Rakshitha Bhaskar ; ರಕ್ಷಿತಾ ಭಾಸ್ಕರ್ ಹಾಕಿದ ವೀಡಿಯೋ ಮಾಯ : ಅಭಿಮಾನಿಗಳಿಗೆ ಫುಲ್ ಗೊಂದಲ..!

By ಪ್ರಿಯಾ ದೊರೆ

ಸತ್ಯ ಧಾರಾವಾಹಿ ಈಗಾಗಲೇ ಮುಕ್ತಾಯಗೊಂಡಿದೆ. ಆದರೆ, ಈಗಲೂ ಅಭಿಮಾನಿಗಳು ಸತ್ಯ ಧಾರಾವಾಹಿಯಲ್ಲಿ ನಟಿಸಿದ ನಟಿಯೊಬ್ಬರನ್ನು ಕಾಡುತ್ತಿದ್ದಾರೆ.ಹೌದು.. ಸತ್ಯ ಧಾರಾವಾಹಿಯಲ್ಲಿ ರಿತು ಪಾತ್ರದ ಮೂಲಕ ನಟಿ ರಕ್ಷಿತಾ ಭಾಸ್ಕರ್ ಅವರು ಕಾಣಿಸಿಕೊಂಡಿದ್ದರು. ಇದರಲ್ಲಿ ಸತ್ಯಳ ನಾದಿನಿಯಾಗಿದ್ದು, ರಾಕೇಶ್ ಹಿಂದೆ ಬಿದ್ದು ಪ್ರೀತಿ ಮಾಡಿದ್ದಳು. ಕೊನೆಗೆ ಸತ್ಯಳೇ ರಕ್ಷಿತಾ ಮತ್ತು ರಾಕೇಶ್ ಪರ ನಿಂತು ಇಬ್ಬರ ಪ್ರೀತಿಯನ್ನು ಪ್ರೋತ್ಸಾಹಿಸಿ, ಮನೆಯವರಿಗೆ ಸತ್ಯ ಅರ್ಥ ಮಾಡಿಸಿದ್ದಳು. ಇಬ್ಬರಿಗೂ ಓದು ಮುಗಿದ ಬಳಿಕ ಮದುವೆ ಮಾಡಿಸುವುದಾಗಿ ಹೇಳಿದ್ದಳು.

ನಡೆಯದೇ ಉಳಿದ ರಿತು-ರಾಕಿ ಮದುವೆ

ಧಾರಾವಾಹಿ ಮುಗಿಯುವ ತನಕ ಪ್ರತಿಯೊಂದು ಜವಾಬ್ದಾರಿಯನ್ನೂ ಸತ್ಯ ಅಚ್ಚುಕಟ್ಟಾಗಿ ನಿಭಾಯಿಸಿದ್ದಳು. ಆದರೆ, ನಾದಿನಿಯನ್ನು ಕಂಪ್ಲೀಟ್ ಆಗಿ ಮರೇತೇ ಬಿಟ್ಟಿದ್ದಳು ಎಂದು ಕಾಣಿಸುತ್ತದೆ. ಹೀಗಾಗಿ ಧಾರಾವಾಹಿ ಕೊನೆಯಲ್ಲಿ ರಿತು ಸೀನ್ ನಲ್ಲಿ ಇದ್ದರೂ ಕೂಡ ರಾಕೇಶ್ ನಾಪತ್ತೆಯಾಗಿ ಸುಮಾರು ಕಾಲವೇ ಆಗಿತ್ತು. ಇನ್ನು ನಾದಿನಿ ಮತ್ತು ತಮ್ಮನ ಮದುವೆಯನ್ನು ಮಾಡದೇ ಇರುವುದಕ್ಕೆ ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದರು. ರಿತುಗೆ ನಿತ್ಯ ಕಮೆಂಟ್ ಮಾಡಿ ನಿಮ್ಮಬ್ಬರ ಮದುವೆಯಾಗಿ ಸೀರಿಯಲ್ ನಲ್ಲಿ ಮುಗಿದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಅಭಿಮಾನಿಗಳು ತಮ್ಮ ಆಸೆ ಹೇಳಿಕೊಂಡಿದ್ದರು. ಇದನ್ನು ನೋಡಿದ ರಿತು ಬೇಸರ ಮಾಡಿಕೊಳ್ಳಬೇಡಿ, ರಾಕಿ ಮದುವೆ ನಡೆದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಪ್ರಶ್ನೆ ಮಾಡಿದವರೇ ನೋಡಿ, ನೋಡಿ ನಮ್ಮ ಮದ್ವೆಯಾಯ್ತು ಅಂತ ಪೋಸ್ಟ್ ಒಂದನ್ನು ಹಾಕಿದ್ದರು.

Written update on actress rakshitha bhaskar

ಹಾಕಿದ ವೀಡಿಯೋ ಮಾಯಾ

ಈ ವೀಡಿಯೋವನ್ನು ನೋಡಿ ಅಭಿಮಾನಿಗಳು ಶಾಕ್ ಆಗಿದ್ದರು. ಆದರೆ, ಕ್ಲಿಪಿಂಗ್ ನಲ್ಲಿ ಜೀ ವಾಹಿನಿ ಬದಲು ಕಲರ್ಸ್ ಕನ್ನಡ ಎಂದಿತ್ತು. ಆದರೆ ಅದೇಕೋ ನಟಿ ರಕ್ಷಿತಾ ಅವರು ವೀಡಿಯೋ ಶೇರ್ ಮಾಡಿದ ಕೆಲವೇ ಸಮಯದಲ್ಲಿ ಡಿಲೀಟ್ ಮಾಡಿದ್ದು ಕಾರಣ ಏನೆಂದು ಇನ್ನೂ ತಿಳಿದು ಬಂದಿಲ್ಲ. ಇನ್ನು ರಾಕೇಶ್ ಪಾತ್ರಧಾರಿ ನಟ ಅಮೋಘ್ ಅವರು ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ರಕ್ಷಿತಾ ಭಾಸ್ಕರ್ ಅವರು ಸದ್ಯ ತಮ್ಮ ಹೊಸ ಅಕಾಡೆಮಿಯ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿದ್ದಾರೆ. ಹೌದು, ರಕ್ಷಿತಾ ಅವರು ಇದೇ ತಿಂಗಳು ಗುರುಪೌರ್ಣಮಿಯ ದಿನ ತಮ್ಮ ಕನಸಿನ ಮ್ಯೂಸಿಕ್ ಅಕಾಡೆಮಿಯನ್ನು ತೆರೆದಿದ್ದಾರೆ. ತ್ರಿಧಾ ಮ್ಯೂಸಿಕ್ ಅಕಾಡೆಮಿಯನ್ನು ಪ್ರಾರಂಭಿಸಿದ್ದು, ಅದರ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ.

ಹಾಡುಗಾರ್ತಿ ರಕ್ಷಿತಾ

ಇನ್ನು ರಕ್ಷಿತಾ ಭಾಸ್ಕರ್ ಅವರ ಬಗ್ಗೆ ಹೇಳಬೇಕೆಂದರೆ, ರಕ್ಷಿತಾ ಅವರ ಕಂಠ ಬಹಳ ಇಂಪಾಗಿದ್ದು, ಕನರ್ಸ್ಟ್ ಗಳಲ್ಲಿ ರಕ್ಷಿತಾ ಅವರು ಹಾಡುತ್ತಿರುತ್ತಾರೆ. ಚಿಕ್ಕ ವಯಸ್ಸಿನಿಂದಲೇ ಸಂಗೀತ ಕಲಿತಿರುವ ರಕ್ಷಿತಾ ಅವರಿಗೆ ಹಾಡುವುದು, ಡ್ಯಾನ್ಸ್ ಮಾಡುವುದು ಎಂದರೆ ಬಹಳ ಇಷ್ಟ. ಇನ್ನು ರಕ್ಷಿತಾ ಅವರು 2006 ರಲ್ಲಿ ಎದೆ ತುಂಬಿ ಹಾಡುವೆನು ಕಾರ್ಯಕ್ರಮದಲ್ಲಿ ಭಾಗವಹಿಸಿ ವಿನ್ನರ್ ಆಗಿದ್ದರು. 2007ರಲ್ಲಿಯೂ ಕೂಡ ಪಾಡಲಾನಿ ಎಂಬ ತೆಲುಗಿನ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಗೆದ್ದಿದ್ದರು.

ಬಾಲನಟಿಯಾಗಿದ್ದ ನಟಿ

ಇದಾದ ಬಳಿಕ ಬಾಲ ನಟಿಯಾಗಿ ಕಿರುತೆರೆಯಲ್ಲಿ ನಟಿಸಲು ಪ್ರಾರಂಭಿಸಿದ ಇವರು ರಕ್ಷಿತಾ ಭಾಸ್ಕರ್ ಅವರು ಸತ್ಯ ಧಾರಾವಾಹಿಯಲ್ಲಿ ಮಾತ್ರ ಬಣ್ಣ ಹಚ್ಚಿಲ್ಲ. ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ರಕ್ಷಿತಾ ಭಾಸ್ಕರ್ ಅವರು ನಟಿಸಿದ ಮೊದಲ ಧಾರಾವಾಹಿ ಎಂದರೆ, ರಾಜಾ ರಾಣಿ. ರಾಜಾ ರಾಣಿ, ಹೂಮಳೆ, ಬೆಟ್ಟದ ಹೂ, ಅವನು ಮತ್ತೆ ಶ್ರಾವಣಿ, ಮತ್ತೆ ಮಾಯಾಮೃಗ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇನ್ನು ರಾಜಾ ರಾಣಿ ಮತ್ತು ಹೂ ಮಳೆ ಧಾರಾವಾಹಿಗಳಲ್ಲಿ ನಟಿ ಚಂದನಾ ಅನಂತಕೃಷ್ಣ ಅವರೊಂದಿಗೆ ನಟಿಸಿದ್ದು, ಇವರಿಬ್ಬರೂ ಒಳ್ಳೆಯ ಸ್ನೇಹಿತರು. ಇನ್ನು ರಕ್ಷಿತಾ ಅವರು ಕ್ಲಾಸಿಕಲ್ ನೃತ್ಯ ಕೂಡ ಕಲಿತಿದ್ದು, ಇವರಿಗೆ ಡ್ಯಾನ್ಸ್ ಮಾಡುವುದು ಎಂದರೂ ಅಷ್ಟೇ ಇಷ್ಟ. ಹಲವು ಕಾರ್ಯಕ್ರಮಗಳಲ್ಲಿ ಡ್ಯಾನ್ಸ್ ಕೂಡ ಮಾಡಿದ್ದು. ನಟಿ, ಡ್ಯಾನ್ಸರ್, ಸಿಂಗರ್ ಆಗಿರುವ ರಕ್ಷಿತಾ ಭಾಸ್ಕರ್ ಅವರು ಒಳ್ಳೆಯ ಪ್ರತಿಭೆಯೂ ಹೌದು.

More from Filmibeat

Read more about: filmibeat original priya dore
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X