Ramola ; ಹೊಸ ಸೆಟ್, ಹೊಸ ಅನುಭವ, ಹೊಸ ಆರಂಭ ಎಂದ ನಟಿ ರಮೋಲಾ
ಕನ್ನಡತಿ ಧಾರಾವಾಹಿಯಲ್ಲಿ ಶಾರ್ಟ್ ಟೈಂನಲ್ಲಿ ವೀಕ್ಷಕರ ಮನ ಗೆದ್ದು, ಮಿಸ್ ಮಾಡಿಕೊಳ್ಳುವಂತೆ ಮಾಡಿದ ನಟಿ ರಮೋಲಾ ಶಾರ್ಟ್ ಬ್ರೇಕ್ ತೆಗೆದುಕೊಂಡು ವಾಪಸ್ ಆಗಿದ್ದರು. ಅಂತರಪಟ ಧಾರಾವಾಹಿಯಲ್ಲಿ ಕಾಣಿಸಿಕೊಂಡು ಈಗ ಮತ್ತೆ ಸೀತಾರಾಮ ಧಾರಾವಾಹಿಯಲ್ಲಿ ನಟಿಸಿದ್ದಾರೆ. ರಮೋಲಾ ಅವರನ್ನು ಕಿರುತೆರೆಯಲ್ಲಿ ನೋಡುವುದೇ ವೀಕ್ಷಕರಿಗೆ ಫುಲ್ ಖುಷಿ ವಿಚಾರ. ಸದಾ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ನಟಿ ರಮೋಲಾ ರೀಲ್ಸ್ ಮಾಡುತ್ತಲೇ ಇರುತ್ತಾರೆ. ಕನ್ನಡತಿ ಧಾರಾವಾಹಿಯಲ್ಲಿ ವಿಲನ್ ಆಗಿ ಮಿಂಚಿದ್ದ ರಮೋಲಾ ಎಲ್ಲರ ಹಾಟ್ ಫೇವರಿಟ್ ಬೆಡಗಿ.
ಕನ್ನಡತಿಯಲ್ಲಿ ವಿಲನ್, ರಿಯಲ್ ಆಗಿ ಫ್ಯಾಷನ್ ಡಿಸೈನರ್
ಕನ್ನಡತಿ ಧಾರಾವಾಹಿಯಲ್ಲಿ ವಿಲನ್ ಆಗಿ ನಟಿಸಿ, ಕೆಲವೇ ಸಮಯದಲ್ಲಿ ದೊಡ್ಡ ಅಭಿಮಾನಿಗಳ ಬಳಗವನ್ನು ಹೊಂದಿದ ರಮೋಲಾ ಅವರು ಕಿರುತೆರೆಯನ್ನು ತೊರೆದು ವರ್ಷ ಕಳೆದ ಬಳಿಕ ರೀ ಎಂಟ್ರಿ ಕೊಟ್ಟರು. ಮಾಡೆಲ್ ಆಗಿದ್ದ ರಮೋಲಾ, ಕಲರ್ಸ್ ಕನ್ನಡ ವಾಹಿನಿಯಲ್ಲಿ ಅದ್ಭುತವಾಗಿ ಮೂಡಿ ಬರುತ್ತಿದ್ದ ಕನ್ನಡತಿ ಧಾರಾವಾಹಿಯಲ್ಲಿ ನಟಿಸಿದ್ದರು. ಈ ಧಾರಾವಾಹಿಯಲ್ಲಿ ರಮೋಲಾ ಅವರ ವಿಲನ್ ಪಾತ್ರವೂ ಕೊಂಚ ಡಿಫರೆಂಟ್ ಆಗಿಯೇ ಇತ್ತು. ಆದರೆ, ಫ್ಯಾಷನ್ ಡಿಸೈನಿಂಗ್ ಶಿಕ್ಷಣ ಪೂರೈಸಲು ಧಾರಾವಾಹಿಯನ್ನು ಅರ್ಧಕ್ಕೆ ಕೈ ಬಿಟ್ಟರು.

ಮಾಡೆಲ್ ಆಗಿಯೂ ಮಿಂಚಿರುವ ನಟಿ
ಸದಾ ಡಿಫರೆಂಟ್ ಲುಕ್ ನಿಂದಲೇ ಕಾಣಿಸಿಕೊಳ್ಳುವ ನಟಿ ರಮೋಲಾ ಅವರು ಓದಿ ಬೆಳೆದಿದ್ದೆಲ್ಲಾ ಹಾಸ್ಟೆಲ್ ನಲ್ಲಿ. ಡ್ಯಾನ್ಸರ್ ಆಗಿರುವ ರಮೋಲಾ ಅವರು ಬೆಲ್ಲಿ ಡ್ಯಾನ್ಸ್ ಕೂಡ ಕಲಿತಿದ್ದಾರೆ. ರಮೋಲಾ ಅವರು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ರೀಲ್ಸ್ ಗಳನ್ನು ಹಾಕುತ್ತಿರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಇನ್ನು ಬಿಗ್ ಬಾಸ್ ಮಿನಿ ಸೀಸನ್ ನಲ್ಲೂ ಭಾಗವಹಿಸಿದ್ದರು. 2017 ರಿಲಾಯನ್ಸ್ ಜ್ಯುವೆಲ್ಸ್ ಮಿಸ್ ಇಂಡಿಯಾ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದರು. ಫ್ಯಾಷನ್ ಡಿಸೈನಿಂಗ್ ಓದುವ ಸಲುವಾಗಿ ನಟನೆಯನ್ನು ಅರ್ಧಕ್ಕೆ ಬಿಟ್ಟಿದ್ದ ರಮೋಲಾ ಅವರು, ಮತ್ತೆ ಕಿರುತೆರೆಗೆ ಬಂದಿದ್ದಾರೆ.
ಚಾಂದಿನಿ ಅವತಾರದಲ್ಲಿ ಕಾಣಿಸಿಕೊಂಡ ನಟಿ
ಅಂತರಪಟ ಧಾರಾವಾಹಿಯಲ್ಲಿ ಗೆಸ್ಟ್ ರೋಲ್ ನಲ್ಲಿ ಕಾಣಿಸಿಕೊಂಡ ನಟಿ ರಮೋಲಾ ಅವರು ಸದ್ಯ ಸೀತಾರಾಮ ಧಾರಾವಾಹಿಯಲ್ಲಿ ಚಾಂದಿನಿ ಆಗಿ ಕಾಣಿಸಿಕೊಂಡಿದ್ದಾರೆ. ರಾಮ್ ಎಕ್ಸ್ ಲವರ್ ಪಾತ್ರವಾದರೂ ವೀಕ್ಷಕರು ಮೆಚ್ಚಿಕೊಳ್ಳುವಂತೆ ನಟಿಸಿದ್ದಾರೆ. ರಾಮ್ ಗೆ ಕಿರಿಕಿರಿ ಆಗದಂತೆ, ಭಾರ್ಗವಿ ಮಾತು ಕೇಳುತ್ತಾ ದಡ್ಡಿಯಂತೆ ನಡೆದುಕೊಂಡಿದ್ದಾರೆ. ದೇಸಾಯಿ ಕುಟುಂಬದಲ್ಲಿ ಬಾಳುವ ಆಸೆ ಹೊತ್ತಿತ್ತು ನೀರಿನ ಗುಳ್ಳೆಯಂತಾಗುತ್ತಾಳಾ ಎಂಬ ಅನುಮಾನ ಕಾಡಿದೆ. ಭಾರ್ಗವಿ ತನ್ನ ಆಟಕ್ಕೆ ಮಾತ್ರವೇ ಚಾಂದಿನಿಯನ್ನು ಬಳಿಸಿಕೊಂಡರೆ, ಚಾಂದಿನಿ ನೀರಿನ ಗುಳ್ಳೆಯಾಗುವುದರಲ್ಲಿ ಅನುಮಾನವಿಲ್ಲ.

ಹೊಸ ಸಿನಿಮಾದಲ್ಲಿ ರಮೋಲಾ
ಸಿನಿಮಾ ಕ್ಷೇತ್ರದಲ್ಲೂ ಕಾಣಿಸಿಕೊಂಡಿರುವ ರಮೋಲಾ ಅವರು ರಿಚ್ಚಿ ಎಂಬ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇದೀಗ ಮತ್ತೊಂದು ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಈ ಬಗ್ಗೆ ಸ್ವತಃ ರಮೋಲಾ ಅವರೇ ಹೇಳಿಕೊಂಡಿದ್ದಾರೆ. ಸೋಶೀಯಲ್ ಮೀಡಿಯಾದಲ್ಲಿ ತಮ್ಮ ಬಗ್ಗೆ ಅಪ್ ಡೇಟ್ ಮಾಡುವ ರಮೋಲಾ ಅವರು ಈಗ ಹೊಸ ಸೆಟ್, ಹೊಸ ಸಿನಿಮಾ. ಹೊಸ ಆರಂಭ, ಹೊಸ ಅನುಭವ ಎಂದು ಹೇಳಿಕೊಂಡಿದ್ದಾರೆ. ತನ್ನ ಇನ್ ಸ್ಟಾಗ್ರಾಂ ಸ್ಟೋರಿಯಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಆದರೆ, ಯಾವ ಸಿನಿಮಾ, ಪಾತ್ರವೇನು ಎಂಬುದನ್ನು ಮುಚ್ಚಿಟ್ಟಿದ್ದಾರೆ. ರಮೋಲಾ ಅವರು ಹೀಗೆ ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ಇನ್ನೂ ಒಳ್ಳೊಳ್ಳೆಯ ಪಾತ್ರಗಳನ್ನು ಮಾಡಲಿ. ಅವರಿಗೆ ಯಶಸ್ಸು ಸಿಗಲಿ ಎಂದು ಅಭಿಮಾನಿಗಳು ಬಯಸಿದ್ದಾರೆ.


Click it and Unblock the Notifications











