Nayana Nagaraj ; ಸುಹಾಸ್ ಜೊತೆಗೆ ದಾಂಪತ್ಯ ಬದುಕಿಗೆ ಹಾಯ್ ಎಂದು ನಟಿ ನಯನಾ ನಾಗರಾಜ್..!

By ಪ್ರಿಯಾ ದೊರೆ

ಕಿರುತೆರೆ ನಟ-ನಟಿಯರು, ಬಣ್ಣದ ಲೋಕದಿಂದ ದೂರ ಉಳಿದರೂ ಕೂಡ, ಅವರ ವಯಕ್ತಿಕ ಬದುಕಿನ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲಗಳು ಕಡಿಮೆ ಆಗುವುದೇ ಇಲ್ಲ. ಸದಾ ತಮ್ಮ ನೆಚ್ಚಿನ ನಟ-ನಟಿಯರು ಈಗ ಏನು ಮಾಡುತ್ತಿದ್ದಾರೆ. ಎಲ್ಲಿದ್ದಾರೆ. ಅವರ ಬದುಕಿನಲ್ಲಿ ಏನೆನೆಲ್ಲಾ ನಡೆಯುತ್ತಿದೆ. ಎಂಬೆಲ್ಲಾ ಪ್ರಶ್ನೆಗಳಿಗೆ ಅಭಿಮಾನಿಗಳು ಸದಾ ಉತ್ತರ ಹುಡುಕುತ್ತಿರುತ್ತಾರೆ. ತಮ್ಮ ನೆಚ್ಚಿನ ಕಲಾವಿದರ ಬಗ್ಗೆ ಸಣ್ಣ ಮಾಹಿತಿ ಸಿಕ್ಕರೂ ತಿಳಿದುಕೊಳ್ಳಲು ಖುಷಿ ಪಡುತ್ತಾರೆ. ಕಲಾವಿದರ ಬದುಕಿನಲ್ಲಿ ಸಂತಸದ ಸುದ್ದಿಗೆ ಖುಷಿ ಪಡುತ್ತಾ, ದುಃಖದ ವಿಚಾರಕ್ಕೆ ಕಣ್ಣೀರು ಹಾಕುತ್ತಾರೆ ಅಭಿಮಾನಿಗಳು.

ದಾಂಪತ್ಯ ಬದುಕಿಗೆ ಹಾಯ್ ಎಂದ ನಟಿ

ಇದೀಗ ಗಿಣಿರಾಮ ನಟಿ ಹೊಸ ಬಾಳಿಗೆ ನಾಂದಿ ಹಾಡಿದ್ದು, ಅವರ ಭವಿಷ್ಯಕ್ಕೆ ವಿಶ್ ಮಾಡುತ್ತಾ, ನಟಿಯ ಖುಷಿಯ ಕ್ಷಣಗಳನ್ನು ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಗಿಣಿರಾಮ ಧಾರಾವಾಹಿಯಲ್ಲಿ ಮಹತಿ ಪಾತ್ರದ ಮೂಲಕ ಜನಪ್ರಿಯತೆಯನ್ನು ಪಡೆದ ನಟಿಯೇ ನಯನಾ ನಾಗರಾಜ್. ಸದ್ಯ ಇವರ ಜೀವನದಲ್ಲಿ ಬಡ್ತಿ ಪಡೆದಿದ್ದು, ದಾಂಪತ್ಯ ಜೀವನಕ್ಕೆ ನಾಂದಿ ಹಾಡಿದ್ದಾರೆ. ಈ ಖುಷಿಯ ವಿಚಾರವನ್ನು ತಿಳಿದ ಅಭೀಮಾನಿಗಳು ಕೂಡ ಫುಲ್ ಹ್ಯಾಪಿ ಆಗಿದ್ದಾರೆ. ನಯನಾ ಅವರ ಹೊಸ ಬದುಕಿಗೆ ವಿಶ್ ಮಾಡಿದ್ದು, ಸಂಭ್ರಮಿಸಿದ್ದಾರೆ.

written-update-on-actress-nayana-nagaraj-new-life

ಸುಹಾಸ್ ಜೊತೆಗೆ ಹೊಸ ಬಾಳಿಗೆ ಎಂಟ್ರಿ

ಹೌದು ನಟಿ ನಯನಾ ನಾಗರಾಜ್ ಅವರು ನಿನ್ನೆಯಷ್ಟೇ ಸಪ್ತಪದಿ ತುಳಿದಿದ್ದು, ತಮ್ಮ ಮದುವೆಯ ವಿಚಾರವನ್ನು ಬಹಿರಂಗ ಪಡಿಸಿರಲಿಲ್ಲ. ಆದರೆ, ಖುಷಿಯ ಕ್ಷಣಗಳ ಫೋಟೋಗಳನ್ನು ಹಂಚಿಕೊಂಡಿದ್ದು, ಇದನ್ನು ನೋಡಿದ ಕೂಡಲೇ ಅಭಿಮಾನಿಗಳು ಶುಭಾಷಯಗಳನ್ನು ತಿಳಿಸಿದ್ದಾರೆ. ಒಂಟಿ ಜೀವನಕ್ಕೆ ಬ್ರೇಕ್ ಹಾಕಿದ ನಟಿ ನಯನಾ ಅವರು ಸದ್ದಿಲ್ಲದೇ, ಮದುವೆಯಾಗಿದ್ದಾರೆ. ಸುಹಾಸ್ ಶಿವಣ್ಣ ಎಂಬುವರ ಜೊತೆಗೆ ನಯನಾ ಅವರು ಸಪ್ತಪದಿ ತುಳಿದಿದ್ದಾರೆ. ಹಾಡು, ನೃತ್ಯ, ನಿರೂಪಣೆ, ನಟನೆ ಯಾವುದರಲ್ಲೂ ಹಿಂದೆ ಸರಿಯದ ನಟಿ ನಯನಾ ನಾಗರಾಜ್ ಅವರ ಕುಟುಂಬದಲ್ಲಿ ಸಂಭ್ರಮ ಡಬಲ್ ಆಗಿದೆ. ನಯನಾ ಅವರಿಗೆ ಅಭಿಮಾನಿಗಳು, ಸ್ನೇಹಿತರು, ಸಹ ಕಲಾವಿದರು ವಿಷ್ ಮಾಡಿದ್ದು ಶುಭ ಹಾರೈಸಿದ್ದಾರೆ.

ನಿಶ್ಚಿತಾರ್ಥ ಮಾಡಿಕೊಂಡು ಶಾಕ್ ಕೊಟ್ಟಿದ್ದ ನಟಿ

ಕಳೆದ ಕೆಲ ತಿಂಗಳ ಹಿಂದೆ ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡ ನಯನಾ ಅವರು ಎಂಗೇಜ್ ಮೆಂಟ್ ನ ಫೋಟೋ ಹಾಗೂ ವೀಡಿಯೋಗಳನ್ನು ಶೇರ್ ಮಾಡಿಕೊಂಡಿದ್ದರು. ಮನೆಯಲ್ಲೇ ಕುಟುಂಬದವರೊಂದಿಗೆ ಎಂಗೇಜ್ ಮೆಂಟ್ ಕಾರ್ಯಕ್ರಮವನ್ನು ಸಿಂಪಲ್ ಆಗಿ ಮಾಡಿಕೊಂಡಿದ್ದರು. ನಿಶ್ಚಿತಾರ್ಥದ ಫೋಟೋಗಳನ್ನು ನೋಡಿದವರೆಲ್ಲಾ ಶಾಕ್ ಆಗಿದ್ದರು. ಇದೀಗ ಮದುವೆಯನ್ನೂ ಕೂಡ ಹಾಗೆಯೇ ಸಿಂಪಲ್ ಆಗಿ ಸದ್ದಿಲ್ಲದೇ ಮಾಡಿಕೊಂಡಿದ್ದಾರೆ. ಇನ್ನು ನಟಿಸುವ ಆಸೆಯಿಂದ ನಯನಾ ಅವರು ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದರು. ಭರತನಾಟ್ಯ ಕಲಾವಿದೆಯಾಗಿರುವ ನಯನಾ ಅವರು ಗಾಯಕಿಯೂ ಹೌದು. ಕೆಲ ಕಾರ್ಯಕ್ರಮಗಳಲ್ಲಿ ಹಾಡು ಹಾಡುತ್ತಾರೆ. ಜೊತೆಗೆ ನಿರೂಪಣೆಯನ್ನೂ ಕೂಡ ಮಾಡುತ್ತಾರೆ.

written-update-on-actress-nayana-nagaraj-new-life

ನಯನಾ ಮದುವೆಯಲ್ಲಿ ಸಹ ಕಲಾವಿದರು

ನಯನಾ ಅವರು ಶಾಂತಂ ಪಾಪಂ, ಪಾಪ ಪಾಂಡು ಹಾಗೂ ಗಿಣಿರಾಮ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಪಾಪ ಪಾಂಡು ಹಾಗೂ ಗಿಣಿರಾಮ ಮೂಲಕ ಚಿರಪರಿಚಿತರಾಗಿದ್ದಾರೆ. ರಂಗಭೂಮಿಯಲ್ಲಿ ಈಗಲೂ ಸಕ್ರಿಯರಾಗಿರುವ ನಟಿ ನಯನಾ ಅವರ ಪತಿಯೂ ಕೂಡ ರಂಗಭೂಮಿ ಕಲಾವಿದರೇ. ಇಬ್ಬರೂ ಆಗಾಗ ಕೆಲ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಹಾಡು ಹಾಡಿದ್ದಾರೆ. ಇನ್ನು ಇವರ ಮದುವೆಗೆ ಕಿರುತೆರೆ ಗೆಳೆಯರು ಕೂಡ ಆಗಮಿಸಿದ್ದರು. ಗಿಣಿರಾಮ ಧಾರಾವಾಹಿಯಲ್ಲಿ ಜೋಡಿಯಾಗಿ ನಟಿಸಿದ್ದ ನಟ ರಿತ್ವಿಕ್ ಮಠದ್ ಹಾಗೂ ನಟ ಸಿಹಿ ಕಹಿ ಚಂದ್ರು ಕುಟುಂಬ ಕೂಡ ಮದುವೆಯ ಸಮಾರಂಭದಲ್ಲಿ ಭಾಗಿಯಾಗಿದ್ದರು.

More from Filmibeat

English summary
jaidev gol mall in his own company. This makes bhoomika feel worried
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X