Priyanka Shivanna ; ಪರ್ಪಲ್ ದಾವಣಿಯಲ್ಲಿ ಮಿಂಚಿದ ನಟಿ ಪ್ರಿಯಾಂಕ ಶಿವಣ್ಣ...!
ಸತ್ಯ ಧಾರಾವಾಹಿ ಮುಕ್ತಾಯವಾದ ಬಳಿಕ ನಟಿ ಪ್ರಿಯಾಂಕಾ ಶಿವಣ್ಣ ಅವರು ಸುಮ್ಮನೆ ಕೂರದೆ ರಿಯಾಲಿಟಿ ಶೋ ಮೂಲಕ ಮಿಂಚುತ್ತಿದ್ದಾರೆ. ಅಗ್ನಿಸಾಕ್ಷಿ, ಪರಿಣಯ, ಸತ್ಯದಂತಹ ಸೀರಿಯಲ್ ಅಲ್ಲದೇ, ಪ್ರಿಯಾಂಕ ಅವರು ಪರಭಾಷೆಯ ಕಿರುತರೆಯಲ್ಲೂ ನಟಿಸಿದ್ದಾರೆ. ಲೀಡ್ ಪಾತ್ರಗಳಲ್ಲಿ ಕಾಣಿಸಿಕೊಂಡ ಪ್ರಿಯಾಂಕ ಅವರು ವಿಲನ್ ಆಗಿದ್ದರೂ ಬಹಳ ಮುದ್ದಾಗಿದ್ದಾರೆ. ತಮ್ಮ ನಟನೆಯ ಮೂಲಕವೇ ಪ್ರಿಯಾಂಕ ಶಿವಣ್ಣ ಅವರು ಕಿರುತೆರೆ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಅವರು ಯಶಸ್ವಿಯಾದರು. ಪ್ರಿಯಾಂಕಾ ಶಿವಣ್ಣ ಅವರಿಗೆ ಅಭಿಮಾನಿ ಬಳಗ ದೊಡ್ಡದಿದೆ.
ನಟಿ ಪ್ರಿಯಾಂಕ ಶಿವಣ್ಣ ನಟನಾ ಜೀವನ
ಮೂಲತಃ ಬೆಂಗಳೂರಿನ ಬೆಡಗಿಯಾಗಿರುವ ಪ್ರಿಯಾಂಕ ಶಿವಣ್ಣ ಅವರು, ತಮ್ಮ 19ನೇ ವಯಸ್ಸಿಗೆ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟರು. ಮಾಡೆಲಿಂಗ್ ಜೊತೆಗೆ ಬ್ಯುಸಿನೆಸ್ ಮ್ಯಾನೇಜ್ಮೆಂಟ್ ವಿಧ್ಯಾಭ್ಯಾಸವನ್ನು ಪೂರ್ಣಗೊಳಿಸಿ ನಟನಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು. ಮೊದಮೊದಲು ಪ್ರಿಂಟ್ ಆಡ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಪ್ರಿಯಾಂಕಾ, ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಚಂದ್ರಿಕಾ ಪಾತ್ರಧಾರಿ ಬದಲಾದಾಗ ಪ್ರಿಯಾಂಕಾ ಅವರನ್ನು ಆ ಜಾಗಕ್ಕೆ ಕರೆ ತರಲಾಯ್ತು. ಮೊದಲ ಧಾರಾವಾಹಿಯಲ್ಲೇ ಅದ್ಭುತವಾಗಿ ನಟಿಸಿದ ಪ್ರಿಯಾಂಕಾ ಶಿವಣ್ಣ ಅವರು ಅಭಿಮಾನಿಗಳ ಮನಸನ್ನು ಗೆಲ್ಲುವಲ್ಲಿ ಯಶಸ್ವಿಯಾದರು. ಅಗ್ನಿಸಾಕ್ಷಿ, ಅವನು ಮತ್ತೆ ಶ್ರಾವಣಿ, ಕಥೆಯ ರಾಜಕುಮಾರಿ, ಒಂದೂರಲ್ಲಿ ರಾಜ-ರಾಣಿ, ಪರಿಣಯ, ಸತ್ಯ, ನಾಗಪಂಚಮಿ ಧಾರಾವಾಹಿಗಳಲ್ಲಿ ಮಿಂಚಿದರು.

ಪ್ರಿಯಾಂಕ ನಟಿಸಿದ ಸೀರಿಯಲ್ ಹಾಗೂ ಸಿನಿಮಾಗಳು
ಕನ್ನಡದ ಜೊತೆಗೆ ತೆಲುಗಿನ ಕಿರುತೆರೆಯಲ್ಲೂ ಮಿಂಚಿದ ನಟಿ ಪ್ರಿಯಾಂಕ ಶಿವಣ್ಣ ಅವರು ಕೃಷ್ಣ ಸುಂದರಿ, ನಾಗಪಂಚಮಿ ಸೇರಿದಂತೆ ಹಲವು ಸೀರಿಯಲ್ ಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ತಮಿಳಿನ ಪಿರಿಯಾದ್ ವರಂ ವೆಂಡಂ ಧಾರಾವಾಹಿಯಲ್ಲೂ ನಟಿಸಿದ್ದರು. ಎಲ್ಲಾ ಧಾರಾವಾಹಿಗಳಲ್ಲೂ ಹೆಚ್ಚಾಗಿ ಖಳನಾಯಕಿ ಪಾತ್ರಗಳಲ್ಲೇ ಕಾಣಿಸಿಕೊಳ್ಳುತ್ತಾರೆ. ಹಾಗಿದ್ದರೂ ಕೂಡ ಪ್ರಿಯಾಂಕ ಅವರ ನಟನೆಗೆ ಫಿದಾ ಆಗದವರಿಲ್ಲ. ಇನ್ನು ಧಾರಾವಾಹಿ ಮಾತ್ರವಲ್ಲದೇ, ಸಿನಿಮಾಗಳಲ್ಲೂ ನಟಿಸಿದ್ದಾರೆ. ಮನೋರೂಪ ಹಾಗೂ ಫ್ಯಾಂಟಸಿ ಎಂಬ ಎರಡು ಚಿತ್ರಗಳಿಗೆ ಪ್ರಿಯಾಂಕಾ ಶಿವಣ್ಣ ಅವರು ಬಣ್ಣ ಹಚ್ಚಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸದಾ ರೀಲ್ಸ್ ಗಳನ್ನು ಮಾಡುತ್ತಿರುತ್ತಾರೆ. ಫೋಟೋಶೂಟ್ ಮಾಡಿಸಿ ಫೋಟೋಗಳನ್ನು ಅಪ್ ಲೋಡ್ ಮಾಡುತ್ತಿರುತ್ತಾರೆ.
ಹೆಚ್ಚು ಸೀರೆಯಲ್ಲಿ ಫೋಟೋ ಶೂಟ್
ಬಿಗ್ ಬಾಸ್ ಸೀಸನ್ 7 ರಲ್ಲಿ ಭಾಗವಹಿಸಿ, ಜನರ ಮನಸ್ಸನ್ನು ಸೈಲೆಂಟ್ ಆಗಿ ಗೆದ್ದ ನಟಿ, 105 ದಿನಗಳ ಕಾಲ ಬಿಬಿಕೆ ನಲ್ಲಿ ಇದ್ದರು. ಇನ್ನು ಈಗ ಸತ್ಯ ಧಾರಾವಾಹಿ ಮುಕ್ತಾಯಗೊಂಡ ಬಳಿಕ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸುವರ್ಣ ಸೆಲಬ್ರಿಟಿ ಲೀಗ್ ನಲ್ಲಿ ಭಾಗವಹಿಸಿದ್ದಾರೆ. ಇನ್ನು ನಟಿ ಪ್ರಿಯಾಂಕ ಅವರು ಹೆಚ್ಚಾಗಿ ರೀಲ್ಸ್ ಮಾಡುತ್ತಿರುತ್ತಾರೆ. ಹೆಚ್ಚಾಗಿ ಸೀರೆಯಲ್ಲಿ ಫೋಟೋಶೂಟ್ ಗಳನ್ನು ಕೂಡ ಮಾಡುತ್ತಿರುತ್ತಾರೆ. ಸೀರೆಯಲ್ಲೇ ಮಿಂಚುವ ನಟಿ ಪ್ರಿಯಾಂಕ ಅವರು ಕೆಲವೊಮ್ಮೆ ಮಾತ್ರ ಗೌನ್ ಸೇರಿದಂತೆ ವೆಸ್ಟರ್ನ್ ಉಡುಗೆಯಲ್ಲೂ ಕಾಣಿಸಿಕೊಳ್ಳುತ್ತಿರುತ್ತಾರೆ.
ಲಂಗ ದಾವಣಿಯಲ್ಲಿ ಮಿಂಚಿದ ನಟಿ
ಸದ್ಯ ನಟಿ ಪ್ರಿಯಾಂಕ ಶಿವಣ್ಣ ಅವರು ಪರ್ಪಲ್ ಕಲರ್ ನ ಲಂಗ ದಾವಣಿಯನ್ನು ಧರಿಸಿದ್ದು, ಮಧುಮಗಳಂತೆ ಸಿಂಗಾರ ಮಾಡಿಕೊಂಡಿದ್ದಾರೆ. ಈ ದಾವಣಿಯಲ್ಲಿ ಲಾಲಿ, ಸುವ್ವಲಾಲಿ ಹಾಡಿಗೆ ಹೆಜ್ಜೆ ಹಾಕಿದ್ದು, ಪ್ರಿಯಾಂಕ ಅವರು ಈ ಲುಕ್ ನಲ್ಲಿ ಮುದ್ದಾಗಿ ಕಾಣುತ್ತಿದ್ದಾರೆ. ಅಭಿಮಾನಿಗಳು ಕೂಡ ಪ್ರಿಯಾಂಕ ಅವರ ಪ್ರತೀ ಪೋಸ್ಟ್ ಗೂ ಕಮೆಂಟ್ ಮಾಡುತ್ತಿದ್ದು, ಪ್ರಿಯಾಂಕ ಅವರಿಗೆ ನಟನಾ ಲೋಕದಲ್ಲಿ ಒಳ್ಳೊಳ್ಳೆಯ ಅವಕಾಶಗಳು ಸಿಗಲಿ ಎಂದೇ ಶುಭ ಕೋರುತ್ತಿರುತ್ತಾರೆ.


Click it and Unblock the Notifications











