ಚಾರು ಈಸ್ ಬ್ಯಾಕ್ : ಹಳೆಯ ಲುಕ್ ನಲ್ಲಿ ಕಾಣಿಸಿಕೊಂಡ ನಟಿ ಮೌನ ಗುಡ್ಡೆಮನೆ..!
ಮೂಲತಃ ಮಂಗಳೂರಿನ ಬೆಡಗಿಯಾಗಿರುವ ನಟಿ ಮೌನ ಗುಡ್ಡೆಮನೆ ಅವರು ತಮ್ಮ ಮೊದಲ ಧಾರಾವಾಹಿಯಿಂದಲೇ ಅಭಿಮಾನಿಗಳನ್ನು ಪಡೆದಿದ್ದಾರೆ.ಮಾಡ್ರನ್ ಲುಕ್ ನಲ್ಲಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆಗೆ ಎಂಟ್ರಿಕೊಟ್ಟ ಮೌನ, ಬಳಿಕ ಕಂಪ್ಲೀಟ್ ಆಗಿ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಳ್ಳಲು ಶುರುವಿಟ್ಟರು. ಮೌನ ಅವರ ಎರಡೂ ಲುಕ್ ನನ್ನು ಇಷ್ಟಪಟ್ಟ ಅಭಿಮಾನಿಗಳು, ನಿತ್ಯ ಮೌನ ಅವರು ಹೊಸ ಫೋಟೋಶೂಟ್ ಗಳನ್ನು ಮಾಡಿಸುತ್ತಾರಾ ಎಂದು ಕಾಯುತ್ತಲೇ ಇರುತ್ತಾರೆ.
ಎಲ್ಲಾ ಬಗೆಯ ಉಡುಗೆಯಲ್ಲೂ ಸೂಪರ್ ಲುಕ್
ಯಾಕೆಂದರೆ, ನಟಿ ಮೌನ ಗುಡ್ಡೆಮನೆ ಅವರು ಮಾಡ್ರರ್ನ್ ಬಟ್ಟೆ ಧರಿಸಿದರೂ, ಸೀರೆ ಉಟ್ಟರೂ ಕೂಡ ಅಭಿಮಾನಿಗಳಿಗೆ ಇಷ್ಟವಾಗಿದೆ. ಶಾರ್ಟ್ಸ್, ಫಾರ್ಮಲ್, ಗೌನ್, ಲಂಗ ದಾವಣಿ, ಸೀರೆ ಹೀಗೆ ಎಲ್ಲಾ ಬಗೆಯ ಉಡುಗೆಯಲ್ಲೂ ಮೌನ ಅವರು ಫೋಟೋಶೂಟ್ ಮಾಡಿಸಿದ್ದಾರೆ. ಇನ್ನು ನಟಿ ಮೌನ ಗುಡ್ಡೆಮನೆ ಅವರು 17ನೇ ವಯಸ್ಸಿಗೆ ಮಾಡೆಲಿಂಗ್ಗೆ ಕಾಲಿಟ್ಟರು. 2020ರಲ್ಲಿ ನಡೆದ ಮಿಸ್ ಟೀನ್ ತುಳುನಾಡು ಸ್ಪರ್ಧೆಯಲ್ಲಿ ಭಾಗವಹಿಸಿ ಮೌನ ಅವರು ಎರಡನೇ ರನ್ನರ್ ಅಪ್ ಆಗಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಡಿಗ್ರಿ ಓದಿರುವ ಮೌನ ಗುಡ್ಡೆಮನೆಯವರಿಗೆ ರಾಮಾಚಾರಿ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ತಮ್ಮ ಉತ್ತಮವಾದ ನಟನೆಯ ಮೂಲಕವೇ ವೀಕ್ಷಕರ ಮನ ಗೆದ್ದಿದ್ದಾರೆ.

ಮತ್ತೆ ಹಳೆ ಲುಕ್ ನಲ್ಲಿ ಚಾರು
ರಾಮಚಾರಿ ಧಾರಾವಾಹಿ ಅದ್ಭುತವಾಗಿ ಮೂಡಿ ಬರುತ್ತಿದೆ. ಹೊಸ ತಿರುವು ಶುರುವಾಗಿದ್ದು, ವೀಕ್ಷಕರು ಕುತೂಹಲಗೊಂಡಿದ್ದಾರೆ. ಮೈದುನ ಕೃಷ್ಣನ ಪ್ರೇಯಸಿ ರುಕ್ಕುಗೂ ಚಾರುಗೂ ಏನೋ ಸಂಬಂಧವಿದೆ ಎನ್ನಲಾಗಿದೆ. ಹೀಗಾಗಿ ಈಗ ಮತ್ತೆ ಚಾರು ಲುಕ್ ಬದಲಾಗಿದೆ. ಮೊದಲಿನಂತೆ ಶಾರ್ಟ್ಸ್ ಧರಿಸಿ ಪ್ರೋಮೋದಲ್ಲಿ ಮೌನ ಕಾಣಿಸಿಕೊಂಡಿದ್ದಾರೆ. ಚಾರು ಹಳೆಯ ಅವತಾರವನ್ನು ಕಂಡು ವೀಕ್ಷಕರು ಕಮೆಂಟ್ ಗಳ ಸುರಿಮಳೆಯನ್ನೇ ಸುರಿದಿದ್ದಾರೆ. ನಮ್ಮ ಹಳೆಯ ರೌಡಿ ಬೇಬಿ ವಾಪಸ್ ಬಂದಿದ್ದಾರೆ. ಚಾರು ಈ ಲುಕ್ ಸೂಪರ್ ಎಂದೆಲ್ಲಾ ಕಮೆಂಟ್ ಗಳನ್ನು ಮಾಡುತ್ತಿದ್ದಾರೆ. ಇನ್ನು ರಾಮಾಚಾರಿ ಧಾರಾವಾಹಿ ಇದೀಗ ಜನ ಮೆಚ್ಚಿದ ಸೀರಿಯಲ್ ಎಂದು ಹೇಳಿದರೆ ತಪ್ಪಾಗಲಾರದು ಅಷ್ಟರ ಮಟ್ಟಿಗೆ ಫೇಮಸ್ ಆಗಿದೆ. ರಾಮಾಚಾರಿ ಧಾರಾವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು ನೋಡುಗರ ಮನ ಸೆಳೆಯುವ ಹಾಗೆ ಮಾಡುತ್ತಿದೆ.
ಫೋಟೋಶೂಟ್ ಮಾಡಿಸುವ ನಟಿ ಮೌನ
ಮೌನ ಗುಡ್ಡೆಮನೆ ಅವರು ಕನ್ನಡ ಕಿರುತೆರೆಗೆ ಬರುವ ಮುನ್ನವೇ ಹಲವು ಆಲ್ಬಂ ಸಾಂಗ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹಿಂದಿ, ತುಳು ಹಾಗೂ ಕನ್ನಡದ ಕೆಲ ಆಲ್ಬಂ ಸಾಂಗ್ ಗಳಿಗೆ ಹೆಜ್ಜೆ ಹಾಕಿದ್ದಾರೆ. ದೇವತೆಯಂತೆ ಆಗಾಗ ಫೋಟೋಶೂಟ್ ಮಾಡಿಸುತ್ತಿರುತ್ತಾರೆ. ಮೌನ ಗುಡ್ಡೆಮನೆ ಅವರು ಬಹಳ ಸ್ಲಿಮ್ ಆಗಿದ್ದು, ಸೀರೆಯಲ್ಲಿ ಸಿಕ್ಕಾಪಟ್ಟೆ ಸುಂದರವಾಗಿ ಕಾಣುತ್ತಾರೆ. ಪ್ರೇಕ್ಷಕರು ಮೌನ ಅವರು ಸೀರೆ ಉಡುವ ರೀತಿಯನ್ನು ಕೂಡ ಮೆಚ್ಚಿಕೊಂಡಿದ್ದಾರೆ. ಮಾಡ್ರನ್ ಲುಕ್ ನಲ್ಲಿ ಬ್ಯೂಟಿಫುಲ್ ಆಗಿ ಕಾಣುವಂತೆಯೇ ಸೀರೆಯಲ್ಲೂ ಸುರ ಸುಂದರಿಯೇ ಎಂದಿದ್ದಾರೆ.
ಪ್ರವಾಸ ಮಾಡಲು ಬಯಸುವ ಹುಡುಗಿ
ಇನ್ನು ಮೌನ ಅವರು ಇತರೆ ನಟಿಯರಂತೆಯೇ ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಅನ್ನು ಕೂಡ ಹೊಂದಿದ್ದಾರೆ. ಇವರ ಯೂಟ್ಯೂಬ್ ಚಾನೆಲ್ ಗೆ 38.5k ಅಭಿಮಾನಿಗಳು ಸಬ್ ಸ್ಕ್ರೈಬ್ ಮಾಡಿದ್ದಾರೆ. ಈಗಾಗಲೇ 48 ವೀಡಿಯೋಗಳನ್ನು ಅಪ್ಲೋಡ್ ಮಾಡಿದ್ದಾರೆ. ಅಲ್ಲದೇ, ನಟಿ ಮೌನ ಅವರು ಥೈಲ್ಯಾಂಡ್ ಮತ್ತು ಗೋವಾ ಟ್ರಿಪ್ ತೆರಳಿದ್ದು, ಇದರ ಬಗ್ಗೆಯೂ ವ್ಲಾಗ್ ಮಾಡಿದ್ದಾರೆ. ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.


Click it and Unblock the Notifications











