ಅಪ್ಪು ನೆನೆದ ನಟಿ ಪ್ರೀತಿ ಶ್ರೀನಿವಾಸ್ : ಪವರ್ ಸ್ಟಾರ್ ಬಗ್ಗೆ ಹೇಳಿದ್ದೇನು ಗೊತ್ತಾ..?

By ಪ್ರಿಯಾ ದೊರೆ

ತೆಲುಗು ಹಾಗೂ ಕನ್ನಡ ಕಿರುತೆರೆಯಲ್ಲಿ ವೀಕ್ಷಕರ ಮನ ಗೆದ್ದಿರುವ ನಟಿ ಪ್ರೀತಿ ಶ್ರೀನಿವಾಸ್ ಅವರ ವೀಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ನಟಿ ಪ್ರೀತಿ ಶ್ರೀನಿವಾಸ್ ಅವರು ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಹೊಸದಾಗಿ ಮೂಡಿ ಬರುತ್ತಿರುವ ಬ್ರಹ್ಮಗಂಟು ಧಾರಾವಾಹಿಯಲ್ಲಿ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಸೌಂದರ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪ್ರೀತಿ ಅವರು ದೊಡ್ಡ ಮನೆಯ ಹಿರಿ ಸೊಸೆಯಾಗಿದ್ದು, ನಾಯಕನಿಗೆ ಅತ್ತಿಗೆಯಾಗಿದ್ದಾಳೆ. ಆದರೆ, ನಾಯಕ ಚಿರು ಅತ್ತಿಗೆಯನ್ನು ತಾಯಿಯ ಸ್ಥಾನದಲ್ಲಿಟ್ಟು ಪೂಜಿಸುತ್ತಿದ್ದಾನೆ.

ಬ್ರಹ್ಮಗಂಟು ಸೌಂದರ್ಯ

ಬ್ರಹ್ಮಗಂಟು ಧಾರಾವಾಹಿಯಲ್ಲಿ ಸುಂದರವಾಗಿರುವ ಸೌಂದರ್ಯ, ತನ್ನ ಮೈದುನ ಚಿರುಗೆ ಒಂದು ಕಪ್ಪು ಮಚ್ಚೆಯೂ ಇರದಂತ ರೂಪವಂತೆಯನ್ನು ತಂದು ಮದುವೆ ಮಾಡಬೇಕು ಎಂದಿದ್ದಳು. ಆದರೆ, ಆಕೆಯ ಲೆಕ್ಕಾಚಾರ ಉಲ್ಟಾ ಆಗಿದ್ದು, ಕಪ್ಪಗಿರುವ ಹಳ್ಳಿ ಹುಡುಗಿ ದೀಪಾ ಎಂಬಾಕೆಯನ್ನು ಚಿರು ಮದುವೆಯಾಗುವಂತಾಗಿದೆ. ಇದರೀಮದ ಮನೆಯಲ್ಲಿ ಮನಸ್ಥಾಪಗಳಿದ್ದು, ದೀಪಾಳನ್ನು ಮನೆಯಿಂದ ಹೊರಗೆ ಕಳಿಸಬೇಕು. ಚಿರುಗೆ ಇನ್ನೊಂದು ಮದುವೆ ಮಾಡಬೇಕು ಎಂದು ಸಾಕಷ್ಟು ಪ್ರಯತ್ನಗಳನ್ನು ಪಡುತ್ತಿದ್ದಾಳೆ. ಮನೆಯ ಆಡಳಿತವೆಲ್ಲಾ ಸೌಂದರ್ಯ ಕೈಯಲ್ಲೇ ಇದ್ದು, ಆಕೆಯ ನಿರ್ಧಾರವನ್ನು ಎಲ್ಲರೂ ಒಪ್ಪುವ ಕಾರಣ, ತಾನು ಮಾಡುವ ತಪ್ಪುಗಳು ಇತರರ ಕಣ್ಣಿಗೆ ಕಾಣದಂತೆ ನೋಡಿಕೊಂಡಿದ್ದಾಳೆ. ಸದ್ಯ ಬ್ರಹ್ಮಗಂಟು ಧಾರಾವಾಹಿ ಚೆನ್ನಾಗಿ ಮೂಡಿ ಬರುತ್ತಿದೆ.

written update on actress preethi srinivas

ಪ್ರೀತಿ ನಟನೆಯ ಪಯಣ

ನಟಿ ಪ್ರೀತಿ ಶ್ರೀನಿವಾಸ್ ಅವರು ಈಗಾಗಲೇ ಸರಸ್ವತಿ-ಲಕ್ಷ್ಮೀ ಪ್ರಿಯೆ, ಜೀವನ ಚೈತ್ರ, ವರಲಕ್ಷ್ಮಿ ಸ್ಟೋರ್ಸ್ ಸೇರಿದಂತೆ ಕೆಲ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇನ್ನು ತೆಲುಗು ಅಂಗಳದಲ್ಲೂ ಮಿಂಚಿರುವ ನಟಿ ಪ್ರೀತಿ ಅವರು ಅನ್ನಪೂರ್ಣ, ರಾಮ ಸೀತಾ ಎಕ್ಕಡ, ಗಂಗಮಂಗ, ಪಡಮಟ್ಟಿ ಸಂಧ್ಯಾರಾಗಂ ಧಾರಾವಾಹಿಗಳಲ್ಲಿ ನಟಿಸಿದ್ದು, ಈಗಲೂ ಜಗದ್ಧಾತ್ರಿ ಎಂಬ ತೆಲುಗು ಸೀರಿಯಲ್ ನಲ್ಲಿ ನಟಿಸುತ್ತಿದ್ದಾರೆ. ಇಷ್ಟೇ ಅಲ್ಲದೇ, ನಟಿ ಪ್ರೀತಿ ಅವರು ಗಣೇಶ ಮತ್ತೆ ಬಂದ, ಚಂದ್ರ ಎಂಬ ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಬ್ರಹ್ಮಗಂಟು ಮೂಲಕ ಮತ್ತೆ ಕನ್ನಡ ಕಿರುತರೆಯಲ್ಲಿ ಕಮಾಲ್ ಮಾಡಲು ಮುಂದಾಗಿದ್ದಾರೆ.

ಅಪ್ಪು ಅವರನ್ನು ಭೇಟಿ ಮಾಡಿದ್ದ ಪ್ರೀತಿ

ಇನ್ನು ನಟಿ ಪ್ರೀತಿ ಶ್ರೀನಿವಾಸ್ ಅವರು ತೆಲುಗಿನ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದು, ಈ ವೇಳೆ ನಮ್ಮ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನು ಸ್ಮರಿಸಿಕೊಂಡಿದ್ದಾರೆ. ಪ್ರೀತಿ ಅವರು ಕಾಲೇಜಿನಲ್ಲಿ ಓದುವಾಗ ಬ್ಯೂಟಿ ಕಾಂಟೆಸ್ಟ್ ನಲ್ಲಿ ಭಾಗಿಯಾಗಿ ವಿನ್ನರ್ ಆಗಿದ್ದರಂತೆ. ಈ ಕಾರ್ಯಕ್ರಮಕ್ಕೆ ಅವರ ಕಾಲೇಜಿನಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಆಹ್ವಾನಿಸಲಾಗಿತ್ತಂತೆ. ವಿನ್ನರ್ ಆಗಿದ್ದ ಪ್ರೀತಿ ಮತ್ತು ಇತರರನ್ನು ಸ್ಟೇಜ್ ಮೇಲೆ ಕೂರಿಸಿದ್ದಾಗ, ಕಾಲೇಜ್ ಹುಡುಗಿಯರೆಲ್ಲಾ -ಫೋಟೋ ಮತ್ತು ಆಟೋಗ್ರಫ್ ಗಾಗಿ ಮುಗಿ ಬಿದ್ದಿದ್ದರಂತೆ. ಆಗ ಬಹಳ ಸಂಕೋಚದ ಹುಡುಗಿಯಾಗಿದ್ದ ಪ್ರೀತಿ ಅವರು ಕೂಡ ಪುನೀತ್ ಅವರ ಬಳಿ ಹೋಗಿ ನಿಮ್ಮ ಜೊತೆಗೆ ಫೋಟೋ ತೆಗೆಸಿಕೊಳ್ಳಬಹುದಾ ಎಂದು ಕೇಳಿದ್ದರಂತೆ.

ಸಿಂಪಲ್ ವ್ಯಕ್ತಿ ಅಪ್ಪು

ಪ್ರೀತಿ ಅವರ ಮಾತನ್ನು ಕೇಳಿದ ಪುನೀತ್ ಅವರು ನೀವೇನ್ರಿ ನನ್ನ ಕೇಳ್ತಿದ್ದೀರಾ. ನೀವು ಎಷ್ಟು ಸುಂದರವಾಗಿದ್ದೀರಾ, ನಿಮ್ಮ ಜೊತೆಗೆ ನಾನು ಫೋಟೋ ತೆಗೆಸಿಕೊಳ್ಳಬೇಕು ಎಂದು ಹೇಳಿ ಫೋಟೋಗೆ ಪೋಸ್ ಕೊಟ್ಟಿದ್ದರಂತೆ. ಅಪ್ಪು ಅವರು ಎಷ್ಟು ಸಿಂಪಲ್ ವ್ಯಕ್ತಿ ಎಂಬುದನ್ನು ನಾನು ಆಗಲೇ ಅರ್ಥ ಮಾಡಿಕೊಂಡಿದ್ದು, ಅವರು ಇಂದು ನಮ್ಮನ್ನು ಅಗಲಿ ಎಷ್ಟೇ ವರ್ಷಗಳಾದರೂ ನಾನು ಯಾವತ್ತಿಗೂ ಅವರ ಸಿಪ್ಲಿಸಿಟಿ ಅನ್ನು ಮರೆಯಲಾರೆ. ಯುವಕರಿಂದ ಹಿಡಿದು ಮುದುಕರವರೆಗೂ ಅಪ್ಪು ಅವರ ಮೇಲೆ ವಿಶೇಷವಾದ ಅಭಿಮಾನವಿದೆ ಎಂದು ಹೇಳಿದ್ದಾರೆ. ಈ ವೀಡಿಯೋ ಈಗ ವೈರಲ್ ಆಗಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X