Pooja Lokesh ; ಹೇಗಿತ್ತು 'ಸೀತಾರಾಮ'ದ ಭಾರ್ಗವಿಯ ಹುಟ್ಟುಹಬ್ಬದ ಸಂಭ್ರಮ..?

By ಪ್ರಿಯಾ ದೊರೆ

ಪೂಜಾ ಲೋಕೇಶ್‌ ಹಲವು ವರ್ಷಗಳ ಬಳಿಕ ಮತ್ತೆ ಕನ್ನಡದ ಕಿರುತೆರೆಯಲ್ಲಿ ಛಾಪು ಮೂಡಿಸಿದ್ದಾರೆ. ಸೀತಾರಾಮ ಧಾರಾವಾಹಿಯಲ್ಲಿ ವಿಲನ್‌ ಪಾತ್ರಕ್ಕೆ ಬಣ್ಣ ಹಚ್ಚಿದ್ದು, ಪೂಜಾ ಅವರ ನಟನೆಯನ್ನು ವೀಕ್ಷಕರು ಭೇಷ್‌ ಎಂದಿದ್ದಾರೆ.ಕನ್ನಡ ಮಾತ್ರವಲ್ಲದೇ, ತೆಲುಗು, ತಮಿಳು ಭಾಷೆಯಲ್ಲೂ ಕಮಾಲ್ ಮಾಡಿರುವ ಪೂಜಾ ಲೋಕೇಶ್‌ ಅವರು ಕನ್ನಡ ಕಿರುತೆರೆಯಲ್ಲಿ ಸದ್ಯ ಬ್ಯುಸಿಯಾಗಿದ್ದಾರೆ. ಹಲವು ವರ್ಷಗಳ ಬಳಿಕ ಇದೀಗ ನಟಿ ಪೂಜಾ ಅವರು ಭಾರ್ಗವಿ ಪಾತ್ರದ ಮೂಲಕ ಫೇಮಸ್ ಆಗಿದ್ದು, ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

ಸಿನಿಮಾಗಳಿಂದ ಧಾರಾವಾಹಿಯಲ್ಲಿ ನಟಿಸಿದ ನಟಿ

ಹಿರಿಯ ನಟ ಲೋಕೇಶ್‌ ಹಾಗೂ ಹಿರಿಯ ನಟಿ ಗಿರಿಜಾ ಲೋಕೇಶ್‌ ಅವರ ಮುದ್ದಿನ ಮಗಳು ಪೂಜಾ. ಪೂಜಾ ಅವರು ಸ್ಯಾಂಡಲ್‌ ವುಡ್‌ ನಲ್ಲಿ ಪೂಜಾ ಎಂಬ ಸಿನಿಮಾಗೆ ಮೊದಲ ಬಾರಿಗೆ ಬಣ್ಣ ಹಚ್ಚಿದ್ದರು. ಬಳಿಕ ಹುಲಿಯ, ಉಲ್ಟಾ ಪಲ್ಟಾ, ಯುದ್ಧ, ಛತ್ರಪತಿ, ಮ್ಯಾಜಿಕ್ ಅಜ್ಜಿ ಹಾಗೂ ಟೈಗರ್ ಗಲ್ಲಿ ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದರು. ಇದೀಗ ದಶಕಗಳ ಬಳಿಕ ಇದೀಗ ಪ್ರಭುತ್ವ ಎಂಬ ಸಿನಿಮಾಗೆ ಬಣ್ಣ ಹಚ್ಚಿದ್ದಾರೆ. ಸದ್ಯ ಭಾರ್ಗವಿಯಾಗಿ ಕನ್ನಡದ ಸೀತಾರಾಮ ಧಾರಾವಾಹಿಯಲ್ಲಿ ಮೋಡಿ ಮಾಡುತ್ತಿರುವ ಪೂಜಾ ಲೋಕೇಶ್ ಅವರ ಕಿರುತೆರೆ ಪಯಣ ಶುರುವಾಗಿದ್ದು ತಮಿಳು ಧಾರಾವಾಹಿಯಿಂದಲೇ. ಸನ್ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಕುಂಗುಮಂ ಧಾರಾವಾಹಿಯಲ್ಲಿ ನಟಿಸಿದ ಪೂಜಾ ಅವರು ಕಲ್ಕಿ, ಸೆಲ್ವಿ ಧಾರಾವಾಹಿಗಳಲ್ಲಿ ನಟಿಸಿದ್ದರು.

written update on actress pooja lokesh birthday

ಪೌರಾಣಿಕ ಧಾರಾವಾಹಿಯಲ್ಲೂ ಪೂಜಾ ನಟನೆ

ಬಳಿಕ ಅಂಜಲಿ, ಅತಿಪೂಕಲ್, ಗೀತಾಂಜಲಿ, ರೋಜಾ ಕೊಟ್ಟಂ, ಮುಂದಾನಾಯೈ ಮುಡಿಚ್ಚು, ಮುತಾರಾಂ ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡರು. ತಮಿಳಿನ ಪೌರಾಣಿಕ ಧಾರಾವಾಹಿ ಮಹಾಭಾರತದಲ್ಲೂ ಅಂಬಾ ಪಾತ್ರಕ್ಕೆ ಬಣ್ಣ ಹಚ್ಚಿದರು. ಈ ಪಾತ್ರ ಬರೋಬ್ಬರಿ ಮೂರು ವರ್ಷಗಳ ಕಾಲ ನಟಿಸಿದರು. ತದನಂತರ ತಮಿಳಿನ ಉಯಿರ್ಮೈ, ಮೀರಾ ಧಾರಾವಾಹಿಗಳಲ್ಲಿ ನಟಿಸಿದರು. ಕನ್ನಡದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳದ ಪೂಜಾ ಅವರು ದಶಕಗಳ ಬಳಿಕ ಈಗ ಸೀತಾ ರಾಮ ಧಾರಾವಾಹಿ ಮುಲಕ ಮತ್ತೆ ಕನ್ನಡ ಕಿರುತೆರೆಯಲ್ಲಿ ವಿಲನ್ ಭಾರ್ಗವಿ ಪಾತ್ರದಲ್ಲಿ ಮಿಂಚುತ್ತಿದ್ದಾರೆ.

ರಿಯಾಲಿಟಿ ಶೋಗಳಲ್ಲಿ ಗೆದ್ದು ಬೀಗಿದ ನಟಿ

ಇನ್ನು ನಟಿ ಪೂಜಾ ಅವರು ಕೇವಲ ಸಿನಿಮಾ, ಧಾರಾವಾಹಿಗಳು ಮಾತ್ರವಲ್ಲದೇ, ಕೆಲ ರಿಯಾಲಿಟಿ ಶೋಗಳಲ್ಲಿ ಭಾಗವಿಸಿ ವಿನ್ನರ್‌ ಪಟ್ಟವನ್ನು ಕೂಡ ಅಲಂಕರಿಸಿದ್ದಾರೆ. ಸ್ಟಾರ್ ವಿಜಯ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜೋಡಿ ನಂ1 ಸೀಸನ್ 1 ರಲ್ಲಿ ಭಾಗವಹಿಸಿದ್ದರು. ಇದರಲ್ಲಿ ಪೂಜಾ ಅವರು ವಿನ್ನರ್‌ ಆಗಿದ್ದರು. ಬಳಿಕ ಕಿಚನ್ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲೂ ಭಾಗವಹಿಸಿ ಇಲ್ಲು ಗೆದ್ದು ಬೀಗಿದರು. ಬಳಿಕ ಕಲರ್ಸ್ ತಮಿಳು ವಾಹಿನಿಯ ಪೊಟ್ಟಿಕ್ಕು ಪೊಟ್ಟಿ ರಿಯಾಲಿಟಿ ಶೋನಲ್ಲೂ ಈಕೆ ಸ್ಪರ್ಧಿಯಾಗಿ ನಟಿಸಿದ್ದರು.


ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ಪೂಜಾ

ಸದ್ಯ ಭಾರ್ಗವಿಯಾಗಿ ಬ್ಯುಸಿಯಾಗಿರುವ ನಟಿ, ತಾಯಿ ಹಾಗೂ ನಾದಿನಿ ಜೊತೆಗೆ ಯೂಟ್ಯೂಬ್ ನಲ್ಲಿ ಕಾಮಿಡಿ ಮಾಡುತ್ತಿರುತ್ತಾರೆ. ಸೃಜನ್ ಲೋಕೇಶ್ ಅವರು ಯೂಟ್ಯೂಬ್ ಚಾನೆಲ್ ನಲ್ಲಿ ಆಗಾಗ ಅಮ್ಮನೊಂದಿಗೆ ವೀಡಿಯೋಗಳನ್ನು ಮಾಡುತ್ತಿರುತ್ತಾರೆ. ಇಂದು ಪೂಜಾ ಲೋಕೇಶ್ ಅವರ ಹುಟ್ಟುಹಬ್ಬ ಹಿನ್ನೆಲೆ ಅವರಿಗೆ ಧಾರಾವಾಹಿಯ ತಂಡ ಸೇರಿದಂತೆ ಹಲವು ಕಲಾವಿದರು, ಗೆಳೆಯರು, ಕುಟುಂಬಸ್ಥರೆಲ್ಲಾ ವಿಶ್ ಮಾಡಿದ್ದಾರೆ. ಇಂದು ಪೂಜಾ ಅವರ ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಸ್ಟೋರಿಯಲ್ಲಿ ತಮ್ಮ ಹುಟ್ಟುಹಬ್ಬಕ್ಕೆ ಶುಭಾಷಯ ಕೋರಿದವರ ಪೋಸ್ಟ್ ಗಳೇ ತುಂಬಿ ಹೋಗಿವೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X