ಪ್ರಿಯಕರನ ಸಪೋರ್ಟ್ ಹೆಚ್ಚಿತ್ತಂತೆ. ಅಶ್ವಿನಿ ನಕ್ಷತ್ರ ಧಾರಾವಾಹಿ ಬಳಿಕ ಕೆಲ ಸಿನಿಮಾಗಳಲ್ಲಿ ನಟಿಸಿರುವ ಮಯೂರಿ ಅವರು ಬಿಗ್ ಬಾಸ್ ನಲ್ಲೂ ಭಾಗವಹಿಸಿದ್ದರು. ಲಾಕ್ ಡೌನ್ ಸಂದರ್ಭದಲ್ಲಿ ಪ್ರಿಯಕರನೊಂದಿಗೆ ಸಪ್ತಪದಿ ತುಳಿದ ಇವರಿಗೆ ಮುದ್ದಾದ ಆರವ್ ಎಂಬ ಮಗುವಿದೆ.


Click it and Unblock the Notifications











