Neha Gowda ; ನಾವೇ ಕಂಡ ಕನಸು ಎನ್ನುತ್ತಿರುವ ನಟಿ ನೇಹಾ ಗೌಡ, ಪ್ರೆಗ್ನೆನ್ಸಿ ಫೋಟೋಶೂಟ್ ಮಾಡಿಸಿಕೊಂಡ ನಟಿ..!
ನಟಿ ನೇಹಾ ಗೌಡ ಈಗ ತುಂಬು ಗರ್ಭಿಣಿ. ಮದುವೆಯಾಗಿ ಆರು ವರ್ಷಗಳಾದ ಬಳಿಕ ಗರ್ಭಿಣಿ ಆಗಿದ್ದು, ನೇಹಾ ಅವರ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ.ಕಳೆದ ತಿಂಗಳಷ್ಟೇ ನೇಹಾ ಅವರು ಸೀಮಂತ ಮಾಡಿಕೊಂಡಿದ್ದರು. ಜೊತೆಗೆ ಅದ್ಧೂರಿ ಬೇಬಿ ಶವರ್ ಕೂಡ ನಡೆದಿತ್ತು. ಕಾರ್ಯಕ್ರಮಕ್ಕೆ ನೇಹಾ ಅವರ ಕಿರುತೆರೆ ಕಲಾವಿದರು ಆಗಮಿಸಿದ್ದರು. ಕೆಲವೇ ದಿನಗಳಲ್ಲಿ ನೇಹಾ ಗೌಡ ಅವರಿಗೆ ಡೆಲಿವರಿಯಾಗಲಿದೆ. ತುಂಬು ಗರ್ಭಿಣಿಯನ್ನು ಎಲ್ಲರು ಹರಸಿ, ಹೆರಿಗೆ ಸುಸೂತ್ರವಾಗಲೆಂದು ಹಾರೈಸುತ್ತಿದ್ದಾರೆ.
ತಾಯ್ತನದ ಖುಷಿಯಲ್ಲಿರುವ ನಟಿ ನೇಹಾ
ನೇಹಾ ಅವರ ಸೀಮಂತ ಕಾರ್ಯಕ್ರಮಕ್ಕೆ ಕುಟುಂಬದವರು, ಸಂಬಂಧಿಕರು, ಸ್ನೇಹಿತರಷ್ಟೇ ಅಲ್ಲದೇ, ರಶ್ಮೀ ಪ್ರಭಾಕರ್, ತನ್ವಿ ಬಾಲರಾಜ್, ಜ್ಯೋತಿ ಕಿರಣ್, ಕೃತಿಕಾ ಗಣೇಶ್, ಶಾಸ್ತ್ರಿ, ಸ್ವಪ್ನಕೃಷ್ಣ, ಶರ್ಮಿಲಾ ಚಂದ್ರಶೇಖರ್, ಕವಿತಾ ಗೌಡ ದಂಪತಿ ಸೇರಿದಂತೆ ಇಡೀ ಕಿರುತೆರೆ ಕಲಾವಿದರೇ ಆಗಮಿಸಿದ್ದರು. ಬಹಳ ಅದ್ಧೂರಿಯಾಗಿ ನೇಹಾ ಅವರ ಬೇಬಿ ಶವರ್ ನಡೆದಿತ್ತು. ಎಲ್ಲರೂ ಒಟ್ಟಿಗೆ ಸೇರಿ ನೇಹಾ ಗೌಡ ಹಾಗೂ ಅವರಿಗೆ ಜನಿಸಲಿರುವ ಮಗುವಿಗೆ ಶುಭ ಹಾರೈಸಿದರು. ಇನ್ನು ನೇಹಾ ಗೌಡ ಅವರು ಜೂನ್ ತಿಂಗಳ ಮೊದಲ ವಾರದಲ್ಲಿ ತಮ್ಮ ಪ್ರೆಗ್ನೆನ್ಸಿ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ಮಗುವಿನ ಬಗ್ಗೆ ಕಾಳಜಿ ಹೊಂದಿರುವ ನೇಹಾ
ಇದಾದ ಬಳಿಕ ನಟಿ ನೇಹಾ ಅವರು ತಮ್ಮ ಪ್ರೆಗ್ನೆನ್ಸಿ ಪಿರೀಯಡ್ ಅನ್ನು ಸಕತ್ ಎಂಜಾಯ್ ಮಾಡುತ್ತಿದ್ದಾರೆ. ಆಗಾಗ ಫೊಟೋಗಳನ್ನು ತೆಗೆಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡುತ್ತಿರುತ್ತಾರೆ. ಮಗು ಮತ್ತು ತಮ್ಮ ಆರೋಗ್ಯದ ಬಗ್ಗೆ ಬಹಳ ಕಾಳಜಿ ಹೊಂದಿರುವ ನೇಹಾ ಅವರು, ಯೋಗ ಮಾಡುತ್ತಾರೆ. ಹೊರಗಡೆ ಊಟಕ್ಕೆ ಬ್ರೇಕ್ ಹಾಕಿರುವ ನೇಹಾ ಅವರು ತಮಗೆ ಏನೇ ಬೇಕಿದ್ದರೂ ಮನೆಯಲ್ಲಿ ಕೇಳಿ ಮಾಡಿಸಿಕೊಂಡು ತಿನ್ನುತ್ತಾರಂತೆ. ಇನ್ನು ನೇಹಾ ಅವರು ತಮಗೆ ಮದುವೆಯಾದಾಗಿನಿಂದ ಮಗು ಮಾಡಿಕೊಳ್ಳಲು ಸಮಯವಿರಲಿಲ್ಲ. ಹಾಗಾಗಿ ಪ್ಲಾನ್ ಮಾಡಿ ಈಗ ಮಗು ಮಾಡಿಕೊಂಡಿದ್ದೇವೆ ಎಂದು ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಡಿಫರೆಂಟ್ ಪ್ರೆಗ್ನೆನ್ಸಿ ಫೋಟೋಗಳು
ಪ್ರಗ್ನೆನ್ಸಿ ಅನೌನ್ಸ್ ಮಾಡಿದಾಗಿನಿಂದಲೂ ನೇಹಾ ಅವರು ಡಿಫರೆಂಟ್ ಆಗಿ ನೇಹಾ ಗೌಡ ಫೋಟೋ ಶೂಟ್ ಮಾಡಿಸಿಕೊಳ್ಳುತ್ತಿದ್ದಾರೆ. ಪ್ರತೀ ಹಬ್ಬಕ್ಕೂ ಸೀರೆಯುಟ್ಟು ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ನಟಿ ಅನುಪಮಾ ಗೌಡ, ನಟ ಶಾಸ್ತ್ರಿ ಸೇರಿದಂತೆ ಆಪ್ತರೊಂದಿಗೆ ಡಿಫರೆಂಟ್ ಆಗಿ ಫೋಟೋಗಳನ್ನು ತೆಗೆಸಿಕೊಂಡಿದ್ದರು. ಅಲ್ಲದೇ ಕಳೆದ ವಾರ ನೇಹಾ ಗೌಡ ಅವರು ಮಾಡ್ರನ್ ಶಕುಂತಲೇಯಂತೆ ಬಿಳಿ ಸೀರೆಯುಟ್ಟು ಫೋಟೋಗಳನ್ನು ತೆಗೆಸಿಕೊಂಡಿದ್ದರು. ನೇಹಾ ಗೌಡ ಫೋಟೋ ನೋಡಿದ ಅಭಿಮಾನಿಗಳು ಬಹಳ ಖುಷಿಯಾಗಿದ್ದಾರೆ. ಇದೀಗ ಪುನಃ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.
ಹೊಸ ಫೋಟೋಶೂಟ್ ಮಾಡಿಸಿದ ನೇಹಾ
ಇನ್ನು ಇದೀಗ ನಟಿ ನೇಹಾ ಅವರು ಪರ್ಪಲ್ ಕಲರ್ ಪಾರಟಿ ವೇರ್ ಸೀರೆಯನ್ನು ಉಟ್ಟಿದ್ದು, ಬೇಬಿ ಬಂಪ್ ಫೋಟೋ ಹಾಗೂ ವೀಡಿಯೋ ತೆಗೆಸಿಕೊಂಡಿದ್ದಾನೆ. ಪತಿಯೂ ಈ ಫೋಟೋಶೂಟ್ ನಲ್ಲಿದ್ದು, ಸಪ್ತಸಾಗರದಾಚೆ ಎಲ್ಲೋ ಸಿನಿಮಾದ ನಾವೇ ಕಂಡ ಕನಸು ಎಂದು ಹಾಡಿನ ಸಾಲನ್ನು ವೀಡಿಯೋ ಜೊತೆಗೆ ಲಿಂಕ್ ಮಾಡಿ ಶೇರ್ ಮಾಡಿಕೊಂಡಿದ್ದಾರೆ. ಕನಸು ಕಂಡು ಪ್ಲಾನ್ ಮಾಡಿ ಗರ್ಭಿಣಿ ಆಗಿರುವ ನೇಹಾ ಅವರು ತಮ್ಮ ಚೊಚ್ಚಲ ಮಗುವಿನ ಮೇಲೆ ಸಾಕಷ್ಟು ಭರವಸೆಯನ್ನು ಹೊಂದಿದ್ದಾರೆ. ನೇಹಾ ಅವರಿಗೆ ಸುಸೂತ್ರವಾಗಿ ಹೆರಿಗೆಯಾಗಲೀ ಎಂದು ನಾವೂ ಕೂಡ ಶುಭ ಹಾರೈಸೋಣ.


Click it and Unblock the Notifications











