Rashmi Prabhakar ; ತೀರ್ಥಯಾತ್ರೆಗೆ ತೆರಳಿದ ನಟಿ ರಶ್ಮಿ ಪ್ರಭಾಕರ್‌ಗೆ ಗೆ ಕಂಡಿದ್ದು ಬಣ್ಣದ ಲೋಕ..!

By ಪ್ರಿಯಾ ದೊರೆ

ರಶ್ಮಿ ಪ್ರಭಾಕರ್ ಅವರು ಸದ್ಯ ಫ್ಯಾಮಿಲಿಗಾಗಿ ಸಮಯ ಕೊಟ್ಟಿದ್ದು, ಶೂಟಿಂಗ್, ಮೇಕಪ್ ನಿಂದ ಬ್ರೇಕ್ ಪಡೆದಿದ್ದಾರೆ. ಹಾಗಿದ್ದರೂ ಫಿಟ್ನೆಸ್ ಗಾಗಿ ವರ್ಕೌಟ್ ಮಾಡುವುದನನು ಮಿಸ್ ಮಾಡುತ್ತಿಲ್ಲ.ಆಗಾಗ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ನಟಿ ರಶ್ಮಿ ಪ್ರಭಾಕರ್ ಅವರು ತಮ್ಮ ವರ್ಕೌಟ್ ರೋಟೀನ್ ಬಗ್ಗೆ ಅಪ್ ಡೇಟ್ ಕೂಡ ಮಾಡುತ್ತಿರುತ್ತಾರೆ. ಪತಿಯ ಜೊತೆಗೆ ಆಗಾಗ ವೀಡಿಯೋ ಮಾಡಿ ಅಪ್ ಲೋಡ್ ಮಾಡುತ್ತಿರುತ್ತಾರೆ. ಹಬ್ಬ-ಹರಿ ದಿನಗಳಲ್ಲಿ ಮನೆಯಲ್ಲಿ ಪೂಜೆ ಮಾಡಿ ಸೀರೆಯುಟ್ಟು ರೀಲ್ಸ್ ಮಾಡುವುದರ ಜೊತೆಗೆ ತಮ್ ದಿನ ನಿತ್ಯದ ಬಗ್ಗೆಯೂ ಮಾಹಿತಿಯನ್ನು ನೀಡುತ್ತಿರುತ್ತಾರೆ.

ತೀರ್ಥಯಾತ್ರೆಗೆ ಹೊರಟ ನಟಿ

ಸದ್ಯ ನಟಿ ರಶ್ಮಿ ಪ್ರಭಾಕರ್ ಅವರು ಕುಟುಂಬದ ಜೊತೆಗೂಡಿ ವಾರಣಾಸಿ, ಕಾಶಿಗೆ ತೀರ್ಥಯಾತ್ರೆಗೆಂದು ತೆರಳಿದ್ದಾರೆ. ಅಲ್ಲಿ ಗಂಗಾರತಿ, ಕಾಶಿ ವಿಶ್ವನಾಥನ ದರ್ಶನ ಪಡೆದು, ಗಂಗಾ ಸ್ನಾ ಮಾಡಿ ಎಂಜಾಯ್ ಮಾಡಿದ್ದಾರೆ. ನನಗೆ ಕಾಶಿ ಎಂದರೆ ಕಾಶಿ ವಿಶ್ವನಾಥ ಎಂದಷ್ಟೇ ಭಾವಿಸಿದ್ದೆ. ಆದರೆ, ಅದಕ್ಕೂ ಹೆಚ್ಚು ಎಂಬುದು ಇಲ್ಲಿಗೆ ಬಂದ ಬಳಿಕವಷ್ಟೇ ತಿಳಿಯಿತು. ಕಾಶಿಯ ಬೀದಿ ಬೀದಿಯನ್ನು ತೋರಿಸಿ, ಬಣ್ಣದ ಲೋಕವನ್ನು ತೋರಿದ ಅಕ್ಕನಿಗೆ ಕೃತಜ್ಙತೆಗಳು ಎಂದು ಬರೆದುಕೊಂಡಿರುವ ರಶ್ಮಿ ಅವರು ಪತಿ ನಿಖಿಲ್ ಮತ್ತು ಇತರೆ ಕುಟುಂಬ ಸದಸ್ಯರೊಂದಿಗೆ ಕಾಶಿಯ ಬೀದಿ ಬೀದಿಗಳಲ್ಲಿ ಸುತ್ತಾಡಿದ್ದಾರೆ.

Written update on actress Rashmi Prabhakar

ಕಾಶಿಯಲ್ಲಿ ನಟಿ ರಶ್ಮಿ ಸುತ್ತಾಟ

ದೋಣಿಯಲ್ಲಿ ವಿಹರಿಸಿ, ನದಿ ತೀರದಲ್ಲಿ ಒಡಾಡಿ, ಆಟೋದಲ್ಲಿ ಸಂಚರಿಸಿದ್ದು, ಮಳೆಯಲ್ಲಿ ಮಿಂದು, ಅಂಗಡಿಯಲ್ಲಿ ಶಾಪಿಂಗ್ ಮಾಡಿ, ಹೋಟೆಲ್ ಗಳಲ್ಲಿ ಅಲ್ಲಿನ ವಿಶೇಷವಾದ ಸಿಹಿ ತಿನಿಸು ಸೇರಿದಂತೆ ಬಗೆ ಬಗೆಯ ತಿನಿಸುಗಳನ್ನು ಸವಿದು ಸಂತಸಪಟ್ಟಿದ್ದಾರೆ. ಗಂಗಾರತಿಯನ್ನು ಕಣ್ತುಂಬಿಕೊಂಡ ರಶ್ಮಿ ಅವರು ಅಲ್ಲಿನ ಸಂಸ್ಕೃತಿ ಮತ್ತು ಆಚರಣೆಗೆ ಮನಸೋತಿದ್ದಾರೆ. ಕಾಶಿಯಲ್ಲಿ ಫೋಟೋಗಳನ್ನು ತೆಗೆಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಸೈಲೆಂಟ್ ಆಗಿರುವ ನಟಿ

ಇನ್ನು ನಟಿ ರಶ್ಮಿ ಪ್ರಭಾಕರ್ ಅವರು ಸದ್ಯ ಬಣ್ಣದ ಲೋಕದಿಂದ ಬ್ರೇಕ್ ಪಡೆದುಕೊಂಡಿದ್ದಾರೆ. ಕನ್ನಡ, ತಮಿಳು ಹಾಗೂ ತೆಲುಗು ಕಿರುತೆರೆಯಲ್ಲಿ ಸಕ್ರಿಯವಾಗಿದ್ದ ನಟಿ ರಶ್ಮಿ ಅವರು ಕೊನೆಯದಾಗಿ ತೆಲುಗಿನ ಕನ್ನೈ ಕಲೈಮಾಲೆ ಸೀರಿಯಲ್ ನಲ್ಲಿ ನಟಿಸಿದ್ದರು. ತದನಂತರ ಸೂಪರ್ ಕ್ವೀನ್ ಎಂಬ ಕನ್ನಡದ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದರು. ಅಲ್ಲದೇ ಕಪಲ್ಸ್ ಕಿಚನ್ಕಾರ್ಯಕ್ರಮದಲ್ಲಿ ಪತಿ ನಿಖಿಲ್ ಜೊತೆತೆ ಕ್ಯಾಮಾರಾ ಮುಂದೆ ಬಂದಿದ್ದರು. ಇದಾದ ಬಳಿಕ ಫ್ಯಾಮಿಗೆ ಫುಲ್ ಟೈಮ್ ಕೊಟ್ಟಿದ್ದಾರೆ. ಬೇಸಿಗೆಯ ಬಿಸಿಲಲ್ಲಿ ಜಮ್ಮು-ಕಾಶ್ಮೀರಕ್ಕೆ ಪ್ರವಾಸ ತೆರಳಿದ್ದ ರಶ್ಮಿ ಅವರು ಮಂಜುಗಡ್ಡೆಯಲ್ಲಿ ಪತಿಯೊಂದಿಗೆ ಎಂಜಾಯ್ ಮಾಡಿದ್ದರು. ಇತ್ತೀಚೆಗೆ ನೇಹಾ ಗೌಡ ಅವರ ಸೀಮಂತದಲ್ಲಿ ಕಾಣಿಸಿಕೊಂಡಿದ್ದು, ತಮ್ಮ ನೆಚ್ಚಿನ ಸಹ ಕಲಾವಿದರೊಂದಿಗೆ ಫೋಟೋಗಳನ್ನು ತೆಗೆಸಿಕೊಂಡಿದ್ದರು.

ರಶ್ಮಿ ನಟನೆಯ ಪ್ರಾಜೆಕ್ಟ್ ಗಳು

ಕನ್ನಡ ಕಿರುತೆರೆಯಲ್ಲಿ ಲಕ್ಷ್ಮೀ ಬಾರಮ್ಮ ಸಿರಿಯಲ್ ಮೂಲಕ ರಶ್ಮಿ ಪ್ರಭಾಕರ್ ಚಿನ್ನು ಆಗಿ ಕನ್ನಡಿಗರ ಮನ ಗೆದ್ದಿದ್ದರು. ಇದಲ್ಲದೇ, ಕನ್ನಡದಲ್ಲಿ ಮೂಡಿ ಬಂದ ಶುಭ ವಿವಾಹ, ಮಹಾಭಾರತ, ದರ್ಪಣ, ಜೀವನ ಚೈತ್ರ, ಮನಸೆಲ್ಲಾ ನೀನೇ, ಸೇರಿದಂತೆ ಕೆಲ ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದಾರೆ. ತಮಿಳು, ತೆಲುಗು ಕಿರುತೆರೆಯಲ್ಲೂ ಹಲವು ಧಾರಾವಾಹಿಗಳಲ್ಲಿ ನಟಿಸಿ ಅಲ್ಲಿಯೂ ಅಭಿಮಾನಿಗಳನ್ನು ಗಳಿಸಿದ್ದಾರೆ. ತಮಿಳಿನ ಅರುಂಧತಿ, ತೆಲುಗಿನ ಪೌರ್ಣಮಿ, ಕಾವ್ಯಾಂಜಲಿ ಹಾಗೂ ಕನ್ನೈ ಕಲೈಮಾಲೆ ಧಾರಾವಾಹಿಗಳಲ್ಲಿ ನಟಿಸಿದ್ದರು. ಕೆಲ ಸಿನಿಮಾಗಳಿಗೂ ಬಣ್ಣ ಹಚ್ಚಿರುವ ರಶ್ಮಿ ಅವರು ಮಹಾಕಾವ್ಯ ಮತ್ತು ಬಿಬಿ5 ಮಹಾಕಾವ್ಯ ಏಂಬ ಸಿನಿಮಾಗಳಲ್ಲಿ ನಟಿಸಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X