25ವರ್ಷಗಳಿಂದ ಕಿರುತೆರೆಯಲ್ಲಿ ಮೋಡಿ ಮಾಡುತ್ತಿರುವ ನಟಿ ನಂದಿನಿ ಗೌಡ

By ಪ್ರಿಯಾ ದೊರೆ

ಒಳ್ಳೊಳ್ಳೆಯ ಪಾತ್ರಗಳ ಮೂಲಕ ಕರುನಾಡಿನ ಜನ ಮನದಲ್ಲಿ ನೆಲೆಸಿದ ನಟಿ ನಂದಿನಿ ಗೌಡ . ಮೊಬೈಲ್, ಇಂಟರ್ ನೆಟ್, ಒಟಿಟಿಗಳು ಇಲ್ಲದ ಆ ಕಾಲದಲ್ಲೇ ಲಕ್ಷಾಂತರ ಕರುನಾಡಿಗರ ಸಂಜೆಯ ಸಮಯವನ್ನು ತಮ್ಮ ಪಾಲಾಗಿಸಿಕೊಂಡವರು.

ನಟನೆಯ ಗಂಧ ಗಾಳಿ ಗೊತ್ತಿಲ್ಲದ ಕಾರಣ, ನಟನೆ ತನಗಲ್ಲ ಎಂದುಕೊಂಡೆ ಕಳೆದ 25 ವರ್ಷಗಳಿಂದ ಕಿರುತೆರೆಯಲ್ಲಿ ಕಮಾಲ್ ಮಾಡಿದವರು ನಟಿ ನಂದಿನಿ ಗೌಡ. ನಂದಿನಿ ಗೌಡ ಅವರು ಹುಟ್ಟಿದಾಗಿನಿಂದಲೂ ಬೆಂಗಳೂರಿನಲ್ಲೇ ಬೆಳೆದವರು. ಜಯನಗರ ಹಾಗೂ ಪದ್ಮನಾಗನಗರದಲ್ಲಿರುವ ಶಾಲೆ ಹಾಗೂ ಕಾಲೇಜಿನಲ್ಲಿ ಓದಿದ ನಂದಿನಿ ಗೌಡ ಅವರು ಕಂಪ್ಯೂಟರ್ ಸೈನ್ಸ್ ನಲ್ಲಿ ಡಿಪ್ಲೋಮಾ ಇನ್ಜಿನೀಯರಿಂಗ್ ವ್ಯಾಸಂಗ ಮಾಡಿದ್ದಾರೆ.

Written Update on actress nandini gowda

ಓದುತ್ತಲೇ ಕಿರುತೆರೆಗೆ ಪಾದಾರ್ಪಣೆ

ಕಾಲೇಜು ದಿನಗಳಲ್ಲೇ ತಂದೆಯ ಸ್ನೇಹಿತರ ಕಡೆಯಿಂದ ಧಾರಾವಾಹಿ ಯೊಂದಕ್ಕೆ ನಟಿಸುವ ಅವಕಾಶ ನಂದಿನಿ ಅವರಿಗೆ ತಾನಾಗಿಯೇ ಒಲಿದು ಬಂದಿತ್ತು. ಇಷ್ಟವಿಲ್ಲದಿದ್ದರೂ ಒಂದು ಅವಕಾಶ ಎಂದುಕೊಂಡು ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಎರಡು ಎಪಿಸೋಡ್ ನ ಧಾರಾವಾಹಿಯೊಂದಕ್ಕೆ ಬಣ್ಣ ಹಚ್ಚಿದ್ದರು.

ಮೊದಲ ದಿನ ಮೇಕಪ್ ಕಂಡು ಬೇಸರ ಮಾಡಿಕೊಂಡಿದ್ದ ನಂದಿನಿ ಅವರು ಕೊಟ್ಟ ಡೈಲಾಗ್ ನ ಸಲೀಸಾಗಿ ಪಾಠ ಒಪ್ಪಿಸಿದಂತೆ ಹೇಳಿ ಬಂದಿದ್ದರು. ನಟನೆ ಬಗ್ಗೆ ಏನೂ ಅರಿಯದ ನಂದಿನಿ ಅವರಿಗೆ ಮತ್ತೆ ಈ ಶೂಟಿಂಗ್ ಎಲ್ಲಾ ಬೇಡ ಎಂದುಕೊಂಡಿದ್ದರು.

ಬೇಡ ಬೇಡ ಎಂದರೂ ಒದಗಿ ಬಂದ ಅವಕಾಶಗಳು

ಆದರೆ, ವಿಧಿಯ ಲೆಕ್ಕಾಚಾರವೇ ಬೇರೆ ಇತ್ತು. ಮತ್ತೆ ಪ್ರೇಮ ಪ್ರೇಮ ಪ್ರೇಮ ಎಂಬ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಕ್ಕಿತ್ತು. ಆದರೆ ಬೇಡ ಎನ್ನಲು ಹೋಗಿ ನಟಿಸಿ ಬಂದಿದ್ದರು. ಹೀಗೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ನಂದಿನಿ ಗೌಡ ಅವರು ಕ್ಷಣ ಕ್ಷಣ, ಇತಿಹಾಸ, ಸಾಧನೆ, ಅರ್ಧ ಸತ್ಯ ಧಾರಾವಾಹಿಗಳಲ್ಲಿ ತಮ್ಮ ಪಾತ್ರವನ್ನು ಅಚ್ಚು ಕಟ್ಟಾಗಿ ನಿರ್ವಹಿಸಿದರು. ಇದೆಲ್ಲಾ ಧಾರಾವಾಹಿಗಳಲ್ಲಿ ನಟಿಸುತ್ತಲೇ ಭಾಷೆಯ ಮೇಲೆ ಹಿಡಿತವನ್ನು ಸಾಧಿಸಿಕೊಂಡರು.

Written Update on actress nandini gowda

ನಿರ್ದೇಶಕರು, ಸಹ ನಟರು, ಹಿರಿಯರು ಹೇಳಿಕೊಟ್ಟಿದ್ದನ್ನು ಕಲಿತು ನಟನೆಯಲ್ಲಿ ಒಂದು ಹಂತವನ್ನೂ ತಲುಪಿದರು. ಇದಾದ ಬಳಿಕವೇ ನಂದಿನಿ ಅವರು ಟಿಎನ್ ಸೀತಾರಾಮ್ ಅವರ ಧಾರಾವಾಹಿಗೆ ಆಯ್ಕೆ ಆಗಿದ್ದರು. ಸೀತಾರಾಮ್ ಅವರ ಗರಡಿಯಲ್ಲಿ ಪಳಗಿದ ನಂದಿನಿ ಅವರು ಮಿಂಚು, ಮುಕ್ತ ಮುಕ್ತ ಧಾರಾವಾಹಿಗಳಲಿ ಅದ್ಭುತವಾಗಿ ನಟಿಸಿದರು.

ಹಿಟ್ ಧಾರಾವಾಹಿಗಳ ಒಡತಿ ನಂದಿನಿ ಗೌಡ

ಬಳಿಕ ಸೇತುರಾಂ ಅವರ ಮಂಥನಾ ಅಂತಹ ಹಿಟ್ ಧಾರಾವಾಹಿಗಳಲ್ಲಿ ಒಳ್ಳೊಳ್ಳೆಯ ಪಾತ್ರಗಳ ಮೂಲಕ ಜನಮನಗಳನ್ನು ಗೆದ್ದಿದ್ದರು. ಲಕ್ಷಾಂತರ ಜನರ ಮನ ಗೆದ್ದಿದ್ದರು. ಕೋವಿಡ್ ಸಂದರ್ಭದಲ್ಲಿ ಯುವಕರು, ಹಿರಿಯರು, ಮಕ್ಕಳು ಎಲ್ಲರೂ ಮನೆಯ್ಲಲೇ ಲಾಕ್ ಆಗಿದ್ದ ಸಂದರ್ಭದಲ್ಲಿ ಮತ್ತದೇ ಮಾಯಾಮೃಗ, ಮಂಥನಾ, ಮುಕ್ತ ಮುಕ್ತ, ಮಿಂಚು, ಮನ್ವಂತರ, ದಿಬ್ಬಣ, ಅನಾವರಣ ದಂತಹ ಧಾರಾವಾಹಿಗಳನ್ನು ನೋಡಿದರು.

ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದ ನಂದಿನಿ ಗೌಡ ಅವರ ಅಭಿಮಾನಿಗಳ ಸಂಖ್ಯೆ ಈಗ ಇನ್ನಷ್ಟು ಹೆಚ್ಚಾಗಿದೆ. ಕನ್ನಡ ವಾಹಿನಿಯ ಇತರೆ ಧಾರಾವಾಹಿಗಳಲ್ಲಿ ನಟಿಸಿದ ನಂದಿನಿ ಅವರು ಮೂಡಲ ಮನೆ, ನಂದಗೋಕುಲ, ಕಸ್ತೂರಿ ನಿವಾಸ, ಮರಳಿ ಮನಸಾಗಿದೆ, ಲಕ್ಷ್ಮೀ ಬಾರಮ್ಮ ಸೇರಿದಂತೆ ಹತ್ತು ಹಲವು ಧಾರಾವಾಹಿಗಳಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸಿದರು.

Written Update on actress nandini gowda

ಕನ್ನಡ ಕಿರುತೆರೆಯ ಮೆಚ್ಚಿನ ನಟಿ

ಹೀಗೆ ಒಂದಾದ ಮೇಲೆ ಒಂದು ಧಾರಾವಾಹಿಯಲ್ಲಿ ನಟಿಸುತ್ತಿದ್ದ ನಂದಿನಿ ಗೌಡ ಅವರು ತಿಂಗಳ 30ದಿನಗಳು ಕೂಡ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುತ್ತಿದ್ದರಂತೆ. ಒಂದೇ ಬಾರಿಗೆ ಎರಡು ಮೂರು ಧಾರಾವಾಹಿಗಳಲ್ಲಿ ಪ್ರಮುಖ ಧಾರಾವಾಹಿಗಳಲ್ಲಿ ನಟಿಸುತ್ತಿದ್ದರಂತೆ.

ತಮಿಳು, ಮಳಯಾಳಿ, ತೆಲುಗು ಕಿರುತೆರೆಗಳಿಂದಲೂ ಆಫರ್ ಗಳು ಬಂದರೂ ಒಪ್ಪಿಕೊಳ್ಳಲು ಸಮಯವೇ ಸಾಕಾಗುತ್ತಿರಲಿಲ್ಲವಂತೆ. ಹಾಗಾಗಿ ನಟಿ ನಂದಿನಿ ಗೌಡ ಅವರು ಕನ್ನಡ ಕಿರುತೆರೆಯಲ್ಲೇ ಉಳಿದುಕೊಂಡಿದ್ದಾರೆ. ಸದ್ಯ ನಂದಿನಿ ಗೌಡ ಅವರು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಶ್ರೀಗೌರಿ ಧಾರಾವಾಹಿಯಲ್ಲಿ ನಾಯಕನ ತಾಯಿ ಆಗಿ ಕಾಣಿಸಿಕೊಂಡಿದ್ದಾರೆ.

ಇಷ್ಟು ದಿನಗಳಲ್ಲಿ ಮಾಡಿದ ಪಾತ್ರಗಳಿಗಿಂತಲೂ ಡಿಫರೆಂಟ್ ಆಗಿರುವ ಈ ಪಾತ್ರವನ್ನು ನಂದಿನಿ ಗೌಡ ಅವರು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ. ನಂದಿನಿ ಗೌಡ ಅವರು ಕಿರುತೆರೆ ಪಯಣ ಹೀಗೆ ಮುಂದೆ ಸಾಗಲಿ ಎಂದು ಹಾರೈಸೋಣ.

More from Filmibeat

English summary
actress nandini gowda films and serials journey
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X