ಐತಿಹ್ಯ ಎಂದರೆ ಏನು..? ಮಹಾರಾಣಿಯಾಗಿ ಮರಳಿದ ಪುಟ್ಟ ಗೌರಿ ರಂಜಿನಿ ರಾಘವನ್..!
ಕಿರುತೆರೆಯಲ್ಲಿ ಇಲ್ಲದಿದ್ದರೂ ರಂಜಿನಿ ರಾಘವನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದಾರೆ. ಸಾಹಿತ್ಯ, ನಟನೆ ಎಂದು ಬ್ಯುಸಿ ಇರುವ ಈ ನಟಿ ಸದ್ಯ ಸೈಲೆಂಟ್ ಆಗಿದ್ದಾರೆ. ಕನ್ನಡತಿ ಧಾರಾವಾಹಿಯಲ್ಲಿ ಪ್ರೇಕ್ಷಕರ ಮನ ಗೆದ್ದಿದ್ದ ನಟಿ ರಂಜಿನಿ ರಾಘವನ್ ಈಗ ಕಣ್ಮರೆಯಾಗಿದ್ದಾರೆ.
ಕನ್ನಡತಿ ಧಾರಾವಾಹಿ ಮುಗಿದ ಮೇಲೆ ಕಿರುತೆರೆಯಲ್ಲಿ ರಂಜನಿ ಕಾಣಿಸಿಕೊಂಡಿಲ್ಲ. ಇದರಿಂದ ಅಭಿಮಾನಿಗಳು ಕೂಡ ಫುಲ್ ಬೇಸರದಲ್ಲಿದ್ದಾರೆ. ಮತ್ತೆ ಯಾವುದಾದರೂ ಧಾರಾವಾಹಿಯಲ್ಲಿ ರಂಜಿನಿ ರಾಘವನ್ ಅವರು ನಟಿಸಬಾರದೇ ಎಂದು ಪ್ರೇಕ್ಷಕರು ಯೋಚಿಸುತ್ತಿದ್ದಾರೆ.

ಕಾಂಗರೂ ಚಿತ್ರದ ಟೀಸರ್ ರಿಲೀಸ್
ಆಕಾಶ ದೀಪ, ಪುಟ್ಟ ಗೌರಿ, ಕನ್ನಡತಿ ಧಾರಾವಾಹಿಗಳಲ್ಲಿ ನಟಿಸಿ ಪ್ರೇಕ್ಷಕರ ಮನಗೆದ್ದವರು. ಅಷ್ಟೇ ಅಲ್ಲದೇ, ಸ್ಯಾಂಡಲ್ ವುಡ್ ಗೂ ಪಾದಾರ್ಪಣೆ ಮಾಡಿದರು. ರಾಜಹಂಸ, ಸೂಫಿ, ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಸಿನಿಮಾಗಳಲ್ಲಿ ನಟಿಸಿದವರು.
ಇಷ್ಟೇ ಅಲ್ಲದೇ, ಇನ್ನೂ ಹಲವು ಸಿನಿಮಾಗಳು ರಂಜಿನಿ ರಾಘವನ್ ಅವರ ಕೈಯಲ್ಲಿ ಹಲವು ಸಿನಿಮಾಗಳಿವೆ. ನೈಟ್ ಕರ್ಫ್ಯೂ, ಸತ್ಯಂ ಎಂಬ ಚಿತ್ರಗಳಲ್ಲಿ ನಟಿಸಿದ್ದಾರೆ. ಕಾಂಗರೂ ಚಿತ್ರದಲ್ಲೂ ನಟಿ ರಂಜಿನಿ ಅವರು ನಟಿಸಿದ್ದು, ಇದರ ಟೀಸರ್ ಶೇರ್ ಮಾಡಿಕೊಂಡಿದ್ದಾರೆ. ಆದರೆ ಈ ಚಿತ್ರ ಯಾವಾಗ ರಿಲೀಸ್ ಆಗುತ್ತೋ ಗೊತ್ತಿಲ್ಲ. ಅಲ್ಲದೇ, ಅವರು ಸದ್ಯ ಏನು ಮಾಡುತ್ತಿದ್ದಾರೆ ಎಂಬ ಮಾಹಿತಿ ಇನ್ನೂ ಯಾರಿಗೂ ಸಿಕ್ಕಿಲ್ಲ.

ನಟನೆ, ಸಾಹಿತ್ಯ ಎರಡೂ ಕ್ಷೇತ್ರ ಇಷ್ಟವೇ
ಕಿರುತೆರೆ ಹಾಗೂ ಸಿನಿಮಾ ಕ್ಷೇತ್ರದಲ್ಲಿ ಬ್ಯುಸಿಯಾಗಿದ್ದುಕೊಂಡೇ ಸಾಹಿತ್ಯ ಕ್ಷೇತ್ರದಲ್ಲೂ ಸಕ್ರಿಯರಾಗಿರುವರಲ್ಲಿ ಕೆಲವೇ ಕೆಲವು ಮಂದಿ ಇರುತ್ತಾರೆ. ಅವರಲ್ಲಿ ನಟಿ ರಂಜಿನಿ ರಾಘವನ್ ಅವರು ಕೂಡ ಒಬ್ಬರು. ಬಹುಮುಖ ಪ್ರತಿಭೆ ನಟಿ, ಬರಹಗಾರ್ತಿ ರಂಜನಿ ರಾಘವನ್ ಪ್ರತೀ ಬಾರೀ ಹೊಸತನವನ್ನೊತ್ತು ಪ್ರೇಕ್ಷಕರ ಮುಂದೆ ಬರುತ್ತಾರೆ.
ಕಥೆ ಡಬ್ಬಿ, ಸ್ವೈಪ್ ರೈಟರ್ ಎಂಬ ಎರಡು ಪುಸ್ತಕಗಳನ್ನು ಬರೆದು ಬಿಡುಗಡೆಯನ್ನೂ ಮಾಡಿದ್ದರು. ಇವರ ಪುಸ್ತಕಗಳನ್ನು ಓದಲು ಹಲವರು ಬಯಸುತ್ತಾರೆ ಕೂಡ. ಆದರೆ, ಇತ್ತೀಚೆಗೆ ರಂಜನಿ ಅವರು ಫುಲ್ ಸೈಲೆಂಟ್ ಆಗಿದ್ದಾರೆ.

ಇದೀಗ ರಂಜನಿ ರಾಘವನ್ ಅವರು ಮಹಾರಾಣಿ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಯಾವುದೋ ಶೂಟಿಂಗ್ ಸೆಟ್ ನಲ್ಲಿ ಪಿಂಕ್ ರಾಜಕುಮಾರಿ ಉಡುಗೆಯಲ್ಲಿ ಮೇಕಪ್ ಮಾಡಿಕೊಂಡಿರುವ ರಂಜನಿ ರಾಘವನ್ ಅವರು, ಇದರ ವೀಡಿಯೋ ಮಾಡಿ ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ.
ಆದರೆ, ಶೂಟಿಂಗ್ ಅಥವಾ ಮತ್ಯಾವೂದೇ ಮಾಹಿತಿ ನೀಡದ ರಂಜನಿ ಅವರು ಐತಿಹ್ಯ ಎಂದರೆ ಏನು ಎಂದು ಅಭಿಮಾನಿಗಳಲ್ಲಿ ಪ್ರಶ್ನೆ ಮಾಡಿದ್ದಾರೆ. ಇತಿಹಾಸ ಅಂದರೆ ಗೊತ್ತಿರುತ್ತೆ. ನಿಮಗೆ ಐತಿಹ್ಯದ ಅರ್ಥ ಗೊತ್ತಾ..? ಕಮೆಂಟ್ ಮಾಡಿ ಎಂದಿದ್ದಾರೆ. ಇದಕ್ಕೆ ಹಲವರು ಉತ್ತರ ನೀಡಿದ್ದು, ರಂಜನಿ ಅವರನ್ನು ಮಹಾರಾಣಿಯಂತೆ ಕಾಣುತ್ತಿದ್ದೀರಾ. ನಟಿ ಪ್ರೇಮಾರಂತೆ ಇದ್ದೀರಾ ಎಂದೆಲ್ಲಾ ಕಮೆಂಟ್ ಮಾಡಿದ್ದಾರೆ.
ಸಾಹಿತ್ಯ ಎಂದರೆ ಅಭಿನಯಕ್ಕೂ ಹೆಚ್ಚು
ರಂಜನಿ ತಮ್ಮ ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿ ಇದ್ದಾರೆ. ಆಗಾಗ ತಮ್ಮ ಜೀವನದ ಅಪ್ಡೇಟ್ಸ್ ಕೊಡುತ್ತಿರುತ್ತಾರೆ. ನಟಿ ರಂಜನಿಗೆ ಇನ್ಸ್ಟಾಗ್ರಾಂನಲ್ಲಿ 1 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಹಾಗೆಯೇ ಹೊಸ ಹೊಸ ಫೋಟೋ ವಿಡಿಯೋವನ್ನು ಅಪ್ಲೋಡ್ ಮಾಡಿ ಜನರಿಗೆ ಖುಷಿ ನೀಡುತ್ತಾ ಇರುತ್ತಾರೆ. ಬರಹವನ್ನು ಇಷ್ಟಪಡುವ ರಂಜಿನಿ ರಾಘವನ್ ಅವರು ಪರಭಾಷೆಗಳಲ್ಲೂ ಅಭಿನಯಿಸಿದ್ದಾರೆ. ಇವರಿಗೆ ನಟನೆಗಿಂತಲೂ ಸಾಹಿತ್ಯದ ಮೇಲೆ ಹೆಚ್ಚು ಒಲವಿದೆ.


Click it and Unblock the Notifications











