ತಾಯಿಯಾಗುತ್ತಿರುವ ಸಂಭ್ರಮದಲ್ಲಿ ಪ್ರಿಯಾಂಕ ಚಿಂಚೋಳಿ, ಹೇಗಿತ್ತು ಸೀಮಂತ ಸಂಭ್ರಮ ?
ಪ್ರತೀ ವರ್ಷವೂ ಕನ್ನಡ ಕಿರುತೆರೆಯಲ್ಲಿ ಮದುವೆಯಾಗುವ ನಟ-ನಟಿಯರು ಮತ್ತು ಪೋಷಕರಾಗಿ ಪಡ್ತಿ ಪಡೆಯುವವರು ಇದ್ದೇ ಇರುತ್ತಾರೆ. ಕೆಲವೊಮ್ಮೆ ಸಾಲು ಸಾಲಾಗಿ ನಟ-ನಟಿಯರು ತಮ್ಮ ಕುಟುಂಬದಲ್ಲಿ ನಡೆಯುತ್ತಿರುವ ಸಂತಸದ ಸುದ್ದಿಯನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. 2025ರಲ್ಲಿ ಮೊದಲು ಸಿಹಿ ಸುದ್ದಿ ಹಂಚಿಕೊಂಡಿದ್ದು ನಟಿ ಮೇಘಶ್ರೀ. ಎಂಗೇಜ್ ಮೆಂಟ್ ಮಾಡಿಕೊಂಡಿರುವ ನಟಿ ಮೇಘಶ್ರೀ ಅವರು ತಮ್ಮ ಭಾವಿ ಪತಿಯ ಫೋಟೋವನ್ನು ರಿವೀಲ್ ಮಾಡಿದ್ದರು. ಇದೀಗ ನಟಿ ಪ್ರಿಯಾಂಕಾ ಚಿಂಚೋಳಿ ಅವರು ಸಿಹಿ ಸುದ್ದಿಯನ್ನು ನೀಡಿದ್ದಾರೆ.
ಪ್ರೆಗ್ನೆನ್ಸಿ ಗುಟ್ಟನ್ನು ರಟ್ಟು ಮಾಡಿದ ನಟಿ
ಚೊಚ್ಚಲ ಮಗುವನ್ನು ವೆಲ್ಕಂ ಮಾಡಲು ಕಾತುರರಾಗಿ ಕಾಯುತ್ತಿರುವ ನಟಿ ಪ್ರಿಯಾಂಕ ಚಿಂಚೋಳಿ. ನಟಿ ಪ್ರಿಯಾಂಕ ಚಿಂಚೋಳಿ ಅವರು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಮನೆಯಲ್ಲಿ ಸೀಮಂತ ಕಾರ್ಯವನ್ನು ನೆರವೇರಿಸಲಾಗಿದೆ. ಕನ್ನಡ ಕಿರುತೆರೆಯಲ್ಲಿ ಹಲವು ವರ್ಗಳ ಕಾಲ ಪೌರಾಣಿಕ ಪಾತ್ರ ಹಾಗೂ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ನಟಿ ಪ್ರಿಯಾಂಕ ಚಿಂಚೋಳಿ ಅವರು ಈಗ ತುಂಬು ಗರ್ಭಿಣಿಯಾಗಿದ್ದಾರೆ. ಕಳೆದ ತಿಂಗಳೇ ನಟಿ ಪ್ರಿಯಾಂಕ ಚಿಂಚೋಳಿ ಅವರು ತಮ್ಮ ಪ್ರೆಗ್ನೆನ್ಸಿ ಗುಟ್ಟನ್ನು ರಿವೀಲ್ ಮಾಡಿದ್ದರು. ಪತಿಯ ಹುಟ್ಟುಹಬ್ಬಕ್ಕೆ ಗಿಫ್ಟ್ ಆಗಿ ನೋಟ್ ಬರೆದಿದ್ದರು.

ಸೀಮಂತ ನೆರವೇರಿಸಿದ ಪ್ರಿಯಾಂಕಾ ಚಿಂಚೋಳಿ
ಇದೀಗ ಪ್ರಿಯಾಂಕಾ ಅವರ ಮನೆಯಲ್ಲಿ ಸೀಮಂತ ಕಾರ್ಯವನ್ನು ನೆರವೇರಿಸಲಾಗಿದೆ. ತಮ್ಮ ಮಗುವಿನ ಆಗಮನಕ್ಕಾಗಿ ಕಾಯುತ್ತಿರುವ ನಟಿ ಪ್ರಿಯಾಂಕ ಅವರು ಸಂತಸದ ಸುದ್ದಿಯನ್ನು ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ 2025ರಲ್ಲಿ ಚೊಚ್ಚಲ ಮಗುವಿಗೆ ತಾಯಿಯಾಗುತ್ತಿರುವ ಮದುವೆಯಾದ ಬಳಿಕ ಹೆಚ್ಚು ಸಮಯ ಕಿರುತರೆಯಲ್ಲಿ ಇರದ ನಟಿ ಪ್ರಿಯಾಂಕ ಅವರು ಪತಿ ಜೊತೆಗೆ ಅಬ್ರಾಡ್ ಗೆ ತೆರಳಿದ್ದರು. ಕಳೆದ ವರ್ಷದ ಆರಂಭದಲ್ಲಿ ಬೆಂಗಳೂರಿಗೆ ಆಗಮಿಸಿದ ಈ ದಂಪತಿಗಳು ಬೆಂಗಳೂರಿನಲ್ಲಿ ಹೊಸ ಮನೆಯನ್ನು ಖರೀದಿ ಮಾಡಿದ್ದರು. ಕಳೆದ ವರ್ಷ ಮಾರ್ಚ್ ತಿಂಗಳಿನಲ್ಲಿ ಗೃಹಪ್ರವೇಶ ಮಾಡಿ ಸಂತಸ ಹಂಚಿಕೊಂಡಿದ್ದರು. ಇದೀಗ ಗರ್ಭಿಣಿ ಆಗಿದ್ದು, ಚೊಚ್ಚಲ ಮಗುವಿನ ಆಗಮನಕ್ಕಾಗಿ ಕಾಯುತ್ತಿದ್ದಾರೆ.
ಪ್ರಿಯಾಂಕ ವ್ಯೆಯಕ್ತಿಕ ಬದುಕು
ಗುಲ್ಬರ್ಗಾದಿಂದ ಬೆಂಗಳೂರಿಗೆ ಬಂದು ಕಿರುತೆರೆಗೆ ಪಾದಾರ್ಪಣೆ ಮಾಡಿದ ಪ್ರಿಯಾಂಕಾ ಅವರು ಮಾಡೆಲ್ ಆದರು. ಮಾಡೆಲಿಂಗ್ ಲೋಕದಲ್ಲಿ ಮಿಂಚಿ ಗೆದ್ದ ಪ್ರಿಯಾಂಕಾ ಪೌರಾಣಿಕ ಪಾತ್ರಗಳ ಮೂಲಕ ಕಿರುತರೆಗೆ ಪಾದಾರ್ಪಣೆ ಮಾಡಿದರು. ನಂತರ ಅವರು ಮೂರು ವರ್ಷಗಳ ಹಿಂದೆ ರಾಕೇಶ್ ಎಂಬುವರನ್ನು ಮದುವೆಯಾದರು. ಬಳಿಕ ಪ್ರಿಯಾಂಕಾ ಅವರು ಕೂಡ ಪತಿ ಇರುವ ಲಂಡನ್ ಗೆ ಹಾರಿದ್ದರು. ಬಳಿಕ ವಾಪಸ್ ಬೆಂಗೂರಿಗೆ ಬಂದಿದ್ದು, ಇಲ್ಲೇ ಸೆಟಲ್ ಆಗಿದ್ದಾರೆ. 2011ರಲ್ಲಿ ಮಿಸ್ ಗುಲ್ಬರ್ಗಾ ಸ್ಪರ್ಧೆಯಲ್ಲಿ ಸ್ಪರ್ಧಿಸಿ ಗೆದ್ದ ಪ್ರಿಯಾಂಕ ಅವರು, 2013ರಲ್ಲಿ ಮಿಸ್ ವಿವೆಲ್ ಸೌತ್ ಇಂಡಿಯಾ ಕಿರೀಟವನ್ನು ಮುಡಿಗೇರಿಸಿಕೊಂಡರು. ಗುಳಿಕೆನ್ನೆ ರಾಣಿಗೆ 2014ರಲ್ಲಿ ಮಿಸ್ ಕರ್ನಾಟಕ ಆಗಿ ಮಿಂಚಿದರು. 2017ರಲ್ಲಿ ಪ್ರಿಯಾಂಕಾ ಅವರು ವಿವೇಕ್ ಮಿಸ್ ಸೌತ್ ಇಂಡಿಯಾ ಆಗಿ ಹೊರಹೊಮ್ಮಿದರು.
ಪ್ರಿಯಾಂಕ ಅವರು ಪ್ರಾಜೆಕ್ಟ್ ಗಳು
ತದನಂತರ ಹರ ಹರ ಮಹಾದೇವ ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿಕೊಟ್ಟರು. ಜೈ ಹನುಮಾನ್ ಸೇರಿದಂತೆ ಬ್ಯಾಕ್ ಟು ಬ್ಯಾಕ್ ಪೌರಾಣಿಕ ಧಾರಾವಾಹಿಗಳಲ್ಲಿ ನಟಿಸಿದರು. ನಂತರ ಪ್ರಿಯಾಂಕ ಅವರು ಮನಸಾರೆ, ಮನಸೆಲ್ಲಾ ನೀನೇ ಧಾರಾವಾಹಿಯಲ್ಲಿ ನಟಿಸಿದರು. ಅಷ್ಟೇ ಅಲ್ಲದೇ, ಪ್ರಿಯಾಂಕಾ ಚಿಂಚೋಳಿ ಅವರು ಸಿನಿಮಾಗಳಲ್ಲೂ ನಟಿಸಿದ್ದಾರೆ. ಸಮಯದ ಗೊಂಬೆ, ಜೀವನದ ಜೋಕಾಲಿ, ಕೌಟಿಲ್ಯ, ರೆಮೋ ಹಾಗೂ ಅಲೆವ ಮೋಡ ಚಿತ್ರಗಳಲ್ಲಿ ನಟಿಸಿದ್ದಾರೆ. ಅಲೆವ ಮೋಡ ಚಿತ್ರದಲ್ಲಿ ಪ್ರಿಯಾಂಕಾ ಚಿಂಚೋಳಿ ಅವರು ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.


Click it and Unblock the Notifications











