ವಿದೇಶದಲ್ಲಿ ಮಗನ ಹುಟ್ಟುಹಬ್ಬ ಆಚರಿಸಿದ ಮಯೂರಿ, ಗಂಡ ಎಲ್ಲಿ ಎಂದ ನೆಟ್ಟಿಗರು !
ಕಿರುತೆರೆಯಲ್ಲಿ ಒಂದೊಳ್ಳೆಯ ಅವಕಾಸಕ್ಕಾಗಿ ಕಾಯುತ್ತಿರುವ ನಟಿ ಮಯೂರಿ ಸದ್ಯ ಸಣ್ಣ-ಪುಟ್ಟ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇದೀಗ ಸಿಂಗಾಪುರದಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ನಟಿ ಮಯೂರಿ ಅವರು ಕಿರುತೆರೆಗೆ ಬಂದು ಬಹಳ ಕಾಲವೇ ಕಳೆದಿದೆ. ಆದರೆ, ಕೋವಿಡ್ ನಲ್ಲಿ ವಿವಾಹವಾದ ಮಯೂರಿ ಅವರು ತದ ನಂತರ ಕಿರುತೆರೆಯಿಂದ ಬ್ರೇಕ್ ಪಡೆದಿದ್ದರು. ಕೋವಿಡ್ ಮುಗಿಯುವ ವೇಳೆಗಾಗಲೇ ಮಡಿಲಲ್ಲಿ ಮಗುವನ್ನು ಆಡಿಸಲು ಶುರು ಮಾಡಿದ ಮಯೂರಿ ಅವರು ಸದ್ಯ ಕಿರುತೆರೆಗೆ ಮರಳು ಪ್ರಯತ್ನಿಸುತ್ತಿದ್ದಾರೆ.
ಫಾರಿನ್ ನಲ್ಲಿ ಮಗನ ಹುಟ್ಟುಹಬ್ಬ
ಈಗಾಗಲೇ ನಾಲ್ಕು ವರ್ಷದ ಮಗನಿರುವ ಮಯೂರಿ ಅವರನ್ನು ಇಂದಿಗೂ ಒಂದು ಮಗುವಿನ ತಾಯಿ ಎಂದ ಹೇಳುವುದು ಅಸಾಧ್ಯವಾಗಿದೆ. ಮುದ್ದಾಗಿ ಚಿಕ್ಕ ಹುಡುಗಿಯಂತೆ ಕಾಣುವ ಮಯೂರಿ ಅವರು ಸದ್ಯ ಮಗನ ಹುಟ್ಟುಹಬ್ಬಕ್ಕೆಂದು ಸಿಂಗಾಪುರಕ್ಕೆ ತೆರಳಿದ್ದಾರೆ. ನಟಿ ಮಯೂರಿ ಕ್ಯಾತರಿ ಅವರ ಮಗನ ಹೆಸರು ಆರವ್. ಆರವ್ ಗೆ ಈಗಾಗಲೇ ನಾಲ್ಕು ವರ್ಷ ತುಂಬಿದ್ದು, ಇದೀಗ ಐದನೇ ವರ್ಷಕ್ಕೆ ಕಾಲಿಟ್ಟಿದ್ದಾನೆ. ಮಗನ ಹುಟ್ಟುಹಬ್ಬವನ್ನು ಆಚರಿಸಲೆಂದು ಮೈಯೂರಿ ಅವರು ಹೊರ ದೇಶಕ್ಕೆ ತೆರಳಿ ಅಲ್ಲಿ ಮಗನೊಂದಿಗೆ ಎಂಜಾಯ್ ಮಾಡುತ್ತಿದ್ದಾರೆ. ಇದರ ವೀಡಿಯೋ ಮತ್ತು ಫೋಟೋಗಳನ್ನು ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಹಂಚಿಕೊಂಡಿದ್ದಾರೆ.

ಸಂಸಾರ , ನಟನೆ ಎರಡರಲ್ಲೂ ಮುಂದು
ಮದುವೆ, ಮಕ್ಕಳು ಎಂದು ಬ್ಯುಸಿಯಾಗಿದ್ದ ನಟಿ ಮೈಯೂರಿ ಅವರು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾದ ಊಧೋ ಊಧೋ ಶ್ರೀ ರೇಣುಕಾ ಯಲ್ಲಮ್ಮ ಧಾರಾವಾಹಿಯಲ್ಲಿ ಮಾಟಗಾತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ಡರು. ಕಳೆದ ವರ್ಷ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ನನ್ನ ದೇವ್ರು ಎಂಬ ಧಾರಾವಾಹಿಯಲ್ಲಿ ನಾಯಕಿ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ಈ ಧಾರಾವಾಹಿಯಲ್ಲಿ ಕನ್ನಡದ ಖ್ಯಾತ ಹಾಸ್ಯ ನಟರಾದ ನರಸಿಂಹ ರಾಜು ಅವರ ಮೊಮ್ಮಗ ಅವಿನಾಶ್ ನಾಯಕರಾಗಿ ಅಭಿನಯಿಸಿದ್ದರು. ಈ ಮೂಲಕ ನಟಿ ಮಯೂರಿ ಅವರು ಕಿರುತೆರೆಗೆ ಕಮ್ ಬ್ಯಾಕ್ ಮಾಡಿದರು.
ಹುಡುಗಿಯಂತೆ ಕಾಣುವ ಅಮ್ಮ ಮಯೂರಿ
ಇನ್ನು ನಟಿ ಮಯೂರಿ ಅವರು ಮದುವೆಯಾಗಿ ನಾಲ್ಕು ವರ್ಷದ ಕಂದಮ್ಮನ ತಾಯಿಯಾಗಿದ್ದಾರೆ. ಹಾಗಿದ್ದರೂ ಕೂಡ ಇನ್ನೂ 20 ರ ಹರೆಯದ ಹುಡುಗಿಯಂತೆ ಕಂಗೊಳಿಸುವ ಮಯೂರಿ ಅವರು ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದರು. ಇತ್ತೀಚೆಗೆ ಪುನಃ ಕಿರುತೆರೆಗೆ ಬರುವ ಮನಸ್ಸು ಮಾಡಿದರು. ಸದ್ಯ ಯಾವುದೇ ಶೂಟಿಂಗ್ ನ ತಲೆ ನೋವಿಲ್ಲದ ಮಯೂರಿ ಅವರು ಹೆಚ್ಚು ಸಮಯ ಮಗನ ಜೊತೆಗೆ ಕಳೆಯುತ್ತಾರೆ. ನಟಿ ದೀಪಿಕಾದಾಸ್ ಜೊತೆಗೆ ಒಳ್ಳೆಯ ಬಾಂಧವ್ಯವನ್ನು ಹೊಂದಿದ್ದಾರೆ. ಕಳೆದ ತಿಂಗಳಷ್ಟೇ ದೀಪಿಕಾ ದಾಸ್ ಅವರ ಜೊತೆಗೆ ದುಬೈಗೆ ಪ್ರವಾಸ ಕೈಗೊಂಡಿದ್ದರು. ಇನ್ನು ಆಗಾಗ ನಟಿ ಮಯೂರಿ ಅವರು ಹೊಸ ಹೊಸ ರೀತಿಯಲ್ಲಿ ಫೋಟೋಶೂಟ್ ಮಾಡಿಸುತ್ತಿರುತ್ತಾರೆ. ಇವನ್ನೆಲ್ಲಾ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

Click it and Unblock the Notifications