ಹೊಸ ಸಾಹಸಕ್ಕೆ ಮುಂದಾದ ಸೀತಾ ರಾಮ ಧಾರಾವಾಹಿ ನಟಿ ಮೇಘನಾ ..!

By ಪ್ರಿಯಾ ದೊರೆ

ಕಿರುತೆರೆ ನಟಿಯರು ಸೋಶಿಯಲ್ ಮೀಡಿಯಾಗಳಲ್ಲಿ ಹೆಚ್ಚಾಗಿ ಆಕ್ಟೀವ್ ಆಗಿರುವುದು ಸಹಜವೇ. ಅದರಲ್ಲೂ ಇನ್ ಸ್ಟಾಗ್ರಾಂನಲ್ಲಂತೂ ಕೇಳೋದೇ ಬೇಡ. ಬೆಳಗ್ಗಿನಿಂದ ಸಂಜೆಯವರೆಗೂ ಇನ್ ಸ್ಟಾನಲ್ಲಿ ಪ್ರತಿ ಔಿಚಾರದ ಬಗ್ಗೆಯೂ ಅಪ್ ಡೇಟ್ ಕೊಡುತ್ತಲೇ ಇರುತ್ತಾರೆ. ಇನ್ನು ಇತ್ತೀಚೆಗೆ ಕಿರುತೆರೆ ನಟಿಯರು, ಫೇಸ್ ಬುಕ್, ಇನ್ ಸ್ಟಾಗ್ರಾಂ ಜೊತೆ ಜೊತೆಗೆ ಯೂಟ್ಯೂಬ್ ನಲ್ಲೂ ತಮ್ಮ ಅಕೌಂಟ್ ಗಳನ್ನು ಕ್ರಿಯೇಟ್ ಮಾಡಿದ್ದಾರೆ. ಎಲ್ಲರೂ ತಮ್ಮದೇ ಸ್ವಂತ ಯೂಟ್ಯೂಬ್ ಚಾನೆಲ್ ಗಳನ್ನು ಹೊಂದಿದ್ದು, ತಮ್ಮ ವ್ಯೆಯಕ್ತಿಕ ವಿಚಾರಗಳ ಬಗ್ಗೆ ಅವರೇ ಮಾಹಿತಿಯನ್ನೂ ನೀಡುತ್ತಿರುತ್ತಾರೆ.

ಕಿರುತೆರೆ ನಟಿಯರ ಹೊಸ ಚಾನೆಲ್

ಮೊದಲೆಲ್ಲಾ ನಟಿಯರು ನೀಡಿದ ಸಂದರ್ಶನದ ವೀಡಿಯೋಗಳು ಇಲ್ಲವೇ ಅಂಕಣಗಳು ಅಥವಾ ಯಾವುದಾದರೂ ಕಾಯಕ್ರಮದಲ್ಲಿ ಮಾತಿನಾಡಿದಾಗ ಅವರ ಮಾಹಿತಿಯನ್ನು ಪಡೆಯಬಹುದಿತ್ತು. ಈಗ ಹಾಗೆಲ್ಲಾ ಇಲ್ಲವೇ ಇಲ್ಲ. ಕಿರುತೆರೆ ನಟಿಯರು ತಮ್ಮದೇ ಯೂಟ್ಯೂಬ್ ಚಾನೆಲ್ ಗಳನ್ನು ಹೊಂದಿದ್ದು, ಅಭಿಮಾನಿಗಳ ಕುತೂಹಲಕ್ಕೆ ಅವರೇ ಆಗಾಗ ತೆರೆ ಎಳೆಯುತ್ತಿರುತ್ತಾರೆ. ತಮ್ಮ ಬಗ್ಗೆ ಮಾಹಿತಿ ನೀಡುವುದು, ಅಭಿಮಾನಿಗಳು ಕಮೆಂಟ್ ಸೆಕ್ಷನ್ ನಲ್ಲಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವುದು ಸೇರಿದಂತೆ ಎಲ್ಲಾ ಬಗೆಯ ಅಪ್ ಡೇಟ್ಸ್ ಗಳನ್ನು ನೀಡುವುದರಿಂದ ಅಭಿಮಾನಿಗಳಿಗೆ ನೇರವಾಗಿ ಮಾಹಿತಿ ಸಿಗುತ್ತದೆ.

written update on actress meghana shankarappa

ಯೂಟ್ಯೂಬ್ ಚಾನೆಲ್ ಒಡತಿಯಾದ ಮೇಘನಾ

ಈಗಾಗಲೇ ಕಿರುತೆರೆ ನಟಿಯರಾದ, ಕವಿತಾ ಗೌಡ, ಗೀತಾ ಭಾರತೀ ಭಟ್, ಅನುಪಮಾ ಗೌಡ, ವೈಷ್ಣವಿ ಗೌಡ, ನಿವೇದಿತಾ ಗೌಡ, ನಮ್ರತಾ ಗೌಡ, ಐಶ್ವರ್ಯ ಸಿಂದೋಗಿ, ಆಂಕರ್ ಅನುಶ್ರೀ, ಶೋಭಾ ಶೆಟ್ಟಿ, ಅಧಿತಿ ಪ್ರಭುದೇವ, ಅಶ್ವಿನಿ, ಪ್ರಿಯಾ ಜೆ ಆಚಾರ್ ಹೀಗೆ ಎಲ್ಲಾ ಕಿರುತೆರೆ ನಟಿಯರು ಕೂಡ ತಮ್ಮದೇ ಸ್ವಂತ ಯೂಟ್ಯೂಬ್ ಚಾನೆಲ್ ಗಳನ್ನು ತೆರೆದಿದ್ದಾರೆ. ಇದೀಗ ಈ ಸಾಲಿಗೆ ಸೀತಾರಾಮ ಧಾರಾವಾಹಿಯ ನಟಿ ಪ್ರಿಯಾ ಅಲಿಯಾಸ್ ಮೇಘನಾ ಶಂಕರಪ್ಪ ಕೂಡ ಸೇರಿಕೊಂಡಿದ್ದಾರೆ. ಹೌದು ಸೀತಾರಾಮ ಧಾರಾವಾಹಿಯಲ್ಲಿ ಚಟಪಟ ಅಂತ ಮಾತನಾಡುತ್ತಾ ಸದಾ ಹಸನ್ಮುಖಿ ಆಗಿರುವ ನಟಿ ಮೇಘನಾ ಶಂಕರಪ್ಪ ಅವರು ತಮ್ಮದೇ ಯೂಟ್ಯೂಬ್ ಚಾನೆಲ್ ತೆರೆದಿದ್ದಾರೆ.

ಅಭಿಮಾನಿಗಳ ಪ್ರಶ್ನೆಗೆ ಉತ್ತರ

ಮೇಘನಾ ಅವರು ತಮ್ಮ ಯುಟ್ಯೂಬ್ ಚಾನೆಲ್ ತೆರೆದು ಕೇವಲ ಆರು ದಿನಗಳಾಗಿವೆ ಅದಾಗಲೇ 930ಕ್ಕೂ ಅಧಿಕ ಸಬ್ ಸ್ಕ್ರೈಬರ್ಸ್ ಗಳನ್ನು ಹೊಂದಿದ್ದಾರೆ. ಇದರಲ್ಲಿನ ಆರು ವೀಡಿಯೋಗಳಿದ್ದು, ನಾಲ್ಕು ಶಾರ್ಟ್ಸ್ ಗಳನ್ನು ಅಪ್ ಲೋಡ್ ಮಾಡಿದ್ದಾರೆ. ಇನ್ನು ಇವರ ಬಗ್ಗೆ ಅಭಿಮಾನಿಗಳು ಕೇಳಿರುವ ಪ್ರಶ್ನೆಗಳಿಗೆ ಉತ್ತರಿಸಿದ್ದು, ಈ ವೀಡಿಯೋ ಅಂತೂ ಸಿಕ್ಕಾಪಟ್ಟೆ ವ್ಯೂವ್ಸ್ ಪಡೆದಿದೆ. ಈ ವಿಡಿಯೋದಲ್ಲಿ ಮೇಘನಾ ಅವರ ಎಜುಕೇಶನ್ ಬಗ್ಗೆ ಪ್ರಶ್ನಿಸಿದ್ದು, ತಾವು ಬಿಬಿಎ ವ್ಯಾಸಂಗ ಮಾಡಿರುವುದಾಗಿ ತಿಳಿಸಿದ್ದಾರೆ. ಇನ್ನು ಧಾರಾವಾಹಿಗಳು, ಶೂಟಿಂಗ್ ಮತ್ತು ಪ್ರಿಯಾ ಪಾತ್ರದ ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದು ಎಲ್ಲದಕ್ಕೂ ಮೇಘನಾ ಅವರು ಸಿಂಪಲ್ ಆಗಿ ಉತ್ತರ ನೀಡಿದ್ದಾರೆ.

written update on actress meghana shankarappa

ಪಟಾಕಿಯಂತೆ ಮಾತನಾಡುವ ನಟಿ

ಇನ್ನು ಸೀತಾರಾಮ ಧಾರಾವಾಹಿಯಲ್ಲಿ ಅಶೋಕನಿಗೆ ಜೋಡಿಯಾಗಿ ಪ್ರಿಯಾ ಇದ್ದಾಳೆ. ಪ್ರಿಯಾ ಮತ್ತು ಅಶೋಕ್ ಪ್ರೀತಿಸುತ್ತಿದ್ದು, ಇಬ್ಬರೂ ಡೇಟಿಂಗ್ ಆರಂಭಿಸಿದ್ದಾರೆ. ಗುಂಡು ಗುಂಡಾಗಿರುವ ನಟಿ ಪ್ರಿಯಾ ಅವರು ಬಹಳ ಮುದ್ದಾಗಿದ್ದು, ಅವರ ನಟನೆಯನ್ನು ವೀಕ್ಷಕರು ಕೂಡ ಮೆಚ್ಚಿಕೊಂಡಿದ್ದಾರೆ. ಸೀತಾ ರಾಮ ಧಾರಾವಾಹಿಯಲ್ಲಿ ಮಾತನಾಡುವಂತೆಯೇ ಮೇಘನಾ ಅವರು ಕೂಡ ನಿಜ ಜೀವನದಲ್ಲಿ ಚಟ್ ಪಟ್ ಎಂದು ಮಾತನಾಡುತ್ತಿರುತ್ತಾರೆ. ಎಲ್ಲರಿಗೂ ಒಳ್ಳೆಯದನ್ನೇ ಬಯಸುವ ಮೇಘನಾ ಅವರು ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

More from Filmibeat

English summary
Seetha rama serial actress actress meghana shankarappa other serials
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X