Meghana Shankarappa ; ಮೇಘನಾ ಶಂಕರಪ್ಪ ಡ್ಯಾನ್ಸ್ ಕ್ಲಾಸ್ ಗೆಂದು ಹೋಗಿ ಓಡಿ ಹೋಗಿದ್ದರಂತೆ : ಯಾಕೆ ಗೊತ್ತಾ..?

By ಪ್ರಿಯಾ ದೊರೆ

ಮೇಘನಾ ಶಂಕರಪ್ಪ ಇತ್ತೀಚೆಗೆ ಸೀತಾರಾಮ ಧಾರಾವಾಹಿಯಿಂದ ಕಾಣೆಯಾಗಿದ್ದರು. ಅಲ್ಲದೇ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋ ನಿಂದ ಕೂಡ ಹೊರ ಬಂದಿದ್ದರು. ಇದೆಲ್ಲವೂ ಅಭಿಮಾನಿಗಳಿಗೆ ಶಾಕ್ ಆಗಿತ್ತು. ಆದರೆ, ಮೇಘನಾ ಶಂಕರಪ್ಪ ಅವರೇ ವೀಡಿಯೋ ಮಾಡಿ ತಮ್ಮ ಕಣ್ಣಿಗೆ ಗಾಯವಾಗಿದ್ದು, ವೈದ್ಯರು ಕಂಪ್ಲೀಟ್ ರೆಸ್ಟ್ ಮಾಡಲು ಹೇಳಿದ್ದಾರೆ. ಹಾಗಾಗಿ ನಾನು ಶೂಟಿಂಗ್ ನಿಂದ ದೂರ ಉಳಿದಿದ್ದೇನೆ. ಸೀರಿಯಲ್ ಮತ್ತು ಡ್ಯಾನ್ಸ್ ಶೋಗೆ ಮತ್ತೆ ಬಂದೇ ಬರುತ್ತೇನೆ ಎಂದು ಮೇಘನಾ ಅವರು ಸ್ಪಷ್ಟನೆಯನ್ನು ಕೊಟ್ಟಿದ್ದರು.

ತಾಯಿ ತವರು ಮನೆಯಲ್ಲಿ ಮೇಘನಾ

ಇದೀಗ ನಟಿ ಮೇಘನಾ ಶಂಕರಪ್ಪ ಅವರು ಅವರ ಕಣ್ಣಿಗೆ ಗಾಯವಾಗಿರುವುದಕ್ಕೆ ಔಷಧಿ ಪಡೆಯಲು ಅವರ ತಾಯಿಯ ತವರು ಮನೆ ದಾವಣಗೆರೆಗೆ ಹೋಗಿದ್ದಾರೆ. ಅಲ್ಲಿ ವ್ಲಾಗ್ ಮಾಡಿರುವ ಮೇಘನಾ ಅವರು ತಮ್ಮ ಇಡೀ ಕುಟುಂಬವನ್ನು ಅಭಿಮಾನಿಗಳಿಗೆ ಪರಿಚಯಿಸಿಕೊಟ್ಟಿದ್ದಾರೆ. ಬಸ್ಸಾರು ಮುದ್ದೆ ತಿಂದು ಅಣ್ಣ-ಅತಿಗೆ, ಅಕ್ಕಂದಿರು ಅವರ ಮಕ್ಕಳು ಎಲ್ಲರನ್ನೂ ವೀಡಿಯೋದಲ್ಲಿ ತೋರಿಸಿ ಮಾತನಾಡಿಸಿದ್ದಾರೆ. ಮೇಘನಾ ಅವರ ಸಂಬಂಧಿಕರೆಲ್ಲಾ ಮೇಘನಾ ಬಾಲ್ಯದ ಬಗ್ಗೆ ಮಾತನಾಡಿದ್ದಾರೆ. ಇದರಲ್ಲಿ ಮೇಘನಾ ಅವರು 4th ಸ್ಟ್ಯಾಂಡರ್ಡ್ ನಲ್ಲಿ ಇದ್ದಾಗ ಓಡಿ ಹೋಗಿದ್ದಳು ಎಂದು ಹೇಳುತ್ತಾರೆ.

written update on actress meghana shankarappa

ಡ್ಯಾನ್ಸ್ ಕ್ಲಾಸ್ ಗೆ ಹೋಗಿದ್ದ ಮೇಘನಾ ಕಾಣೆಯಾಗಿದ್ದೇಕೆ..?

ಆಗ ಮೇಘನಾ ಅವರು ನಡೆದ ಘಟನೆಯನ್ನು ವಿವರಿಸಿದ್ದಾರೆ. ಅವರ ತಾಯಿ ಮೇಘನಾ ಅವರನ್ನು ಡ್ಯಾನ್ಸ್ ಕ್ಲಾಸ್, ಮ್ಯೂಸಿಕ್ ಕ್ಲಾಸ್ ಎಲ್ಲಾವುದಕ್ಕೂ ಸೇರಿಸಿದ್ದರಂತೆ. ಮೇಘನಾ ಅವರು ಡ್ಯಾನ್ಸ್ ಕ್ಲಾಸ್ ಗೆ ಹೋಗಿದ್ದಾಗ, ಒಂದಿಬ್ಬರು ಪೋಷಕರು ಬಂದು ನಮ್ಮ ಮಗಳನ್ನು ಮ್ಯೂಸಿಕ್ ಕ್ಲಾಸ್ ಗೆ ಸೇರಿಸಬೇಕು. ಅದು ಎಲ್ಲಿದೆ ಎಂದು ತೋರಿಸು ಎಂದಿದ್ದಕ್ಕೆ ಮೇಘನಾ ಡ್ಯಾನ್ಸ್ ಕ್ಲಾಸ್ ನಿಂದಲೇ ಹೋಗಿದ್ದಳಂತೆ. ಮಗಳು ಎಷ್ಟೊತ್ತಾದರೂ ಮನೆಗೆ ಬಾರದಿದ್ದಕ್ಕೆ ಗಾಬರಿಯಾಗಿದ್ದರಂತೆ. ರಸ್ತೆಗಳಲ್ಲೆಲ್ಲಾ ಹುಡುಕಾಡುವಾಗ ಮೇಘನಾ ತಮ್ಮ ಪಾಡಿಗೆ ತಾವು ಜಾಲಿಯಾಗಿ ನಡೆದುಕೊಂಡು ಬರುತ್ತಿರುವುದನ್ನು ಕಂಡು ಖುಷಿಪಡುತ್ತಾರಂತೆ. ಇದನ್ನೇ ಅವರ ಅಕ್ಕ ಮೇಘನಾ ಓಡಿ ಹೋಗಿದ್ದಳು ಎಂದು ಹೇಳಿದ್ದು.

ನಟನೆಗೆ ತಾಯಿ ಸಪೋರ್ಟ್

ಇನ್ನು ಮೇಘನಾ ಅವರ ತಾಯಿ ತನ್ನ ಮಗಳು ಆಕ್ಟಿಂಗ್ ಮತ್ತು ಡ್ಯಾನ್ಸ್ ಶೋ ನಲ್ಲಿ ಕಾಣಿಸಿಕೊಂಡಿರುವುದಕ್ಕೆ ಖುಷಿ ಇದೆ ಎಂದು ಹೇಳಿದ್ದಾರೆ. ಮಗಳಿಗೆ ಮೇಘನಾ ಅವರ ತಾಯಿ ಸಪೋರ್ಟ್ ಮಾಡುತ್ತಿದ್ದಾರೆ. ಇನ್ನು ಮೇಘನಾ ಅವರ ಅಕ್ಕಂದಿರಿಗೆಲ್ಲಾ ತನ್ನ ವಯಸ್ಸಿನ ಮಕ್ಕಳಿದ್ದಾರಂತೆ. ಇದಕ್ಕೆ ಕಾರಣ ಅವರ ಅಮ್ಮನಿಗೆ ಮೇಘನಾ ಹುಟ್ಟಿದ್ದೇ ತಡವಾಗಿ ಎಂದು ಹೇಳಿದ್ದಾರೆ. ಮೇಘನಾ ಅವರ ಅಣ್ಣನಿಗೂ ತಮಗೂ 8-10 ವರ್ಷ ಅಂತರವಿದೆಯಂತೆ. ಈ ಬಗ್ಗೆಯೂ ಮೇಘನಾ ಅವರು ವೀಡಿಯೋದಲ್ಲಿ ತಿಳಿಸಿಕೊಟ್ಟಿದ್ದಾರೆ.

written update on actress meghana shankarappa

ಮೇಘನಾ ಯೂಟ್ಯೂಬ್ ಚಾನೆಲ್

ಮೇಘನಾ ಅವರು ಶೂಟಿಂಗ್ ನಿಂದ ದೂರವಿದ್ದರೂ ಅಭೀಮಾನಿಗಳಿಗೆ ಬೇಸರವಾಗಬಾರದು ಎಂದು ವ್ಲಾಗ್ ಮಾಡುತ್ತಿದ್ದಾರೆ. ಕಳೆದ ಐದು ತಿಂಗಳ ಹಿಂದೆ ತೆರೆದ ಯೂಟ್ಯೂಬ್ ಚಾನೆಲ್ ನಲ್ಲಿ ಈಗಾಗಲೇ 79 ವೀಡಿಯೋಗಳನ್ನು ಶೇರ್ ಮಾಡಿದ್ದಾರೆ. ಒಟ್ಟು 53.9k ಸಬ್ಸ್ ಕ್ರೈಬರ್ಸ್ ಇದ್ದಾರೆ. ಇನ್ನು ಸೀತಾರಾಮ ಧಾರಾವಾಹಿಯಲ್ಲಿ ಅಶೋಕನಿಗೆ ಜೋಡಿಯಾಗಿರುವ ಪ್ರಿಯಾ, ಸೀರಿಯಲ್ ನಲ್ಲಿ ಪಟ ಪಟ ಅಂತ ಮಾತನಾಡುವುದಲ್ಲ, ನಿಜ ಜೀವನದಲ್ಲೂ ಹಾಗೆ ಇದ್ದಾರೆ.. ಗುಂಡು ಗುಂಡಾಗಿರುವ ನಟಿ ಪ್ರಿಯಾ ಅವರು ಬಹಳ ಮುದ್ದಾಗಿದ್ದು, ಅವರ ನಟನೆಯನ್ನು ವೀಕ್ಷಕರು ಕೂಡ ಮೆಚ್ಚಿಕೊಂಡಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X