Neha Gowda ; ಪ್ರೆಗ್ನೆನ್ಸಿ ಜರ್ನಿಯನ್ನು ಹಂಚಿಕೊಂಡಿರುವ ನಟಿ ನೇಹಾ ಗೌಡ
ತುಂಬು ಗರ್ಭಿಣಿ ಆಗಿರುವ ನಟಿ ನೇಹಾ ಗೌಡ ಅವರ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ಮದುವೆಯಾಗಿ ಆರು ವರ್ಷಗಳ ಬಳಿಕ ಗರ್ಭಿಣಿ ಆಗಿರುವ ಕಾರಣ ತವರು ಮನೆ ಹಾಗೂ ಪತಿ ಮನೆಯವರು ಸಂಭ್ರಮದಲ್ಲಿದ್ದಾರೆ. ಇತ್ತೀಚೆಗಷ್ಟೇ ನೇಹಾ ಗೌಡ ಅವರ ಮನೆಯಲ್ಲಿ ಸೀಮಂತ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಮಾಡಲಾಗಿತ್ತು. ಕುಟುಂಬದವರೆಲ್ಲಾ ನೇಃಆ ಮತ್ತು ಮುಂಬರುವ ಮಗುವಿಗೆ ಆಶೀರ್ವಾದ ಮಾಡಿದ್ದರು. ಬಳಿಕ ಸ್ನೇಹಿತರೆಲ್ಲಾ ಸೇರಿ ಬೇಬಿ ಶವರ್ ಕೂಡ ಏರ್ಪಡಿಸಿದ್ದರು. ಕಿರುತರೆ ಕಲಾವಿದರೆಲ್ಲರೂ ನೇಹಾ ಗೌಡ ಅವರ ಬೇಬಿ ಶವರ್ ಗೆ ಆಗಮಿಸಿ ಶುಭ ಹಾರೈಸಿದ್ದಾರೆ.
ಕ್ರಶ್, ಲವ್ವರ್ ಆಗಿ ಗಂಡನಾಗಿದ್ದು ಹೇಗೆ..?
ನೇಹಾ ಗೌಡ ಅವರು ಹಲವು ವರ್ಷಗಳಿಂದ ಕನ್ನಡ, ತೆಲುಗು ಹಾಗೂ ತಮಿಳು ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ. ನೇಹಾ ಅವರು ಶಾಲೆಯ ದಿನಗಳಿಂದಲೇ ಪ್ರೀತಿಯಲ್ಲಿ ಬಿದ್ದವರು. ಪ್ರೀತಿಸಿದ ಹುಡುಗನನ್ನೇ ವರಿಸಿದ್ದಾರೆ ಕೂಡ. ಚಂದನ್ ಹಾಗೂ ನೇಹಾ ಬಾಲ್ಯದ ಸ್ನೇಹಿತರು. ಇಬ್ಬರು ಪ್ರೀತಿಸಿ, ಲವ್ ಕಮ್ ಅರೇಂಜ್ ಮ್ಯಾರೇಜ್ ಆಗಿದ್ದಾರೆ. ಪ್ರಿಕೆಜಿಯಲ್ಲಿದ್ದಾಗ ಚಂದನ್ ನನ್ನ ಶತ್ರು ಆಗಿದ್ದ ಎಂದು ಅವರೇ ಹೇಳಿಕೊಂಡಿದ್ದರು, ಆಮೇಲೆ ಗೆಳೆಯನಾಗಿ ಕ್ರಶ್ ಆಗಿ, ಲವ್ವರ್ ಆಗಿ ಈಗ ಗಂಡನಾಗಿದ್ದಾನೆ ಎಂದು ಹೇಳಿದ್ದಾರೆ. ಇವರಿಬ್ಬರ ಮದುವೆ ಫೆಬ್ರವರಿ 18, 2018ರಂದು ನೆರವೇರಿತ್ತು. ಬೆಂಗಳೂರಿನಲ್ಲಿ ಚಂದನ್ ಜೊತೆ ಸಪ್ತಪದಿ ತುಳಿದ ನೇಹಾ ಗೌಡ ಅವರ ಮದುವೆಗೆ ಕನ್ನಡ ಚಿತ್ರರಂಗದ ಹಲವು ಗಣ್ಯರು ಆಗಮಿಸಿದ್ದರು.

ಕಿರುತೆರೆಯಲ್ಲಿ ಬ್ಯುಸಿ ಇದ್ದ ನಟಿ
ಇನ್ನು ಚಂದನ್ ಮತ್ತು ನೇಹಾ ಗೌಡ ರಾಜಾ ರಾಣಿ ಶೋ ನಲ್ಲಿ ದಂಪತಿಗಳಾಗಿ ಭಾಗವಹಿಸಿದ್ದರು. ಬಳಿಕ ಚಂದನ್ ಡ್ಯಾನ್ಸಿಂಗ್ ಚಾಂಪಿಯನ್ ಶೋ ನಲ್ಲಿ ಸ್ಫರ್ಧಿಯಾಗಿದ್ದರು. ತದನಂತರ ಈಗ ಅಂತರಪಟ ಧಾರಾವಾಹಿಯಲ್ಲಿ ನಾಯಕನಾಗಿ ಮಿಂಚುತ್ತಿದ್ದಾರೆ. ನೇಹಾ ಅವರು ಕೂಡ ತೆಲುಗು, ತಮಿಳಿನ ಧಾರಾವಾಹಿಗಳಲಿನ ಲೀಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಕನ್ನಡದ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಗೊಂಬೆ ಪಾತ್ರದ ಮೂಲಕ ಚಿರಪರಿಚಿತರಾಗಿದ್ದರು. ಬಳಿಕ ಸಣ್ಣ ಪುಟ್ಟ ಗೆಸ್ಟ್ ರೋಲ್ ಗಳಲ್ಲಿ ಕಾಣಿಸಿಕೊಂಡಿದ್ದರು. ಕಳೆದ ವರ್ಷ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾದ ನಮ್ಮ ಲಚ್ಚಿ ಸೀರಿಯಲ್ ನಲ್ಲೂ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು.
ಪ್ಲಾನ್ ಮಾಡಿಕೊಂಡು ಪ್ರೆಗ್ನೆಂಟ್ ಆಗಿರುವ ನೇಹಾ
ಸದ್ಯ ನೇಹಾ ಅವರು ತಮ್ಮ ಪ್ರೆಗ್ನೆನ್ಸಿ ಜರ್ನಿಯನ್ನು ಎಂಜಾಯ್ ಮಾಡುತ್ತಿದ್ದಾರೆ. ಮಗು ಮತ್ತು ತಮ್ಮ ಆರೋಗ್ಯದ ಬಗ್ಗೆ ಬಹಳ ಕಾಳಜಿ ಹೊಂದಿರುವ ನೇಹಾ ಅವರು, ಯೋಗ ಮಾಡುತ್ತಾರೆ. ಹೊರಗಡೆ ಊಟಕ್ಕೆ ಬ್ರೇಕ್ ಹಾಕಿದ್ದು, ಏನೇ ಬೇಕಿದ್ದರೂ ಮನೆಯಲ್ಲಿ ಕೇಳಿ ಮಾಡಿಸಿಕೊಂಡು ಸವಿಯುತ್ತಿದ್ದಾರೆ. ಇನ್ನು ನೇಹಾ ಅವರು ತಮಗೆ ಮದುವೆಯಾದಾಗಿನಿಂದ ಮಗು ಮಾಡಿಕೊಳ್ಳಲು ಸಮಯವಿರಲಿಲ್ಲ. ಹಾಗಾಗಿ ಪ್ಲಾನ್ ಮಾಡಿ ಈಗ ಮಗು ಮಾಡಿಕೊಂಡಿದ್ದೇವೆ ಎಂದು ಹೇಳಿದ್ದಾರೆ.

ಕುಟುಂಬದಲ್ಲಿ ಮನೆ ಮಾಡಿರುವ ಸಂಭ್ರಮ
ಮದುವೆಯಾಗಿ ಆರು ವರ್ಷ ವಾದರೂ ಕೂಡ ಕಮಿಟ್ ಮೆಂಟ್ ಗಳು ಇದ್ದ ಕಾರಣ ತಾಯಾಗುವ ಆಸೆಯನ್ನು ಮುಂದೂಡುತ್ತಿದ್ದೆವು. ಆದರೆ ಈ ಬಾರಿ ಯಾವುದೇ ಕಾರಣಕ್ಕೂ ಬೇರೆ ಕೆಲಸಕ್ಕೆ ಒತ್ತು ಕೊಡಬಾರದು ಎಂದು ತೀರ್ಮಾನಿಸಿದ್ದೆ. ನಾನು ಪ್ರೆಗ್ನೆಂಟ್ ಎಂದು ಗೊತ್ತಾದಾಗ ತಮ್ಮ ವಾರಗಿತ್ತಿ ಕೂಡ ಕಣ್ಣಲ್ಲಿ ನೀರು ಹಾಕಿದ್ದರು. ನಮ್ಮೆಲ್ಲರಿಗೂ ಬಹಳ ಖುಷಿಯಾಗಿತ್ತು ಎಂದು ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.


Click it and Unblock the Notifications











