Meghashree ; ಮಧುಮಗಳಾದ ನಟಿ ಮೇಘಶ್ರೀ, ಮದ್ವೆಯಾಗುತ್ತಿರುವ ಹುಡುಗನ ಹೆಸರು ಹೇಳುತ್ತಿಲ್ಲವೇಕೆ ..?

By ಪ್ರಿಯಾ ದೊರೆ

ಕಿರುತೆರೆಯಲ್ಲಿ ಆಗೊಂದು ಈಗೊಂದು ಎನ್ನುವುದಕ್ಕಿಂತಲೂ ತಿಂಗಳಿಗೊಂದು ಮದುವೆ ನಡೆಯುತ್ತಲೇ ಇದೆ. ಹಾಗೆಯೇ ಕಿರುತೆರೆ ನಟ-ನಟಿಯರು ಕೂಡ ದಾಂಪತ್ಯ ಜೀವನಕ್ಕೆ ಒಬ್ಬರಾದ ಮೇಲೆ ಒಬ್ಬರಂತೆ ಕಾಲಿಡುತ್ತಲೇ ಇದ್ದಾರೆ. ಇದೇ ತಿಂಗಳು ಇಬ್ಬರು ಕಿರುತೆರೆ ನಟಿಯರು ವಿವಾಹವಾಗಿದ್ದಾರೆ. ಸೀತಾರಾಮ ಧಾರಾವಾಹಿಯ ನಟಿ ಮೇಘನಾ ಶಂಕರಪ್ಪ ಹಾಗೂ ನಟಿ ಮಾನ್ಸಿ ಜೋಷಿ ಇಬ್ಬರೂ ಹೊಸ ಬದುಕಿಗೆ ಮುನ್ನುಡಿ ಬರೆದಿದ್ದಾರೆ. ಈಗ ಕಿರುತೆರೆ ನಟಿ ಮೇಘಶ್ರೀ ಗೌಡ ಅವರು ಮಧು ಮಗಳಾಗಿದ್ದಾರೆ. ಕಳೆದ ತಿಂಗಳೇ ನಟಿ ಮೇಘಶ್ರೀ ಅವರು ತಮ್ಮ ಎಂಗೇಜ್ಮೆಂಟ್ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ್ದರು.

ಮದುವೆ ಬಗ್ಗೆ ಅಪ್ ಡೇಟ್ಸ್ ಕೊಟ್ಟ ನಟಿ

ನಟಿ ಮೇಘಶ್ರೀ ಅವರು ಮಧು ಮಗಳಾಗಿದ್ದು, ಗೆಳೆಯರೆಲ್ಲಾ ಸೇರಿಕೊಂಡು ಬ್ಯಾಚುಲರ್ ಪಾರ್ಟಿ ಮಾಡಿದ್ದಾರೆ. ಇದರ ವೀಡಿಯೋಗಳನ್ನು ಕೂಡ ಹಂಚಿಕೊಂಡಿರುವ ಮೇಘಶ್ರೀ ಗೌಡ ಅವರು ಸದ್ಯ ಮದುವೆಯ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಮದುವೆಗೆ ಬರುವವರಿಗೆ ರಿಟರ್ನ್ ಗಿಫ್ಟ್ ಕೊಡಲು ವಿಶೇಷವಾದ ರಿಟರ್ನ್ ಗಿಫ್ಟ್ ಗಳನ್ನು ಆರ್ಡರ್ ಮಾಡಿದ್ದು, ಅವೆಲ್ಲಾ ಬಂದಿದ್ದು, ಈ ವಿಚಾರವನ್ನು ಮೇಘಶ್ರೀ ಅವರು ಹಂಚಿಕೊಂಡಿದ್ದಾರೆ. ಇದರೊಂದಿಗೆ ತಮ್ಮ ಉಗುರುಗಳಿಗೆ ಅಲಂಕಾರ ಮಾಡಿಸಿಕೊಳ್ಳಲು ಹೋಗಿದ್ದು, ಇದರ ವೀಡಿಯೋ ಕೂಡ ಹಂಚಿಕೊಂಡಿದ್ದಾರೆ. ಮದುವೆಯ ದಿನಾಂಕವನ್ನು ತಿಳಿಸದ ಮೇಘಶ್ರೀ ಅವರು ಮದುವೆ ಹತ್ತಿರದಲ್ಲೇ ಇದೆ ಎಂಬುದನ್ನು ಈ ವೀಡಿಯೋಗಳ ಮೂಲಕ ಹೇಳುತ್ತಿದ್ದಾರೆ.

written update on Actress Meghasri gowda Marriage

ಹುಡುಗನ ಬಗ್ಗೆ ಬಾಯಿ ಬಿಡದ ಮೇಘಶ್ರೀ

ಈ ರೀತಿ ತಮ್ಮ ಮದುವೆಯ ಪ್ರತಿಯೊಂದು ವಿಚಾರವನ್ನು ಅಪ್ ಡೇಟ್ ಮಾಡುತ್ತಿರುವ ನಟಿ ಮೇಘಶ್ರೀ ಅವರು ಇದುವರೆಗೂ ತಾವು ಮದುವೆ ಆಗುತ್ತಿರುವ ಹುಡುಗನ ಬಗ್ಗೆ ಮಾತ್ರ ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಇದು ಅಭಿಮಾನಿಗಳಲ್ಲಿ ಕೊಂಚ ಬೇಸರವನ್ನು ತರಿಸಿದೆ. ಅಷ್ಟೇ ಅಲ್ಲದೇ, ಭಾಗಶಃ ಈ ವೀಕೆಂಡ್ ನಲ್ಲೇ ಮದುವೆ ಇರಬಹುದು ಎಂದು ಅಭಿಮಾನಿಗಳು ನಂಬಿದ್ದು, ಮೇಘಶ್ರೀ ಗೌಡ ಅವರ ದಾಂಪತ್ಯ ಬದುಕಿಗೆ ವಿಶ್ ಮಾಡುತ್ತಿದ್ದಾರೆ.


ಹಲವು ಧಾರಾವಾಹಿಗಳಲ್ಲಿ ನಟಿಸಿರುವ ಮೇಘಶ್ರೀ

ಇನ್ನು ಮೇಘಶ್ರೀ ಅವರು ಮೂಲತಃ ಸಕ್ಕರೆ ನಾಡು ಮಂಡ್ಯದ ಸುಂದರಿ. ಮಂಡ್ಯದ ಬೆಡಗಿ ಮೇಘಶ್ರೀ ಅವರು ಸದಾ ಇನ್ ಸ್ಟಾಗ್ರಾಂನಲ್ಲಿ ಆಕ್ಟೀವ್ ಆಗಿರುತ್ತಾರೆ. ಫೋಟೋಶೂಟ್ ಗಳನ್ನು ಮಾಡಿಸಿ ಅಪ್ ಲೋಡ್ ಮಾಡುತ್ತಿರುತ್ತಾರೆ. ಅಲ್ಲದೇ ತಮ್ಮದೇ ಯೂಟ್ಯೂಬ್ ಚಾನೆಲ್ ಅನ್ನು ಕೂಡ ಹೊಂದಿದ್ದಾರೆ. ಬಾಲ ನಟಿಯಾಗಿ ಮಕ್ಕಳ ಡಂಗುರ ಸಿನಿಮಾಗೆ ಎಂಟ್ರಿ ಕೊಟ್ಟ ಮೇಘಶ್ರೀ ಅವರು ಚರಣದಾಸಿ, ಮಯೂರಿ, ಪದ್ಮಾವತಿ, ಮಧುಬಾಲಾ, ಗುಂಡ್ಯಾನ ಹೆಂಡ್ತಿ, ಮೈನಾ, ದೇವತೆ, ಅವನು ಮತ್ತು ಶ್ರಾವಣಿ, ಜಸ್ಟ್ ಮಾತ್ ಮಾತಲ್ಲಿ, ಜೀವನ ಚೈತ್ರಾ, ನಿನ್ನ ಜೊತೆ ನನ್ನ ಕಥೆ, ಸತ್ಯ, ಪುಣ್ಯವತಿ ಸೇರಿದಂತೆ ಹಲವು ರಾವಾಹಿಗಳಲ್ಲಿ ನಟಿಸಿದ್ದಾರೆ. ಮೇಘಶ್ರೀ ಅವರು ಹೆಚ್ಚು ಬಣ್ಣ ಹಚ್ಚಿದ್ದು ವಿಲನ್ ಪಾತ್ರಕ್ಕೆ. ಇದು ಮೇಘಶ್ರೀ ಅವರಿಗೂ ಇಷ್ಟವಂತೆ. ಎಲ್ಲಾ ಧಾರಾವಾಹಿಗಳಲ್ಲೂ ನೆಗೆಟಿವ್ ರೋಲ್ ನಲ್ಲೇ ಕಾಣಿಸಿಕೊಂಡ ಮೇಘಶ್ರೀ ಅವರು ಪದ್ಮಾವತಿ ಧಾರಾವಾಹಿಯಲ್ಲಿ ಪಾಸಿಟಿವ್ ರೋಲ್ ನಲ್ಲಿ ನಟಿಸಿದ್ದರು.


ಸಿನಿಮಾಗಳಲ್ಲಿ ನಟಿಸಿರುವ ಮೇಘಶ್ರೀ

ನಟಿ ಮೇಘಶ್ರೀ ಬ್ಯೂಟಿಫುಲ್ ಮನಸ್ಸುಗಳು, ಮುಗುಳು ನಗೆ, ಸ್ಟೇಟ್ ಮೆಂಟ್, ಕಡ್ಡಿಪುಡಿ, ಸಂತು ಸ್ಟ್ರೈಟ್ ಫಾರ್ವರ್ಡ್, ಪಂಟ್ರು, ಮೂಕಜೀವ, ಮುಗಿಲ್ ಪೇಟೆ ಸೇರಿದಂತೆ ಇನ್ನಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ಆಕ್ಟೀವ್ ಆಗಿರುತ್ತಾರೆ. ಸಾಕಷ್ಟು ಫೋಟೋಶೂಟ್ ಗಳನ್ನು ಮಾಡಿಸುತ್ತಿರುತ್ತಾರೆ. ಸದ್ಯ ಮದುವೆ ಆಗುವ ಸಂಭ್ರಮದಲ್ಲಿದ್ದು, ಅವರ ಹೊಸ ಬಾಳಿಗೆ ಶುಭವಾಗಲಿ ಎಂದು ಶುಭ ಹಾರೈಸೋಣ.

More from Filmibeat

Read more about: marriage actress filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X