Megha Shenoy ; ಸುಧಾ ಪಾತ್ರವನ್ನು ಮೆಚ್ಚಿದ ಜನ : ಅಷ್ಟಕ್ಕೂ ಈ ನಟಿ ಯಾರು ಗೊತ್ತಾ..?

By ಪ್ರಿಯಾ ದೊರೆ

ಅಮೃತಧಾರೆ ಧಾರಾವಾಹಿಯಲ್ಲಿ ಹೊಸ ಎರಡು ಪಾತ್ರಗಳು ಒಂದೇ ಸಮಯಕ್ಕೆ ಎಂಟ್ರಿಕೊಟ್ಟಿವೆ. ಒಂದು ಮಾನ್ಯ ಸಹೋದರಿ ಪಾತ್ರ. ಮತ್ತೊಂದು ಪಾತ್ರ ಸುಧಾ ಎಂಬ ಬಡ ಕುಟುಂಬದ ಹುಡುಗಿ. ಅಷ್ಟಕ್ಕೂ ಸುಧಾ ಎಂಬಾಕೆ ಬಡವಳಾಗಿದ್ದರೂ ಕೂಡ, ಬಹಳ ಒಳ್ಳೆಯ ಗುಣಗಳನ್ನು ಹೊಂದಿದ್ದು, ನೋಡಿದ ಮೊದಲ ದಿನವೇ ಆನಂದ್ ಆಕೆಗೆ ತನ್ನ ಸ್ನೇಹಿತ ಗೌತಮ್ ಪಾರ್ಟ್ ಟು ಎಂದು ಹೇಳಿದ್ದಾನೆ. ತನ್ನ ಗೆಳೆಯನಂತೆಯೇ ಒಳ್ಳೆಯ ಮನಸ್ಸನ್ನು ಹೊಂದಿರುವ ಸುಧಾಳನ್ನೇ ತಮ್ಮ ಮನೆಗೆ ಕೆಲಸದವಳಾಗಿ ಬಂದರೆ ಚೆಂದಾ ಎಂದು ಹೇಳಿ ಒಳ್ಳೆಯ ಆಫರ್ ಕೊಟ್ಟು ಕೆಲಸಕ್ಕೆ ಸೇರಿಸಿಕೊಂಡಿದ್ದಾನೆ.


ಗೌತಮ್ ಗುಣವನ್ನೇ ಹೋಲುವ ಸುಧಾ

ಇನ್ನು ಸುಧಾಳ ಮನೆಯಲ್ಲಿ ತನ್ನ ತಾಯಿ ಹಾಗೂ ಒಂದು ಮಗುವಿದ್ದು, ಅವರಿಬ್ಬರಿಗೋಸ್ಕರ ಸುಧಾ ಅಲ್ಲಿ ಇಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾಳೆ. ಈ ಬಗ್ಗೆ ಆನಂದ್ ಗೆ ಗೊತ್ತಾಗಿದೆ. ಆದರೆ, ಎಲ್ಲರ ಗೆಸ್ಸಿಂಗ್ ಪ್ರಕಾರ ಸುಧಾ ಗೌತಮ್ ನ ಸ್ವಂತ ಸಹೋದರಿ. ಗೌತಮ್ ತನ್ನ ತಾಯಿ ಭಾಗ್ಯಳಿಗಾಗಿ ಹುಡುಕಾಟ ನಡೆಸುತ್ತಿದ್ದು, ಸುಧಾ ಮೂಲಕ ಗೌತಮ್ ಕುಟುಂಬ ಕಂಪ್ಲೀಟ್ ಆಗುತ್ತಾ ಎಂಬುದನ್ನು ಕಾದು ನೋಡಬೇಕಿದೆ. ಅಲ್ಲದೇ, ಈ ಮೂಲಕ ಶಕುಂತಲಾಳ ಬಣ್ಣ ಬಯಲಾಗಲಿದ್ದು, ಗೌತಮ್ ಯಾವ ನಿರ್ಧಾರವನ್ನು ತೆಗೆದುಕೊಳ್ಳುತ್ತಾನೆ ಎಂಬ ಕುತೂಹಲ ಮೂಡಿದೆ. ಇನ್ನು ಸುಧಾ ಪಾತ್ರವನ್ನು ನಿರ್ವಹಿಸುತ್ತಿರುವ ನಟಿ ಯಾರು ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

written update on Actress Megha Shenoy

ಕೊಂಕಣಿ ಸುಂದರಿಯ ಧಾರಾವಾಹಿಗಳು

ಸುಧಾ ನಿಜವಾದ ಹೆಸರು ಮೇಘಾ ಶೆಣೈ. ನಟಿ ಮೇಘಾ ಶೆಣೈ ಅವರಿಗೆ ಅಮೃತಧಾರೆ ಧಾರಾವಾಹಿ ಮೊದಲ ಸೀರಿಯಲ್ ಅಲ್ಲ. ಕೊಂಕಣಿ ಹುಡುಗಿಯಾಗಿರುವ ಮೇಘ ಶೆಣೈ ಅವರು ಮೊದಲು ಕಿರುತೆರೆಗೆ ಪಾದಾರ್ಪಣೆ ಮಾಡಿದ್ದು ಸುಂದರಿ ಧಾರಾವಾಹಿ ಮೂಲಕ. ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಸುಂದರಿ ಧಾರಾವಾಹಿ ಪ್ರಸಾರವಾಗುತ್ತಿತ್ತು. ಇದರಲ್ಲಿ ಮೇಘಾ ಶೆಣೈ ಅವರು ಖಳನಾಯಕಿಯಾಗಿ ಕಾಣಿಸಿಕೊಂಡಿದ್ದರು. ಬಳಿಕ ಕಾವೇರಿ ಧಾರಾವಾಹಿಯಲ್ಲಿ ಹಾಸಿನಿ ಪಾತ್ರಕ್ಕೆ ಜೀವ ತುಂಬಿದರು. ಇದರಲ್ಲೂ ಮೇಘಾ ಅವರು ಖಳನಾಯಕಿಯಾಗಿಯೇ ನಟಿಸಿದರು.

ಖಳನಾಯಕಿಯಾಗಿ ನಟಿಸಿದ ಮೇಘಾ

ತದನಂತರ ಮಹಾದೇವಿ ಧಾರಾವಾಹಿಯಲ್ಲಿ ಅಧಿಕಾರಿ ರಶ್ಮಿಯಾಗಿ ಮೋಡಿ ಮಾಡಿ ಮೊದಲ ಬಾರಿಗೆ ಪಾಸಿಟಿವ್ ಪಾತ್ರದ ಮೂಲಕ ಕಿರುತೆರೆ ವೀಕ್ಷಕರಿಗೆ ಹತ್ತಿರವಾಗಿದ್ದರು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಕ್ಷಾಬಂಧನ ಧಾರಾವಾಹಿಯಲ್ಲಿ ನಟಿಸಿದ ಮೇಘಾ ಶೆಣೈ ನಾಯಕ ಕಾರ್ತಿಕ್ ಪ್ರೇಯಸಿ ರಮ್ಯಾ ಆಗಿ ಕಾಣಿಸಿಕೊಂಡಿದ್ದರು. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಎರಡು ಧಾರಾವಾಹಿಗಳಲ್ಲಿ ನಟಿಸಿದರು. ಆರತಿಗೊಬ್ಬ ಕೀರ್ತಿಗೊಬ್ಬ ಧಾರಾವಾಹಿಯಲ್ಲಿ ರಗಡ್ ಲುಕ್ ನಲ್ಲಿ ಕೀರ್ತಿ ಆಗಿ ಬಣ್ಣ ಹಚ್ಚಿದರು. ಆಮೇಲೆ ಜೀವ ಹೂವಾಗಿದೆ ಧಾರಾವಾಹಿಯಲ್ಲಿ ನಾಯಕ ವಿಶಾಲ್ನನ್ನು ಪ್ರೀತಿಸುವ ಹುಡುಗಿಯಾಗಿ ಈಕೆ ಕಾಣಿಸಿಕೊಂಡರೂ ಖಳನಾಯಕಿ ಪಾತ್ರ ಇದಾಗಿತ್ತು.

ನಾಯಿಪ್ರಿಯೆ ಮೇಘಾ ಶೆಣೈ

ಕಳೆದ ವರ್ಷ ಬ್ರಾಹ್ಮಿನ್ಸ್ ಕೆಫೆ ಧಾರಾವಾಹಿಯಲ್ಲಿ ನಾಯಕಿ ಕರುಣಾ ಆಗಿ ಅಭಿನಯಿಸಿ ವೀಕ್ಷಕರ ಮನ ಸೆಳೆದರು. ಇನ್ನು ನಟಿ ಮೇಘಾ ಶೆಣೈ ಅವರು ನಾಯಿಪ್ರಿಯೆ. ತಮ್ಮ ಇನ್ ಸ್ಟಾಗ್ರಾಂ ಪೇಜ್ ನಲ್ಲಿ ತಾವು ಡಾಗ್ ಲವರ್ ಎಂದು ಬರೆದುಕೊಂಡಿದ್ದಾರೆ. ಅಲ್ಲದೇ, ಈಗ ಮಳೆ ಹೆಚ್ಚಾಗಿರುವುದರಿಂದ ರಸ್ತೆಗಳೆಲ್ಲವೂ ನದಿಯಂತಾಗಿದೆ. ಇದರಿಂದ ನಾಯಿಗಳು ಊಟವಿಲ್ಲದೇ ಪರದಾಡುತ್ತಿವೆ. ಶ್ವಾನಗಳಿಗೆ ಆಹಾರ ಕೊಟ್ಟು ನಿಮ್ಮ ಮನೆಯ ಕಾಂಪೌಂಡ್ ನಲ್ಲಿ ಜಾಗವಿದ್ದರೆ, ಶ್ವಾನಗಳು ಉಳಿದುಕೊಳ್ಳಲು ಅವಕಾಶ ಮಾಡಿಕೊಡಿ ಎಂದು ಸ್ಟೋರಿ ಹಾಕಿದ್ದಾರೆ. ಇದೀಗ ಸುಧಾ ಪಾತ್ರದ ಮೂಲಕ ನಟಿಸಿದ ಎರಡೇ ಎಪಿಸೋಡ್ ನಲ್ಲಿ ಜನರ ಮನೆ ಗೆದ್ದಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X