Radha Bhagavathi ; ಮಲ್ಲಿ ಅಲಿಯಾಸ್ ರಾಧಾ ಭಗವತಿ ಹಿನ್ನೆಲೆ ಏನ್ಗೊತ್ತಾ..?

By ಪ್ರಿಯಾ ದೊರೆ

ಅಮೃತಧಾರೆ ಧಾರಾವಾಹಿಯಲ್ಲಿ ಈಗ ಟ್ವಿಸ್ಟ್ ಮೇಲೆ ಟ್ವಿಸ್ಟ್ ಗಳು ನಡೆಯುತ್ತಿವೆ. ವೀಕ್ಷಕರು ಕೂಡ ಸೀರಿಯಲ್ ನ ಒಂದು ದಿನವೂ ಮಿಸ್ ಮಾಡದೇ ನೋಡುತ್ತಿದ್ದಾರೆ. ಧಾರಾವಾಹಿಯಲ್ಲಿ ಬರುವ ಪಾತ್ರಗಳು ಕೂಡ ವೀಕ್ಷಕರಿಗೆ ಮೆಚ್ಚುಗೆಯಾಗಿದೆ. ಗೌತಮ್ ಮತ್ತು ಭೂಮಿಕಾ ಇಬ್ಬರೂ ಆದಷ್ಟು ಬೇಗ ಒಂದಾಗಲಿ ಎಂದು ಬಯಸುತ್ತಿದ್ದಾರೆ. ಅದೇ ರೀತಿಯಲ್ಲಿ ಶಕುಂತಲಾ ಬಣ್ಣ ಬಯಲಾಗಬೇಕು, ಮಲ್ಲಿಗೆ ನ್ಯಾಯ ಸಿಕ್ಕಿ, ಜೈದೇವ ಒಳ್ಳೆಯವನಾಗಬೇಕು ಎಂದು ಬಯಸುತ್ತಿದ್ದಾರೆ. ಪಾರ್ಥ ಮತ್ತು ಅಪೇಕ್ಷಾ ಲವ್ ಸ್ಟೋರಿ ಇನ್ನಷ್ಟು ಕ್ಯೂರಿಯಾಸಿಟಿ ಹುಟ್ಟಿಸಿದರೆ ಚೆಂದ ಎಂದು ಅಂದುಕೊಳ್ಳುತ್ತಿದ್ದಾರೆ.

ಮಲ್ಲಿಯನ್ನು ನೋಡಿದ ವೀಕ್ಷಕರಲ್ಲಿ ಬೇಸರ

ಇನ್ನು ಧಾರಾವಾಹಿಯಲ್ಲಿ ಮಲ್ಲಿಯ ಕಷ್ಟ ಹಾಗೂ ಆಕೆಯ ಮುಗ್ಧತೆಯನ್ನು ಕಂಡು ವೀಕ್ಷಕರು ಸಂಕಟ ಪಡುತ್ತಿದ್ದಾರೆ. ಮಲ್ಲಿಗೆ ಅಷ್ಟೊಂದು ಕಷ್ಟ ಕೊಡಬೇಡಿ ಎನ್ನುತ್ತಿದ್ದಾರೆ. ಇದೀಗ ಅತ್ತೆ ಎದುರು ನಿಂತು ಮನೆಗೆ ಬಂದವರಿಗೆ ಗ್ರಹಚಾರ ಬಿಡಿಸಿರುವ ಮಲ್ಲಿಯನ್ನು ಹೊಗಳುತ್ತಿದ್ದಾರೆ ವೀಕ್ಷಕರು. ಅಷ್ಟಕ್ಕೂ ಮಲ್ಲಿ ಯಾರು ಎಂದು ಹೀಗೊಂದು ಪ್ರಶ್ನೆ ನಿಮ್ಮಲ್ಲಿ ಇದ್ದರೆ ಉತ್ತರ ಇಲ್ಲಿದೆ.

written update on actress Radha Bhagavathi

ಮಲ್ಲಿ ಇದಕ್ಕೂ ಮುನ್ನ ಕಲರ್ಸ್ ಕನ್ನಡದಲ್ಲಿ ಮೂಡಿ ಬರುತ್ತಿರುವ ರಾಮಾಚಾರಿ ಧಾರಾವಾಹಿಯಲ್ಲಿಯೂ ನಟಿಸಿದ್ದಾರೆ. ಅದ್ಭುತವಾಗಿ ಈ ಧಾರಾವಾಹಿ ಕೂಡ ಮೂಡಿ ಬರುತ್ತಿದ್ದು ನೋಡುಗರ ಮನ ಸೆಳೆಯುತ್ತಿದೆ. ರಾಮಾಚಾರಿಯ ತಂಗಿ ಶೃತಿ ಪಾತ್ರವನ್ನು ಮಾಡುತ್ತಿದ್ದ ಮಲ್ಲಿ ಅಲಿಯಾಸ್ ನಟಿ ರಾಧಾ ಭಗವತಿ ಅವರು, ಸದ್ಯ ಅಮೃತಧಾರೆ ಸೀರಿಯಲ್ ಗೆ ಎಂಟ್ರಿಕೊಟ್ಟಿದ್ದಾರೆ.

ನಾಯಕಿಯಾಗಿ ನಟಿಸಿದ ಸಿನಿಮಾಗಳು

ರಾಧಾ ಭಗವತಿ ಅವರು ಧಾರಾವಾಹಿ ಮಾತ್ರವಲ್ಲದೇ, ಸಿನಿಮಾದಲ್ಲಿಯೂ ನಟನೆ ಮಾಡುತ್ತಿದ್ದಾರೆ. ಸಿನಿಮಾ ಒಂದರಲ್ಲಿ ರಾಧಾ ಅವರು ನಾಯಕಿ ನಟಿಯಾಗಿ ನಟಿಸಿದ್ದಾರೆ. ಇದರ ಬಗ್ಗೆ ಮಾಹಿತಿಯನ್ನೂ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವಸಂತ ಕಾಲದ ಹೂವುಗಳು ಎಂಬ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

written update on actress Radha Bhagavathi

ಇದರಲ್ಲಿ ತಮ್ಮ ಪಾತ್ರಕ್ಕೆ ಜೀವ ತುಂಬಿ ಅಪ್ಪಟ ಮುಗ್ಧೆಯಾಗಿ ಅಭಿನಯಿಸಿದ್ದಾರೆ ನಟಿ ರಾಧಾ ಭಗವತಿ. ಈ ಚಿತ್ರವನ್ನು ಸಚಿನ್ ಶೆಟ್ಟಿ ನಿರ್ದೇಶಿಸಿದ್ದಾರೆ. ರಾಧಾ ಭಗವತಿ ಅವರು ನಾಯಕಿಯಾಗಿ ನಟಿಸಿರುವ ಎರಡನೇ ಸಿನಿಮಾ ಇದಾಗಿದ್ದು, ಇದಕ್ಕಿಂತ ಮೊದಲು ನಟಿ ರಾಧಾ ಅವರು, ಆ 90 ದಿನಗಳು ಎಂಬ ಚಿತ್ರದಲ್ಲಿ ನಟಿಸಿದ್ದಾರೆ. ಇನ್ನು ಅಭಿಜಿತ್ ತೀರ್ಥಹಳ್ಳಿ ನಿರ್ದೇಶನದ 'ಅಪಾಯವಿದೆ ಎಚ್ಚರಿಕೆ', ಎಸ್. ನಾರಾಯಣ್ ನಿರ್ದೇಶನದ 'ಒಂದ್ಸಲ ಮೀಟ್ ಮಾಡೋಣ' ಸಿನಿಮಾಗಳಲ್ಲಿಯೂ ನಟಿ ರಾಧಾ ಅವರು ನಟಿಸಿದ್ದಾರೆ.

ಹಿನ್ನೆಲೆ ಗಾಯಕಿ ರಾಧಾ

ಇಷ್ಟೇ ಅಲ್ಲದೇ ರಾಧಾ ಅವರು ಹಿನ್ನೆಲೆ ಗಾಯಕಿಯೂ ಹೌದು. ರಾಧಾ ಅವರು ಎರಡು ಸಿನಿಮಾಗಳಿಗೆ ಎರಡು ಹಾಡುಗಳನ್ನು ಹಾಡಿದ್ದಾರೆ. ಜೊತೆಗೆ ಸೀರಿಯಲ್ ಒಂದಕ್ಕೆ ನಾಯಕಿ ಪಾತ್ರಕ್ಕೆ ಕಂಠದಾನ ಕೂಡ ಮಾಡಿದ್ದಾರೆ. ತಮ್ಮ ಇನ್ ಸ್ಟಾಗ್ರಾಂ ಪೇಜ್ ನಲ್ಲಿಯೂ ಕೂಡ ರಾಧಾ ಅವರು ಆಗಾಗ ಹಾಡುಗಳನ್ನು ಹಾಡುತ್ತಿರುತ್ತಾರೆ. ಹಾಡುಗಳಿಗೆ ರೀಲ್ಸ್ ಕೂಡ ಮಾಡುತ್ತಿರುತ್ತಾರೆ.

written update on actress Radha Bhagavathi

ಟ್ರೆಡಿಷನಲ್ ಹುಡುಗಿ ರಾಧಾ

ರಾಧಾ ಅವರು ನಟಿಸಿದ ರಾಮಾಚಾರಿ, ಉಘೇ ಉಘೇ ಮಹಾದೇಶ್ವರ, ಅಮೃತಧಾರೆ ಮೂರೂ ಧಾರಾವಾಹಿಗಳಲ್ಲಿಯೂ ಲಂಗ ದಾವಣಿ, ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಧಾರಾವಾಹಿಯ ಆಚೆ ಮಾಡ್ರನ್ ಉಡುಗೆಯನ್ನೂ ಇವರು ಧರಿಸುತ್ತಾರೆ. ಇದಕ್ಕೆ ಕೈಗನ್ನಡಿ ಎಂಬಂತೆ ಸೋಶಿಯಲ್ ಮೀಡಿಯಾದಲ್ಲಿ ಗೌನ್, ಫ್ರಾಕ್ ಕಾಸ್ಟೂಮ್ ಗಳಲ್ಲಿ ನೀವು ಇವರನ್ನ ನೋಡಬಹುದು.

ಆದರೂ ಟ್ರೆಡಿಷನಲ್ ಲುಕ್ ನಲ್ಲಿ ಕಾಣಿಸಿಕೊಳ್ಳುವುದು ಅಂದರೆ ಇವರಿಗೆ ಅಚ್ಚು ಮೆಚ್ಚು. ಇಂಥ ಗಾಯಕಿ ಹಾಗೂ ನಟಿ ರಾಧಾ ಭಗವತಿ ಅವರು ನಟನಾ ಕ್ಷೇತ್ರದಲ್ಲಿ ಉತ್ತಮವಾದ ಹೆಸರನ್ನು ಮಾಡುವ ಆಸೆಯನ್ನು ಹೊಂದಿದ್ದಾರೆ. ಈಗ ಮಲ್ಲಿ ಪಾತ್ರದಿಂದ ಹೆಚ್ಚು ಫೇಮಸ್ ಆಗಿದ್ದಾರೆ.

More from Filmibeat

English summary
amruthadhaare serial actress Radha Bhagavathi film and other details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X