ಬಾಲಿಗೆ ಹಾರಿದ ಮೋಕ್ಷಿತಾ ಪೈ : ಸ್ವರ್ಗದಲ್ಲಿ ತೇಲಾಡಿದ ಮಂಗಳೂರು ಚೆಲುವೆ

By ಪ್ರಿಯಾ ದೊರೆ

ಕನ್ನಡ ಕಿರುತೆರೆಯಲ್ಲಿ ಕೆಲವೊಂದು ಧಾರಾವಾಹಿಗಳು ಹಿಟ್ ಆಗುವುದರೊಂದಿಗೆ ಅದರಲ್ಲಿ ನಟಿಸಿದ ಕಲಾವಿದರೂ ಕೂಡ ಸಿಕ್ಕಾಪಟ್ಟೆ ಫೇಮಸ್ ಆಗುತ್ತಾರೆ. ಅದಕ್ಕೆ ಬೆಸ್ಟ್ ಉದಾಹರಣೆ ಎಂದರೆ ಲಕ್ಷ್ಮೀಬಾರಮ್ಮ, ಅಗ್ನಿಸಾಕ್ಷಿ ಧಾರಾವಾಹಿಗಳು. ಈ ಎರಡು ಧಾರಾವಾಹಿಗಳಷ್ಟೇ ಅಲ್ಲದೇ, ಇನ್ನು ಸಾಕಷ್ಟು ಸೀರಿಯಲ್ ಗಳು ಹಿಟ್ ಆಗಿವೆ.ಆದರೆ, ಲಕ್ಷ್ಮೀಬಾರಮ್ಮ, ಅಗ್ನಿಸಾಕ್ಷಿ ಜೊತೆಗೆ ಧಾರಾವಾಹಿಯಲ್ಲಿ ನಟಿಸಿದ ಪಾತ್ರಧಾರಿಗಳು ಕೂಡ ಹಿಟ್ ಆದರು. ಇಂದಿಗೂ ಈ ಧಾರಾವಾಹಿಯಲ್ಲಿ ನಟಿಸಿದವರು ಪಾತ್ರಗಳ ಹೆಸರಿನಿಂದಲೇ ಗುರುತಿಸಿಕೊಳ್ಳುತ್ತಿದ್ದಾರೆ.

ಪಾರು ಧಾರಾವಾಹಿ ಮೂಲಕ ಫೇಮಸ್

ನಟಿ ನೇಹಾ ಗೌಡ, ಕವಿತಾ ಗೌಡ, ಚಂದನ್ ಕುಮಾರ್, ವೈಷ್ಣವಿ ಗೌಡ, ವಿಜಯ್ ಸೂರ್ಯ ಹೀಗೆ ಸಾಕಷ್ಟು ನಟಿಯರು ಹಿಟ್ ಧಾರಾವಾಹಿಗಳಲ್ಲಿ ಪಾತ್ರ ನಿರ್ವಹಿಸಿದವರೇ. ಇವರ ಸಾಲಿಗೆ ನಟಿ ಮೋಕ್ಷಿತಾ ಪೈ ಅವರು ಕೂಡ ನಿಲ್ಲುತ್ತಾರೆ. ಪಾರು ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟು. ಇದೊಂದು ಧಾರಾವಾಹಿಯಿಂದಲೇ ವೀಕ್ಷಕರ ಮನ ಗೆದ್ದವರು. ಈಗಲೂ ಪಾರು ಎಂದೇ ಗುರುತಿಸಿಕೊಳ್ಳುತ್ತಾರೆ. ಆದರೆ, ಪಾರು ಧಾರಾವಾಹಿ ಮುಕ್ತಾಯಗೊಂಡಿದ್ದು, ಸದ್ಯ ಮೋಕ್ಷಿತಾ ಫಯ ಅವರು ಕ್ಯಾಮರಾ ಮುಂದೆ ಎಲ್ಲೂ ಕಾಣಿಸಿಕೊಂಡಿಲ್ಲ. ಆದರೂ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿದ್ದು, ಯೂಟ್ಯೂಬ್ ಚಾನೆಲ್ ನಲ್ಲೂ ವ್ಲಾಗ್ ಮಾಡುತ್ತಿರುತ್ತಾರೆ.

Written update on Actress Mokshitha Pai

ಪ್ರವಾಸ ಕೈಗೊಂಡಿರುವ ನಟಿ ಮೋಕ್ಷಿತಾ

ಧಾರಾವಾಹಿ ನಟನೆಯಿಂದ ದೂರ ಇರುವ ಮೋಕ್ಷಿತಾ ಪೈ ಅವರು ತಮ್ಮ ದಿನಚರಿಗಳ ಬಗ್ಗೆ ಅಭಿಮಾನಿಗಳಿಗೆ ತಿಳಿಸಿಕೊಡುತ್ತಿರುತ್ತಾರೆ. ಇತ್ತೀಚೆಗಷ್ಟೇ ನಟಿ ಮೋಕ್ಷಿತಾ ಪೈ ಅವರು ವಿದೇಶಕ್ಕೆ ಹಾರಿದ್ದರು. ಹೌದು ಇಂಡೋನೇಷ್ಯಾಗೆ ಗೆಳತಿಯೊಂದಿಗೆ ಮೋಕ್ಷಿತಾ ಅವರು ಪ್ರಯಾಣ ಬೆಳೆಸಿದ್ದರು. ಇಂಡೋನೇಷ್ಯಾ ಎಂದರೆ ಕೇಳಲು ಅಷ್ಟೇನು ವಿಶೇಷ ಅನಿಸುವುದಿಲ್ಲ. ಅದೇ, ಬಾಲಿ ಎಂದರೆ ಎಲ್ಲರ ಕಣ್ಣು, ಕಿವಿ ಅರಳುವುದರಲ್ಲಿ ಡೌಟ್ ಅಂತೂ ಕೊಂಚವೂ ಇಲ್ಲ. ಯಾಕೆಂದರೆ, ಹೆಸರೇ ಹೇಳುವಂತೆ ಅದೊಂದು ಸ್ವರ್ಗ ತಾಣ.

ಸೌಂದರ್ಯದ ಬೀಡು ಬಾಲಿಯಲ್ಲಿ ಪಾರು

ಸೌಂದರ್ಯದ ಬೀಡಾಗಿರುವ ಬಾಲಿಯನ್ನು ಸ್ವರ್ಗ ಎಂದರೆ ತಪ್ಪಾಗುವುದಿಲ್ಲ. ಇಂಡೋನೇಷ್ಯಾದ ಬಾಲಿಐಲ್ಲಿ ಒಂದೆಡೆ ಅಗಾಧ ವಿಸ್ತಾರದ ಸಮುದ್ರ ಚಾಚಿಕೊಂಡಿದ್ದರೆ ಮತ್ತೊಂದೆಡೆ ನೀಳ ನೀಲಘಟ್ಟಗಳ ಕಾಡುಮೇಡು. ಸುತ್ತೆಲ್ಲಾ ಜಲಸಾಗರವೇ ಕಣ್ತುಂಬುವಂತಿದೆ. ಇದರ ಮಧ್ಯೆದಲ್ಲಿ ಕಿರೀಟದಂತೆ ಕಾಣುವ ದ್ವೀಪ. ಇನ್ನುಳಿದಂತೆ ನದಿ, ತೊರೆ, ಪರ್ವತ, ಜ್ವಾಲಾಮುಖಿ, ಸುಂದರ ದೇವಾಲಯಗಳು, ತೂಗುಯ್ಯಾಲೆ, ಅಲ್ಲೊಂದು ಇಲ್ಲೊಂದು ಊರು-ಕೇರಿ ಎಲ್ಲವೂ ಸೇರಿ ಸ್ವರ್ಗವನ್ನೇ ಸೃಷ್ಟಿಸಿದಂತಿದೆ. ಹೀಗಾಗಿ ನಮ್ಮ ಭಾರತೀಯರು ಹೆಚ್ಚು ಬಾಲಿಗೆ ಹೋಗಲು ಬಯಸುತ್ತಾರೆ. ಇತ್ತೀಚೆಗಂತೂ ಬಾಲಿಗೆ ಹೋಗುವುದು ಕಪಲ್ ಗೋಲ್ ಆಗಿದೆ. ಹನಿಮೂನ್ ಗೆ ಹೋಗುವವರೂ ಇದ್ದಾರೆ, ಇಲ್ಲಿನ ಸೌಂದರ್ಯವನ್ನು ಆನಂಧಿಸಲು ಪ್ರವಾಸ ಬೆಳೆಸುವ ಗೆಳೆಯರೂ ಇದ್ದಾರೆ. ಸದ್ಯ ನಟಿ ಪಾರು ಬಾಲಿಯಲ್ಲಿ ಎಂಜಾಯ್ ಮಾಡಿಕೊಂಡು ಬಂದಿದ್ದಾರೆ. ಇದರ ಫೋಟೋಗಳನ್ನು ಹಂಚಿಕೊಂಡು ಸಂತಸ ಪಟ್ಟಿದ್ದಾರೆ.

written-update-on-actress-mokshitha-pai

ಮೋಕ್ಷಿತಾ ಅವರ ಪ್ರವಾಸದ ಲಿಸ್ಟ್

ಇತ್ತೀಚೆಗೆ ಮೋಕ್ಷಿತಾ ಅವರು ಹೆಚ್ಚು ಹೆಚ್ಚು ಪ್ರವಾಸಗಳನ್ನು ಮಾಡುತ್ತಿರುತ್ತಾರೆ. ಈಶಾ ಫೌಂಡೇಶನ್, ದುಬೈ, ಕುಕ್ಕೆ ಸುಬ್ರಮಣ್ಯ, ಮೈಸೂರು, ಹಿಮಾಚಲ ಪ್ರದೇಶ, ವಯಾನಾಡು ಹೀಗೆ ಪ್ರವಾಸ ಮಾಡುತ್ತಿರುತ್ತಾರೆ. ಈಗ ಇವರ ಪ್ರವಾಸದ ಲಿಸ್ಟ್ ನಲ್ಲಿ ಬಾಲಿಯೂ ಸೇರಿಕೊಂಡಿದೆ. ಪಾರು ಸೀರಿಯಲ್ ಮುಗಿದ ಬಳಿಕ ಅಭಿಮಾನಿಗಳು, ನಿತ್ಯ ಮೋಕ್ಷಿತಾ ಅವರ ಸೋಶಿಯಲ್ ಪೇಜ್ ಹಾಗೂ ಸ್ಟೋರಿ ಮತ್ತು ಯೂಟ್ಯೂಬ್ ಚಾನೆಲ್ ಅನ್ನು ತಪ್ಪದೇ ವೀಕ್ಷಿಸುತ್ತಾರೆ. ಅಭಿಮಾನಿಗಳು ಆದಷ್ಟು ಬೇಗ ಮೋಕ್ಷಿತಾ ಅವರಿಗೆ ಮತ್ತೊಂದು ಸೀರಿಯಲ್ ಸಿಗಲಿ ಎಂದು ಬಯಸಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X