ಲಕ್ಷ್ಮಿ ಟಿಫನ್ ರೂಮ್ ನಟಿ 'ರಶ್ಮಿ' ಅವರ ಬಗ್ಗೆ ನಿಮಗೆಷ್ಟು ಗೊತ್ತು ?
ಇಂದಿನಿಂದ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಹೊಸ ಧಾರಾವಾಹಿ ಪ್ರಸಾರವಾಗಲಿದೆ. ಲಕ್ಷ್ಮಿ ಟಿಫನ್ ರೂಮ್ ಎಂಬ ಹೊಸ ಧಾರಾವಾಹಿಯು ಸಂಜೆ 6.30ಕ್ಕೆ ಪ್ರಸಾರವಾಗಿದೆ. ಲಕ್ಷ್ಮಿ ಟಿಫನ್ ರೂಮ್ ಧಾರಾವಾಹಿಯಲ್ಲಿ ಸರಸ್ವತಿ ಮತ್ತು ವರಲಕ್ಷ್ಮೀ ಎಂಬ ಇಬ್ಬರೂ ಸ್ನೇಹಿತರು ಇರುತ್ತಾರೆ. ಚಿಕ್ಕ ವಯಸ್ಸಿನಿಂದಲೂ ಒಟ್ಟಿಗೆ ಬೆಳೆಯುವ ಈ ಗೆಳೆಯರದ್ದು ಒಂದೇ ಮನಸ್ಥಿತಿ. ಆದರೆ, ಇಬ್ಬರ ಆಸೆಗಳು ಮಾತ್ರ ಬೇರೆ ಬೇರೆ. ಸರಸ್ವತಿಗೆ ಮದುವೆಯಾಗಿ ಸಂಸಾರ ನಡೆಸುವ ಪುಟ್ಟ ಮನಸ್ಸು. ಆದರೆ, ವರಲಕ್ಷ್ಮಿಗೆ ಚೆನ್ನಾಗಿ ಓದಿ ಕಲೆಕ್ಟರ್ ಆಗುವ ಕನಸು. ಆದರೆ, ಮನೆಯ ಪರಿಸ್ಥಿತಿ, ವರಲಕ್ಷ್ಮೀ ಗೆ ಶ್ರೀಮಂತರ ಮನೆಗೆ ಮದುವೆಯಾಗುವ ಸ್ಥಿತಿ ಬಂದಿದೆ.
ಹೊಸ ಪಾತ್ರದಲ್ಲಿ ನಟಿ ರಶ್ಮಿ
ಈ ಧಾರಾವಾಹಿಯಲ್ಲಿ ನಾಯಕ ನಟನಾಗಿ ನಟ ವಚನ್ ಹೊಸಮತ್ ಬಣ್ಣ ಹಚ್ಚಿದ್ದಾರೆ. ಇನ್ನು ಧಾರಾವಾಹಿಯಲ್ಲಿ ನಟಿ ರಶ್ಮಿ ಎಚ್ ಎಂ ಪ್ರಮುಖ ಪಾತ್ರವದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕಿ ಲಕ್ಷ್ಮಿಯ ಅಕ್ಕನ ಪಾತ್ರದಲ್ಲಿ ನಟಿ ರಶ್ಮಿ ಅವರು ಕಾಣಿಸಿಕೊಂಡಿದ್ದಾರೆ. ಲಕ್ಷ್ಮಿಗೆ ತಂದೆ ತಾಯಿ ಇಲ್ಲದ ಕಾರಣ ಅವಳು ಮತ್ತು ಅವಳ ತಂಗಿ ಇಬ್ಬರೂ ಕೂಡ ಅಕ್ಕನ ಆಸರೆಯಲ್ಲೇ ಇದ್ದು, ಐಎಎಸ್ ಆಗುವ ಕನಸು ಕಾಣುತ್ತಿದ್ದಾಳೆ. ಆದರೆ, ಭಾವ ನಾದಿನಿಯ ಮದುವೆ ಮಾಡಲು ತಯಾರಿ ನಡೆಸಿದ್ದಾರೆ. ಇನ್ನು ಲಕ್ಷ್ಮಿ ತನ್ನ ಬಾಲ್ಯ ಸ್ನೇಹಿತೆ ಸರಸ್ವತಿಯ ಬಗ್ಗೆ ಚಿಂತಿಸುತ್ತಿದ್ದಾಳೆ. ಇವಳ ಬದುಕಿನಲ್ಲಿ ಯಾವೆಲ್ಲಾ ಕಷ್ಟಗಳು ಎದುರಾಗಬಹುದು ಹಾಗೂ ಲಕ್ಷ್ಮಿ ತನ್ನ ಐಎಎಸ್ ಕನಸನ್ನು ನನಸು ಮಾಡಿಕೊಳ್ಳುತ್ತಾಳಾ ಎಂಬುದೇ ಧಾರಾವಾಹಿಯ ಕಥೆ.

ಜೀ ವಾಹಿನಿಯಲ್ಲೂ ಕಾಣಿಸಿಕೊಂಡ ನಟಿ
ಇನ್ನು ನಟಿ ರಶ್ಮಿ ಅವರು ಈಗಾಗಲೇ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸತ್ಯ ಧಾರಾವಾಹಿಯಲ್ಲಿ ಕೀರ್ತನಾ ಪಾತ್ರವನ್ನು ನಿಭಾಯಿಸುತ್ತಿದ್ದಾರೆ. ತಿಂಗಳ ಹಿಂದಷ್ಟೇ ಕೀರ್ತನಾ ಪಾತ್ರಧಾರಿ ಬದಲಾಗಿದ್ದು, ಅನು ಜನಾರ್ಧನ್ ಅವರ ಬದಲಿಗೆ ರಶ್ಮಿ ಅವರು ಪಾತ್ರವನ್ನು ನಿಭಾಯಿಸುತ್ತಿದ್ದಾರೆ. ಈಗಾಗಲೇ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಶ್ಮಿ ಅವರು ಕೆಲ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅಲ್ಲದೇ, ನಿರೂಪಕಿಯಾಗಿಯೂ ಹಲವು ವರ್ಷಗಳಿಂದ ಕಿರುತೆರೆಯಲ್ಲಿ ನೆಲೆಯೂರಿದ್ದಾರೆ.
ನಟಿ ರಶ್ಮಿ ಕುಟುಂಬದವರು
ರಶ್ಮಿ ಅವರ ತಂದೆ ಮುರಳಿಧರ್, ಇನ್ಸೂರೆನ್ಸ್ ಕಂಪನಿಯಲ್ಲಿದ್ದಾರೆ. ತಾಯಿ ಶ್ರೀದೇವಿ ಕೂಡ ಬಿಎಸ್ ಎನ್ ಎಲ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಮೈಸೂರಿನಲ್ಲಿ ಹುಟ್ಟಿ ಬೆಳೆದ ರಶ್ಮಿ ಅವರಿಗೆ ತಮ್ಮನಿದ್ದು, ಅವರು ಕೂಡ ಎಂಜಿನಿಯರಿಂಗ್ ಮಾಡಿಕೊಂಡಿದ್ದಾರೆ. ಓದು ಮುಗಿದ ಬಳಿಕ ಬೆಂಗಳೂರಿಗೆ ಶಿಫ್ಟ್ ಆದ ಕುಟುಂಬ ಸದ್ಯ ಇಲ್ಲೇ ನೆಲೆಸಿದೆ. ರಶ್ಮಿ ಅವರು ಎಂಜಿನಿಯರಿಂಗ್ ಮಾಡಿಕೊಂಡು ಆರೇಳು ವರ್ಷ ಸಾಫ್ಟ್ ವೇರ್ ನಲ್ಲಿ ಕೆಲಸ ಮಾಡಿದ್ದಾರೆ. ನಂತರವಷ್ಟೇ ಉದಯ ಮ್ಯೂಸಿಕ್ ನಲ್ಲಿ ನಿರೂಪಕಿಯಾಗಿ ಅರೆ ಕಾಲಿಕ ಕೆಲಸವನ್ನು ಆರಂಭಿಸಿದ್ದರು.

ರಶ್ಮಿ ನಟನೆಯ ಹಾದಿ
ನಂತರ ನಟಿಯಾಗುವ ಆಸೆ ವ್ಯಕ್ತಪಡಿಸಿದ ರಶ್ಮಿ, ಉದಯ ವಾಹಿನಿಯಲ್ಲಿ ಪ್ರಸಾರವಾದ ನಂದಿನಿ ಧಾರಾವಾಹಿಗೆ ಮೊದಲ ಬಾರಿಗೆ ಬಣ್ಣ ಹಚ್ಚಿದರು. ಇದರಲ್ಲಿ ನೀಲಿ ಪಾತ್ರದಲ್ಲಿ ನಟಿಸಿದರು. ನಂತರದ ದಿನದಲ್ಲಿ ಒಂದೊಂದೇ ಧಾರಾವಾಹಿಗಳಲ್ಲಿ ಅವಕಾಶ ಸಿಗಲು ಶುರುವಾಯ್ತು. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಜೀವ ಹೂವಾಗಿದೆ ಸೀರಿಯಲ್ ನಲ್ಲಿ ನಟಿಸಿದರು. ಬಳಿಕ ಕಲರ್ಸ್ ಕನ್ನಡದಲ್ಲಿ ಪ್ರಸಾರವಾದ ಲಕ್ಷ್ಮಿ ಧಾರಾವಾಹಿಯಲ್ಲಿ ನಕ್ಷತ್ರಾ ಅತ್ತಿಗೆ ಆಗಿ ಕಾಣಿಸಿಕೊಂಡರು. ಬಳಿಕ ಭರ್ಜರಿ ಬ್ಯಾಚ್ಯೂಲರ್ಸ್ ನಲ್ಲಿ ಭಾಗವಹಿಸಿದರು. ಸದ್ಯ ಸತ್ಯ ಧಾರಾವಾಹಿಯಲ್ಲಿ ಕೀರ್ತನಾ ಆಗಿದ್ದು, ಮುಂದೆ ಲಕ್ಷ್ಮಿ ಟಿಫನ್ ರೂಮ್ ಧಾರಾವಾಹಿಯಲ್ಲೂ ಕಾಣಿಸಿಕೊಳ್ಳಲಿದ್ದಾರೆ.


Click it and Unblock the Notifications











