ಲಕ್ಷ್ಮೀ ಬಾರಮ್ಮ ಖ್ಯಾತಿಯ ರಶ್ಮಿ ಪ್ರಭಾಕರ್​ ಮನೆಗೆ ಹೊಸ ಅತಿಥಿ, ವಿಡಿಯೋ ವೈರಲ್..!

By ಪ್ರಿಯಾ ದೊರೆ

ಕನ್ನಡ ಕಿರುತೆರೆಯ ನಟಿ ರಶ್ಮಿ ಪ್ರಭಾಕರ್ ಅವರು ಸದ್ಯ ತೆಲುಗಿನ ಧಾರಾವಾಹಿ ಒಂದರಲ್ಲಿ ಬ್ಯುಸಿಯಾಗಿದ್ದಾರೆ. ಸಾಮಾನ್ಯವಾಗಿ ತೆಲುಗು ಕಿರುತೆರೆಯಲ್ಲಿ ಹೆಚ್ಚಾಗಿ ಕನ್ನಡ ನಟ-ನಟಿಯರೇ ಇದ್ದಾರೆ. ಅದರಲ್ಲೂ ನಾಯಕ, ನಾಯಕಿ, ಖಳನಾಯಕರ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಕನ್ನಡ ಕಿರುತೆರೆಯಲ್ಲಿ ಒಂದು ಸೀರಿಯಲ್ ಮಾಡಿ ಬಳಿ ತೆಲುಗಿವಿನಲ್ಲಿ ಕಾಣಿಸಕೊಳ್ಳುತ್ತಾರೆ. ಎಷ್ಟೋ ಕಲಾವಿದರು ಹೈದರಾಬಾದ್ ನಲ್ಲೇ ಸೆಟಲ್ ಆಗಿದ್ದು, ಕನ್ನಡ ಕಿರುತೆರೆಗೆ ಮರಳುವುದೇ ಇಲ್ಲ. ತೆಲುಗು ಮಾತ್ರವಲ್ಲದೇ ಮಳಯಾಳಂ ಹಾಗೂ ತಮಿಳು ಕಿರುತೆರೆಗಳಲ್ಲೂ ಕನ್ನಡಿಗರು ಇದ್ದಾರೆ.

ತೆಲುಗು ಕಿರುತೆರೆಯಲ್ಲಿ ಬ್ಯುಸಿ

ಇನ್ನು ನಟಿ ರಶ್ಮಿ ಪ್ರಭಾಕರ್ ಅವರು ಸದ್ಯ ತೆಲುಗಿನಲ್ಲಿ ಹೊಸದಾಗಿ ಮೂಡಿ ಬರುತ್ತಿರುವ ಬೊಮ್ಮರಿಲೂ ಧಾರಾವಾಹಿಯಲ್ಲಿ ನೆಗೆಟಿವ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಶ್ರೀಮಂತ ಕುಟುಂಬದಲ್ಲಿ ಬೆಳೆದು, ಅತ್ತೆ ಮನೆಯಲ್ಲೂ ಎಲ್ಲಾ ಸೌಕರ್ಯವಿರುತ್ತದೆ. ಆದರೆ, ಅತ್ತೆ ಮುಂದೆ ತಾನು ಬಹಳ ಒಳ್ಳೆಯ ಸೊಸೆಯಂತೆ ನಟಿಸುವ ಇವರು, ತಮ್ಮ ಮಾತುಗಳಿಂದಲೇ ಇತರರಿಗೆ ನೋವುಂಟು ಮಾಡುವ ಪಾತ್ರವಿದು. ಪಾತ್ರಕ್ಕೆ ಜೀವ ತುಂಬಿರುವ ರಶ್ಮಿ ಅವರು ನೆಲೆಸಿರುವುದು ಬೆಂಗಳೂರಿನ ಹನುಮಂತ ನಗರದಲ್ಲಿ. ಶೂಟಿಂಗ್ ಇದ್ದಾಗ ಮಾತ್ರವೇ ಹೈದರಾಬಾದ್ ಗೆ ತೆರಳುತ್ತಾರಂತೆ. ಉಳಿದ ಸಮಯ ಬೆಂಗಳೂರಿನಲ್ಲೇ ಇರುತ್ತಾರೆ.

Written update on actress Rashmi Prabhakar

ಹೊಸ ಅತಿಥಿಯನ್ನು ಸ್ವಾಗತಿಸಿದ ನಟಿ

ಸದ್ಯ ನಟಿ ರಶ್ಮಿ ಪ್ರಭಾಕರ್ ಅವರ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ನಿನ್ನೆಯಷ್ಟೇ ನಟಿ ರಶ್ಮೀ ಪ್ರಭಾಕರ್ ಅವರು ಹೊಸ ಕಾರೊಂದನ್ನು ಖರೀದಿ ಮಾಡಿದ್ದಾರೆ. ಮಹೀಂದ್ರ xuv700 ಕಾರನ್ನು ರಶ್ಮಿ ಪ್ರಭಾಕರ್ ಖರೀದಿ ಮಾಡಿದ್ದಾರೆ. ಇದರ ಅಂದಾಜು ಬೆಲೆ ಸರಿ ಸುಮಾರು ಇಪ್ಪತ್ತು ಲಕ್ಷ ರೂಪಾಯಿಗಳು. ರಶ್ಮಿಪ್ರಭಾಕರ್ ಅವರು ತಮ್ಮ ಪತಿ ನಿಖಿಲ್ ಭಾರ್ಗವ್ ಹಾಗೂ ಕುಟುಂಬದ ಜೊತೆಗೆ ಕಾರ್ ಶೋ ರೂಮ್ ಗೆ ತೆರಳಿದ್ದು, ವಾಹನವನ್ನು ಖರೀದಿ ಮಾಡಿದ್ದಾರೆ. ಇದರ ವೀಡಿಯೋವನ್ನು ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ರಶ್ಮಿ ಅವರ ಪತಿ welcome home beast, proud wife ಎಂದು ಬರೆದುಕೊಂಡಿದ್ದಾರೆ. ರಶ್ಮಿ ಪ್ರಭಾಕರ್ ಅವರ ಕುಟುಂಬ ಸಂತಸ ಪಟ್ಟಿದ್ದು, ಮನೆಗೆ ಹೊಸ ಅತಿಥಿಯಾದ ಕಾರನ್ನು ಸ್ವಾಗತಿಸಿದ್ದಾರೆ. ಅಭಿಮಾನಿಗಳು ನೆಚ್ಚಿನ ನಟಿಯ ಬಾಳಲ್ಲಿ ಇನ್ನಷ್ಟು ಏಳಿಗೆ ಕಾಣಲಿ ಎಂದು ಶುಭ ಕೋರಿದ್ದಾರೆ.


ತೆಲುಗು ಕಿರುತೆರೆಯಲ್ಲಿ ಉಳಿದ ಚಿನ್ನು

ಇನ್ನು ನಟಿ ರಶ್ಮಿ ಪ್ರಭಾಕರ್ ಅವರು ಕನ್ನಡ ಕಿರುತೆರೆಯಲ್ಲಿ ಹಿಟ್ ಆದ ಮೆಗಾ ಧಾರೆಆವಾಹಿ ಲಕ್ಷ್ಮೀಬಾರಮ್ಮ ಮೂಲಕ ಬಣ್ಣದ ಲೋಕದ ಪಯಣ ಶುರು ಮಾಡಿದರು. ಈ ಧಾರಾವಾಹಿಯಿಂದ ಚಿನ್ನು ಎಂದೇ ಫೇಮಸ್ ಆಗಿದ್ದರು. ಕನ್ನಡ, ತಮಿಳು ಹಾಗೂ ತೆಲುಗು ಕಿರುತೆರೆಯಲ್ಲಿ ನಟಿಸಿದ್ದಾರೆ. ಬೊಮ್ಮರಿಲೂ ಧಾರಾವಾಹಿಗೂ ಮುನ್ನ ತೆಲುಗಿನ ಕನ್ನೈ ಕಲೈಮಾಲೆ ಸೀರಿಯಲ್ ನಲ್ಲಿ ಕಾಣಿಸಿಕೊಂಡಿದ್ದರು. ತದನಂತರ ಸೂಪರ್ ಕ್ವೀನ್ ಎಂಬ ಕನ್ನಡದ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದರು. ಅಲ್ಲದೇ ಕಪಲ್ಸ್ ಕಿಚನ್ ಕಾರ್ಯಕ್ರಮದಲ್ಲಿ ಪತಿ ನಿಖಿಲ್ ಜೊತೆತೆ ಕ್ಯಾಮಾರಾ ಮುಂದೆ ಬಂದಿದ್ದರು.


ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟನೆ

ಕನ್ನಡದಲ್ಲಿ ಮೂಡಿ ಬಂದ ಶುಭ ವಿವಾಹ, ಮಹಾಭಾರತ, ದರ್ಪಣ, ಜೀವನ ಚೈತ್ರ, ಮನಸೆಲ್ಲಾ ನೀನೇ, ಸೇರಿದಂತೆ ಕೆಲ ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದಾರೆ. ತಮಿಳು, ತೆಲುಗು ಕಿರುತೆರೆಯಲ್ಲೂ ಹಲವು ಧಾರಾವಾಹಿಗಳಲ್ಲಿ ನಟಿಸಿ ಅಲ್ಲಿಯೂ ಅಭಿಮಾನಿಗಳನ್ನು ಗಳಿಸಿದ್ದಾರೆ. ತಮಿಳಿನ ಅರುಂಧತಿ, ತೆಲುಗಿನ ಪೌರ್ಣಮಿ, ಕಾವ್ಯಾಂಜಲಿ ಹಾಗೂ ಕನ್ನೈ ಕಲೈಮಾಲೆ ಧಾರಾವಾಹಿಗಳಲ್ಲಿ ನಟಿಸಿದ್ದರು. ಕೆಲ ಸಿನಿಮಾಗಳಿಗೂ ಬಣ್ಣ ಹಚ್ಚಿರುವ ರಶ್ಮಿ ಅವರು ಮಹಾಕಾವ್ಯ ಮತ್ತು ಬಿಬಿ5 ಮಹಾಕಾವ್ಯ ಏಂಬ ಸಿನಿಮಾಗಳಲ್ಲಿ ನಟಿಸಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X