Megha Shenoy ; ಧಾರಾವಾಹಿಯಿಂದ ಬ್ರೇಕ್ ಪಡೆದ ನಟಿ ಮೇಘಾ ಶೆಣೈ,ಮಂಗಳೂರಿಗೆ ಬಂದಿದ್ಯಾಕೆ..?
ಮೊದಲೆಲ್ಲಾ ನಟಿ, ನಟ ಅಥವಾ ಕಿರುತೆರೆ ಕಲಾವಿದರೊಂದಿಗೆ ಮಾತನಾಡಬೇಕೆಂದರೆ ಅದು ಅಸಾಧ್ಯವೇ ಆಗಿತ್ತು. ಇನ್ನು ಅವರ ಬಗ್ಗೆ ಮಾಹಿತಿ ಪಡೆಯಲು ಇದ್ದಿದ್ದು, ಮ್ಯಾಗಝಿನ್ ಗಳು ಮಾತ್ರವೇ. ಸುಧಾ, ಪ್ರಿಯಾಂಕ, ಗೃಹಶೋಭಾ, ತರಂಗ ಸೇರಿದಂತೆ ಮ್ಯಾಗಝೈನ್ ಗಳ ಮೊರೆ ಹೋಗಬೇಕಿತ್ತು. ವಾರಕ್ಕೆ ಒಂದು ಅಥವಾ ಎರಡು ದಿನ ಕಿರುತೆರೆ ನಟಿಯರ ಬಗ್ಗೆ ಸಂದರ್ಶನಗಳು ಬರುತ್ತಿದ್ದವು.ಇಲ್ಲವೇ ಅವರ ವೈಕ್ತಿಕ ವಿಚಾರಗಳ ಬಗ್ಗೆ ಅಂಕಣಗಳನ್ನು ಬರೆಯಲಾಗುತ್ತಿತ್ತು. ಇವನ್ನು ಓದಿಯೇ ತಮ್ಮ ನೆಚ್ಚಿನ ಕಲಾವಿದರ ಬಗ್ಗೆ ಮಾಹಿತಿ ಪಡೆಯಲು ಅವಕಾಶಗಳಿದ್ದವು.
ಕಲಾವಿದರ ಬಗ್ಗೆ ನೇರ ಮಾಹಿತಿ ಪಡೆಯುವ ಕಾಲ
ನಿಧಾನವಾಗಿ ಇವೆಲ್ಲವೂ ಬದಲಾದವು. ನ್ಯೂಸ್ ಚಾನೆಲ್ ಗಳು ಶುರುವಾದ ಮೇಲೆ ಕಲಾವಿದರ ಸಂದರ್ಶನಗಳು ಹೆಚ್ಚಾಯಿತು.ಇನ್ನು ಕಳೆದ ಹದಿನೈದು ವರ್ಷದಲ್ಲಿ ಇನ್ನಷ್ಟು ಬದಲಾವಣೆಗಳಾಗಿದ್ದು, ಸೋಶೀಯಲ್ ಮೀಡಿಯಾ ನೇರವಾಗಿ ಅಭಿಮಾನಿಗಳ ಜೊತೆಗೆ ಕಲಾವಿದರು ಸಂಪರ್ಕ ಕಲ್ಪಿಸಲು ಅವಕಾಶ ಸಿಕ್ಕಿದೆ.

ಹೀಗಾಗಿಯೇ ಇಂದಿಗೂ ಮುಕ್ತ, ಮಾಯಾಮೃಗ, ಅನಾವರಣ, ಮಿಂಚು ನಂತಹ ಧಾರಾವಾಹಿಗಳಲ್ಲಿ ನಟಿಸಿದ ನಟಿಯರಿಗಿಂತಲೂ, ಲಕ್ಷ್ಮೀಬಾರಮ್ಮ, ಮನೆಯೊಂದು ಮೂರು ಬಾಗಿಲು ಸೇರಿದಂತೆ ಕಳೆದ ಹದಿನೈದು ವರ್ಷದಲ್ಲಿ ಪ್ರಸಾರವಾದ ಧಾರಾವಾಹಿಗಳ ಕಲಾವಿದರು ವೀಕ್ಷಕರಿಗೆ ಹೆಚ್ಚು ಪರಿಚಿತರಿದ್ದಾರೆ. ಅವರ ಬಗೆಗಿನ ಮಾಹಿತಿಗಳು ಕೂಡ ಸುಲಭವಾಗಿ ತಿಳಿಯುತ್ತದೆ. ಇನ್ನು ಇತ್ತೀಚೆಗಂತೂ ನಟಿಯರು ತಮ್ಮ ಬಿಡುವಿನ ಸಮಯದಲ್ಲಿ ಅಭಿಮಾನಿಗಳ ಪ್ರಶ್ನೆಗಳಿಗೆ ಸೋಶಿಯಲ್ ಮೀಡಿಯಾ ಮೂಲಕವೇ ಉತ್ತರಿಸುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಪ್ರತಿಯೊಬ್ಬರೂ ತಮ್ಮ ದಿನಚರಿಗಳ ಬಗ್ಗೆ ಹಂಚಿಕೊಳ್ಳುವುದರಿಂದ ಯಾರು ಯಾರು ಎಲ್ಲೆಲ್ಲಿದ್ದಾರೆ ಎಂದು ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ.
ಇಷ್ಟದ ದೇವಸ್ಥಾನದಲ್ಲಿ ನಟಿಯ ಫೋಟೋ
ಹಲವು ಧಾರಾವಾಹಿಗಳಲ್ಲಿ ನಟಿಸಿದ್ದರೂ ಕೂಡ ಅಮೃತಧಾರೆ ಮೂಲಕ ಇತ್ತೀಚೆಗೆ ಚಿರಪರಿಚಿತಳಾಗಿರುವ ನಟಿ ಮೇಘಾ ಶೆಣೈ ಅವರು, ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರಲು ಬಯಸುತ್ತಾರೆ. ಇದೀಗ ನಟಿ ಮೇಘಾ ಶೆಣೈ ಅವರು ಮಂಗಳೂರಿನಲ್ಲಿ ಕಾಣಿಸಿಕೊಂಡಿದ್ದು, ಇವರ್ಯಾಕೆ ಇಲ್ಲಿದ್ದಾರೆ ಎಂದು ಹಲವರು ತಮ್ಮನ್ನು ತಾವು ಪ್ರಶ್ನಿಸಿಕೊಂಡಿದ್ದರೆ, ಇನ್ನು ನಟಿ ಮೇಘಾ ಶೆಣೈ ಅವರು ಮಂಗಳೂರಿನಲ್ಲಿರುವ ಮಂಗಳದೇವಿ ತಾಯಿಯ ಆಶೀರ್ವಾದ ನಿಮ್ಮೆಲ್ಲರ ಮೇಲಿರಲಿ ಎಂದು ದೇವಸ್ಥಾನದ ಬಳಿ ಫೋಟೋ ತೆಗೆಸಿಕೊಂಡು ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ಕಂಡ ಅಭಿಮಾನಿಗಳು ಮೇಘಾ ಶೆಣಯ ಅವರು ಇಲ್ಲಿಗೆ ಯಾಕೆ ಹೋಗಿದ್ದಾರೆ ಎಂದು ಆಶ್ಚರ್ಯ ಪಟ್ಟಿದ್ದಾರೆ.
ಮಂಗಳೂರಿನಲ್ಲಿ ನಟಿ ಮೇಘಾ
ನಿಜ ಹೇಳಬೇಕು ಎಂದರೆ ಮೇಘಾ ಶೆಣೈ ಅವರು ಮೂಲತಃ ಮಂಗಳೂರಿನ ಹುಡುಗಿ. ಮಂಗಳೂರಿನಲ್ಲೇ ಹುಟ್ಟಿ ಬೆಳೆದ ಮೇಘಾ ಶೆಣೈ ಅವರು ನಟನೆಯ ಸಂಬಂಧ ಸದ್ಯ ಬೆಂಗಳುರಿನಲ್ಲಿ ನೆಲೆಸಿದ್ದಾರೆ. ಇನ್ನು ಮೇಘಾ ಶೆಣೈ ಅವರು ಕೊಂಕಣಿಯ ಬೆಡಗಿ. ಮನೆಯಲ್ಲಿ ಕೊಂಕಣಿ ಮಾತನಾಡುತ್ತಾರೆ. ಶೂಟಿಂಗ್ ನಿಂದ ಸಿಕ್ಕ ಚಿಕ್ಕ ಬ್ರೇಕ್ ಅನ್ನೂ ಸದುಪಯೋಗ ಪಡಿಸಿಕೊಂಡ ಮೇಘಾ ಅವರು ಮಂಗಳೂರಿಗೆ ಹೋಗಿ ಎರಡು ದಿನ ಕಾಲ ಕಳೆದು ಇಂದು ಬೆಂಗಳುರಿಗೆ ವಾಪಸ್ ಆಗಿದ್ದಾರೆ. ಹೀಗಾಗಿ ಮಂಗಳೂರಿನ ಏರ್ಪೋಟ್ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ತಮ್ಮಿಷ್ಟದ ದೇವಿಯ ಫೋಟೋ ಕೂಡ ಶೇರ್ ಮಾಡಿದ್ದಾರೆ.

Click it and Unblock the Notifications